ಹೊಸ ಅಪ್ಲಿಕೇಶನ್‌ ಬಳಸುವ ಮುನ್ನ PhoneSpy ಬಗ್ಗೆ ಇರಲಿ ಎಚ್ಚರ!

|

ಇತ್ತೀಚಿನ ದಿನಗಳಲ್ಲಿ ಪ್ಲೇ ಸ್ಟೋರ್‌ನಲ್ಲಿ ನಕಲಿ ಅಪ್ಲಿಕೇಶನ್‌ಗಳ ಹಾವಳಿ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಹೆಚ್ಚಿನ ಅಪ್ಲಿಕೇಶನ್‌ಗಳು ಬಳಕೆದಾರರ ಮಾಹಿತಿಯನ್ನು ಕದಿಯುತ್ತಿವೆ ಎನ್ನಲಾಗಿದೆ. ಇದೇ ಕಾರಣಕ್ಕೆ ಬಳಕೆದಾರರ ಮಾಹಿತಿ ಕದಿಯುವ ಅಪ್ಲಿಕೇಶನ್‌ಗಳನ್ನು ಗೂಗಲ್‌ ಗುರುತಿಸುವ ಮೂಲಕ ಪ್ಲೇ ಸ್ಟೋರ್‌ನಿಂದ ತೆಗೆದುಹಾಕುತ್ತಲೆ ಬಂದಿದೆ. ಸದ್ಯ ಇದೀಗ ಹೊಸ ಸ್ಪೈವೇರ್‌ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ನಿಮ್ಮ ವೈಯುಕ್ತಿಕ ಡೇಟಾವನ್ನು ಕದಿಯುತ್ತಿರೋದನ್ನ ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ಸ್ಪೈವೇರ್

ಹೌದು, ಹೊಸ ಸ್ಪೈವೇರ್ ಆಂಡ್ರಾಯ್ಡ್‌ ಫೋನ್‌ನಲ್ಲಿ ಬಳಕೆದಾರರ ಮಾಹಿತಿ ಕದಿಯುತ್ತಿರೋದು ಪತ್ತೆಯಾಗಿದೆ. ಇನ್ನು ಈ ಹೊಸ ಸ್ಪೈವೇರ್‌ ಅನ್ನು PhoneSpy ಎಂದು ಗುರುತಿಸಲಾಗಿದೆ. ಇನ್ನು ಈ ಸ್ಪೈವೇರ್ ಆಂಡ್ರಾಯ್ಡ್‌ ಡಿವೈಸ್‌ನಲ್ಲಿರುವ ಸ್ಟ್ರೀಮಿಂಗ್ ವೀಡಿಯೊಗಳಂತಹ ಕಾನೂನುಬದ್ಧ ಅಪ್ಲಿಕೇಶನ್‌ನಂತೆ ಕಾಣಲಿದೆ ಎನ್ನಲಾಗಿದೆ. ವಿಶ್ವಾಸಾರ್ಹ ಅಪ್ಲಿಕೇಶನ್‌ನಂತೆ ಕಂಡರೂ ಕೂಡ ಇದು ನಿಮ್ಮ ಡೇಟಾವನ್ನು ರಹಸ್ಯವಾಗಿ ಸಂಗ್ರಹಿಸುತ್ತದೆ ಎಂದು ಸಂಶೋದಕರ ಹೇಳಿದ್ದಾರೆ. ಹಾಗಾದ್ರೆ ಪ್ಲೇ ಸ್ಟೋರ್‌ನಲ್ಲಿ PhoneSpy ಮಾಡುವ ಅಪ್ಲಿಕೇಶನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಪೈವೇರ್‌

ಪ್ಲೇ ಸ್ಟೋರ್‌ನಲ್ಲಿ ಸ್ಪೈವೇರ್‌ ಅಪ್ಲಿಕೇಶನ್‌ಗಳ ಹಾವಳಿ ಜಾಸ್ತಿಯಿದೆ. ಆದರೆ ಇದೀಗ ಕಂಡುಬಂದಿರುವ PhoneSpy ಮೊಬೈಲ್ ಭದ್ರತಾ ಅಪ್ಲಿಕೇಶನ್‌ಗಳನ್ನು ರಹಸ್ಯವಾಗಿ ಅನ್‌ಇನ್‌ಸ್ಟಾಲ್ ಮಾಡುವ ಮೂಲಕ ನಿಮ್ಮ ಫೋನ್‌ ಡೇಟಾ ಕದಿಯಲಿದೆ. ಅದರಲ್ಲೂ ಯಾವುದೇ ಕಾನೂನುಬದ್ಧ ಆಂಡ್ರಾಯ್ಡ್‌ ಅಪ್ಲಿಕೇಶನ್‌ನಂತೆ ಸೌಮ್ಯ ಮತ್ತು ನೈಜವಾಗಿ ಕಾಣುವ 23 ಅಪ್ಲಿಕೇಶನ್‌ಗಳ ಒಳಗೆ ಈ ಸ್ಪೈವೇರ್‌ ಕಂಡುಬಂದಿದೆ. ಆದರೆ ಇದು ಕೇವಲ ಆಂಡ್ರಾಯ್ಡ್‌ ಅಪ್ಲಿಕೇಶನ್‌ಗಳ ಗುರುತನ್ನು ಕದಿಯುವುದ ಮಾತ್ರವಲ್ಲ ಮೂಲ ಅಪ್ಲಿಕೇಶನ್‌ಗಳ ಮಾಹಿತಿಯನ್ನು ಸೋರಿಕೆ ಮಾಡುತ್ತಿದೆ.

PhoneSpy

ಇನ್ನು ಈ PhoneSpy ತಾನು ದಾಳಿ ಮಾಡಿದ ಫೋನ್‌ನ ಕ್ಯಾಮೆರಾವನ್ನು ಪ್ರವೇಶಿಸಬಹುದು. ಅಲ್ಲದೆ ಬಳಕೆದಾರರಿಗೆ ತಿಳಿಯದೆ ರಿಯಲ್‌ ಟೈಂನಲ್ಲಿ ಫೋಟೋ ಮತ್ತು ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾದ್ಯತೆ ಇದೆ ಎಂದು ಸಂಶೋಧಕರು ಹೇಳಿದ್ದಾರೆ. ಈ ಫೋಟೋಗಳು ಮತ್ತು ವೀಡಿಯೊಗಳನ್ನು ಮುಂದಿಟ್ಟುಕೊಂಡು ಬಳಕೆದಾರರನ್ನು ಅಥವಾ ಕಾರ್ಪೊರೇಟ್ ಸಂಸ್ಥೆಗಳನ್ನು ಬ್ಲ್ಯಾಕ್‌ಮೇಲ್ ಮಾಡಲು ಬಳಸಬಹುದು. ಆದರೆ ಬಳಕೆದಾರರು ಫೋನ್‌ಸ್ಪೈ-ಸೋಂಕಿತ ಅಪ್ಲಿಕೇಶನ್‌ಗಳನ್ನು ಒಂದೊಮ್ಮೆ ಡೌನ್‌ಲೋಡ್ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ.

PhoneSpy

PhoneSpy ಅಪ್ಲಿಕೇಶನ್‌ಗಳು ಅತಿಯಾದ ಆನ್-ಡಿವೈಸ್ ಅನುಮತಿಗಳನ್ನು ಕೇಳುತ್ತವೆ. ಆದರಿಂದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್‌ ಮಾಡುವಾಗ ಸೂಕ್ತ ಮಾಹಿತಿ ತಿಳಿದುಕೊಂಡು ಹೆಜ್ಜೆ ಹಾಕುವುದು ಸೂಕ್ತವಾಗಿದೆ. ನೀವು ಅಪ್ಲಿಕೇಶನ್‌ಗಳಲ್ಲಿರುವ ಮಾಹಿತಿ ಗಮನಿಸದೇ ಇದ್ದರೆ ಫೋನ್‌ಸ್ಪೈ ಟ್ರಾಕ್‌ನಲ್ಲಿ ನೀವು ಸಿಲುಕಿಕೊಳ್ಳುವ ಸಾದ್ಯತೆ ಇದೆ. ಆದರೆ ಅಪ್ಲಿಕೇಶನ್ ಮೆನುವಿನಲ್ಲಿ ಅಪ್ಲಿಕೇಶನ್‌ಗಳು ಗೋಚರಿಸದ ಕಾರಣ, ಬಳಕೆದಾರರು PhoneSpy ಕದಿಯುವ ಪ್ರಕ್ರಿಯೆಯನ್ನು ಅಡ್ಡಿಪಡಿಸಲು ಸಾಧ್ಯವಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.

ಅಪ್ಲಿಕೇಶನ್

ಸದ್ಯ PhoneSpy ಸ್ಪಷ್ಟವಾಗಿ ಇನ್ನೂ ಕೂಡ ಆಂಡ್ರಾಯ್ಡ್‌ನಲ್ಲಿನ ಇತರ ಅಪ್ಲಿಕೇಶನ್ ಮಾರುಕಟ್ಟೆ ಸ್ಥಳಗಳಲ್ಲಿ ಇದು ಕಂಡುಬಂದಿಲ್ಲ. ಆದರೆ, ಸಂಶೋಧಕರ ಪ್ರಕಾರ, ವೆಬ್ ಟ್ರಾಫಿಕ್ ಮರುನಿರ್ದೇಶನ ಅಥವಾ ಸಾಮಾಜಿಕ ಎಂಜಿನಿಯರಿಂಗ್ ಆಧಾರಿತ ವಿತರಣಾ ವಿಧಾನಗಳ ಮೂಲಕ ಸ್ಪೈವೇರ್ ಫೋನ್‌ಗಳಿಗೆ ಹರಡುತ್ತಿದೆ. ಅಂದರೆ ಗ್ರಾಹಕರನ್ನು ಸುಲಭವಾಗಿ ಮೋಸಗೊಳಿಸಲು ವಂಚಕರು ಹೊಸ ಮಾರ್ಗವನ್ನು ಹುಡುಕುತ್ತಿದ್ದಾರೆ ಇದರ ಮೂಲಕ ಈ ಮಾದರಿಯ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುತ್ತಿದ್ದಾರೆ.

PhoneSpy

ಇಲ್ಲಿಯ ತನಕ PhoneSpy ದಾಳಿಗೆ 1,000ಕ್ಕೂ ಹೆಚ್ಚಿನ ಸಂಖ್ಯೆಯ ಮಂದಿ ತಮ್ಮ ಡೇಟಾ ಮಾಹಿತಿ ಕಳೆದುಕೊಂಡಿದ್ದಾರೆ. ಆದರೆ PhoneSpy ಕಾನೂನುಬದ್ಧ ಅಪ್ಲಿಕೇಶನ್‌ಗಳಂತೆ ಮಾಸ್ಕ್ವೆರೇಡ್ ಮಾಡುವ ಸ್ಪೈವೇರ್ ವರ್ಗಕ್ಕೆ ಸೇರಿರುವುದರಿಂದ, ಅದನ್ನು ಟ್ರ್ಯಾಕ್ ಮಾಡುವುದು ತುಂಬಾ ಕಷ್ಟ. ಇದು ಈಗಾಗಲೇ ಕಂಡುಹಿಡಿಯಲಾಗಿದ್ದ, ಸ್ಪೈವೇರ್ ಮತ್ತು ಸ್ಟಾಕ್‌ವೇರ್ ಪ್ರೋಗ್ರಾಂಗಳ ಮಾದರಿಯಲ್ಲಿಯೇ ಇದೆ. ತನ್ನ ವಿಭಿನ್ನ ಕಾರ್ಯಕ್ರಮಗಳಿಂದ ವಿಭಿನ್ನ ವೈಶಿಷ್ಟ್ಯಗಳನ್ನು ಕಂಪೈಲ್ ಮಾಡಲು ಮತ್ತು ಸಂಯೋಜಿಸಲು ಇದು ಒಂದು ಮಾರ್ಗವಾಗಿದೆ. ಆದರಿಂದ ಯಾವುದೇ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡುವ ಮುನ್ನ ಎಚ್ಚರಿಕೆ ವಹಿಸುವುದು ಸೂಕ್ತವಾಗಿದೆ.

ಡೌನ್‌ಲೋಡ್

ಇದಲ್ಲದೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಗುರುತಿಸದ ಅಥವಾ ನೀವು ಡೌನ್‌ಲೋಡ್ ಮಾಡಿಲ್ಲ ಎಂದು ಖಚಿತವಾಗಿರುವ ಅಪ್ಲಿಕೇಶನ್‌ಗಳನ್ನು ನೀವು ಗಮನಿಸುತ್ತೀರಿ. ಇದು ಹ್ಯಾಕರ್ ಅಥವಾ ಸ್ಪೈವೇರ್‌ನ ಕೆಲಸವಾಗಿರಬಹುದು. ಜೊತೆಗೆ ನಿಮ್ಮ ಚಟುವಟಿಕೆಗಳು ಏನೆಂದು ಟ್ರ್ಯಾಕ್ ಮಾಡುವಾಗ ದುರುದ್ದೇಶಪೂರಿತ ಅಪ್ಲಿಕೇಶನ್‌ಗಳು ಅಥವಾ ಸಾಫ್ಟ್‌ವೇರ್ ನಿಮ್ಮ ಮೊಬೈಲ್ ಡೇಟಾವನ್ನು ಹಿನ್ನೆಲೆಯಲ್ಲಿ ಸೇವಿಸುತ್ತಿರುವುದು ಕಂಡು ಬಂದರೆ ನಿಮ್ಮ ಫೋನ್‌ ಸ್ಪೈವೇರ್‌ ದಾಳಿಗೆ ಒಳಗಾಗಿರುವ ಸಾದ್ಯತೆ ಇರುತ್ತದೆ.

Best Mobiles in India

English summary
Although the PhoneSpy-infected apps have not made their way to the Google Play Store.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X