ಇದು ಈ ಜಮಾನದ ಅಚ್ಚರಿ! ಆರ್ಡರ್ ಮಾಡಿದ ನಾಲ್ಕು ವರ್ಷಗಳ ನಂತರ ಮನೆಗೆ ಬಂದ ಪಾರ್ಸಲ್!
ಆನ್‌ಲೈನ್ ಶಾಪಿಂಗ್‌ನಲ್ಲಿ ಆರ್ಡರ್ ಮಾಡಿದ ಪ್ರಾಡಕ್ಟ್‌ಗಳು ಇನ್‌ಟೈಂಗೆ ಬಂದಿಲ್ಲವೆಂದರೆ ಬರುವ ಕೋಪ ಅಷ್ಟಿಷ್ಟಲ್ಲ. ಕೆಲವು ಸಮಯಗಳಲ್ಲಿ ನಾವು ಮಾಡಿದ ಆರ್ಡರ್ ಒಂದಾದರೆ ನಮ್ಮ ಕೈ ಸೇರುವ ಪ್ರಾಡಕ್ಟ್ ಬೇರೆಯದ್ದೆ ಆಗಿರುತ್ತದೆ. ಆದರೆ ಈ ಸುದ್ದಿ ಮಾತ್ರ ಎಲ್ಲದಕ್ಕಿಂತ ಭಿನ್ನವಾಗಿದೆ. ಇಲ್ಲಿ ಆರ್ಡರ್ ಮಾಡಿದ ವ್ಯಕ್ತಿ ಮಾತ್ರವಲ್ಲ ಡೆಲಿವರಿ ಮಾಡಿದ ಸೈಟ್‌ಗೂ ಸಲಾಂ ಎನ್ನಲೇಬೇಕು.
ಹೌದು, ದೆಹಲಿ ಮೂಲದ ವ್ಯಕ್ತಿಯೊಬ್ಬ ಆನ್‌ಲೈನ್ ಶಾಪಿಂಗ್ ಸೈಟ್‌ನಲ್ಲಿ ಮಾಡಿದ್ದ ಆರ್ಡರ್ ಒಂದು ಬರೋಬ್ಬರಿ ನಾಲ್ಕು ವರ್ಷಗಳ ನಂತರ ಆತನ ಕೈ ಸೇರಿದೆ. ಈ ಘಟನೆಯನ್ನು ಸೊಶೀಯಲ್ ಮೀಡಿಯಾದಲ್ಲಿ ಶೇರ್ ಮಾಡ್ತಿದ್ದ ಹಾಗೇ ಭಾರಿ ಟ್ರೆಂಡ್ ಸೃಷ್ಟಿಸಿದೆ. ಅಷ್ಟೇ ಅಲ್ಲ ಆತ ನಾಲ್ಕು ವರ್ಷದ ಹಿಂದೆ ಆರ್ಡರ್ ಮಾಡಿದ್ದ ಅಲಿಎಕ್ಸ್‌ಪ್ರೆಸ್ (AliExpress) ಭಾರತದಲ್ಲಿ ಬ್ಯಾನ್ ಆಗಿರೋದು ಕೂಡ ವಿಶೇಷ. ಅಷ್ಟಕ್ಕೂ ಇಲ್ಲಿ ನಡೆದಿರೋದು ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ದೆಹಲಿ ಮೂಲದ ನಿತಿನ್ ಅಗರ್ವಾಲ್ ಎಂಬ ಟೆಕ್ಕಿ ಇದೀಗ ಸೊಶೀಯಲ್ ಮೀಡಿಯಾದಲ್ಲಿ ಭಾರಿ ಸುದ್ದಿಯಾಗಿದ್ದಾರೆ. ಇಲ್ಲಿ ಇವರು ಈ ಪರಿ ಟ್ರೆಂಡ್ ಆಗೋಕೆ ಕಾರಣ ಅವರು ಸೊಶೀಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೋಸ್ಟ್. ಈ ಪೋಸ್ಟ್‌ನಲ್ಲಿ ಅವರು ನಾಲ್ಕು ವರ್ಷಗಳ ಹಿಂದೆ ಅಲಿ ಎಕ್ಸ್‌ಪ್ರೆಸ್‌ನ್ಲಲಿ ಮಾಡಿದ್ದ ಆರ್ಡರ್ ಇಂದು ಕೈ ಸೇರಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಇಲ್ಲಿ ಗಮನಿಸಬಹುದಾದ ವಿಚಾರವೆಂದರೆ ಅಲಿ ಎಕ್ಸ್‌ಪ್ರೆಸ್ ಸದ್ಯ ಭಾರತದಲ್ಲಿ ಬ್ಯಾನ್ ಆಗಿದೆ.
ಅಲೈಕ್ಸ್‌ಪ್ರೆಸ್ ಭಾರತದಲ್ಲಿ ಬ್ಯಾನ್ ಆಗಿದೆ, ಬ್ಯಾನ್ ಆಗುವ ಮುಂಚೆ ಭಾರತೀಯ ಟೆಕ್ಕಿಗಳಿಗೆ ಇದು ಗೋ-ಟು ವೆಬ್‌ಸೈಟ್ ಆಗಿತ್ತು. ಅದರಲ್ಲೀ ಜನಪ್ರಿಯ ಆನ್‌ಲೈನ್ ಮಾರುಕಟ್ಟೆಯು ಅಗ್ಗದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಸೇಲ್ ಮಾಡುತ್ತಿತ್ತು. ಭಾರತದಲ್ಲಿ ಲಭ್ಯವಿಲ್ಲದ ಕೆಲವು ಡಿವೈಸ್‌ಗಳನ್ನು ಅಲಿಎಕ್ಸ್‌ಪ್ರೆಸ್ ವೆಬ್‌ಸೈಟ್ ಮೂಲಕ ಚೀನಾದಿಂದ ಆರ್ಡರ್ ಮಾಡಬಹುದಾಗಿತ್ತು.

ಇದೇ ಸೈಟ್‌ನಲ್ಲಿ ನಾಲ್ಕುವರ್ಷಗಳ ಹಿಂದೆ ಅಂದರೆ ಕೊರೊನಾ ಪ್ರಾರಂಭಕ್ಕೂ ಮೊದಲು ದೆಹಲಿ ಮೂಲದ ಟಿಕ್ಕಿ ಆರ್ಡರ್ ಮಾಡಿದ್ದಾರೆ. ತಾನು ಆರ್ಡರ್ ಮಾಡಿದ್ದ ಪ್ರಾಡಕ್ಟ್ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಅದು ಇನ್ಮುಂದೆ ನನ್ನ ಕೈ ಸೇರುವುದಿಲ್ಲ ಎಂದು ಬಹುಶಃ ಮರೆತೆ ಹೋಗಿದ್ದ ಆರ್ಡರ್ ಇದೀಗ ಸರಿಯಾದ ಸ್ಥಳಕ್ಕೆ ಅಂತಿಮವಾಗಿ ಬಂದು ಸೇರಿದೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಟ್ವಿಟರ್ ಪೋಸ್ಟ್‌ನಲ್ಲಿ, ತಮ್ಮ ಅಶ್ಚರ್ಯಕರ ಅನುಭವವನ್ನು ಹಂಚಿಕೊಂಡಿದ್ದು ಎಲ್ಲೆಡೆ ವೈರಲ್ ಆಗಿದೆ.
ಇನ್ನು ಅಗರ್ವಾಲ್ ತಮ್ಮ ಟ್ವೀಟ್ನಲ್ಲಿ "ಎಂದಿಗೂ ಭರವಸೆ ಕಳೆದುಕೊಳ್ಳಬೇಡಿ! ನಾನು ಈ ಪ್ರಾಡಕ್ಟ್ ಅನ್ನು ಅಲಿ ಎಕ್ಸ್‌ಪ್ರೆಸ್‌ನಿಂದ (ಪ್ರಸ್ತುತ ಭಾರತದಲ್ಲಿ ನಿಷೇಧಿಸಲಾಗಿದೆ) 2019 ರಲ್ಲಿ ಆರ್ಡರ್ ಮಾಡಿದ್ದೇನೆ. ಆದರೆ ಆರ್ಡರ್ ಮಾಡಿದ ನಾಲ್ಕುವರ್ಷಗಳ ನಂತರ ಪಾರ್ಸೆಲ್ ಅನ್ನು ಇಂದು ತಲುಪಿಸಲಾಗಿದೆ." ಎಂದು ಬರೆದುಕೊಂಡಿದ್ದಾರೆ. ಆದರೆ ಈ ಟ್ವೀಟ್‌ನಲ್ಲಿ ಉತ್ಪನ್ನದ ವಿವರಗಳನ್ನು ಹಂಚಿಕೊಂಡಿಲ್ಲ. ಅಷ್ಟೇ ಅಲ್ಲ ಇಷ್ಟೊಂದು ವಿಳಂಬಕ್ಕೆ ಕಾರಣ ಏನು ಅನ್ನೊದನ್ನ ಸಹ ಅವರು ತಿಳಿಸಿಲ್ಲ ಅನ್ನೊದು ಇಂಟ್ರೆಸ್ಟಿಂಗ್ ವಿಚಾರವಾಗಿದೆ.

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಶಾಪಿಂಗ್‌ನಲ್ಲಿ ಆಗುತ್ತಿರುವ ಎಡವಟ್ಟುಗಳ ನಡುವೆ ಈ ವಿಚಾರ ಸಾಕಷ್ಟು ಟ್ರೆಂಡ್ ಆಗಿದೆ. ಅದು ಕೂಡ ನಾಲ್ಕು ವರ್ಷಗಳ ನಂತರವೂ ಪಾರ್ಸಲ್ ಅನ್ನು ಸರಿಯಾದ ಸ್ಥಳಕ್ಕೆ ತಲುಪಿಸಿರುವುದ ಬಗ್ಗೆ ಟ್ವಿಟರ್‌ನಲ್ಲಿ ತರಹವೇಹಾರಿ ಟ್ವಿಟ್‌ಗಳನ್ನು ಮಾಡಲಾಗ್ತಿದೆ.
ಇನ್ನು ಅಲಿಎಕ್ಸ್‌ಪ್ರೆಸ್ ವೆಬ್‌ಸೈಟ್ ಚೀನಾದ ಪ್ರಮುಖ ಉದ್ಯಮಿ ಅಲಿಬಾಬಾ ಒಡೆತನಕ್ಕೆ ಸೇರಿದೆ ಅನ್ನೊದು ಕೂಡ ವಿಶೇಷವಾಗಿದೆ. ಭಾರತ ಸರ್ಕಾರ ಜೂನ್ 2020 ರಲ್ಲಿ ರಾಷ್ಟ್ರದ ಭದ್ರತಾ ಕಾಳಜಿ ದೃಷ್ಟಿಯಿಂದ ಬ್ಯಾನ್ 58 ಚೀನೀ ಅಪ್ಲಿಕೇಶನ್‌ಗಳಲ್ಲಿ ಅಲೈಕ್ಸ್‌ಪ್ರೆಸ್ ಕೂಡ ಸೇರಿದೆ.


Click it and Unblock the Notifications








