ವಾಹನದ ಬಿಡಿಭಾಗಗಳ ಕಳ್ಳರಿಗೆ ಬಿಗ್‌ಶಾಕ್‌..! ಬರುತ್ತಿದೆ ಮೈಕ್ರೋಡಾಟ್‌..!

By Avinash
|

ಎಲ್ಲಿಗೋ ವಾಹನ ಪಾರ್ಕ್‌ ಮಾಡಿ ಹೋಗಿರುತ್ತೇವೆ. ವಾಪಸ್‌ ಬರುವಷ್ಟರೊತ್ತಿಗೆ ಕಾರು ಅಥವಾ ಬೈಕ್‌ನ ಮಿರರ್‌ ಇರುವುದಿಲ್ಲ, ಒಂದೊಂದು ಸಲ ಇಂಡಿಕೇಟರ್ ಇರಲ್ಲ. ಮತ್ತೀತರ ಬಿಡಿಭಾಗಗಳು ಕಾಣ್ತಾನೇ ಇರಲ್ಲ. ಬಿಡಿಭಾಗಗಳು ಹೋದ್ರೆ ಪರವಾಗಿಲ್ಲ ಎನ್ನುವವರಿಗೆ ವಾಹನವೂ ಕಾಣದಿದ್ದಾಗ ಬೈಕ್‌ ಕಳೆದೊಯ್ತು ಎಂದು ಗೊಗರೆಯುವುದನ್ನು ನೋಡಿರುತ್ತೇವೆ. ಈ ಎಲ್ಲಾ ಸಮಸ್ಯೆಗಳಿಗೆ ಬ್ರೇಕ್‌ ಹಾಕಲು ಸರ್ಕಾರ ಹೊಸ ಕ್ರಮದೊಂದಿಗೆ ಬರುತ್ತಿದೆ.

ವಾಹನದ ಬಿಡಿಭಾಗಗಳ ಕಳ್ಳರಿಗೆ ಬಿಗ್‌ಶಾಕ್‌..! ಬರುತ್ತಿದೆ ಮೈಕ್ರೋಡಾಟ್‌..!

ಹೌದು, ವಾಹನ ಕಳ್ಳರಿಗೆ ಈ ಮೂಲಕ ಬಿಗ್‌ ಶಾಕ್‌ ನೀಡಲು ಮುಂದಾಗಿರುವ ದೆಹಲಿ ಸರ್ಕಾರ ಹೊಸ ತಂತ್ರಜ್ಞಾನವನ್ನು ಪರಿಚಯಿಸುತ್ತಿದೆ. ಮೈಕ್ರೋಡಾಟ್‌ ಎಂಬ ತಂತ್ರಜ್ಞಾನವನ್ನು ವಾಹನಗಳಿಗೆ ಅಳವಡಿಸಲು ಯೋಚಿಸುತ್ತಿರುವ ದೆಹಲಿ ಸರ್ಕಾರ ವಾಹನ ಕಳ್ಳತನ ನಿಯಂತ್ರಿಸಲು ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ. ಹಾಗಾದರೆ, ಮೈಕ್ರೋಡಾಟ್‌ ತಂತ್ರಜ್ಞಾನ ಎಂದರೇ ಏನು..? ಈ ತಂತ್ರಜ್ಞಾನದಿಂದ ಆಗುವ ಪ್ರಯೋಜನವೇನು..? ದೆಹಲಿ ಸರ್ಕಾರ ಜಾರಿಗೆ ತರುತ್ತಿರುವ ಕ್ರಮದಲ್ಲಿ ಏನೀದೆ..? ಮುಂದೆ ನೋಡಿ.

ಕಳೆದ ತಿಂಗಳು ನಡೆದಿತ್ತು ಸಭೆ

ಕಳೆದ ತಿಂಗಳು ನಡೆದಿತ್ತು ಸಭೆ

ಮೈಕ್ರೋಡಾಟ್‌ ತಂತ್ರಜ್ಞಾನ ಜಾರಿಗೆ ತರುವ ನಿಟ್ಟಿನಲ್ಲಿ ಕಳೆದ ತಿಂಗಳು ಸಭೆ ನಡೆದಿತ್ತು. ಸಭೆಯಲ್ಲಿ ಹಲವು ಪ್ರಾಧಿಕಾರಗಳಿಗೆ ವಾಹನ ಕಳ್ಳತನ ನಿಯಂತ್ರಣಕ್ಕೆ ಸುರಕ್ಷಾ ಸಾಧನಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಲೆಫ್ಟಿನೆಂಟ್‌ ಗವರ್ನರ್ ಅನಿಲ್‌ ಬೈಜಾಲ್‌ ಸೂಚಿಸಿದ್ದರು. ರಾಷ್ಟ್ರ ರಾಜಧಾನಿಯಲ್ಲಿ ನೊಂದಣಿಯಾಗುವ ಎಲ್ಲಾ ವಾಹನಗಳಿಗೂ ಈ ಕ್ರಮವನ್ನು ಜಾರಿಗೆ ತರಬೇಕೆಂದು ಬೈಜಾಲ್‌ ತಿಳಿಸಿದ್ದರು.

ಭಾರೀ ಪ್ರಮಾಣದಲ್ಲಿ ಕಳ್ಳತನ

ಭಾರೀ ಪ್ರಮಾಣದಲ್ಲಿ ಕಳ್ಳತನ

ಆಗಸ್ಟ್‌ 15ರ ಹೊತ್ತಿಗೆ ಪ್ರಸಕ್ತ ವರ್ಷದಲ್ಲಿ 27,780 ವಾಹನ ಕಳ್ಳತನ ಪ್ರಕರಣಗಳು ವರದಿಯಾಗಿವೆ. ಆದ್ದರಿಂದ ದೆಹಲಿ ಸರ್ಕಾರ ಮೋಟಾರ್ ವಾಹನಗಳ ಕಳ್ಳತನ ನಿಯಂತ್ರಣಕ್ಕೆ ಅನೇಕ ತಂತ್ರಜ್ಞಾನಗಳನ್ನು ಬಳಸಲು ಮುಂದಾಗಿದ್ದು, ಪ್ರಮುಖವಾಗಿ ಮೈಕ್ರೋಡಾಟ್‌ ತಂತ್ರಜ್ಞಾನಕ್ಕೆ ಮೊರೆ ಹೋಗಿದೆ.

ಮೈಕ್ರೋಡಾಟ್‌ ಎಂದರೇನು..?

ಮೈಕ್ರೋಡಾಟ್‌ ಎಂದರೇನು..?

ಮೈಕ್ರೋಡಾಟ್‌ ತಂತ್ರಜ್ಞಾನದಲ್ಲಿ ನ್ಯಾನೋ ಗಾತ್ರದ ಕಣಗಳಾಗಿದ್ದು, ಅವುಗಳು ವಿಶಿಷ್ಟವಾದ ಆಕಾರಗಳನ್ನು ಹೊಂದಿದ್ದು, ಗುಪ್ತ ಗುರುತು ಮತ್ತು ವಿಶಿಷ್ಟ ಸಂಖ್ಯೆಗಳನ್ನು ಹೊಂದಿರುತ್ತವೆ. 1 ಮಿಮೀ ಅಥವಾ 0.5 ಮಿ.ಮಿ ವ್ಯಾಸದಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಲಾಗಿರುತ್ತದೆ. ವಿಶೇಷ ಸಾಧನ ಬಳಸಿಕೊಂಡು ಪ್ರತಿ ಮೈಕ್ರೊಡಾಟ್‌ನಲ್ಲಿರುವ ವಿಶಿಷ್ಟ ಮಾಹಿತಿ ವೀಕ್ಷಿಸಬಹುದು.

ಮೈಕ್ರೋಡಾಟ್‌ ಜಾರಿ ಹೇಗೆ..?

ಮೈಕ್ರೋಡಾಟ್‌ ಜಾರಿ ಹೇಗೆ..?

ದೆಹಲಿ ಸರ್ಕಾರ ಹೊಸದಾಗಿ ನೊಂದಣಿಯಾಗುವ ವಾಹನಗಳಿಗೆ ಮೈಕ್ರೋಡಾಟ್‌ ತಂತ್ರಜ್ಞಾನ ಅಳವಡಿಸಲು ಮುಂದಾಗಿದೆ. ಮೈಕ್ರೋಡಾಟ್‌ನ್ನು ಬಳಸಿಕೊಂಡು ವಾಹನಗಳನ್ನು ಗುರುತಿಸುವ ಪ್ರಕ್ರಿಯೆಗೆ Whole of Vehicle Marking (WoVM) ಎಂದು ಕರೆಯಲಾಗುತ್ತದೆ. ಈ ತಂತ್ರಜ್ಞಾನ ವಾಹನ ಕಳ್ಳತನ ನಿಯಂತ್ರಿಸುವುದಲ್ಲದೇ, ಕಳ್ಳತನ ಪ್ರಮಾಣವನ್ನು ನಿಯಂತ್ರಿಸುತ್ತದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಹೇಗೆ ಉಪಯೋಗ..?

ಹೇಗೆ ಉಪಯೋಗ..?

WoVMನಂತೆ ವಿಶಿಷ್ಟ ಗುರುತಿನ ಸಂಖ್ಯೆ ಹೊಂದಿರುವ ಸಾವಿರಾರು ಲೋಹದ ಮೈಕ್ರೋಡಾಟ್‌ಗಳನ್ನು ವಾಹನದ ಎಲ್ಲಾ ಭಾಗಗಳಿಗೂ ಅಳವಡಿಸಲಾಗುತ್ತದೆ. ವಿಶಿಷ್ಟ ಗುರುತಿನ ಸಂಕ್ಯೆ ಹೊಂದಿದ ಮೈಕ್ರೋಡಾಟ್‌ಗಳು ವಾಹನದ ರಿಜಿಸ್ಟ್ರೇಷನ್ ಸಂಖ್ಯೆಯೊಂದಿಗೆ ಲಿಂಕ್‌ ಆಗಿರುತ್ತವೆ. ವಾಹನದ ಪ್ರತಿ ಭಾಗವೂ ಮೈಕ್ರೋಡಾಟ್‌ ಹೊಂದುವುದರಿಂದ ಕಳೆದ ಬಿಡಿಭಾಗವನ್ನು ವಾಹನ ನೊಂದಣಿ ಸಂಖ್ಯೆಗೆ ಲಿಂಕ್ ಆದ ಮೈಕ್ರೋಡಾಟ್‌ನಿಂದ ಸುಲಭವಾಗಿ ಹುಡುಕಿ ಮಾಲೀಕರಿಗೆ ನೀಡಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಲ್ಲೆಲ್ಲಿ ಬಳಕೆ..?

ಎಲ್ಲೆಲ್ಲಿ ಬಳಕೆ..?

ಮೈಕ್ರೋ ಡಾಟ್‌ ತಂತ್ರಜ್ಞಾನ ಹೀಗಾಗಲೇ ಜನಪ್ರಿಯವಾಗಿದ್ದು, ಹಲವು ದೇಶಗಳಲ್ಲಿ ಬಳಕೆಯಾಗುತ್ತಿದೆ. ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಚಿಲಿ, ತೈವಾನ್‌, ಕೆನಡಾ, ಯುಎಸ್‌ ಮತ್ತು ಯುರೋಪಿಯನ್‌ ಯುನಿಯನ್‌ ಸೇರಿ ಇತರ ದೇಶಗಳಲ್ಲಿ ಬಳಕೆಯಾಗುತ್ತಿದೆ.

Best Mobiles in India

English summary
Delhi government may use this technology to curb motor vehicle thefts. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X