Home
ಸುದ್ದಿಜಾಲ

ಕೇವಲ ಒಂದು ಮಿಸ್ಡ್‌ಕಾಲ್‌ನಿಂದ ಅರ್ಧ ಕೋಟಿ ಹಣ ಕಳೆದುಕೊಂಡ ಭೂಪ!

ಒಂದೇ ಒಂದು ಮಿಸ್ಡ್‌ಕಾಲ್‌ ಏನೆಲ್ಲಾ ಆವಾಂತರ ಮಾಡಿಬಿಡುತ್ತೆ ಅನ್ನೊದಕ್ಕೆ ಇದಕ್ಕಿಂತ ಬೆಸ್ಟ್‌ ಎಕ್ಸಾಂಪಲ್‌ ಇನ್ನೊಂದಿಲ್ಲ. ಸಾಮಾನ್ಯವಾಗಿ ಇಂದಿನ ದಿನಗಳಲ್ಲಿ ವಂಚಕರು ಒಟಿಪಿ, ನಕಲಿ ಲಿಂಕ್‌ಗಳು, ಸ್ಕ್ಯಾಮ್‌ ಸಂದೇಶಗಳ ಮೂಲಕ ವಂಚಿಸುತ್ತಾರೆ. ಆದರೆ ಇದೀಗ ಬಂದಿರುವ ಸುದ್ದಿ ನಿಮ್ಮನ್ನು ಇನ್ನಷ್ಟು ಆತಂಕಕ್ಕೆ ದೂಡಲಿದೆ. ಏಕೆಂದರೆ ಫೋನ್‌ಗೆ ಬರುವ ಮಿಸ್ಡ್‌ಕಾಲ್‌ ಕೂಡ ನಿಮ್ಮ ಖಾತೆಯಲ್ಲಿರುವ ಹಣವನ್ನು ಕಡಿತಗೊಳಿಸಲಿದೆ ಎಂದು ಹೇಳಲಾಗಿದೆ. ಇದಕ್ಕೆ ಸಾಕ್ಷಿಯೆಂಬತೆ ದೆಹಲಿ ಮೂಲದ ವ್ಯಕ್ತಿಯೊಬ್ಬ ಮಿಸ್ಡ್‌ಕಾಲ್‌ ಮೂಲಕ ಐವತ್ತು ಲಕ್ಷ ಕಳೆದುಕೊಂಡಿದ್ದಾನೆ.

ಸ್ಕ್ಯಾಮ್‌

ಹೌದು, ಇಂತಹ ಸ್ಕ್ಯಾಮ್‌ ಬಗ್ಗೆ ನೀವು ಕೇಳಿರಲು ಸಾಧ್ಯವಿಲ್ಲ. ಇಷ್ಟು ದಿನ ಒಟಿಪಿ ನೀಡಬೇಡಿ, ಯಾರಿಗೂ ಹಂಚಿಕೊಳ್ಳಬೇಡಿ ಎಂದು ಹೇಳುತ್ತಿದ್ದ ಸೈಬರ್‌ ಕ್ರೈಮ್‌ ಅಧಿಕಾರಿಗಳು ಇದೀಗ ಮಿಸ್ಡ್‌ಕಾಲ್‌ಗಳ ಬಗ್ಗೆ ಎಚ್ಚರ ಎನ್ನುವಂತಾಗಿದೆ. ದೆಹಲಿ ಮೂಲದ ವ್ಯಕ್ತಿ ನಾಲ್ಕು ಮಿಸ್ಡ್‌ಕಾಲ್‌ಗಳನ್ನು ಸ್ವಿಕರಿಸಿದ್ದಾರೆ. ನಂತರ ಅದೇ ನಂಬರ್‌ನಿಂದ ಬಂದ ಕರೆಯನ್ನು ಸ್ವಿಕರಿಸುವ ಮೂಲಕ ತಮ್ಮ ಖಾತೆಯಲ್ಲಿದ್ದ ಹಣವನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಮಿಸ್ಡ್‌ಕಾಲ್‌ ಮೂಲಕ ಬ್ಯಾಂಕ್‌ ಖಾತೆಗೆ ಕನ್ನ ಹಾಕಿದ್ದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೂಲದ

ದೆಹಲಿ ಮೂಲದ ವ್ಯಕ್ತಿಯೊಬ್ಬ ಕೇವಲ ಮಿಸ್ಡ್‌ಕಾಲ್‌ಗಳನ್ನು ಸ್ವಿಕರಿಸುವ ಮೂಲಕ ಅರ್ಧ ಕೋಟಿ ಹಣ ಕಳೆದುಕೊಂಡಿರುವ ಘಟನೆ ನಡೆದಿದೆ. ಇಷ್ಟು ದಿನ ಒಟಿಪಿ ಸ್ಕ್ಯಾಮ್‌, ಕಾಲ್‌, ಎಸ್‌ಎಂಎಸ್, ಇಮೇಲ್ ಮೂಲಕ ವಂಚಿಸುತ್ತಿದ್ದ ವಂಚಕರು ಮಿಸ್ಡ್‌ಕಾಲ್‌ ಮೂಲಕವೂ ವಂಚಿಸುತ್ತಿದ್ದಾರೆ. ಮಿಸ್ಡ್ ಕಾಲ್ ಆದ ನಂತರ ಅದೇ ನಂಬರ್‌ನ ಕರೆ ಸ್ವಿಕರಿಸಿದಾಗ ಅವರು ಯಾವುದೇ ಒಟಿಪಿ ಆಗಲಿ, ಬ್ಯಾಂಕ್‌ ಖಾತೆ ಮಾಹಿತಿಯಾಗಲಿ ಕೇಳಿಲ್ಲ. ಆದರೂ 50ಲಕ್ಷ ರೂ.ಗಳನ್ನು ವಂಚಕರು ಎಗರಿಸಿರೋದು ಇದೀಗ ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.

ಮೂಲಗಳ

ಮೂಲಗಳ ವರದಿಯ ಪ್ರಕಾರ ದೆಹಲಿ ಮೂಲದ ವ್ಯಕ್ತಿಯೊಬ್ಬನಿಗೆ ಕೆಲವು ದಿನಗಳ ಹಿಂದೆ ರಾತ್ರಿ 7 ರಿಂದ 8.45 ರ ನಡುವೆ ಪದೇ ಪದೇ ಮಿಸ್ಡ್ ಕಾಲ್‌ಗಳು ಬಂದಿವೆ. ಮೊದಲಿಗೆ ಮಿಸ್ಡ್‌ಕಾಲ್‌ಗಳನ್ನು ನಿರ್ಲಕ್ಷ್ಯ ಮಾಡಿದ್ದ ವ್ಯಕ್ತಿ ನಂತರ ಒಂದು ಸಂಖ್ಯೆ ನಂಬರ್‌ನಿಂದ ಬಂದ ಕರೆಯನ್ನು ಸ್ವೀಕರಿಸಿದ್ದಾನೆ. ಕರೆಯನ್ನು ಸ್ವಿಕರಿಸಿದಾಗ ಅತ್ತ ಕಡೆಯಿಂದ ಯಾರೂ ಮಾತನಾಡಲಿಲ್ಲ, ಬದಲಿಗೆ ಸ್ವಲ್ಪ ಸಮಯದ ನಂತರ, ಆತನ ಮೊಬೈಲ್‌ಗೆ RTGS ಸಂದೇಶ ಬಂದಿದೆ. ಆರ್‌ಟಿಜಿಎಸ್‌ ಮೂಲಕ ಅರ್ಧ ಕೋಟಿ ಹಣವನ್ನು ವರ್ಗಾಯಿಸಿಕೊಂಡಿರೋದು ಬೆಳಕಿಗೆ ಬಂದಿದೆ.

ಪ್ರಕರಣ

ಈ ರೀತಿಯ ಪ್ರಕರಣ ಇದೀಗ ಇಡೀ ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ. ಕೇವಲ ಮಿಸ್ಡ್‌ ಕಾಲ್‌ ಮೂಲಕ ಹಣ ವರ್ಗಾಯಿಸಿದ್ದು ಹೇಗೆ ಎಂಬ ಚರ್ಚೆ ಜೋರಾಗಿದೆ. ಈ ಪ್ರಕರಣ ಜಾರ್ಖಂಡ್‌ನ ಜಮ್ತಾರಾದಲ್ಲಿ ನಡೆದಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಶಂಕಿಸಲಾಗಿದೆ. ಜಮ್ತಾರಾ ನಗರ ಮೂಲದ ವಂಚಕರು ಇದನ್ನೇ ಸಾಮಾನ್ಯ ಜನರ ಬ್ಯಾಂಕ್‌ ಖಾತೆಗಳಿಗೆ ಕನ್ನ ಹಾಕಲು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಇದಕ್ಕಾಗಿ ಸ್ಕ್ರೀನ್-ಮಿರರಿಂಗ್ ಅಪ್ಲಿಕೇಶನ್‌ಗಳ ಮೂಲಕ ಯಾಮಾರಿಸುತ್ತಿದ್ದಾರೆ.

ಎಂದು

ಸದ್ಯ ಈ ಪ್ರಕರಣದಲ್ಲಿ "ಸಿಮ್ ಸ್ವಾಪ್" ಮೂಲಕ ಹಣವನ್ನು ವರ್ಗಾಯಿಸಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದೇ ಕಾರಣಕ್ಕೆ RTGS ವರ್ಗಾವಣೆಯನ್ನು ಪ್ರಾರಂಭಿಸಲು ಮತ್ತು OTP ಅನ್ನು ಆಕ್ಟಿವ್‌ ಮಾಡಲು ಮಿಸ್ಡ್‌ಕಾಲ್‌ ನೀಡಲಾಗಿದೆ. ಮಿಸ್ಡ್‌ಕಾಲ್‌ ಪಕ್ಕದ ಕಾಲ್‌ಗಳ ಐವಿಆರ್‌ನಲ್ಲಿ OTP ಅನ್ನು ನಮೂದಿಸಿರುವ ಸಾಧ್ಯತೆಯಿದೆ. ಈ ರೀತಿಯ ವಂಚನೆಯಲ್ಲಿ, ಸ್ಕ್ಯಾಮರ್‌ಗಳು ಜನರ ಮೊಬೈಲ್ ಫೋನ್ ಕ್ಯಾರಿಯರ್‌ಗಳನ್ನು ಸಂಪರ್ಕಿಸುವ ಸಾಧ್ಯತೆಯಿದೆ. ನಂತರ ಸಿಮ್ ಕಾರ್ಡ್ ಅನ್ನು ಸಕ್ರಿಯಗೊಳಿಸುವುದಕ್ಕೆ ಅವರನ್ನು ಯಾಮಾರಿಸಿ ನಿಮ್ಮ ಫೋನ್‌ ಮೇಲೆ ಕಂಪ್ಲೀಟ್‌ ಕಂಟ್ರೋಲ್‌ ತೆಗೆದುಕೊಂಡ ನಿಮ್ಮ ಬ್ಯಾಂಕ್‌ ಖಾತೆಗಳಿಗೆ ಕನ್ನ ಹಾಕುತ್ತಾರೆ.

ಸಿಮ್ ಸ್ವಾಪ್ ವಂಚನೆ ಹೇಗೆ ನಡೆಯುತ್ತೆ?

ಸಿಮ್ ಸ್ವಾಪ್ ವಂಚನೆ ಹೇಗೆ ನಡೆಯುತ್ತೆ?

ಸ್ವಿಮ್‌ ಸ್ವಾಪ್‌ ವಂಚನೆ ನಿಮ್ಮ ಯೋಚನೆಗೂ ಮೀರಿದ್ದಾಗಿದೆ. ಇದರಲ್ಲಿ ಬಳಕೆದಾರರು ಎರಡು ಅಂಶಗಳ ದೃಢೀಕರಣ ಮತ್ತು ಪರಿಶೀಲನೆಯಲ್ಲಿ ಎದುರಿಸುವ ದೋಷವನ್ನೆ ವಂಚಕರು ಬಂಡವಾಳವಾಗಿರಿಸಿಕೊಳ್ಳುತ್ತಾರೆ. ಇದರ ಮೂಲಕ ನಿಮ್ಮ ಖಾತೆಗಳನ್ನು ಪ್ರವೇಶಿಸಲು ನಿಮ್ಮ ಫೋನ್ ಸಂಖ್ಯೆಯನ್ನು ಬಳಸಿದಾಗ ಸಿಮ್ ಸ್ವಿಚ್ ವಂಚನೆ ನಡೆಸುತ್ತಾರೆ. ಸಿಮ್ ಸ್ವಿಚಿಂಗ್‌ಗಾಗಿ, ವಂಚಕರು ನಿಮ್ಮ ಮೊಬೈಲ್ ಫೋನ್‌ನ ಸಿಮ್ ಪೂರೈಕೆದಾರರನ್ನು ಸಂಪರ್ಕಿಸುತ್ತಾರೆ. ಅಲ್ಲದೆ ನಿಮ್ಮ ಸಿಮ್ ಕಾರ್ಡ್ ಅನ್ನು ಆಕ್ಟವ್‌ ಮಾಡುವುದಕ್ಕೆ ನಿಮ್ಮ ದಾಖಲೆಗಳನ್ನು ಬಳಸುತ್ತಾರೆ. ನಿಮ್ಮ ಸಿಮ್‌ ಆಕ್ಟಿವ್‌ ಆದ ನಂತರ ನಿಮ್ಮ ಸಂಖ್ಯೆಗೆ ಮಿಸ್ಡ್‌ ಕಾಲ್‌ ನೀಡುವ ಮೂಲಕ ನಿಮ್ಮ ಫೋನ್‌ ಮೇಲೆ ಕಂಪ್ಲೀಟ್‌ ಕಂಟ್ರೋಲ್‌ ಪಡೆದುಕೊಳ್ಳುತ್ತಾರೆ.

Best Mobiles in India

English summary
Delhi man loses Rs 50 lakh through missed calls
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+