Subscribe to Gizbot

ಆನ್‌ಲೈನ್‌ನಲ್ಲಿ ಬುಕ್‌ ಮಾಡಿದ್ದು 'ಒನ್‌ಪ್ಲಸ್' ಫೋನು..ಬಂದಿದ್ದು ಮೂರು 'ಸೋಪು'!!

Written By:

ಪ್ರತಿಷ್ಠಿತ ಆನ್‌ಲೈನ್ ಶಾಪಿಂಗ್‌ ಜಾಲತಾಣಗಳ ಬಗ್ಗೆಯೇ ನಂಬಿಕೆಯೇ ಕಳೆದುಕೊಳ್ಳುವಂತಹ ಹಲವು ಘಟನೆಗಳು ಇತ್ತೀಚಿಗೆ ಜರುಗುತ್ತಿವೆ.! ಹೌದು, ದೆಹಲಿ ಮೂಲದ ವ್ಯಕ್ತಿಯೊಬ್ಬರು ಅಮೆಜಾನ್‌ನಲ್ಲಿ ಒನ್‌ಪ್ಲಸ್‌ ಸ್ಮಾರ್ಟ್‌ಫೋನ್ ಬುಕ್‌ ಮಾಡಿದ್ದರೆ, ಮೊಬೈಲ್‌ ಬದಲಿಗೆ ಸೋಪ್‌ಗಳು ಬಂದಿವೆ ಎಂಬ ವರದಿಯಾಗಿದೆ.!!

ಚಿರಾಗ್ ಧವನ್ ಎಂಬುವವರು ಅಮೆಜಾನ್‌ನಿಂದ 'ಒನ್‌ ಪ್ಲಸ್‌' ಫೋನ್ ಖರೀದಿಗೆ ಬುಕ್‌ ಮಾಡಿದ್ದರು. ಆದರೆ, ಪ್ರತಿಯಾಗಿ ಅವರಿಗೆ ಮೂರು ಸೋಪ್‌ಗಳ ಪ್ಯಾಕ್‌ ಬಂದು ತಲುಪಿದೆ ಎಂದು ತಮ್ಮ ಫೇಸ್ ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಬಗ್ಗೆ ಪ್ರಮುಖ ಇಂಗ್ಲೀಷ್ ಮಾಧ್ಯಮ ಇಂಡಿಯಾ ಟುಡೆ ವರದಿ ಮಾಡಿದೆ.!!

ಆನ್‌ಲೈನ್‌ನಲ್ಲಿ ಬುಕ್‌ ಮಾಡಿದ್ದು 'ಒನ್‌ಪ್ಲಸ್' ಫೋನು..ಬಂದಿದ್ದು ಮೂರು 'ಸೋಪು'!!

ಅಮೆಜಾನ್‌ನಲ್ಲಿ ಸೆ. 7ರಂದು ಚಿರಾಗ್ ಧವನ್ ಅವರು 'ಒನ್ ಪ್ಲಸ್‌' ಫೋನ್‌ ಬುಕ್‌ ಮಾಡಿದ್ದರು ಎನ್ನಲಾಗಿದೆ. ಸೆ. 11ರಂದು ಅವರಿಗೆ ಫೋನ್ ಬುಕ್ಕಿಂಗ್ ತಲುಪಿದ್ದು, ಅವರಿಗೆ ತಲುಪಿದ ಬಾಕ್ಸ್‌ನಲ್ಲಿ ಮೂರು 'ಫಿನಾ' (Fene) ಸೋಪ್‌ಗಳಿದ್ದವು ಎನ್ನಲಾಗಿದೆ. ಇದನ್ನು ಕಂಡು ಚಿರಾಗ್ ಧವನ್ ಶಾಕ್ ಆಗಿದ್ದಾರೆ.!!

ಆನ್‌ಲೈನ್‌ನಲ್ಲಿ ಬುಕ್‌ ಮಾಡಿದ್ದು 'ಒನ್‌ಪ್ಲಸ್' ಫೋನು..ಬಂದಿದ್ದು ಮೂರು 'ಸೋಪು'!!

ಚಿರಾಗ್ ಧವನ್ ಅವರು ಈ ಬಗ್ಗೆ ಗ್ರಾಹಕರ ದೂರು ಸಲ್ಲಿಕೆಯ ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ. ನಂತರ ಅಮೆಜಾನ್ ಸಿಬ್ಬಂದಿ ಸ್ಪಂದಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, ಫೇಸ್‌ಬುಕ್‌ನ ಪೋಸ್ಟ್‌ ಮಾತ್ರ ಒಬ್ಬರಿಂದ ಒಬ್ಬರಿಗೆ ಶೇರ್‌ಆಗುತ್ತಾ ವೈರಲ್ ಆಗಿದೆ.

English summary
೦nline shopping has its own perks like discounts and convenienc.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot