ಏರ್‌ಪೋರ್ಟ್‌ನಲ್ಲಿ ಮಹಿಳೆ ಎಸೆದ ಪವರ್ ಬ್ಯಾಂಕ್ ಬ್ಲಾಸ್ಟ್...! ಆಮೇಲೆ..?

|

ಆಗಸದಲ್ಲಿ ಹಾರುವ ಸಂದರ್ಭದಲ್ಲಿ ಪವರ್ ಬ್ಯಾಂಕ್ ಬ್ಲಾಸ್ಟ್ ಆಗುವ ಸಾಧ್ಯತೆ ಇರುವುದರಿಂದಾಗಿ ವಿಮಾನದಲ್ಲಿ ಪವರ್ ಬ್ಯಾಂಕ್ ಅನ್ನು ತೆಗೆದುಕೊಂಡು ಹೋಗುವಂತಿಲ್ಲ ಎಂಬ ನಿಯಮವನ್ನು ಜಾರಿಗೆ ತರಲಾಗಿದೆ. ಆದರೆ ಇದನ್ನು ಪಾಲಿಸಲು ನಿರಾಕರಿಸದ ಮಹಿಳೆಯೊಬ್ಬರು ಪೊಲೀಸರ ಅತಿಥಿಯಾಗಿದ್ದಾರೆ.

ಏರ್‌ಪೋರ್ಟ್‌ನಲ್ಲಿ ಮಹಿಳೆ ಎಸೆದ ಪವರ್ ಬ್ಯಾಂಕ್ ಬ್ಲಾಸ್ಟ್...! ಆಮೇಲೆ..?

ದೆಹಲಿಯ ಇಂದಿರ ಗಾಂಧಿ ಇಂಟರ್ನ್ಯಾಷನಲ್ (IGI) ಏರ್‌ಫೋರ್ಟ್‌ನಲ್ಲಿ ಪವರ್ ಬ್ಯಾಂಕ್ ಅನ್ನು ತೆಗೆದಕೊಂಡು ಹೊಗುವಂತಿಲ್ಲ ಎಂದು ಪೊಲೀಸರು ನಿರ್ಭಂದಿಸಿದ ಸಂದರ್ಭದಲ್ಲಿ ಅದನ್ನು ತೆಗೆದು ಅವರ ಮೇಲೆಯೆ ಎಸೆದಿದ್ದಾರೆ. ಈ ಸಂದರ್ಭದಲ್ಲಿ ಅದು ಬಾಂಬ್ ಮಾದರಿಯಲ್ಲಿ ಬ್ಲಾಸ್ಟ್ ಆಗಿದೆ ಎನ್ನಲಾಗಿದೆ. ಇದರಿಂದಾಗಿ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

ಬ್ಲಾಸ್ಟ್:

ಬ್ಲಾಸ್ಟ್:

ಮಹಿಳೆಯೂ ಸೆಕ್ಯೂರಿಟಿಯವ ಮೇಲೆ ಕೋಪಗೊಂಡು ಪವರ್ ಬ್ಯಾಂಕ್ ಎಸೆದ ಸಂದರ್ಭದಲ್ಲಿ ಅದು ಹಾಂಡ್ ಗ್ರಾನೇಡ್ ಮಾದರಿಯಲ್ಲಿ ಸಿಡಿದ ಹೊಗೆ ಕಾರಿದೆ. ಅದನ್ನು ನೋಡಿದ ಏರ್‌ಪೋರ್ಟ್ ಸೆಕ್ಯೂರಿಟಿ ಮಹಿಳೆಯನ್ನು ಬಂಧಿಸಿದಿದ್ದಾರೆ ಎನ್ನಲಾಗಿದೆ.

ಪವರ್ ಬ್ಯಾಂಕ್:

ಪವರ್ ಬ್ಯಾಂಕ್:

ದೆಹಲಿಯ ಇಂದಿರ ಗಾಂಧಿ ಇಂಟರ್ನ್ಯಾಷನಲ್ (IGI) ಏರ್‌ಫೋರ್ಟ್‌ನಲ್ಲಿ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್(CISF) ಸಿಬ್ಬಂದಿ ಸೆಕ್ಯೂರಿಟಿ ನೋಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಮಾಳವೀಕಾ ತ್ರಿವಾರಿ ಎನ್ನುವ ಮಹಿಳೆಯೂ ಧರ್ಮಶಾಲಾಕ್ಕೆ ಪ್ರಯಾಣಿಸಲು ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಕ್ಯಾರಿ ಬ್ಯಾಗಿನಲ್ಲಿದ್ದ ಪವರ್ ಬ್ಯಾಂಕ್ ಅನ್ನು ವಿಮಾನದಲ್ಲಿ ತೆಗದುಕೊಂಡು ಹೋಗುವುವಂತೆ ಇಲ್ಲ ಎಂದು ನಿರ್ಬಂಧಿಸಿದ್ದಾರೆ.

ಹೊಗೆ:

ಹೊಗೆ:

ಆದರೆ ಇದರಿಂದ ಕೋಪಗೊಂಡ ಮಹಿಳೆ ಪವರ್ ಬ್ಯಾಂಕ್ ಅನ್ನು ತೆಗೆದು ಸೆಕ್ಯೂರಿಟಿಯವರ ಮೇಲೆ ಎಸೆದಿದ್ದಾರೆ. ಈ ಸಂದರ್ಭದಲ್ಲಿ ಕೆಳಗೆ ಬಿದ್ದ ಪವರ್ ಬ್ಯಾಂಕ್‌ನಿಂದ ಬೆಂಕಿ ಮತ್ತು ಭಾರೀ ಪ್ರಮಾಣದ ಹೊಗೆಯೂ ಬಂದಿದೆ. ಇದರಿಂದ ಸೆಕ್ಯೂರಿಟಿಯವರು ಮಹಿಳೆಯನ್ನು ಬಂದಿಸಿದ್ದಾರೆ.

ಪ್ರಯಣಿಕರ ಸುರಕ್ಷತೆ:

ಪ್ರಯಣಿಕರ ಸುರಕ್ಷತೆ:

ಈ ಕುರಿತು ಮಾಹಿತಿಯನ್ನು ನೀಡಿರುವ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್(CISF) ಸಿಬ್ಬಂದಿ, ಡಿವೈಸ್ ಬ್ಲಾಸ್ಟ್ ಆಗಿದರ ಪರಿಣಾಮವಾಗಿ ಪ್ರಯಾಣಿಕರ ಸುರಕ್ಷತೆಯ ದೃಷ್ಠಿಯಿಂದ ಮಹಿಳೆಯನ್ನು ಬಂಧಿಸಿರುವುದಾಗಿ ಮಾಹಿತಿಯನ್ನು ನೀಡಿದ್ದಾರೆ.

Best Mobiles in India

English summary
Delhi woman arrested after power bank she threw explodes at IGI. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X