ಆಟೋರಿಕ್ಷಾ ಗೊತ್ತುಪಡಿಸಲು ಪೂಚೋ - ಒ ಆಪ್

Written By:

ದೇಶದ ರಾಜಧಾನಿಯಲ್ಲಿ ನೀವಿನ್ನು ಆಟೋರಿಕ್ಷಾವನ್ನು ಗೊತ್ತುಮಾಡಲು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಬಳಸಬಹುದಾಗಿದೆ. ಇಂದು ಲಿಫ್ಟ್‌ನೆಂಟ್ ಗವರ್ನರ್ ನಜೀಬ್ ಜಂಗ್ ಈ ಹೊಸ ಅಪ್ಲಿಕೇಶನ್ ಆದ "ಪೂಚೋ - ಒ" ವನ್ನು ಲಾಂಚ್ ಮಾಡಿದ್ದಾರೆ.

ದೆಹಲಿಯ ಇಂಟಿಗ್ರೇಟೆಡ್ ಮಲ್ಟಿ ಮಾಡೆಲ್ ಟ್ರಾನ್ಸಿಟ್ ಸಿಸ್ಟಮ್ (DIMTS) "ಪೂಚೋ - ಒ" ವನ್ನು ಅಭಿವೃದ್ಧಿಪಡಿಸಿದ್ದು ಇದು ಬಳಕೆದಾರರಿಗೆ ಆಟೋಗಳನ್ನು ಗೊತ್ತುಮಾಡಲು, ಜಿಪಿಎಸ್‌ನೊಂದಿಗೆ ಹೊಂದಿಸಲು, ಅವರಿಗೆ ಹತ್ತಿರವಾಗಿರುವ ಆಟೋದ ಅದರ ಚಾಲಕರನ್ನು ಕರೆಯಲು, DIMTS ನೊಂದಿಗೆ ಫೋನ್ ಸಂಖ್ಯೆ ನೋಂದಣಿಯಾಗಿರುವ ಆಟೋ ಡ್ರೈವರ್‌ಗಳಿಗೆ ಕರೆ ಮಾಡಲು ಮತ್ತು ಪ್ರಯಾಣವನ್ನು ನಿಗದಿಪಡಿಸಲು ಇದೀಗ ಈ ಅಪ್ಲಿಕೇಶನ್ ಅನುಮತಿಸುತ್ತಿದೆ.

ಗೂಗಲ್ ಪ್ಲೇನಿಂದ ಮಾತ್ರ ಈ ಪೂಚೋ - ಒ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದಾಗಿದ್ದು ಜನರು ತಮ್ಮ ಫೋನ್‌ಗಳಲ್ಲಿ ಜಿಪಿಎಸ್ ಅನ್ನು ಖಾತ್ರಿಗೊಳಿಸಬೇಕು ಮತ್ತು ನಕ್ಷೆಗಳ ಮೂಲಕ ಹತ್ತಿರವಿರುವ ಆಟೋಗಳನ್ನು ಹುಡುಕಬಹುದಾಗಿದೆ.

ರಿಕ್ಷಾ ಗೊತ್ತು ಪಡಿಸಲು ಹೊಸ ಆಪ್ ನಿಮಗಿದು ಗೊತ್ತೇ?

ತಮ್ಮ ಕಚೇರಿಯಲ್ಲಿ ಪೂಚೋ - ಒ ಅನ್ನು ಲಾಂಚ್ ಮಾಡಿದ ನಂತರ, ನಜೀಬ್ ಅವರು ಮಾತನಾಡಿ ಇದೊಂದು ಸುಧಾರಿತ ತಂತ್ರಜ್ಞಾನವಾಗಿದೆ, ಇದು ಹೆಚ್ಚಾಗಿ ರಾತ್ರಿವೇಳೆಗಳಲ್ಲಿ ಆಟೋದಲ್ಲಿ ಸಂಚರಿಸುವ ಮಹಿಳೆಯರಿಗೆ ತುಂಬಾ ಸಹಾಯಕವಾಗಿದೆ ಎಂದು ತಿಳಿಸಿದ್ದಾರೆ.

ಈ ಅಪ್ಲಿಕೇಶನ್ ಮೂಲಕ ಆಟೋವನ್ನು ಗೊತ್ತುಪಡಿಸಿದ ನಂತರ, ಪ್ರಯಾಣಿಕರು ತಮ್ಮ ಪ್ರಯಾಣ ವಿವರಗಳನ್ನು ಫೇಸ್‌ಬುಕ್ ಅಥವಾ ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಬಹುದಾಗಿದೆ ಇದರಿಂದ ಕುಟುಂಬದ ಸದಸ್ಯರು ಅವರ ಪ್ರಯಾಣ ಸ್ಥಳಗಳನ್ನು ತಿಳಿದುಕೊಳ್ಳಬಹುದಾಗಿದೆ. ಈ ಅಪ್ಲಿಕೇಶನ್‌ನಲ್ಲಿ ಹಲವಾರು ಭದ್ರತಾ ಅಪ್ಲಿಕೇಶನ್‌ಗಳು ಕೂಡ ಇವೆ. ಎಂದು ಜಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪೂಚೋ - ಒ ಅಪ್ಲಿಕೇಶನ್ ಮೂಲಕ ತಮ್ಮ ಪ್ರಯಾಣದ ಬಗೆಗಿನ ಪ್ರತಿಕ್ರಿಯೆಗಳನ್ನು ಕೂಡ ಪ್ರಯಾಣಿಕರು ತಿಳಿಸಬಹುದಾಗಿದೆ. ತಮ್ಮ ಪ್ರಯಾಣದ ವೆಚ್ಚವನ್ನು ಕೂಡ ಈ ಅಪ್ಲಿಕೇಶನ್ ಮೂಲಕ ಪ್ರಯಾಣಿಕರು ತಿಳಿದುಕೊಳ್ಳಬಹುದಾಗಿದ್ದು ಆಟೋದ ಚಾಲಕರನ್ನು ಕರೆದ ನಂತರವೂ ಕೂಡ ಪ್ರಯಾಣಿಕರ ಕಡೆಗೆ ಈ ಆಟೋ ಬರುತ್ತಿದೆಯೇ ಎಂಬುದನ್ನು ಪತ್ತೆಹಚ್ಚಬಹುದಾಗಿದೆ. ಐಫೋನ್‌ನಲ್ಲೂ ಈ ಅಪ್ಲಿಕೇಶನ್ ಕೂಡಲೇ ಲಭ್ಯವಾಗುತ್ತಿದ್ದು ಈ ಅಪ್ಲಿಕೇಶನ್ ಮೂಲಕ ರಿಕ್ಷಾ ಚಾಲಕರು ಸುಲಭವಾಗಿ ಪ್ರಯಾಣಿಕರನ್ನು ಪಡೆಯಬಹುದಾಗಿದೆ ಎಂದು DIMTS ನ ವ್ಯವಸ್ಥಾಪಕ ನಿರ್ದೇಶಕರಾದ ಎಸ್‌ಎನ್ ಸಹಾಯಿ ತಿಳಿಸಿದ್ದಾರೆ.

ದೆಹಲಿಯಲ್ಲಿ 24,000 ಆಟೋರಿಕ್ಷಾಗಳಿದ್ದು ಇವೆಲ್ಲವೂ ಜಿಪಿಎಸ್‌ನೊಂದಿಗೆ ಹೊಂದಿಕೆಯಾಗಿದೆ ಮತ್ತು ಇನ್ನೂ ಹೆಚ್ಚಿನ ಆಟೋಗಳು ಈ ಅಪ್ಲಿಕೇಶನ್‌ಗೆ ಹೊಂದಿಕೆಯಾಗುವ ನಿರೀಕ್ಷೆಯಲ್ಲಿದ್ದು ಈ ಅಪ್ಲಿಕೇಶನ್‌ನಿಂದ ಜನರು ಪ್ರಯೋಜವನ್ನು ಪಡೆಯಬಹುದಾಗಿದೆ ಎಂದು ಸಹಾಯ್ ತಿಳಿಸಿದ್ದಾರೆ.

ಪೂಚೋ - ಒ ಪ್ರಯಾಣಿಕರನ್ನು ರಿಕ್ಷಾ ಡ್ರೈವರ್ ಕರೆದುಕೊಂಡು ಹೋಗಲು ತಿರಸ್ಕರಿಸಿದಲ್ಲಿ, ಅವರಿಗೆ ಹೆಚ್ಚಿನ ದಂಡವನ್ನು ವಿಧಿಸಲಾಗುವುದು ಎಂದು ಅನಿಲ್ ಶುಕ್ಲಾ ತಿಳಿಸಿದ್ದಾರೆ.

"ತಮ್ಮ ವೆಬ್‌ಸೈಟ್, ಟ್ರಾಫಿಕ್ ಅಪ್ಲಿಕೇಶನ್‌ಗಳಿಗೆ ಈ ಅಪ್ಲಿಕೇಶನ್ ಸಂಪರ್ಕಪಡಿಸಲು ಟ್ರಾಫಿಕ್ ಪೋಲೀಸರನ್ನು ವಿನಂತಿಸಲಾಗುವುದು ಇದರಿಂದ ಆಟೋ ಡ್ರೈವರ್ ಯಾವುದೇ ಕಾರಣ ಇಲ್ಲದೆ ಪ್ರಯಾಣಿಕರನ್ನು ಆಟೋದಲ್ಲಿ ಕರೆದುಕೊಂಡು ಹೋಗಲು ತಿರಸ್ಕರಿಸಿದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು" ಜಂಗ್ ಹೇಳಿದ್ದಾರೆ.

ಪಿಟಿಐ

Read more about:
English summary
This article tells that Delhiities can now hire GPS enabled Autos via smartphones.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot