Home
ಸುದ್ದಿಜಾಲ

ಡೆಲ್‌ ಅಲೈನ್‌ವೇರ್‌ ಅರೋರಾ R16 ಡೆಸ್ಕ್‌ಟಾಪ್‌ ಅನಾವರಣ! ಏನಿದು ಲೆಜೆಂಡ್‌ 3.0 ವಿನ್ಯಾಸ!

ಡೆಲ್‌ ಟೆಕ್ನಾಲಜೀಸ್‌ ಮತ್ತು ಅಲೈನ್‌ವೇರ್‌ ತಮ್ಮ ಹೊಸ ಡೆಸ್ಕ್‌ಟಾಪ್‌ ಅನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಇದನ್ನು ಡೆಲ್‌ ಅಲೈನ್‌ವೇರ್‌ ಅರೋರಾ R16 ಡೆಸ್ಕ್‌ಟಾಪ್‌ ಎಂದು ಹೆಸರಿಸಲಾಗಿದೆ. ಇನ್ನು ಈ ಡೆಸ್ಕ್‌ಟಾಪ್‌ 13 ನೇ ತಲೆಮಾರು ಮತ್ತು 14ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್‌ ಆಯ್ಕೆಯ ಎರಡು ಕಾನ್ಫಿಗರೇಶನ್‌ಗಳಲ್ಲಿ ಖರೀದಿಸಬಹುದಾಗಿದೆ.

ಹೌದು, ಡೆಲ್‌ ಅಲೈನ್‌ವೇರ್‌ ಅರೋರಾ R16 ಡೆಸ್ಕ್‌ಟಾಪ್‌ ಭಾರತರದಲ್ಲಿ ಬಿಡುಗಡೆ ಆಗಿದೆ. ಈ ಡೆಸ್ಕ್‌ಟಾಪ್‌ 20% ನಿಶ್ಯಬ್ದ ಕಾರ್ಯಾಚರಣೆಯನ್ನು ನೀಡಲಿದೆ ಎಂದು ವರದಿಯಾಗಿದೆ. ಇದಲ್ಲದೆ ಈ ಡೆಸ್ಕ್‌ಟಾಪ್‌ NVIDIA GeForce RTX 4090 GPU ಗ್ರಾಫಿಕ್ಸ್‌ ಅನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಇನ್ನುಳಿದಂತೆ ಈ ಡೆಸ್ಕ್‌ಟಾಪ್‌ ಯಾವೆಲ್ಲಾ ಫೀಚರ್ಸ್‌ ಹೊಂದಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡೆಲ್‌ ಅಲೈನ್‌ವೇರ್‌ ಅರೋರಾ R16 ಡೆಸ್ಕ್‌ಟಾಪ್‌ ಅನಾವರಣ! ಲೆಜೆಂಡ್‌ 3.0 ವಿನ್ಯಾಸ!

ಡೆಲ್‌ ಅಲೈನ್‌ವೇರ್‌ ಅರೋರಾ R16 ಫೀಚರ್ಸ್‌ ಹೇಗಿದೆ?
ಡೆಲ್‌ ಅಲೈನ್‌ವೇರ್‌ ಅರೋರಾ R16 ಡೆಸ್ಕ್‌ಟಾಪ್‌ ಈ ಹಿಂದಿನ ಅರೋರಾ R15 ಡೆಸ್ಕ್‌ಟಾಪ್‌ಗಿಂತ 40% ಚಿಕ್ಕದಾಗಿದೆ. ಇನ್ನು ಈ ಡೆಸ್ಕ್‌ಟಾಪ್‌ ಎನ್‌ವಿಡಿಯಾ ಜಿಫೋರ್ಸ್‌ RTX 4090 GPU ಹೊಂದಿದ್ದು, 13 ನೇ ಮತ್ತು 14 ನೇ ಜನ್ ಇಂಟೆಲ್ ಕೋರ್ ಪ್ರೊಸೆಸರ್‌ಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದು 32GB ಯ 5600 MT/s DDR5 ಮೆಮೊರಿ ಮತ್ತು 1TB SSD ಸ್ಟೋರೇಜ್‌ ಅನ್ನು ಬೆಂಬಲಿಸಲಿದೆ. ಈ ಡೆಸ್ಕ್‌ಟಾಪ್‌ನಲ್ಲಿ ಇದೇ ಮೊದಲ ಬಾರಿಗೆ ಲೆಜೆಂಡ್ 3.0 ವಿನ್ಯಾಸವನ್ನು ಪರಿಚಯಿಸಲಾಗಿದೆ.

ಇದು ನಿಶ್ಯಬ್ದ ಮತ್ತು ತಂಪಾದ ಕಾರ್ಯಾಚರಣೆಗಾಗಿ ಗಾಳಿಯ ಹರಿವಿನ ದಕ್ಷತೆಯನ್ನು ಸಹ ನೀಡಲಿದೆ. ಇನ್ನು ಕಂಪನಿಯು ಚಾಸಿಸ್‌ನ ಎಡಭಾಗದಲ್ಲಿ ಸ್ಟೇಡಿಯಂ ಲೂಪ್ ಎಂದು ಕರೆಯುವ ಓವಲ್ ಲೈಟಿಂಗ್ ಲೂಪ್ ನೀಡಿದೆ. ಅರೋರಾ R16 ಕಮಾಂಡ್ ಸೆಂಟರ್‌ನೊಂದಿಗೆ ಬರುತ್ತಿರುವ Alienware ನ ಮೊದಲ ಡೆಸ್ಕ್‌ಟಾಪ್ ಆಗಿದೆ. ಇದು ಗೇಮಿಂಗ್ ಫೀಚರ್ಸ್‌ಗಳ ಮೇಲೆ ಕೇಂದ್ರೀಕರಿಸುವ ಸಾಫ್ಟ್‌ವೇರ್ ಆಗಿದೆ. ಇದರಿಂದ ಕಮಾಂಡ್ ಸೆಂಟರ್‌ನೊಂದಿಗೆ, ಗೇಮರುಗಳಿಗಾಗಿ ಆಟದ ನಿರ್ದಿಷ್ಟ ಪ್ರೊಫೈಲ್‌ಗಳು, ಥೀಮ್‌ಗಳು, ಬೆಳಕಿನ ಗ್ರಾಹಕೀಕರಣ, ಮ್ಯಾಕ್ರೋಗಳು, ಆಡಿಯೊ ಕಾನ್ಫಿಗರೇಶನ್‌ಗಳಿಗಾಗಿ ಇರುವ ಸೆಟ್ಟಿಂಗ್ಸ್‌ಗಳನ್ನು ಸುಲಭವಾಗಿ ಪ್ರವೇಶಿಸಬಹುದಾಗಿದೆ.

ಡೆಲ್‌ ಅಲೈನ್‌ವೇರ್‌ ಅರೋರಾ R16 ಡೆಸ್ಕ್‌ಟಾಪ್‌ ಅನಾವರಣ! ಲೆಜೆಂಡ್‌ 3.0 ವಿನ್ಯಾಸ!

ಇದರೊಂದಿಗೆ ಗೇಮಿಂಗ್ ಅನುಭವವನ್ನು ಹೆಚ್ಚಿಸಲು ಗೇಮರುಗಳಿಗಾಗಿ ಮೂರು ಬೆಳಕಿನ ವಲಯಗಳಿಂದ 16.7 ಮಿಲಿಯನ್ ಬಣ್ಣಗಳನ್ನು ಆಯ್ಕೆ ಮಾಡಲು ಇದು ಅನುಮತಿಸುತ್ತದೆ. ಇನ್ನು ಡೆಸ್ಕ್‌ಟಾಪ್‌ ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ 6 (ಅಥವಾ 6E), ಮತ್ತು ವೈರ್ಡ್ ಮತ್ತು ವೈರ್‌ಲೆಸ್ ಎರಡೂ ಸಂಪರ್ಕಗಳಿಗಾಗಿ 2.5Gbps ಈಥರ್ನೆಟ್ ಅನ್ನು ಒಳಗೊಂಡಿದೆ.

ಡೆಲ್‌ ಅಲೈನ್‌ವೇರ್‌ ಅರೋರಾ R16 ಬೆಲೆ ಮತ್ತು ಲಭ್ಯತೆ
ಡೆಲ್‌ ಅಲೈನ್‌ವೇರ್‌ ಅರೋರಾ R16 ಡೆಸ್ಕ್‌ಟಾಪ್‌ ಭಾರತದಲ್ಲಿ 1,59,990ರೂ ಬೆಲೆಯಿಂದ ಪ್ರಾರಂಭವಾಗುತ್ತಿದೆ. ಇದನ್ನು ನೀವು Dell.com ಮತ್ತು Amazon ನಲ್ಲಿ ಖರೀದಿಸಬಹುದಾಗಿದೆ. ಇದಲ್ಲದೆ ಡೆಲ್ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳಿಂದ (DES) ಮತ್ತು ಆಯ್ದ ಬಹು-ಬ್ರಾಂಡ್ ರಿಟೇಲ್ ಸ್ಟೋರ್‌ಗಳಿಂದ ಖರೀದಿಸಬಹುದು.

ಡೆಲ್‌ ಅಲೈನ್‌ವೇರ್‌ ಅರೋರಾ R16 ಡೆಸ್ಕ್‌ಟಾಪ್‌ ಅನಾವರಣ! ಲೆಜೆಂಡ್‌ 3.0 ವಿನ್ಯಾಸ!

ಇನ್ನು ಇದೇ ವರ್ಷ ಡೆಲ್‌ ಕಂಪೆನಿ ಹೊಸ ಡೆಲ್‌ Inspiron 14 ಲ್ಯಾಪ್‌ಟಾಪ್‌ ಪರಿಚಯಿಸಿತ್ತು. ಈ ಲ್ಯಾಪ್‌ಟಾಪ್‌ 14 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಂಟಿ ಗ್ಲೇರ್‌ ಪ್ಯಾನೆಲ್‌ ಅನ್ನು ಹೊಂದಿದ್ದು, 250W ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಇದು ಇಂಟೆಲ್‌ನ ಐರಿಶ್‌ Xe ಇಂಟಿಗ್ರೇಟೆಡ್ ಗ್ರಾಫಿಕ್ಸ್‌ ಅನ್ನು ಹೊಂದಿದ್ದು, ಇಂಟೆಲ್‌ ಕೋರ್‌ i7-1355U ಪ್ರೊಸೆಸರ್‌ ಅನ್ನು ಪಡೆದುಕೊಂಡಿದೆ. ಅಲ್ಲದೆ ವಿಂಡೋಸ್ 11 ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಲ್ಯಾಪ್‌ಟಾಪ್ 8GB/16GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.

Best Mobiles in India

English summary
Dell Alienware Aurora R16 Desktop With Legend 3.0 Design Launched In India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+