Home
ಸುದ್ದಿಜಾಲ

ಭಾರತದಲ್ಲಿ ಡೆಲ್‌ G15 ಗೇಮಿಂಗ್ ಲ್ಯಾಪ್‌ಟಾಪ್‌ ಬಿಡುಗಡೆ! ವಿಶೇಷತೆ ಏನು?

ಲ್ಯಾಪ್‌ಟಾಪ್‌ ಮಾರುಕಟ್ಟೆಯಲ್ಲಿ ಡೆಲ್‌ ಕಂಪೆನಿ ವಿಶೇಷವಾದ ಸ್ಥಾನವನ್ನು ಪಡೆದುಕೊಂಡಿದೆ. ತನ್ನ ಗುಣಮಟ್ಟ ಹಾಗೂ ನೂತನ ಟೆಕ್ನಾಲಜಿಯ ಕಾರಣಕ್ಕೆ ಡೆಲ್‌ ಕಂಪೆನಿಯ ಲ್ಯಾಪ್‌ಟಾಪ್‌ಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿವೆ. ಸದ್ಯ ಇದೀಗ ಡೆಲ್‌ ಕಂಪೆನಿ ಭಾರತದಲ್ಲಿ ಹೊಸ ಡೆಲ್‌ G15 ಗೇಮಿಂಗ್ ಲ್ಯಾಪ್‌ಟಾಪ್‌ ಅನ್ನು ಲಾಂಚ್‌ ಮಾಡಿದೆ. ಈ ಗೇಮಿಂಗ್ ಲ್ಯಾಪ್‌ಟಾಪ್‌ಗಳು ಡೆಲ್‌ G15 5520 ಮತ್ತು Dell G15 5521 ಸ್ಪೇಷಲ್‌ ಎಡಿಷನ್‌ ಆವೃತ್ತಿಗಳಲ್ಲಿ ಲಭ್ಯವಿದೆ.

ಲ್ಯಾಪ್‌ಟಾಪ್‌

ಹೌದು, ಡೆಲ್‌ ಕಂಪೆನಿ ಭಾರತದಲ್ಲಿ G15 ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿದೆ. ಈ ಲ್ಯಾಪ್‌ಟಾಪ್‌ಗಳು 12ನೇ ತಲೆಮಾರಿನ ಇಂಟೆಲ್‌ ಕೋರ್‌ i5 ಮತ್ತು ಕೋರ್‌i7H ಸರಣಿಯ ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿವೆ. ಇನ್ನು ಈ ಹೊಸ G15 ಡಿವೈಸ್‌ಗಳನ್ನು ಗೇಮ್ ಶಿಫ್ಟ್ ತಂತ್ರಜ್ಞಾನ ಮತ್ತು ಏಲಿಯನ್‌ವೇರ್ ಕಮಾಂಡ್ ಸೆಂಟರ್‌ನೊಂದಿಗೆ ಸಕ್ರಿಯಗೊಳಿಸಲಾಗಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡೆಲ್‌ G15 5520 ಮತ್ತು Dell G15 5521 ಸ್ಪೇಷಲ್‌ ಎಡಿಷನ್‌

ಡೆಲ್‌ G15 5520 ಮತ್ತು Dell G15 5521 ಸ್ಪೇಷಲ್‌ ಎಡಿಷನ್‌

ಡೆಲ್‌ G15 5520 ಲ್ಯಾಪ್‌ಟಾಪ್‌ ಮತ್ತು ಡೆಲ್‌ G15 5521 ಸ್ಪೇಷಲ್‌ ಎಡಿಷನ್‌ ಲ್ಯಾಪ್‌ಟಾಪ್‌ಗಳು ಗೇಮಿಂಗ್-ಪ್ರೇರಿತ ವಿನ್ಯಾಸವನ್ನು ಹೊಂದಿವೆ. ಇನ್ನು ಈ ಎರಡೂ ಲ್ಯಾಪ್‌ಟಾಪ್‌ಗಳು 12 ವಲಯ RGB LED ಚಾಸಿಸ್ ಲೈಟಿಂಗ್ ಅನ್ನು ಹೊಂದಿವೆ, ಇದನ್ನು ಗೇಮಿಂಗ್ ಮಾಡುವಾಗ ಆನ್ ಮಾಡಬಹುದು. ಸದ್ಯ ಈ ಲ್ಯಾಪ್‌ಟಾಪ್‌ಗಳು ಮೂರು ರೀತಿಯ ಡಿಸ್‌ಪ್ಲೇ ಮಾದರಿಯಲ್ಲಿ ಬರಲಿವೆ. ಇದರಲ್ಲಿ 15.6 ಇಂಚಿನ ಫುಲ್‌ HD ಡಿಸ್‌ಪ್ಲೇ, 1920x1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್ ಮತ್ತು 250ನಿಟ್ಸ್‌ ಬ್ರೈಟ್‌ನೆಸ್ ಅನ್ನು ಒಳಗೊಂಡಿದೆ. ಎರಡನೇಯ ಆಯ್ಕೆ 15.6 ಇಂಚಿನ ಫುಲ್‌ HD ಡಿಸ್‌ಪ್ಲೇ ಹೊಂದಿದೆ. ಇದು 240Hz ರಿಫ್ರೆಶ್ ರೇಟ್ ಮತ್ತು 400 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ಒಳಗೊಂಡಿದೆ. ಮೂರನೇಯ ಆಯ್ಕೆ 15.6 ಇಂಚಿನ ಕ್ವಾಡ್ HD ಡಿಸ್‌ಪ್ಲೇಯನ್ನು ಹೊಂದಿದೆ.

ಲ್ಯಾಪ್‌ಟಾಪ್‌

ಇದರಲ್ಲಿ ಡೆಲ್‌ G15 5520 ಲ್ಯಾಪ್‌ಟಾಪ್‌ 12ನೇ ತಲೆಮಾರಿನ ಇಂಟೆಲ್‌ ಕೋರ್‌ i5-12500H ಪ್ರೊಸೆಸರ್ ಮತ್ತು ಡೆಲ್‌ G15 5521 ವಿಶೇಷ ಆವೃತ್ತಿ ಲ್ಯಾಪ್‌ಟಾಪ್‌ 12 ನೇ ತಲೆಮಾರಿನ ಇಂಟೆಲ್‌ ಕೋರ್‌ i7-12700H ಪ್ರೊಸೆಸರ್ ಬಲವನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ಗಳು ಕೂಲಿಂಗ್ ಸೆಟಪ್ ಡ್ಯುಯಲ್ ಏರ್-ಇಂಟೆಕ್ ಅನ್ನು ಹೊಂದಿವೆ. ಹಾಗೆಯೇ 16GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ ಎನ್‌ವಿಡಿಯಾ ಜಿಪೋರ್ಸ್‌ RTX 3050 ಅನ್ನು ಹೊಂದಿದೆ.

ಲ್ಯಾಪ್‌ಟಾಪ್‌

ಇನ್ನು ಡೆಲ್‌ G15 5520 ಲ್ಯಾಪ್‌ಟಾಪ್‌ ಆರೆಂಜ್ ಬ್ಯಾಕ್‌ಲಿಟ್ ಕೀಬೋರ್ಡ್ ಅನ್ನು ನ್ಯೂಮೆರಿಕ್ ಕೀಪ್ಯಾಡ್ ಮತ್ತು G ಕೀಯನ್ನು ಹೊಂದಿದೆ. ಡೆಲ್‌ G15 5521 ಸ್ಪೇಷಲ್‌ ಎಡಿಷನ್‌ ನಂಬರ್‌ ಕೀಬೋರ್ಡ್ ಮತ್ತು G-ಕೀಯೊಂದಿಗೆ 4-ವಲಯ RGB ಬ್ಯಾಕ್‌ಲಿಟ್ ಕೀಬೋರ್ಡ್ ಅನ್ನು ಪಡೆಯುತ್ತದೆ. ಇದರಲ್ಲಿ "ಗೇಮ್ ಶಿಫ್ಟ್" ಮ್ಯಾಕ್ರೋ ಜಿ-ಕೀ F9 ಸ್ಥಾನದಲ್ಲಿದೆ ಮತ್ತು ಇದು ಸುಧಾರಿತ ಕಾರ್ಯಕ್ಷಮತೆಗಾಗಿ ಗೇಮ್‌-ರೆಡಿ ಸೆಟ್ಟಿಂಗ್ಸ್‌ಗಳನ್ನು ಪ್ರಾರಂಭಿಸುತ್ತದೆ ಎಂದು ಡೆಲ್ ಕಂಪೆನಿ ಹೇಳಿಕೊಂಡಿದೆ. ಇದಲ್ಲದೆ ಈ ಲ್ಯಾಪ್‌ಟಾಪ್‌ಗಳು ರಿಯಲ್‌ಟೆಕ್‌ ALC3254 ಜೊತೆಗೆ ಎರಡು 2.5W ಸ್ಟಿರಿಯೊ ಸ್ಪೀಕರ್‌ಗಳನ್ನು ಒಳಗೊಂಡಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಡೆಲ್‌ G15 5520 ಲ್ಯಾಪ್‌ಟಾಪ್‌ ಬೆಲೆ 85,990ರೂ.ಹೊಂದಿದೆ. ಇನ್ನು ಡೆಲ್‌ G15 5521 SE ಲ್ಯಾಪ್‌ಟಾಪ್‌ ಬೆಲೆಯು 1,18,990ರೂ.ಆಗಿದೆ. ಈ ಲ್ಯಾಪ್‌ಟಾಪ್‌ಗಳು ಡೆಲ್ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳು, ಡೆಲ್ ಆನ್‌ಲೈನ್ ಸ್ಟೋರ್‌ನಲ್ಲಿ ಖರೀದಿಸಲು ಲಭ್ಯವಿರುತ್ತವೆ. ಇನ್ನು ಡೆಲ್‌ G15 5520 ಲ್ಯಾಪ್‌ಟಾಪ್‌ ಡಾರ್ಕ್ ಶ್ಯಾಡೋ ಗ್ರೇ ಕಲರ್‌ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಡೆಲ್‌ G15 5521 SE ಅಬ್ಸಿಡಿಯನ್ ಬ್ಲ್ಯಾಕ್‌ ಕಲರ್‌ ಆಯ್ಕೆಯಲ್ಲಿ ಲಭ್ಯವಿದೆ.

Best Mobiles in India

English summary
Dell G15 5520, G15 5521 SE Gaming Laptops Launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+