ಭಾರತದಲ್ಲಿ ಡೆಲ್‌ ಸಂಸ್ಥೆಯಿಂದ ಹೊಸ ಗೇಮಿಂಗ್‌ ಲ್ಯಾಪ್‌ಟಾಪ್‌ ಬಿಡುಗಡೆ!

|

ಡೆಲ್‌ ಸಂಸ್ಥೆ ತನ್ನ ಭಿನ್ನ ಮಾದರಿಯ ಲ್ಯಾಪ್‌ಟಾಪ್‌ಗಳಿಂದ ಜನಪ್ರಿಯ ಲ್ಯಾಪ್‌ಟಾಪ್‌ ತಯಾರಕ ಸಂಸ್ಥೆ ಎಂದೆನಿಸಿಕೊಂಡಿದೆ. ಗುಣಮಟ್ಟದ ಲ್ಯಾಪ್‌ಟಾಪ್‌ಗೆ ಹೆಚ್ಚಿನ ಒತ್ತು ನೀಡುವ ಡೆಲ್‌ ಕಂಪೆನಿ, ಉದ್ಯೋಗಿಗಳು, ವಿಧ್ಯಾರ್ಥಿಗಳು, ಸಂಘ ಸಂಸ್ಥೆಗಳ ನೆಚ್ಚಿನ ಆಯ್ಕೆಯ ಲ್ಯಾಪ್‌ಟಾಪ್‌ ಆಗಿ ಗುರುತಿಸಿಕೊಂಡಿದೆ. ಇದೀಗ ಡೆಲ್‌ ಕಂಪೆನಿ ತನ್ನ ಹೊಸ ಡೆಲ್ G7 15 ಲ್ಯಾಪ್‌ಟಾಪ್‌ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಲ್ಯಾಪ್‌ಟಾಪ್ ಇಂಟೆಲ್‌ನ 10ನೇ ತಲೆಮಾರಿನ ಕೋರ್ ಪ್ರೊಸೆಸರ್‌ ಮತ್ತು ಎನ್‌ವಿಡಿಯಾ ಜೀಫೋರ್ಸ್ ಆರ್‌ಟಿಎಕ್ಸ್ ಗ್ರಾಫಿಕ್ಸ್ ಕಾರ್ಡ್‌ ರಿಫ್ರೆಶ್ ಅನ್ನು ಹೊಂದಿದೆ.

ಡೆಲ್ G7 15 ಲ್ಯಾಪ್‌ಟಾಪ್

ಹೌದು, ಡೆಲ್‌ ಸಂಸ್ಥೆ ತನ್ನ ಹೊಸ ಡೆಲ್ G7 15 ಲ್ಯಾಪ್‌ಟಾಪ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಮೂರು ಬದಿಗಳಲ್ಲಿ ಸ್ಲಿಮ್ ಬೆಜೆಲ್, ತೆಳುವಾದ ಪ್ರೊಫೈಲ್ ಮತ್ತು ನವೀನ Origami ಹಿಂಜ್ ವಿನ್ಯಾಸವನ್ನು ಹೊಂದಿದೆ. ಇದು ಗೇಮಿಂಗ್‌ ಲ್ಯಾಪ್‌ಟಾಪ್‌ ಆಗಿದ್ದು, 15 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ಇದು ಹೆಚ್ಚಿನ ರಿಫ್ರೆಶ್ ರೇಟ್‌ ಅನ್ನು ಸಹ ಒಳಗೊಂಡಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ ಯಾವೆಲ್ಲಾ ವಿಶೇಷತೆ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡೆಲ್‌ G7 15 ಲ್ಯಾಪ್‌ಟಾಪ್

ಡೆಲ್‌ G7 15 ಲ್ಯಾಪ್‌ಟಾಪ್‌ 1,920x1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 15 ಇಂಚಿನ ಫುಲ್‌-ಹೆಚ್‌ಡಿ ಆಂಟಿ-ಗ್ಲೇರ್ LED ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ 300Hz ರಿಫ್ರೆಶ್ ರೇಟ್‌ ಮತ್ತು 300 ನಿಟ್ಸ್ ಗರಿಷ್ಠ ಬ್ರೈಟ್‌ನೆಶ್‌ ಅನ್ನು ಹೊಂದಿದೆ. ಇದು 10ನೇ ತಲೆಮಾರಿನ ಇಂಟೆಲ್ ಕೋರ್ I9-10885H ಆಕ್ಟಾ-ಕೋರ್ ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಜೊತೆಗೆ ಎನ್ವಿಡಿಯಾ ಜಿಫೋರ್ಸ್ RTX2070 ಮ್ಯಾಕ್ಸ್-ಕ್ಯೂ GPU 8 GBDDR6 RAM ನಿಂದ ಕಂಟ್ರೋಲ್‌ ಆಗಲಿದೆ. ಇನ್ನು ಡೆಲ್ G7 15 ಲ್ಯಾಪ್‌ಟಾಪ್‌ 16GB RAM ಅನ್ನು ಹೊಂದಿದ್ದು, 2,933 MHz ಕ್ಲಾಕ್ಡ್‌ ಅನ್ನು ಹೊಂದಿದೆ.

ಡೆಲ್ G7 15 ಗೇಮಿಂಗ್‌ ಲ್ಯಾಪ್‌ಟಾಪ್

ಇನ್ನು ಡೆಲ್ G7 15 ಗೇಮಿಂಗ್‌ ಲ್ಯಾಪ್‌ಟಾಪ್‌ 86Wh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌‌ಅಪ್‌ ಅನ್ನು ಹೊಂದಿದೆ. ಇದು ಸಂಖ್ಯಾ ಕೀಪ್ಯಾಡ್ ಇಲ್ಲದೆ 4-Zone RGB ಬ್ಯಾಕ್‌ಲಿಟ್, ಸ್ಪಿಲ್-ರೆಸಿಸ್ಟೆಂಟ್ WASD ಕೀಬೋರ್ಡ್ ಅನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಇಂಟೆಲ್ AX201 / ಕಿಲ್ಲರ್ ವಾಯರ್‌ಲೆಸ್ 1650 2X2 AC, ಬ್ಲೂಟೂತ್ 5.1, ಒಂದು HDMI 2.0 ಪೋರ್ಟ್, ಮೂರು ಯುಎಸ್‌ಬಿ 3.2 ಜನ್ 1 ಟೈಪ್-ಎ ಪೋರ್ಟ್‌ಗಳು, 2-ಇನ್ -1 ಎಸ್‌ಡಿ ಕಾರ್ಡ್ ಸ್ಲಾಟ್, ಒಂದು RJ45 ಪೋರ್ಟ್, 3.5MM ಹೆಡ್‌ಫೋನ್‌ ಜ್ಯಾಕ್, ಮತ್ತು ಥಂಡರ್ಬೋಲ್ಟ್ 3 ಪೋರ್ಟ್ ಅನ್ನು ಹೊಂದಿದೆ. ಅಲ್ಲದೆ ಡೆಲ್ G7 15 ನಲ್ಲಿ 720p ವೆಬ್‌ಕ್ಯಾಮ್ ಅನ್ನು ಸಹ ಹೊಂದಿದೆ.

ಡೆಲ್ G7 15 ಲ್ಯಾಪ್‌ಟಾಪ್

ಅಲ್ಲದೆ ಡೆಲ್ G7 15 ಲ್ಯಾಪ್‌ಟಾಪ್‌ನಲ್ಲಿ ವಿಂಡೋಸ್ 10 ಅನ್ನು ಮೊದಲೇ ಇನ್‌ಸ್ಟಾಲ್ ಮಾಡಲಾಗಿದೆ. ಇನ್ನು ಈ ಲ್ಯಾಪ್‌ಟಾಪ್‌ ಎರಡು ಸಂರಚನೆಗಳಲ್ಲಿ ಲಭ್ಯವಾಗಲಿದೆ. ಇದರಲ್ಲಿ ಕೋರ್ I7 + 16GB RAM + 1TB SSD ಮಾದರಿಯ ಬೆಲೆ 1,61,990 ರೂ.ಆಗಿದ್ದರೆ, ಕೋರ್ I9 + 16GB RAM + 1TB SSD ರೂಪಾಂತರದ ಬೆಲೆ 2,07,990 ರೂ ಆಗಿದೆ. ಇನ್ನು ಈ ಲ್ಯಾಪ್‌ಟಾಪ್‌ ಮಿನರಲ್ ಬ್ಲ್ಯಾಕ್ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಪ್ರಸ್ತುತ ಫ್ಲಿಪ್‌ಕಾರ್ಟ್, ಡೆಲ್ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳು ಮತ್ತು ಮಲ್ಟಿ-ಬ್ರಾಂಡ್ ಮಳಿಗೆಗಳ ಮೂಲಕ ಮಾರಾಟಕ್ಕೆ ಲಭ್ಯವಿದೆ.

Best Mobiles in India

Read more about:
English summary
Dell G7 15 has made its way to the Indian market after debuting in the US back in June. This laptop has been refreshed with Intel's 10th-generation Core processors and Nvidia GeForce RTX graphics cards.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X