Home
ಸುದ್ದಿಜಾಲ

ಡೆಲ್‌ ಕಂಪೆನಿಯಿಂದ ಎರಡು ಹೊಸ ಲ್ಯಾಪ್‌ಟಾಪ್‌ ಬಿಡುಗಡೆ!..ಬೆಲೆ ಮತ್ತು ಲಭ್ಯತೆ ಯಾವಾಗ?

ಲ್ಯಾಪ್‌ಟಾಪ್‌ ಮಾರುಕಟ್ಟೆಯಲ್ಲಿ ಡೆಲ್‌ ಕಂಪೆನಿಗೆ ಭಾರಿ ಬೇಡಿಕೆಯಿದೆ. ತನ್ನ ವೈವಿಧ್ಯಮಯ ಲ್ಯಾಪ್‌ಟಾಪ್‌ಗಳ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಆದ ಪ್ರಾಬಲ್ಯವನ್ನು ಸಾಧಿಸಿದೆ. ಸದ್ಯ ಇದೀಗ ಭಾರತದ ಮಾರುಕಟ್ಟೆಯಲ್ಲಿ ತನ್ನ ಹೊಸ ಡೆಲ್‌ ಇನ್‌ಸ್ಪೈರಾನ್‌ (Inspiron)14 ಲ್ಯಾಪ್‌ಟಾಪ್‌ ಶ್ರೇಣಿಯನ್ನು ಬಿಡುಗಡೆ ಮಾಡಿದೆ.

ಹೌದು, ಡೆಲ್‌ ಕಂಪೆನಿ ಭಾರತದಲ್ಲಿ ಹೊಸ ಡೆಲ್‌ Inspiron 14 ಲ್ಯಾಪ್‌ಟಾಪ್ ಶ್ರೇಣಿಯನ್ನು ಪರಿಚಯಿಸಿದೆ. ಇದರಲ್ಲಿ ಡೆಲ್‌ Inspiron 14 ಮತ್ತು Inspiron 14 2-in-1 ಲ್ಯಾಪ್‌ಟಾಪ್‌ಗಳು ಸೇರಿವೆ. ಹಾಗಾದ್ರೆ ಈ ಲ್ಯಾಪ್‌ಟಾಪ್‌ ಶ್ರೇಣಿಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡೆಲ್‌ ಕಂಪೆನಿಯಿಂದ ಎರಡು ಹೊಸ ಲ್ಯಾಪ್‌ಟಾಪ್‌ ಬಿಡುಗಡೆ!..ಲಭ್ಯತೆ ಯಾವಾಗ?

ಡೆಲ್‌ Inspiron 14 ಲ್ಯಾಪ್‌ಟಾಪ್ ವಿಶೇಷತೆ ಹೇಗಿದೆ?

ಡೆಲ್‌ Inspiron 14 ಲ್ಯಾಪ್‌ಟಾಪ್‌ 14 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಂಟಿ ಗ್ಲೇರ್‌ ಪ್ಯಾನೆಲ್‌ ಅನ್ನು ಹೊಂದಿದ್ದು, 250W ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಇದು ಇಂಟೆಲ್‌ನ ಐರಿಶ್‌ Xe ಇಂಟಿಗ್ರೇಟೆಡ್ ಗ್ರಾಫಿಕ್ಸ್‌ ಅನ್ನು ಹೊಂದಿದ್ದು, ಇಂಟೆಲ್‌ ಕೋರ್‌ i7-1355U ಪ್ರೊಸೆಸರ್‌ ಅನ್ನು ಪಡೆದುಕೊಂಡಿದೆ. ಅಲ್ಲದೆ ವಿಂಡೋಸ್ 11 ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಲ್ಯಾಪ್‌ಟಾಪ್ 8GB/16GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.

ಇನ್ನು ಈ ಲ್ಯಾಪ್‌ಟಾಪ್‌ ವೆಬ್‌ಕ್ಯಾಮ್‌ ಪ್ರೈವೆಸಿ ಶಟರ್‌ ಮತ್ತು ಹೆಚ್ಚುವರಿ ಸೆಕ್ಯುರಿಟಿ ನೀಡುವ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಇದಲ್ಲದೆ ಈ ಲ್ಯಾಪ್‌ಟಾಪ್‌ ಡಾಲ್ಬಿ ಅಟ್ಮಾಸ್ ಮತ್ತು ರಿಜನಲ್‌ ಆಡಿಯೊವನ್ನು ಬೆಂಬಲಿಸಲಿದೆ.

ಡೆಲ್‌ ಕಂಪೆನಿಯಿಂದ ಎರಡು ಹೊಸ ಲ್ಯಾಪ್‌ಟಾಪ್‌ ಬಿಡುಗಡೆ!..ಲಭ್ಯತೆ ಯಾವಾಗ?

ಡೆಲ್‌ Inspiron 14 2-in-1 ಲ್ಯಾಪ್‌ಟಾಪ್ ವಿಶೇಷತೆ ಏನು?

ಡೆಲ್‌ Inspiron 14 2-in-1 ಲ್ಯಾಪ್‌ಟಾಪ್ 14 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 250 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಇನ್ನು ಲ್ಯಾಪ್‌ಟಾಪ್‌ 2-ಇನ್ -1 ಮಾದರಿಯು ಆಂಟಿ-ಗ್ಲೇರ್ ಪ್ಯಾನೆಲ್ ಅನ್ನು ಸಹ ಹೊಂದಿದೆ. ಈ ಲ್ಯಾಪ್‌ಟಾಪ್‌ AMD ಚಾಲಿತ ರೂಪಾಂತರದ ಆಯ್ಕೆಯಲ್ಲಿಯು ಕೂಡ ಬರಲಿದೆ. ಆದರಿಂದ ಈ ಲ್ಯಾಪ್‌ಟಾಪ್‌ ಇಂಟೆಲ್ ಕೋರ್ i5-1335U ಪ್ರೊಸೆಸರ್ ಮಾತ್ರವಲ್ಲದೆ ರೈಜೆನ್‌ 5 7530U ಚಿಪ್‌ಸೆಟ್ ಆಯ್ಕೆಯಲ್ಲಿಯು ಸಹ ಬರಲಿದೆ.

ಡೆಲ್‌ ಕಂಪೆನಿಯಿಂದ ಎರಡು ಹೊಸ ಲ್ಯಾಪ್‌ಟಾಪ್‌ ಬಿಡುಗಡೆ!..ಲಭ್ಯತೆ ಯಾವಾಗ?

ಬೆಲೆ ಮತ್ತು ಲಭ್ಯತೆ

ಡೆಲ್‌ Inspiron 14 ಲ್ಯಾಪ್‌ಟಾಪ್ ಭಾರತದಲ್ಲಿ 64,990ರೂ. ಬೆಲೆಯನ್ನು ಹೊಂದಿದೆ. ಇದು ಏಪ್ರಿಲ್ 7 ರಿಂದ ದೇಶದ ಎಲ್ಲಾ ಡೆಲ್-ಅಧಿಕೃತ ಮಳಿಗೆಗಳಲ್ಲಿ ಲಭ್ಯವಾಗಲಿದೆ.
ಇನ್ನು ಡೆಲ್‌ Inspiron 14 2-in-1 ಲ್ಯಾಪ್‌ಟಾಪ್ ಇಂಟೆಲ್‌ ರೂಪಾಂತರದ ಆಯ್ಕೆಗೆ 79,990 ರೂ.ಬೆಲೆ ಹೊಂದಿದೆ. ಆದರೆ, ಇದರ AMD ಪ್ರೊಸೆಸರ್‌ ಆಯ್ಕೆಯು 82,190 ರೂ.ಬೆಲೆಯಲ್ಲಿ ಬರಲಿದೆ. ಇನ್ನು ಈ ಲ್ಯಾಪ್‌ಟಾಪ್ ಏಪ್ರಿಲ್ 7 ರಿಂದ ದೇಶದ ಎಲ್ಲಾ ಡೆಲ್-ಅಧಿಕೃತ ಸ್ಟೋರ್‌ಗಳಲ್ಲಿ ಲಭ್ಯವಿರುತ್ತದೆ.

ಡೆಲ್‌ ಕಂಪೆನಿ ಇತ್ತೀಚಿಗೆ ಡೆಲ್‌ G16 ಲ್ಯಾಪ್‌ಟಾಪ್‌ ಪರಿಚಯಿಸಿದೆ. ಈ ಲ್ಯಾಪ್‌ಟಾಪ್‌ 16 ಇಂಚಿನ ಡಿಸ್‌ಪ್ಲೇ ಹೊಂದಿದ್ದು, QHD+ ಬ್ಯಾಕ್‌ಲಿಟ್ LED ಡಿಸ್‌ಪ್ಲೇ ಸೇರಿದಂತೆ ಎರಡು ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದು 13 ನೇ-ಜನ್ ಇಂಟೆಲ್ ಕೋರ್ i9 ಪ್ರೊಸೆಸರ್ ವೇಗವನ್ನು ಪಡೆದಿದ್ದು, ವಿಂಡೋಸ್‌ 11 ಹೋಮ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 32GB RAM ಮತ್ತು 2TB ಇನ್‌ಬಿಲ್ಟ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ 6 ಮತ್ತು RTX ಎತರ್‌ನೆಟ್ ಅನ್ನು ಬೆಂಬಲಿಸಲಿದೆ. ಈ ಲ್ಯಾಪ್‌ಟಾಪ್‌ 56Whr ಬ್ಯಾಟರಿ ಮತ್ತು 86Whr ಬ್ಯಾಟರಿ ಆಯ್ಕೆಗಳಲ್ಲಿ ಬರಲಿದೆ.

Best Mobiles in India

English summary
Dell Inspiron 14 and Inspiron 14 2-in-1 laptops launched in India: price details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+