Just In
Don't Miss
- Sports
ಅಸಾಧಾರಣ ಆಟಗಾರರಿಂದಾಗಿ ಭಾರತದ ವಿರುದ್ಧ ಇಂಗ್ಲೆಂಡ್ ಗೆಲ್ಲಲಿದೆ: ಆ್ಯಂಡಿ ಫ್ಲವರ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 28ರ ದರ
- News
ಫೆ.28ರವರೆಗೂ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನ ಸಂಚಾರಕ್ಕೆ ನಿರ್ಬಂಧ
- Automobiles
ಮೆಕ್ಸಿಕೋ ಮಾರುಕಟ್ಟೆಗೆ ಕಾಲಿಡಲಿದೆ ಹೀರೋ ಮೋಟೊಕಾರ್ಪ್
- Movies
ರಾಬರ್ಟ್, ಪೊಗರು, ಕೋಟಿಗೊಬ್ಬ 3 ಬಗ್ಗೆ ಪುನೀತ್ ರಾಜ್ಕುಮಾರ್ ಮಾತು
- Lifestyle
ಶನಿ ಸಂಚಾರ 2021: ನಿಮ್ಮ ರಾಶಿಯ ಮೇಲೆ ವರ್ಷ ಪೂರ್ತಿ ಇರಲಿದೆ ಶನಿಯ ಪ್ರಭಾವ
- Education
KVAFSU Bidar Recruitment 2021: 9 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡೆಲ್ ಕಂಪೆನಿಯಿಂದ Latitude 9510 ಲ್ಯಾಪ್‌ಟಾಪ್ ಲಾಂಚ್!
ಲ್ಯಾಪ್‌ಟಾಪ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ದೈತ್ಯ ಕಂಪೆನಿ ಡೆಲ್ ಕಂಪೆನಿ ತನ್ನ ಹೊಸ ಆವೃತ್ತಿಯ ಲ್ಯಾಪ್‌ಟಾಪ್ ಡೆಲ್ ಲ್ಯಾಟಿಟ್ಯೂಡ್ 9510 ಹಾಗೂ ಡೆಲ್ XPS 13 ಲ್ಯಾಪ್‌ಟಾಪ್ ಅನ್ನ ಬಿಡುಗಡೆ ಮಾಡಿದೆ. ಡೆಲ್ ಲ್ಯಾಟಿಟ್ಯೂಡ್ 9510 30 ಗಂಟೆಗಳ ದೀರ್ಘಬಾಳಿಕೆಯ ಬ್ಯಾಟರಿ ಸಾಮರ್ಥ್ಯ ಹಾಗೂ ಟು ಇನ್ ಒನ್ ಮಲ್ಟಿ ಟಾಸ್ಕಿಂಗ್ ಸಾಮರ್ಥ್ಯವನ್ನ ಹೊಂದಿದ್ದು, 5G ನೆಟ್‌ವರ್ಕ ಬೆಂಬಲಿಸುವ ಲ್ಯಾಪ್‌ಟಾಪ್ ಆಗಿದೆ.

ಹೌದು, ಟೆಕ್‌ಲೋಕದಲ್ಲಿ ದೈತ್ಯ ಎನಿಸಿಕೊಂಡಿರುವ ಡೆಲ್ ಕಂಪೆನಿ ತನ್ನ ಹೊಸ ಆವೃತ್ತಿಯ ಲ್ಯಾಪ್‌ಟಾಪ್ ಲ್ಯಾಟಿಟ್ಯುಡ್ 9510 ಹಾಗೂ ಡೆಲ್ XPS 13 ಅನ್ನು ಬಿಡುಗಡೆ ಮಾಡಿದೆ. ಈ ಎರಡು ಲ್ಯಾಪ್‌ಟಾಪ್‌ಗಳು ಉತ್ತಮ ವಿನ್ಯಾಸವನ್ನ ಹೊಂದಿದ್ದು ತೆಳುವಾದ ಬೆಜೆಲ್‌ಗಳನ್ನ ಹೊಂದಿವೆ. ಅಲ್ಲದೆ ಇವುಗಳು 10th ಜನರೇಷನ್ ಇಂಟೆಲ್ ಕೋರ್ ಪ್ರೊಸೆಸರ್ ಅನ್ನ ಒಳಗೊಂಡಿವೆ. ಅಲ್ಲದೆ ಕಂಪನಿಯ ಡೆಲ್ ಲ್ಯಾಟಿಟ್ಯೂಡ್ 9510 ಲ್ಯಾಪ್‌ಟಾಪ್ ವಿಶ್ವದಲ್ಲಿಯೇ ಅತಿ ಚಿಕ್ಕ ಮತ್ತು ಹಗುರವಾದ 15 ಇಂಚಿನ ಪಿಸಿ ಯನ್ನ ಹೊಂದಿದೆ.

ಇನ್ನು ಈ ಲ್ಯಾಪ್‌ಟಾಪ್ 30 ಗಂಟೆಗಳ ಬ್ಯಾಟರಿ ಅವಧಿ ಬಾಳಿಕೆಯನ್ನ ಹೊಂದಿದ್ದು, ಬಳಕೆಯಲ್ಲಿರುವಾಗ ಕೇವಲ 2W ಅನ್ನು ಸಿಪ್ ಮಾಡುವ ಅತ್ಯಂತ ಶಕ್ತಿ-ಸಮರ್ಥ ಡಿಸ್‌ಪ್ಲೇ ಪ್ಯಾನೆಲ್ ಅನ್ನ ಒಳಗೊಂಡಿದೆ. ಅಲ್ಲದೆ ಇದು 5G ನೆಟ್‌ವರ್ಕ್ ಬೆಂಬಲವನ್ನ ಹೊಂದಿದ್ದು, ಈ ಲ್ಯಾಪ್‌ಟಾಪ್ ಹೆಚ್ಚು ಪರಿಣಾಮಕಾರಿಯಾದ 10 ನೇ ಜನ್ ಇಂಟೆಲ್ ಕೋರ್ ಐ 7 ಪ್ರೊಸೆಸರ್ ಮತ್ತು 88 ಡಬ್ಲ್ಯೂಹೆಚ್ಆರ್ ಬ್ಯಾಟರಿಯನ್ನ ಒಳಗೊಂಡಿದೆ.

ಡೆಲ್ ಲ್ಯಾಟಿಟ್ಯೂಡ್ 9510 5G ನೆಟ್‌ವರ್ಕ್ ಜೊತೆಗೆ ವೈಫೈ6 ಗೆ ಬೆಂಬಲವನ್ನು ನೀಡುತ್ತದೆ. ಅಲ್ಲದೆ ಈ ಲ್ಯಾಪ್‌ಟಾಪ್ ಡೆಲ್ ಆಪ್ಟಿಮೈಜರ್ ಸಾಫ್ಟ್‌ವೇರ್ ಅನ್ನು ಸಹ ಹೊಂದಿರುತ್ತದೆ, ಇದು ಸುರಕ್ಷಿತ ಲಾಗ್-ಇನ್‌ಗಳು, ಸಾಫ್ಟವೇರ್ ಹೊಂದಿದ್ದು, ಎಕ್ಸ್‌ಪ್ರೆಸ್‌ಚಾರ್ಜ್ ಬೂಸ್ಟ್ ಟೆಕ್ ಅನ್ನು ಸಹ ನೀಡಿದೆ. ಇನ್ನು ಈ ಲ್ಯಾಪ್‌ಟಾಪ್ ಬಳಕೆದಾರರಿಗೆ ಸುಮಾರು 20 ನಿಮಿಷಗಳಲ್ಲಿ 35 ಪ್ರತಿಶತದಷ್ಟು ಶುಲ್ಕವನ್ನು ನೀಡುತ್ತದೆ. ಲ್ಯಾಪ್‌ಟಾಪ್‌ನ ಉಷ್ಣ ನಿರ್ವಹಣೆಗಾಗಿ ಡೆಲ್ ಕಾರ್ಬನ್ ಬ್ಲೇಡ್ ಫ್ಯಾನ್ ಮತ್ತು ಡ್ಯುಯಲ್ ಹೀಟ್ ಪೈಪ್‌ಗಳನ್ನು ಕೂಡ ಸೇರಿಸಿದೆ.

ಇನ್ನು ಡೆಲ್XPS 13 ಲ್ಯಾಪ್‌ಟಾಪ್ ನಾಲ್ಕು ಬದಿಯಲ್ಲೂ ಯಾವುದೇ ಎಡ್ಜ್ ಇಲ್ಲದ, ಇನ್ಫಿನಿಟಿ ಎಡ್ಜ್ ಡಿಸ್ಪ್ಲೇಯನ್ನ ಹೊಂದಿದ್ದು, ಇಂಟೆಲ್‌ನ 10th ಜನ್ ಸಿಪಿಯುನಿಂದ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಇದು 13.4-ಇಂಚಿನ ಡಿಸ್‌ಪ್ಲೇಯನ್ನ ಹೊಂದಿದ್ದು, ಇದರ ರೆಸಲ್ಯೂಶನ್ ಯುಹೆಚ್‌ಡಿ + ಗರಿಷ್ಠ 500 ನಿಟ್ಸ್ ಬ್ರೈಟ್‌ನೆಸ್ ಮತ್ತು 1500: 1 ಕಾಂಟ್ರಾಸ್ಟ್ ಅನುಪಾತವನ್ನು ಹೊಂದಿದೆ. ಅಲ್ಲದೆ ಇದು ಶೇಕಡಾ 91.5 ರಷ್ಟು ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ.

ಅಲ್ಲದೆ ಡೆಲ್XPS13, 52WHr ಬ್ಯಾಟರಿಯನ್ನು ಹೊಂದಿದ್ದು, ಟೈಪ್-ಸಿ ಬಳಸಿ 45W ಎಸಿ ಅಡಾಪ್ಟರ್‌ನಿಂದ ಚಾರ್ಜಿಂಗ್ ಮಾಡಬಹುದಾಗಿದೆ. ಜೊತೆಗೆ ಡೆಲ್ ಎಕ್ಸ್‌ಪಿಎಸ್ 13 , 10th ಜನರೇಷನ್‌ನ ಇಂಟೆಲ್ ಕೋರ್ ಪ್ರೊಸೆಸರ್ ಅನ್ನ ಒಳಗೊಂಡಿದೆ. ಅಲ್ಲದೆ ವಿಂಡೋಸ್ 10 ಗೆ ಬೆಂಬಲವನ್ನು ನೀಡುತ್ತದೆ. ಸದ್ಯ ಎರಡೂ ಲ್ಯಾಪ್‌ಟಾಪ್‌ಗಳು ಡ್ಯುಯಲ್ 2.5 ಡಬ್ಲ್ಯೂ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದ್ದು ವೇವ್ಸ್ ಮ್ಯಾಕ್ಸ್ ಆಡಿಯೊ ಪ್ರೊ ಟ್ಯೂನಿಂಗ್ ಹೊಂದಿದೆ.

ಇನ್ನು ವೈ-ಫೈ 6 ಮತ್ತು ಬ್ಲೂಟೂತ್ 5 ಹ್ಯಾಂಡಲ್ ವೈರ್‌ಲೆಸ್ ಸಂಪರ್ಕವನ್ನು ಬೆಂಬಲಿಸಲಿದ್ದು, ಡೆಲ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಪವರ್ ಬಟನ್‌ನಲ್ಲಿ ಎಂಬೆಡ್ ಮಾಡಲಾಗಿದೆ. ಇನ್ನ ಇದೇ ಮಾರ್ಚ್ 26 ರಿಂದ ಡೆಲ್ ಲ್ಯಾಟಿಟ್ಯೂಡ್ 9510 ಜಾಗತಿಕವಾಗಿ ಲಭ್ಯವಾಗಲಿದೆ. ಈ ಡೆಲ್ ಲ್ಯಾಪ್‌ಟಾಪ್‌ನ ಬೆಲೆ ಭಾರತದಲ್ಲಿ ಸುಮಾರು 1,29,000 ರೂ.ಆಗಿದೆ. ಜೊತೆಗೆ ಡೆಲ್ XPS13, ಯುಎಸ್, ಕೆನಡಾ, ಸ್ವೀಡನ್, ಯುಕೆ, ಜರ್ಮನಿ ಮತ್ತು ಫ್ರಾನ್ಸ್‌ನಲ್ಲಿ ನಾಳೆ(ಜ.7)ಯಿಂದ ಖರೀದಿಗೆ ಲಭ್ಯವಾಗಲಿದ್ದು, ಫೆಬ್ರವರಿ ತಿಂಗಳಲ್ಲಿ ಜಾಗತಿಕವಾಗಿ ಲಭ್ಯವಿರುತ್ತದೆ. ಡೆಲ್ XPS13, ಆರಂಭಿಕ ಬೆಲೆ ಅಂದಾಜು 72,000 ರೂ, ಆಗಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190