ಶೀಘ್ರದಲ್ಲೇ ಡೆಲ್‌ ಕಂಪೆನಿಯಿಂದ ಲ್ಯಾಟಿಟ್ಯೂಡ್ 9510 ಲ್ಯಾಪ್‌ಟಾಪ್‌ ಬಿಡುಗಡೆ!

|

ಲ್ಯಾಪ್‌ಟಾಪ್ ತಯಾರಿಕೆಯಲ್ಲಿ ಮುಂಚುಣಿಯಲ್ಲಿರುವ ದೈತ್ಯ ಡೆಲ್ ಕಂಪೆನಿ ತನ್ನ ಲ್ಯಾಟಿಟ್ಯೂಡ್‌ 9000 ಲ್ಯಾಪ್‌ಟಾಪ್‌ನ ಆಪ್‌ಗ್ರೇಡ್‌ ಆವೃತ್ತಿ ಡೆಲ್‌ ಲ್ಯಾಟಿಟ್ಯೂಡ್ 9510 ಅನ್ನ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. 15-ಇಂಚಿನ ಡಿಸ್‌ಪ್ಲೇ ಹೊಂದಿರುವ, 15 ಗಂಟೆಗಳವರೆಗೆ ದೀರ್ಘಾವಧಿ ಬಾಳಿಕೆ ಬರುವ ಲ್ಯಾಪ್‌ಟಾಪ್‌ ಇದಾಗಿರಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಹೌದು

ಹೌದು, ಲ್ಯಾಪ್‌ಟಾಪ್‌ ತಯಾರಿಕೆಯ ದೈತ್ಉ ಕಂಪೆನಿ ಡೆಲ್‌ ತನ್ನ ಮುಂದಿನ ಆವೃತ್ತಿಯ ಲ್ಯಾಪ್‌ಟಾಪ್‌ ಲ್ಯಾಟಿಟ್ಯೂಡ್‌ 9000 ಬಿಡುಗಡೆ ಮಾಡುವುದಾಗಿ ಹೇಳಿದೆ. ಈ ಲ್ಯಾಪ್‌ಟಾಪ್‌ ಇಂದಿನ ಜನರೇಷನ್‌ಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದ್ದು ಉತ್ತಮ ಬ್ಯಾಟರಿ ಪಿಕಪ್‌ ಜೊತೆಗೆ ಉತ್ತಮ ವಿನ್ಯಾದಸ ಡಿಸ್‌ಪ್ಲೇಯನ್ ಒಳಗೊಂಡಿರಲಿದೆ. ಅಲ್ಲದೆ ಲ್ಯಾಪ್‌ಟಾಪ್ ಮತ್ತು 2-ಇನ್ -1 ಮಲ್ಟಿಟಾಸ್ಕ್‌ ಆಗಿದೆ. ಇನ್ನು ಡೆಲ್ ಲ್ಯಾಟಿಟ್ಯೂಡ್ 9510 ಜೊತೆಗೆ, ಡೆಲ್‌ ಕಂಪೆನಿಯು 200 ಕ್ಕೂ ಟಿವಿ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳನ್ನು ಹುಡುಕಲು ಬಳಕೆದಾರರಿಗೆ ಅವಕಾಶ ನೀಡುವ ಸಲುವಾಗಿ ಡೆಲ್ ಸಿನೆಮಾ ಗೈಡ್ ಅನ್ನು ಪ್ರಾರಂಭಿಸಲಿದೆ.

ಇನ್ನು

ಇನ್ನು ಡೆಲ್‌ ಲ್ಯಾಟಿಟ್ಯೂಡ್‌ ಲ್ಯಾಪ್‌ಟಾಪ್‌ 2-ಇನ್ -1 ಕನ್ವರ್ಟಿಬಲ್ ಲ್ಯಾಪ್‌ಟಾಪ್ ಆಗಿದ್ದು, ವಿಶ್ವದ ಅತ್ಯಂತ ಚಿಕ್ಕ ಮತ್ತು ಹಗುರವಾದ ಕಮರ್ಷಿಯಲ್‌15 ಇಂಚಿನ ಪಿಸಿಯಾಗಿದೆ. ಇದರ ತೂಕ 3.2 ಪೌಂಡ್‌ಗಳು (ಸರಿಸುಮಾರು 1.45 ಕೆಜಿ)ಹೊಂದಿದೆ. ಅಲ್ಲದೆ ಈ ಲ್ಯಾಪ್‌ಟಾಪ್‌ 15 ಇಂಚಿನ ಇನ್‌ಫಿನಿಟಿ ಎಡ್ಜ್‌ ಡಿಸ್‌ಪ್ಲೇಯನ್ನ ಹೊಂದಿದ್ದು , ಇದು 2-ಇನ್ -1 ಆಗಿರುವುದರಿಂದ ಇದರಲ್ಲಿ ಟಚ್‌ಸ್ಕ್ರೀನ್ ಬೆಂಬಲ ಸಹ ಇದೆ.

ಡೆಲ್‌

ಅಲ್ಲದೆ ಡೆಲ್‌ ಲ್ಯಾಟಿಟ್ಯೂಡ್‌ 9510 ಲ್ಯಾಪ್‌ಟಾಪ್‌ ವಿಪ್ರೊ ಜೊತೆಗೆ 10 ನೇ ತಲೆಮಾರಿನ ಇಂಟೆಲ್ ಕೋರ್ ಐ 7 ಪ್ರೊಸೆಸರ್‌ ಅನ್ನ ಹೊಂದಿದೆ. 5 ಜಿ ಮೊಬೈಲ್ ಬ್ರಾಡ್‌ಬ್ಯಾಂಡ್ ಬೆಂಬಲದೊಂದಿಗೆ ಇಂಟೆಲ್ ವೈ-ಫೈ 6 (GIG +) ಸಂಪರ್ಕವನ್ನು ಸಹ ಹೊಂದಿದೆ. ಜೊತೆಗೆ ಇನ್ಫಿನಿಟಿ ಎಡ್ಜ್ ಡಿಸ್‌ಪ್ಲೇ ತೆಳುವಾದ ವಿನ್ಯಾಸವನ್ನು ಹೊಂದಿದ್ದು, ಟಾಪ್-ಫೈರಿಂಗ್ ಸ್ಪೀಕರ್‌ಗಳಲ್ಲಿ 5G ಆಂಟೆನಾಗಳನ್ನು ಸಂಯೋಜಿಸಲಾಗಿದೆ. ಇದಲ್ಲದೆ, ಕಾರ್ಬನ್ ಬ್ಲೇಡ್ ಫ್ಯಾನ್ ಮತ್ತು ಡ್ಯುಯಲ್ ಹೀಟ್ ಪೈಪ್‌ಗಳನ್ನು ಸಹ ಹೊಂದಿದೆ.

ಲ್ಯಾಪ್‌ಟಾಪ್‌

ಈ ಲ್ಯಾಪ್‌ಟಾಪ್‌ ಇಂಟೆಲ್ ಅಡಾಪ್ಟಿಕ್ಸ್ ತಂತ್ರಜ್ಞಾನವನ್ನು ಹೊಂದಿದ್ದು ಅದು ಅಪ್ಲಿಕೇಶನ್‌ಗಳ ನಡುವೆ ವೇಗವಾಗಿ ಬದಲಾಯಿಸಲು ಮತ್ತು ಸುಧಾರಿತ ಅಪ್ಲಿಕೇಶನ್ ಕಾರ್ಯಕ್ಷಮತೆಯನ್ನು ಒದಗಿಸಲು ಸಾಧ್ಯವಾಗುತ್ತದೆ. ಇನ್ನು ಡೆಲ್ ಎಕ್ಸ್‌ಪ್ರೆಸ್‌ ಚಾರ್ಜ್ ಬೂಸ್ಟ್ ತಂತ್ರಜ್ಞಾನವನ್ನು ಸಹ ನೀಡಿದ್ದು ಅದು 20 ನಿಮಿಷಗಳಲ್ಲಿ 35 ಪ್ರತಿಶತದಷ್ಟು ಶುಲ್ಕವನ್ನು ನೀಡಬೇಕಾಗುತ್ತದೆ. ಇದಲ್ಲದೆ, ಡೆಲ್ ಲ್ಯಾಟಿಟ್ಯೂಡ್‌9510 ಮಾರ್ಚ್ 26 ರಂದು ಜಾಗತಿಕ ಮಾರುಕಟ್ಟೆಗೆ ಲಾಂಚ್‌ ಆಗಲಿದೆ ಎನ್ನಲಾಗ್ತಿದೆ. ಅಲ್ಲದೆ ಇದರ ಆರಂಭಿಕ ಬೆಲೆ tag 1,799 (ಸರಿಸುಮಾರು 1,29,000 ರೂ.) ಆಗಿರಲಿದೆ

ಜೊತೆಗೆ

ಜೊತೆಗೆ ಡೆಲ್ 86 4K ಇಂಟರ್‌ ಆಕ್ಟಿವ್‌ ಟಚ್ ಮಾನಿಟರ್, ಏಪ್ರಿಲ್ 10 ರಿಂದ ಜಾಗತಿಕವಾಗಿ ಮಾರಾಟವಾಗಲಿದೆ, ಅಲ್ಲದೆ ಡೆಲ್ ಅಲ್ಟ್ರಾಶಾರ್ಪ್ 43 4K ಯುಎಸ್‌ಬಿ-ಸಿ, ಜನವರಿ 30 ರಿಂದ ಜಾಗತಿಕವಾಗಿ ಸರಿಸುಮಾರು ರೂ. 75,300 ಬೆಲೆ ಲಭ್ಯವಾಗಲಿದ್ದು, ಡೆಲ್ ಅಲ್ಟ್ರಾಶಾರ್ಪ್ 27 4k ಯುಎಸ್‌ಬಿ-ಸಿ ಮಾನಿಟರ್ ಜನವರಿ 30 ರಿಂದ ಅಂದಾಜು 50,900 ರೂ. ಬೆಲೆಗೆ ಲಭ್ಯವಾಗಲಿದೆ. ಸದ್ಯ ಡೆಸ್ಕ್ ಟಾಪ್ ಗಳು ಟೆಕ್‌ ಮಾರುಕಟ್ಟೆಯಲ್ಲಿ ಬೇಡಿಕೆಯನ್ನ ಹೊಂದಿದ್ದು, ಡೆಲ್ ಈ ನಿಟ್ಟಿನಲ್ಲಿ ನಾಯಕನಾಗಿದ್ದು, ಕಳೆದ 33 ವರ್ಷದಿಂದ ಉತ್ತಮ ಸೇವೆಯನ್ನು ನೀಡಿದೆ. ಇದರಿಂ ಹೊಸ ಹೊಸ ಉತ್ಪನ್ನಗಳ ಅನ್ವೇಷಣೆಗೆ ಪ್ರೇರಣೆ ಸಿಕ್ಕಿದೆ, ಇದೇ ರೀತಿಯ ಬೆಳವಣಿಗೆ ಮುಂದಿನ ದಿನಗಳಲ್ಲೂ ನಿರೀಕ್ಷಿಸುತ್ತೇವೆ" ಎಂದು ಡೆಲ್ ಕಂಪೆನಿ ಹೇಳಿಕೊಂಡಿದೆ.

Most Read Articles
Best Mobiles in India

Read more about:
English summary
Dell on Thursday announced the expansion of its Latitude 9000 laptop series with the launch of Latitude 9510. The new offering is touted to deliver the longest battery life of any 15-inch business PC with a target of up to 15 hours. It comes in both laptop and 2-in-1 form factors.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more