ಡೆಲ್ ಸಂಸ್ಥೆಯ ಡೆಲ್ ಸ್ಲಿಮ್ ಸೌಂಡ್‌ಬಾರ್ ಮಾರುಕಟ್ಟೆಗೆ ಎಂಟ್ರಿ!
ಜಾಗತಿಕ ಮಾರುಕಟ್ಟೆಯಲ್ಲಿ ಜನಪ್ರಿಯ ಲ್ಯಾಪ್‌ಟಾಪ್‌ಗಳಿಗೆ ಹೆಸರುವಾಸಿಯಾಗಿರುವ ಡೆಲ್ ಕಂಪೆನಿ ತನ್ನ ಗುಣಮಟ್ಟದ ಪ್ರಾಡಕ್ಟ್‌ಗಳಿಗೆ ಹೆಸರುವಾಸಿಯಾಗಿದೆ. ವಿಭಿನ್ನ ಶೈಲಿಯ ಲ್ಯಾಪ್‌ಟಾಪ್‌ಗಳು, ಸೌಂಡ್‌ಬಾರ್‌ಗಳು, ಸ್ಮಾರ್ಟ್ ಸ್ಪೀಕರ್‌ಗಳ, ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. ಈಗಾಗಲೇ ಹಲವು ಮಾದರಿಯ ಸೌಂಡ್‌ಬಾರ್‌ಗಳನ್ನು ಪರಿಚಯಿಸಿರುವ ಡೆಲ್ ಕಂಪೆನಿ ಇದೀಗ ತನ್ನ ಮತ್ತೊಂದು ಹೊಸ ಸೌಂಡ್‌ಬಾರ್ ಅನ್ನು ಬಿಡುಗಡೆ ಮಾಡಿದೆ. ಇದು ಸ್ಲಿಮ್ ವಿನ್ಯಾಸವನ್ನು ಹೊಂದಿದೆ.

ಹೌದು, ಡೆಲ್ ಕಂಪೆನಿ ತನ್ನ ಹೊಸ ಡೆಲ್ ಸ್ಲಿಮ್ ಸೌಂಡ್‌ಬಾರ್ SB521A ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು 3.6W ಪವರ್,ಪ್ಯಾಕ್‌ಅಪ್ ಹೊಂದಿದ್ದು,ಸಣ್ಣ ಮತ್ತು ಹಗುರವಾದ ವಿನ್ಯಾಸವನ್ನು ಹೊಂದಿದೆ. ಅಲ್ಲದೆ ಇದನ್ನು ವಿನ್ಯಾಸಗೊಳಿಸಲಾದ ನಾಲ್ಕು ಡೆಲ್ ಮಾನಿಟರ್‌ಗಳಲ್ಲಿ ಒಂದಕ್ಕೆ ಸುಲಭವಾಗಿ ಜೋಡಿಸಬಹುದಾಗಿದೆ. ಇನ್ನುಳಿದಂತೆ ಈ ಸ್ಲಿಮ್ ಸೌಂಡ್‌ಬಾರ್‌ನ ವಿಶೇಷತೆಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡೆಲ್ ಸ್ಲಿಮ್ ಸೌಂಡ್‌ಬಾರ್ SB521A ವಿಶ್ವದ ತೆಳ್ಳನೆಯ ಮತ್ತು ಹಗುರವಾದ ಸೌಂಡ್‌ಬಾರ್ ಆಗಿದೆ ಎಂದು ಡೆಲ್ ಸಂಸ್ಥೆ ಹೇಳಿಕೊಂಡಿದೆ. ಇದನ್ನು ಡೆಲ್ P2721Q, P3221D, P3421W, ಮತ್ತು ಡೆಲ್ ಅಲ್ಟ್ರಾಶಾರ್ಪ್ U2421E ಮಾನಿಟರ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಮಾನಿಟರ್ ಅಡಿಯಲ್ಲಿ ಸೌಂಡ್‌ಬಾರ್ ಅನ್ನು ಲಗತ್ತಿಸಲು ಇಂಟರ್‌ಬಿಲ್ಟ್ ಮ್ಯಾಗ್ನೆಟಿಕ್ Ascent ಜೊತೆಗೆ ಬರುತ್ತದೆ. ಅಲ್ಲದೆ ಡೆಲ್ ಸ್ಲಿಮ್ ಸೌಂಡ್‌ಬಾರ್ SB521A ಸಂಯೋಜಿತ ಆಂಪ್ಲಿಫೈಯರ್ ಅನ್ನು ಒಳಗೊಂಡಿದೆ.

ಇನ್ನು ಡೆಲ್ ಸ್ಲಿಮ್ ಸೌಂಡ್‌ಬಾರ್ SB521A ಸಕ್ರಿಯ ಸ್ಪೀಕರ್‌ಗಳನ್ನು ಹೊಂದಿದ್ದು ಅದು 3.6W ಪವರ್ ಅನ್ನು ಜನರೇಟ್ ಮಾಡಲಿದೆ. ಇದು 180 ರಿಂದ 20,000Hz Frequency response rangeಅನ್ನು ಹೊಂದಿದೆ. ಜೊತೆಗೆ ಆಂಪ್ಲಿಫೈಯರ್ ಅನ್ನು ಸಂಯೋಜಿಸಲಾಗಿದೆ ಮತ್ತು ಸೌಂಡ್ಬಾರ್ ಅನ್ನು ಯುಎಸ್‌ಬಿ ಪೋರ್ಟ್‌ನಿಂದ ನಡೆಸಲಾಗುತ್ತದೆ. ಇನ್ನು ಇದು ಪ್ಲಗ್ ಮತ್ತು ಪ್ಲೇ ಆಗಿದ್ದು ಇದನ್ನು ನಿಮ್ಮ ಮಾನಿಟರ್ ಅಡಿಯಲ್ಲಿ ಆರೋಹಿಸಲು ಡೆಲ್ ಶಿಫಾರಸು ಮಾಡುತ್ತದೆ. ಅಲ್ಲದೆ ಈ ಸೌಂಡ್‌ಬಾರ್‌ನ ಮೇಲ್ಭಾಗದಲ್ಲಿ ಆಯಸ್ಕಾಂತಗಳಿವೆ, ಅದನ್ನು ಮಾನಿಟರ್ ಅಥವಾ ಇತರ ಮೇಲ್ಮೈಗಳ ಅಡಿಯಲ್ಲಿ ಜೋಡಿಸಲು ಅನುವು ಮಾಡಿಕೊಡುತ್ತದೆ. ಮಾನಿಟರ್ ಅಡಿಯಲ್ಲಿ ಒಮ್ಮೆ ಆರೋಹಿಸಿದ ನಂತರ, ಮಾನಿಟರ್ ಟಿಲ್ಟ್ ಮತ್ತು ಸ್ವಿವೆಲ್ ಫೀಚರ್ಸ್‌ಗಳ ಮೇಲೆ ಪರಿಣಾಮ ಬೀರದೇ "ರಿಚ್‌ನೆಸ್ ಮ್ಯೂಸಿಕ್ ಫಿಲ್ ಅನ್ನು ನೀಡುತ್ತದೆ" ಎಂದು ಡೆಲ್ ಸಂಸ್ಥೆ ಹೇಳಿದೆ.

ಡೆಲ್ ಸ್ಲಿಮ್ ಸೌಂಡ್‌ಬಾರ್ SB521A ಅನ್ನು ಡೆಲ್ ಅಲ್ಟ್ರಾಶಾರ್ಪ್ 24 USB-C ಮಾನಿಟರ್ -U2421 E, ಡೆಲ್ 27 4K USB-C ಮಾನಿಟರ್ - P2721Q, ಡೆಲ್ 32 USB-C ಮಾನಿಟರ್ -P3221D, ಮತ್ತು ಡೆಲ್ 34 ಕರ್ವ್ಡ್ USB-C ಮಾನಿಟರ್ -P3421Wಗಾಗಿ ವಿನ್ಯಾಸಗೊಳಿಸಲಾಗಿದೆ. ಇನ್ನು ಡೆಲ್ ಸ್ಲಿಮ್ ಸೌಂಡ್‌ಬಾರ್ SB521A ಬೆಲೆ ಜಿಎಸ್‌ಟಿ ಸೇರಿದಂತೆ ಭಾರತದಲ್ಲಿ 4,899 ರೂ. ಆಗಿದೆ. ಇನ್ನು ಈ ಸೌಂಡ್‌ಬಾರ್ ಅಮೆಜಾನ್ US ಪಟ್ಟಿ ಅಕ್ಟೋಬರ್ 13 ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.


Click it and Unblock the Notifications



