ಡೆಲ್ ತರಲಿದೆ ವಿಂಡೋಸ್ 8 ಟ್ಯಾಬ್ಲೆಟ್

By Varun
|
ಡೆಲ್ ತರಲಿದೆ ವಿಂಡೋಸ್ 8 ಟ್ಯಾಬ್ಲೆಟ್

ನ್ಯೂ ಐಪ್ಯಾಡ್,ನ್ಯೂ ಐಪ್ಯಾಡ್,ನ್ಯೂ ಐಪ್ಯಾಡ್. ಎಲ್ಲಾ ಕಡೆ ಅದೇ ಸುದ್ದಿ. ಈಗ ಆಪಲ್ ನ ಈ ಟ್ಯಾಬ್ಲೆಟ್ ಗೆ ಸ್ಪರ್ಧಿಯಾಗಿ ಯಾರು ತಮ್ಮ ಟ್ಯಾಬ್ಲೆಟ್ ಬಿಡುಗಡೆ ಮಾಡಲಿದ್ದಾರೆ ಎಂದುಕೊಳ್ಳುತ್ತಿರುವಾಗಲೇ ಡೆಲ್ ಈ ಘೋಷಣೆ ಮಾಡಿದೆ.

ಹೌದು.ವಿಶ್ವದ ಅಗ್ರಗಣ್ಯ ಪಿ.ಸಿ ಹಾಗು ಲ್ಯಾಪ್ಟಾಪ್ ಉತ್ಪಾದಕ ಡೆಲ್, ಈಗ ವಿಂಡೋಸ್ ನ 8 ತಂತ್ರಾಂಶ ವಿರುವ ಟ್ಯಾಬ್ಲೆಟ್ ಹೊರತರಲು ನಿರ್ಧರಿಸಿದೆ. ಅದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೈಕೆಲ್ ಡೆಲ್ ರ ಪ್ರಕಾರ, ತಮ್ಮ ವಿಂಡೋಸ್ 8 ಟ್ಯಾಬ್ಲೆಟ್ ನಿಂದಾಗಿ ಕಾರ್ಪೋರೆಟ್ ಗ್ರಾಹಕರರಿಗೆ ಮೈಕ್ರೋಸಾಫ್ಟ್ ನ ಆಫಿಸ್ ಅಪ್ಲಿ ಕೇಶನ್ ಗಳನ್ನು ಉಪಯೋಗಿಸಲು ಸಾಧ್ಯವಾಗುವುದಲ್ಲದೆ ಕಾರ್ಪೋರೆಟ್ ನೆಟ್ವರ್ಕ್ ಗಳಿಗೆ ಹೊಂದಾಣಿಕೆಯಾಗುವಂತೆ ಸಿದ್ದಪಡಿಸಲಾಗುವುದು ಎಂದಿದ್ದಾರೆ.

ವಿಂಡೋಸ್ 8 ಆವೃತ್ತಿ ಬಂದ ದಿನದಿಂದಲೇ ಈ ಹೊಸ ಟ್ಯಾಬ್ಲೆಟ್ ನ ಮಾರಾಟ ಮಾಡಲಿದೆಯಂತೆ ಡೆಲ್.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X