ಡೆಲ್ ಸಂಸ್ಥೆಯಿಂದ XPS ಸರಣಿಯ ಎರಡು ಹೊಸ ಲ್ಯಾಪ್‌ಟಾಪ್ ಬಿಡುಗಡೆ!
ಟೆಕ್ ವಲಯದಲ್ಲಿ ಸಾಕಷ್ಟು ವಿಭಿನ್ನ ಮಾದರಿಯ ಲ್ಯಾಪ್‌ಟಾಪ್‌ಗಳು ಲಭ್ಯವಿವೆ. ಈಗಾಗಲೇ ಹಲವು ಕಂಪೆನಿಗಳು ತಮ್ಮ ವೈವಿಧ್ಯಮಯ ಲ್ಯಾಪ್‌ಟಾಪ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿವೆ. ಇವುಗಳಲ್ಲಿ ಡೆಲ್ ಕಂಪೆನಿ ಕೂಡ ಒಂದಾಗಿದ್ದು, ಭಾರತದಲ್ಲಿ ತನ್ನ ಭಿನ್ನ ಮಾದರಿಯ ಲ್ಯಾಪ್‌ಟಾಪ್‌ಗಳನ್ನ ಪರಿಚಯಿಸಿದೆ. ಸದಾ ಹೊಸ ಮಾದರಿಯ ಫಿಚರ್ಸ್‌ಗಳನ್ನ ಪರಿಚಯಿಸುವ ಡೆಲ್ ಕಂಪೆನಿ ಸದ್ಯ ಇದೀಗ ತನ್ನ ಹೊಸ XPS 13 9300 ಮತ್ತು XPS 15 9500 ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಹೌದು, ಡೆಲ್ ಕಂಪೆನಿ ತನ್ನ ಹೊಸ XPS13 9300 ಮತ್ತು XPS15 9500 ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ XPS 13 9300 ಸುಮಾರು ಆರು ತಿಂಗಳ ಹಿಂದೆಯೆ ಬಿಡುಗಡೆ ಆಗಿತ್ತು. ಆದರೆ XPS 15 ಲ್ಯಾಪ್‌ಟಾಪ್ ಹೊಚ್ಚ ಹೊಸ ಡಿವೈಸ್ ಆಗಿದೆ. XPS13 ಮತ್ತು XPS 15 ಜೊತೆಗೆ ಡೆಲ್ ಬೆಜೆಲ್‌ಗಳನ್ನು ಕನಿಷ್ಠ ಮಟ್ಟಕ್ಕೆ ಟ್ರಿಮ್ ಮಾಡಿದೆ. ಅಲ್ಲದೆ ಈ ಲ್ಯಾಪ್‌ಟಾಪ್‌ಗಳು ಫಾರ್ಮ್ ಫ್ಯಾಕ್ಟರ್ ಹೊಂದಿರುವ ಲ್ಯಾಪ್‌ಟಾಪ್ ಇದಾಗಿದೆ ಎಂದು ಹೇಳಲಾಗ್ತಿದೆ. ಇನ್ನು ಈ ಲ್ಯಾಪ್‌ಟಾಪ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡೆಲ್ XPS 13 9300
ಡೆಲ್ XPS 13 ಲ್ಯಾಪ್‌ಟಾಪ್ 13.4 ಇಂಚಿನ ಸ್ಕ್ರೀನ್ ಅನ್ನು ಹೊಂದಿದ್ದು, ಇದು 16:10 ರಚನೆಯ ಅನುಪಾತವನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್ 4K UHD + ಪ್ಯಾನಲ್ ಅನ್ನು ವೆಸಾ ಸರ್ಟಿಫೈಡ್ ಡಿಸ್ಪ್ಲೇ ಅನ್ನು ಹೊಂದಿದ್ದು, HDR400 ಹೊಂದಿರುವ 16 ಮಿಲಿಯನ್ ಬಣ್ಣಗಳಿಗೆ ಮತ್ತು 500 ನಿಟ್ಸ್ ಬ್ರೈಟ್‌ನೆಶ್ ಅನ್ನು ಹೊಂದಿದೆ. ಅಲ್ಲದೆ ಇದು 100% SRGB ಬಣ್ಣದ ಹರವು ಸಹ ಒಳಗೊಂಡಿದೆ. 0.65% ವಿರೋಧಿ ಪ್ರತಿಫಲಿತ ಲೇಪನವನ್ನು ಹೊಂದಿದೆ. ಅದು ಹೊರಾಂಗಣದಲ್ಲಿ ಅಥವಾ ಪ್ರಕಾಶಮಾನವಾದ ಬೆಳಕಿನಲ್ಲಿ ಕೆಲಸ ಮಾಡುವಾಗ ಕಡಿಮೆ ಬ್ರೈಟ್‌ನೆಶ್ ಅನ್ನು ಬಳಸುವುದಕ್ಕೆ ಅನುವು ಮಾಡಿಕೊಡುತ್ತದೆ.

ಇನ್ನು ಈ ಲ್ಯಾಪ್‌ಟಾಪ್ ಕಪ್ಪು ಕಾರ್ಬನ್ ಫೈಬರ್ ಪಾಮ್ ರೆಸ್ಟ್ ಅಥವಾ ಆರ್ಕ್ಟಿಕ್ ಬಿಳಿ ನೇಯ್ದ ಗಾಜಿನ ಫೈಬರ್ ಪಾಮ್ ರೆಸ್ಟ್ ಹೊಂದಿರುವ ಪ್ಲ್ಯಾಟಿನಮ್ ಸಿಲ್ವರ್ ಲೇಪನದಲ್ಲಿ ಬರಲಿದೆ. ಅಲ್ಲದೆ ಇದು 10 ನೇ ತಲೆಮಾರಿನ ಇಂಟೆಲ್ ಕೋರ್ I7-1065G 7 ಪ್ರೊಸೆಸರ್ ಹೊಂದಿದೆ. ಜೊತೆಗೆ ಇಂಟೆಲ್ ಐರಿಸ್ ಪ್ಲಸ್ ಗ್ರಾಫಿಕ್ಸ್ ಅನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್ 16GB RAM ಮತ್ತು 256GB ಸಂಗ್ರಹ ಸಾಮರ್ಥ್ಯವನ್ನ ಹೊಂದಿದೆ. ಇದಲ್ಲದೆ ಇದರಲ್ಲಿ ಎರಡು ಥಂಡರ್ಬೋಲ್ಟ್ 3, ಒಂದು ಮೈಕ್ರೊ ಎಸ್ಡಿ ಕಾರ್ಡ್ ರೀಡರ್ ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಅನ್ನು ಸಹ ನೀಡಲಾಗಿದೆ.

ಡೆಲ್ XPS 15 9500
ಇನ್ನು ಈ ಲ್ಯಾಪ್‌ಟಾಪ್ ಹೆಸರೇ ಸೂಚಿಸುವಂತೆ 15 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇಯು ಸ್ಕ್ರೀನ್-ಟು-ಬಾಡಿ ಅನುಪಾತ 92.9% ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್ 10ನೇ ತಲೆಮಾರಿನ ಇಂಟೆಲ್ ಕೋರ್ H-ಸೀರಿಸ್ ಪ್ರೊಸೆಸರ್ ಮತ್ತು ಡಿಸ್ಕ್ರೀಟ್ ಎನ್ವಿಡಿಯಾ ಜೀಫೋರ್ಸ್ ಜಿಟಿಎಕ್ಸ್ 1650T ಗ್ರಾಫಿಕ್ಸ್ ಅನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ನಲ್ಲಿ ಅಪ್-ಫೈರಿಂಗ್ ಜೊತೆಗೆ ಕ್ವಾಡ್ ಸ್ಪೀಕರ್ ಸೆಟಪ್ ಅನ್ನು ಸಹ ನೀಡಲಾಗಿದೆ. ಅಲ್ಲದೆ ಉತ್ತಮ ವೀಡಿಯೊ ಕಾನ್ಫರೆನ್ಸಿಂಗ್‌ಗಾಗಿ ಉನ್ನತ-ಆರೋಹಿತವಾದ ಮೈಕ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಹಾನಿಕಾರಕ ನೀಲಿ ಬೆಳಕನ್ನು ಕಡಿಮೆ ಮಾಡಲು ಮತ್ತು ಬಣ್ಣವನ್ನು ಕಾಪಾಡಿಕೊಳ್ಳಲು ಈ ಲ್ಯಾಪ್‌ಟಾಪ್‌ಗಳು ಐ ಸೇಫ್ ಟೆಕ್ನಾಲಜಿಯನ್ನ ಒಳಗೊಂಡಿವೆ.

ಬೆಲೆ ಮತ್ತು ಲಭ್ಯತೆ
ಡೆಲ್ XPS 13 9300 ಲ್ಯಾಪ್‌ಟಾಪ್ ಭಾರತದಲ್ಲಿ ಜಿಎಸ್‌ಟಿ ಸೇರಿದಂತೆ 1,44,807 ರೂ, ಬೆಲೆಯನ್ನ ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್ ಅಮೆಜಾನ್ ಇಂಡಿಯಾದಲ್ಲಿ ಮತ್ತು ದೇಶದ ಆಯ್ದ ಡೆಲ್ ಎಕ್ಸ್ಕ್ಲೂಸಿವ್ ಸ್ಟೋರ್‌ಗಳಲ್ಲಿ ಖರೀದಿಸಲು ಲಭ್ಯವಿರುತ್ತದೆ. ಇನ್ನು ಡೆಲ್ XPS 15 9500 ಲ್ಯಾಪ್‌ಟಾಪ್ ಜಿಎಸ್‌ಟಿ ಸೇರಿದಂತೆ 1,86,072 ರೂ, ಬೆಲೆಯನ್ನ ಹೊಂದಿದೆ. ಇದು ಅಮೆಜಾನ್ ಇಂಡಿಯಾ ಮೂಲಕ ಲಭ್ಯವಾಗಲಿದೆ.


Click it and Unblock the Notifications