ಡೆಲ್ ಕಂಪೆನಿಯಿಂದ ಹೊಸ XPS15 ಮತ್ತು XPS17 ಲ್ಯಾಪ್‌ಟಾಪ್‌ ಬಿಡುಗಡೆ!

|

ಟೆಕ್‌ ಮಾರುಕಟ್ಟೆಯಲ್ಲಿ ಹಲವು ಮಾದರಿಯ ಲ್ಯಾಪ್‌ಟಾಪ್‌ಗಳು ಲಭ್ಯವಿವೆ. ಟೆಕ್ನಾಲಜಿ ಮುಂದುವರೆದಷ್ಟು ಹೊಸ ಮಾದರಿಯ ಸ್ಮಾರ್ಟ್‌ ಪ್ರಾಡಕ್ಟ್‌ಗಳು ಟೆಕ್‌ ಮಾರುಕಟ್ಟೆಗೆ ಲಗ್ಗೆ ಹಾಕುತ್ತಲೆ ಇವೆ. ಇನ್ನು ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ ಲ್ಯಾಪ್‌ಟಾಪ್‌ಗಳು ಲಬ್ಯವಿದ್ದರೂ ಗ್ರಾಹಕರು ಮಾತ್ರ ತಮ್ಮ ನೆಚ್ಚಿನ ಬ್ರ್ಯಾಂಡ್‌ ಕಂಪೆನಿಗಳ ಲ್ಯಾಪ್‌ಟಾಪ್‌ಗಳನ್ನೇ ಅಯ್ಕೆ ಮಾಡಿಕೊಳ್ಳುತ್ತಾರೆ. ಸದ್ಯ ಇದರಲ್ಲಿ ಡೆಲ್‌ ಕಂಪೆನಿ ಕೂಡ ಸೇರಿದ್ದು ತನ್ನ ಭಿನ್ನ ಮಾದರಿಯ ಲ್ಯಾಪ್‌ಟಾಪ್‌ಗಳ ಮೂಲಕ ಜನಪ್ರಿಯತೆ ಸಾದಿಸಿದೆ. ಇದೀಗ ತನ್ನ ಹೊಸ ಮಾದರಿಯ ನೋಟ್‌ಬುಕ್‌ಗಳನ್ನ ಬಿಡುಗಡೆ ಮಾಡಿದೆ.

ಜನಪ್ರಿಯ

ಹೌದು, ಜನಪ್ರಿಯ ಲ್ಯಾಪ್‌ಟಾಪ್‌ ತಯಾರಕ ಡೆಲ್‌ ಕಂಪೆನಿ ತನ್ನ ಬಹು ನಿರೀಕ್ಷಿತ XPS15 ಮತ್ತು XPS17 ಎಂಬ ಎರಡು ಹೊಸ ಮಾದರಿಯ ನೋಟ್‌ಬುಕ್ ಗಳನ್ನು ಪರಿಚಯಿಸಿದೆ. ಇನ್ನು ಈ ಹೊಸ ಮಾದರಿಯ ಆಪ್ಡೇಟ್‌ ವರ್ಷನ್‌ ಆಗಿರುವ XPS15 ಮತ್ತು XPS17 ಲ್ಯಾಪ್‌ಟಾಪ್‌ಗಳು ಹೊಸ ವಿನ್ಯಾಸವನ್ನ ಒಳಗೊಂಡಿವೆ. ಇದಲ್ಲದೆ ಈ ಲ್ಯಾಪ್‌ಟಾಪ್‌ಗಳು 10 ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್‌ಗಳನ್ನು ಹೊಂದಿವೆ ಎನ್ನಲಾಗ್ತಿದೆ. ಅಲ್ಲದೆ ವೇವ್ಸ್ NX3D ಆಡಿಯೊ ಟೆಕ್ನಾಲಜಿಯನ್ನ ಒಳಗೊಂಡಿದೆ.

ಲ್ಯಾಪ್‌ಟಾಪ್‌ಗಳು

ಇನ್ನು XPS15 ಮತ್ತು XPS17 ಲ್ಯಾಪ್‌ಟಾಪ್‌ಗಳು ವೇವ್ಸ್ NX3D ಆಡಿಯೊ ಟೆಕ್ನಾಲಜಿಯನ್ನ ಹೊಂದಿದ್ದು, 16:10 ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ. ಇದಲ್ಲದೆ ಈ ಲ್ಯಾಪ್‌ಟಾಪ್‌ಗಳು ಅಪ್-ಫೈರಿಂಗ್ ಸ್ಪೀಕರ್‌ಗಳನ್ನು ಹೊಂದಿದೆ ಎಂದು ಹೇಳಿಕೊಂಡಿದೆ. ಅಲ್ಲದೆ, ಈ ಲ್ಯಾಪ್‌ಟಾಪ್‌ಗಳು ಹೆಚ್ಚಿನ ಶಾಖವನ್ನು ಹರಡಲು ಮತ್ತು ವರ್ಧಿತ ಕಾರ್ಯಕ್ಷಮತೆಯನ್ನು ಒದಗಿಸಲು ಫ್ಯಾನ್ ಗಾಳಿಯ ಹರಿವನ್ನು ಹೆಚ್ಚಿಸಿವೆ. ಜೊತೆಗೆ ಈ ಹೊಸ XPS15 ಮತ್ತು XPS17 ಮಾದರಿಗಳು ಸಿಂಗಲ್‌ ಚಾರ್ಜ್‌ನಲ್ಲಿ 25 ಗಂಟೆಗಳ ಬ್ಯಾಟರಿ ಅವಧಿಯನ್ನು ತಲುಪಿಸುವ ಸಾಮರ್ಥ್ಯ ಹೊಂದಿವೆ ಎಂದು ಡೆಲ್ ಹೇಳಿಕೊಂಡಿದೆ. ಹಾಗಾದರೆ ಇವುಗಳ ಇನ್ನುಷ್ಟು ವಿನ್ಯಾಸ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಬನ್ನಿರಿ.

ಡೆಲ್ XPS15 9500

ಡೆಲ್ XPS15 9500

ಡೆಲ್ XPS15 9500 ಲ್ಯಾಪ್‌ಟಾಪ್‌ 1920x1200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 15.6-ಇಂಚಿನ ಇನ್ಫಿನಿಟಿ ಎಡ್ಜ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 16:10 ರಚನೆಯ ಅನುಪಾತವನ್ನು ಹೊಂದಿದೆ. ಜೊತೆಗೆ ಈ ಲ್ಯಾಪ್‌ಟಾಪ್ 4K UHD + ಟಚ್‌ಸ್ಕ್ರೀನ್ ಮತ್ತು ಫುಲ್‌ ಎಚ್‌ಡಿ + ಟಚ್‌ಸ್ಕ್ರೀನ್ ಅಲ್ಲದ ಆಯ್ಕೆಗಳಲ್ಲಿ ಬರುತ್ತದೆ. ಇನ್ನು ಈ ಲ್ಯಾಪ್‌ಟಾಪ್‌ 10 ನೇ ತಲೆಮಾರಿನ ಇಂಟೆಲ್ ಕೋರ್ ಐ 5-10300 ಹೆಚ್ ಅನ್ನು ಬೇಸ್ ರೂಪಾಂತರದಲ್ಲಿ ಹೊಂದಿದ್ದು, ಇದು 10 ನೇ ತಲೆಮಾರಿನ ಇಂಟೆಲ್ ಕೋರ್ ಐ 9-10885 ಹೆಚ್ ವರೆಗೆ ವಿಸ್ತರಿಸಿಕೊಳ್ಳಬಹುದಾಗಿದೆ. ಜೊತೆಗೆ ಎನ್ವಿಡಿಯಾ ಜಿಫೋರ್ಸ್ ಜಿಟಿಎಕ್ಸ್ 1650T GPU ಮತ್ತು 32GBವರೆಗೆ DDR4 SDRAM ಹೊಂದಿದೆ.

ಮಾದರಿಯಲ್ಲಿ

ಇದಲ್ಲದೆ ಈ ಹೊಸ XPS15 ಮಾದರಿಯಲ್ಲಿ ಡೆಲ್ 1TB PCIE 3SSD ಸಂಗ್ರಹ ಸಾಮರ್ಥ್ಯವನ್ನು ನೀಡಲಾಗಿದೆ. ಅಲ್ಲದೆ ಗ್ರಾಹಕರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ 256GB ಅಥವಾ 512GB ಶೇಖರಣಾ ಸಾಮರ್ಥ್ಯದ ಆಯ್ಕೆಯನ್ನು ಪಡೆಯಬಹುದಾಗಿದೆ. ಇನ್ನು ಈ ಹೊಸ ಮಾದರಿಯಲ್ಲಿ XPS15 ಮಾದರಿಯ ಪ್ರಮುಖ ಅಪ್‌ಗ್ರೇಡ್‌ಗಳಲ್ಲಿ ಸ್ಪೀಕರ್ ಪ್ಲೇಸ್‌ಮೆಂಟ್ ಕೂಡ ಒಂದಾಗಿದ್ದು, ಇದು ಕೀಬೋರ್ಡ್ ಜೊತೆಗೆ ಡಾಕ್‌ನಲ್ಲಿದೆ. ಡೆಲ್ XPS15 9500 ಡ್ಯುಯಲ್ ಮೈಕ್ರೊಫೋನ್ ಅನ್ನು ಸಹ ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ 6, ಬ್ಲೂಟೂತ್ ವಿ 5.0, ಎರಡು ಥಂಡರ್‌ಬೋಲ್ಟ್‌ 3 ಪೋರ್ಟ್‌ಗಳು ಮತ್ತು ಯುಎಸ್‌ಬಿ ಟೈಪ್-ಸಿ 3.1 ಪವರ್ ಡೆಲಿವರಿ ಮತ್ತು ಡಿಸ್‌ಪ್ಲೇ ಪೋರ್ಟ್ ಬೆಂಬಲವನ್ನು ಒಳಗೊಂಡಿದೆ. ಇದಲ್ಲದೆ, ಇದು ಟಚ್-ಅಲ್ಲದ ಆವೃತ್ತಿಯಲ್ಲಿ 56Whr ಬ್ಯಾಟರಿ ಮತ್ತು ಟಚ್‌ಸ್ಕ್ರೀನ್ ಮಾದರಿಯಲ್ಲಿ 86Whr ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ.

ಡೆಲ್ XPS17 9700

ಡೆಲ್ XPS17 9700

ಡೆಲ್ XPS17 9700 ಲ್ಯಾಪ್‌ಟಾಪ್‌ಗಳು XPS15 ಮಾದರಿಯೊಂದಿಗೆ ಕೆಲವು ಹೋಲಿಕೆಗಳನ್ನು ಹೊಂದಿದೆ. ಆದಾಗ್ಯೂ, ಇದು 17 ಇಂಚಿನ ಇನ್ಫಿನಿಟಿ ಎಡ್ಜ್ ಡಿಸ್‌ಪ್ಲೇಯನ್ನು ಹೊಂದಿದೆ. ಇದಲ್ಲದೆ ಈ ಲ್ಯಾಪ್‌ಟಾಪ್‌ ಡಾಲ್ಬಿ ವಿಷನ್ ಅನ್ನು ಬೆಂಬಲಿಸಲಿದೆ ಮತ್ತು 94% ಡಿಸಿಐ-ಪಿ 3 ಬಣ್ಣದ ಹರವನ್ನು ನೀಡಲಾಗಿದೆ. ಇನ್ನು ಇದರ ಡಿಸ್‌ಪ್ಲೇ ಸ್ಕ್ರೀನ್‌ 4K ಯುಹೆಚ್‌ಡಿ + ಟಚ್‌ಸ್ಕ್ರೀನ್ ಮತ್ತು ಪೂರ್ಣ-ಎಚ್‌ಡಿ + ನಾನ್-ಟಚ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ 10 ನೇ ತಲೆಮಾರಿನ ಇಂಟೆಲ್ ಕೋರ್ ಐ 9-10885 ಹೆಚ್ ಪ್ರೊಸೆಸರ್ ಆಯ್ಕೆಗಳನ್ನ ನೀಡಲಾಗಿದ್ದು, ಇದು ಎನ್ವಿಡಿಯಾ ಜೀಫೋರ್ಸ್ ಆರ್ಟಿಎಕ್ಸ್ 2060 ಗ್ರಾಫಿಕ್ಸ್ ಅನ್ನು ಒಳಗೊಂಡಿದೆ.

ಲ್ಯಾಪ್‌ಟಾಪ್‌

ಇನ್ನು ಈ ಡೆಲ್ XPS17 9700 ಲ್ಯಾಪ್‌ಟಾಪ್‌ ಎರಡು 1.5W ಟ್ವೀಟರ್‌ಗಳನ್ನು ಮತ್ತು ಎರಡು 2.5W ವೂಫರ್‌ಗಳನ್ನು ಹೊಂದಿದೆ. ಇದು ವೇವ್ಸ್ ಮ್ಯಾಕ್ಸ್ ಆಡಿಯೊ ಪ್ರೊ ಮತ್ತು ವೇವ್ಸ್ ಎನ್ಎಕ್ಸ್ 3 ಡಿ ಆಡಿಯೊ ಟೆಕ್ನಾಲಜಿಯೊಂದಿಗೆ ಟ್ಯೂನ್ ಆಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ 6, ಬ್ಲೂಟೂತ್ ವಿ 5.0, ನಾಲ್ಕು ಥಂಡರ್ಬೋಲ್ಟ್ 3 ಪೋರ್ಟ್‌ಗಳು ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ. ಅಲ್ಲದೆ ಇದು ಯುಎಸ್‌ಬಿ ಟೈಪ್-ಸಿ ಯಿಂದ ಯುಎಸ್‌ಬಿ-ಎ 3.0 ಮತ್ತು ಎಚ್‌ಡಿಎಂಐ 2.0 ಅಡಾಪ್ಟರ್‌ ಅನ್ನು ಸಹ ಹೊಂದಿದ್ದು, 97Whr ಬ್ಯಾಟರಿ ಪ್ಯಾಕ್ಅಪ್‌ಅನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್ನು ಡೆಲ್ XPS15 9500 ಬೆಲೆ $1,299.99 (ಸುಮಾರು ರೂ. 98,200) ರಿಂದ ಪ್ರಾರಂಭವಾಗುತ್ತದೆ , ಹಾಗೂ ಡೆಲ್ XPS17 9700 ಬೆಲೆ $ 1,499.99 (ಸರಿಸುಮಾರು 1,14,000 ರೂ.)ರಿಂದ ಪ್ರಾರಂಭವಾಗಲಿದೆ. ಇನ್ನು ಈ ಹೊಸ ಲ್ಯಾಪ್‌ಟಾಪ್‌ಗಳು ಈ ವಾರದ ಕೊನೆಯಲ್ಲಿ ಏಷ್ಯನ್ ಮತ್ತು ಯುರೋಪಿಯನ್ ಮಾರುಕಟ್ಟೆಗಳಲ್ಲಿ ಲಭ್ಯವಾಗಲಿದೆ.

Best Mobiles in India

Read more about:
English summary
Dell has expanded its notebook portfolio by launching the anticipated XPS 15 9500 (aka XPS 15 2020) and XPS 17 9700 (aka XPS 17 2020) models.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X