ಭಾರತದ ಮಾರುಕಟ್ಟೆಯಲ್ಲಿ ಡೆಲ್ XPS 17 ಲ್ಯಾಪ್‌ಟಾಪ್‌ ಬಿಡುಗಡೆ!

|

ಟೆಕ್‌ ವಲಯದಲ್ಲಿ ಸಾಕಷ್ಟು ವಿಭಿನ್ನ ಮಾದರಿಯ ಲ್ಯಾಪ್‌ಟಾಪ್‌ಗಳು ಲಭ್ಯವಿವೆ. ಹಲವು ಕಂಪೆನಿಗಳು ತಮ್ಮ ವಿವಿದ ಮಾದರಿಯ ಲ್ಯಾಪ್‌ಟಾಪ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿವೆ. ಇವುಗಳಲ್ಲಿ ಡೆಲ್‌ ಕಂಪೆನಿ ಕೂಡ ಒಂದಾಗಿದೆ. ಡೆಲ್‌ ಕಂಪೆನಿ ಅತ್ಯುತ್ತಮ ಲ್ಯಾಪ್‌ಟಾಪ್‌ ತಯಾರಕರಲ್ಲಿ ಒಂದಾಗಿದ್ದು, ಗ್ರಾಹಕರ ನೆಚ್ಚಿನ ಬ್ರಾಂಡ್‌ ಆಗಿ ಗುರುತಿಸಿಕೊಂಡಿದೆ. ಹಲವು ಲ್ಯಾಪ್‌ಟಾಪ್‌ಗಳನ್ನ ಪರಿಚಯಿಸಿರುವ ಡೆಲ್‌ ಕಂಪೆನಿ ಇದೀಗ ತನ್ನ ಹೊಸ ಡೆಲ್ XPS 17 ಲ್ಯಾಪ್‌ಟಾಪ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಡೆಲ್ XPS 17

ಹೌದು, ಡೆಲ್‌ ಕಂಪೆನಿ ತನ್ನ ಹೊಸ ಡೆಲ್ XPS 17 9700ಲ್ಯಾಪ್‌ಟಾಪ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಲ್ಯಾಪ್‌ಟಾಪ್‌ ತೆಳುವಾದ ಮತ್ತು ಹಗುರವಾದ ವಿನ್ಯಾಸವನ್ನು ಹೊಂದಿದ್ದು,ಕಳೆದ ಮೇ ತಿಂಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ಇದೀಗ ಭಾರತಕ್ಕೆ ಕಾಲಿಟ್ಟಿದೆ. ಇನ್ನು ಡೆಲ್ XPS17 ಲ್ಯಾಪ್‌ಟಾಪ್‌ ಡಿಸ್‌ಪ್ಲೇ ನಾಲ್ಕು ಬದಿಗಳಲ್ಲಿ ಸ್ಲಿಮ್ ಬೆಜೆಲ್‌ಗಳನ್ನು ಹೊಂದಿದೆ. ಅಲ್ಲದೆ ಈ ಲ್ಯಾಪ್‌ಟಾಪ್‌ ಕಾರ್ಬನ್ ಫೈಬರ್ ಕೀಬೋರ್ಡ್ ಡೆಕ್ ಹೊಂದಿದೆ. ಜೊತೆಗೆ ಈ ಲ್ಯಾಪ್‌ಟಾಪ್‌ನಲ್ಲಿ ಎನ್ವಿಡಿಯಾ ಜಿಪಿಯು ಗೇಮಿಂಗ್‌ಗೆ ಸಹಾಯ ಮಾಡುತ್ತದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಡೆಲ್ XPS17 9700

ಡೆಲ್ XPS17 9700

ಡೆಲ್ XPS17 ಲ್ಯಾಪ್‌ಟಾಪ್‌ ಮೊದಲೇ ಇನ್‌ಸ್ಟಾಲ್‌ ಮಾಡಲಾದ ವಿಂಡೋಸ್ 10 ಹೋಮ್‌ನೊಂದಿಗೆ ಬರುತ್ತದೆ. ಇದು 1,920x1,200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿರುವ 17.0-ಇಂಚಿನ ಫುಲ್‌ ಎಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ ಇನ್ಫಿನಿಟಿ ಎಡ್ಜ್ ಆಂಟಿ-ಗ್ಲೇರ್ ಡಿಸ್‌ಪ್ಲೇ ವಿನ್ಯಾಸವನ್ನು ಹೊಂದಿದ್ದು, ಇದು 16:10 ರಚನೆ ಅನುಪಾತವನ್ನು ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇ 500 ನಿಟ್‌ಗಳ ಗರಿಷ್ಠ ಬ್ರೈಟ್‌ನೆಶ್‌ ಅನ್ನು ಹೊಂದಿದೆ. ಅಲ್ಲದೆ UHD ಡಿಸ್‌ಪ್ಲೇಗೆ ಒಂದು ಆಯ್ಕೆಯೂ ಇದೆ.

ಲ್ಯಾಪ್‌ಟಾಪ್‌

ಇನ್ನು ಈ ಲ್ಯಾಪ್‌ಟಾಪ್‌ 10 ನೇ ತಲೆಮಾರಿನ ಇಂಟೆಲ್ ಕೋರ್ I7-10750H CPU, ಎನ್ವಿಡಿಯಾ ಜೀಫೋರ್ಸ್ GTX1650 T,ಅನ್ನು ಹೊಂದಿದೆ. ಅಲ್ಲದೆ 8GBRAM ಮತ್ತು 512GB M.2 PCIe NVMe SSD ಅನ್ನು ಒಳಗೊಂಡಿದೆ. ಇದಲ್ಲದೆ ಈ ಲ್ಯಾಪ್‌ಟಾಪ್‌ನ ಎರಡು 2.5W ಸ್ಟಿರಿಯೊ ವೂಫರ್‌ಗಳು ಮತ್ತು ಎರಡು 1.5W ಸ್ಟಿರಿಯೊ ಟ್ವೀಟರ್‌ಗಳು ಆಡಿಯೋವ್ಯವಸ್ಥೆಯನ್ನು ನಿರ್ವಹಿಸುತ್ತವೆ. ಜೊತೆಗೆ ಈ ಲ್ಯಾಪ್‌ಟಾಪ್‌ 97Wh ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಯಲ್ಲಿ ಡೆಲ್ XPS17 ವೈ-ಫೈ 6 , ಬ್ಲೂಟೂತ್ 5.1, ನಾಲ್ಕು ಥಂಡರ್ಬೋಲ್ಟ್ 3 ಪೋರ್ಟ್‌ಗಳು, ಫುಲ್‌ ಎಸ್‌ಡಿ ಕಾರ್ಡ್ ರೀಡರ್ ಮತ್ತು 3.5 ಎಂಎಂ ಹೆಡ್‌ಫೋನ್ / ಮೈಕ್ರೊಫೋನ್ ಕಾಂಬೊ ಜ್ಯಾಕ್ ಅನ್ನು ಒಳಗೊಂಡಿದೆ.

ಡೆಲ್ XPS17

ಇದಲ್ಲದೆ ಡೆಲ್ XPS17 ಇಂಟರ್‌ಬಿಲ್ಟ್‌ ಮುಚ್ಚಳ ಸೆನ್ಸಾರ್‌ ಸಾಮರ್ಥ್ಯದೊಂದಿಗೆ ಬರಲಿದೆ. ಇದು ಮುಚ್ಚಳವನ್ನು ತೆರೆದಾಗ ಲ್ಯಾಪ್‌ಟಾಪ್ ಸ್ವಯಂಚಾಲಿತವಾಗಿ ಆನ್ ಆಗಲು ಅನುವು ಮಾಡಿಕೊಡುತ್ತದೆ. ಸುಲಭ ಲಾಗಿನ್‌ಗಳಿಗಾಗಿ ನೀವು ವಿಂಡೋಸ್ ಹಲೋ ಮುಖ ಗುರುತಿಸುವಿಕೆಯನ್ನು ಇದರಲ್ಲಿ ಪಡೆಯಬಹುದಾಗಿದೆ. ಅಲ್ಲದೆ ಗೆಸ್ಚರ್ ಬೆಂಬಲದೊಂದಿಗೆ ಬರುವ ದೊಡ್ಡ ಟಚ್‌ಪ್ಯಾಡ್‌ನ ಮೇಲೆ ಬ್ಯಾಕ್‌ಲಿಟ್ ಕೀಬೋರ್ಡ್ ಇರಿಸಲಾಗಿದೆ. ಕೀಬೋರ್ಡ್ ಡೆಕ್ ಅನ್ನು ಕಾರ್ಬನ್ ಫೈಬರ್‌ನಿಂದ ತಯಾರಿಸಲಾಗಿದೆ, ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಭಾರತದಲ್ಲಿ ಡೆಲ್ XPS17 9700 ಬೆಲೆ

ಭಾರತದಲ್ಲಿ ಡೆಲ್ XPS17 9700 ಬೆಲೆ

ಭಾರತದಲ್ಲಿ ಡೆಲ್ XPS17 9700 ಮೂಲ ಮಾದರಿಗೆ 2,09,500 ರೂ.ಬೆಲೆಯನ್ನ ಹೊಂದಿದೆ. ಇದು ಅಮೆಜಾನ್, ಡೆಲ್ ಇಂಡಿಯಾ ವೆಬ್‌ಸೈಟ್ ಮತ್ತು ಡೆಲ್ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳ ಮೂಲಕ ಲ್ಯಾಪ್‌ಟಾಪ್ ಭಾರತದಲ್ಲಿ ಖರೀದಿಗೆ ಲಭ್ಯವಿದೆ ಎಂದು ಕಂಪನಿ ಹೇಳಿದೆ.

Best Mobiles in India

English summary
Dell XPS 17 comes with 16:10 aspect ratio display, allowing for more vertical screen space.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X