ನೋಟು ನಿಷೇಧದಿಂದಾಗಿ ಶೇ 80ರಷ್ಟು ವೃದ್ಧಿಸಿದೆ ಡಿಜಿಟಲ್ ಪಾವತಿ!!

Written By:

ಡಿಜಿಟಲ್ ಯುಗಕ್ಕೆ ಬಹುಬೇಗ ತೆರೆದುಕೊಳ್ಳುತ್ತಿರುವ ಭಾರತೀಯರ ಸಂಖ್ಯೆ ದಿನದಿಂದ ದಿನ್ನಕ್ಕೆ ವೃದ್ದಿಯಾಗುತ್ತಿದ್ದು, 2017-18ನೇ ಸಾಲಿನ ಒಂದೇ ವರ್ಷದಲ್ಲಿ ಡಿಜಿಟಲ್‌ ವಹಿವಾಟಿನ ಪ್ರಮಾಣ ಶೇ 80ರಷ್ಟು ವೃದ್ಧಿಸಿದೆ ಎಂದು ಅಧಿಕೃತ ಅಂಕಿಅಂಶಗಳು ತಿಳಿಸಿವೆ.!! ವಿಶೇಷವೆಂದರೆ, ನೋಟು ನಿಷೇಧದ ಬಳಿಕ ನಗದು ರಹಿತ ವ್ಯವಹಾರಕ್ಕೆ ಹೆಚ್ಚಿನ ಉತ್ತೇಜನ ದೊರೆತಿದೆ.!!

ಈ ವರ್ಷದ ಅಕ್ಟೋಬರ್‌ ವರೆಗೆ ನಡೆದ ಡಿಜಿಟಲ್‌ ವಹಿವಾಟಿನ ಪ್ರಮಾಣ 1,100 ಕೋಟಿಗೂ ಮೀರಿದ್ದು ,ಜೂನ್‌, ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಸರಾಸರಿ 136-138 ಕೋಟಿ ರೂ ವಹಿವಾಟು ನಡೆದಿದೆ.!! ಈ ವರ್ಷದ ಕೊನೆಗೆ ಈ ಡಿಜಿಟಲ್ ವಹಿವಾಟಿನ ಪ್ರಮಾಣ ಒಟ್ಟಾರೆ 1,800 ಕೋಟಿ ರೂ.ಗಳಿಗೆ ತಲುಪುವ ನಿರೀಕ್ಷೆಯಿದೆ ಎಂದು ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.

ನೋಟು ನಿಷೇಧದ ಬಿಸಿಯಿಂದ ಡಿಜಿಟಲ್ ವಹಿವಾಟು ವೇಗಕ್ಕೆ ಬಲಸಿಕ್ಕಂತಾಗಿದೆ ಎಂದು ಅಂಕಿಅಂಶಗಳಿಂದ ತಿಳಿದುಬಂದಿದ್ದು, ಹಾಗಾದರೆ, ಭಾರತದಲ್ಲಿ ಡಿಜಿಟಲ್ ಪಾವತಿ ವೇಗ ಎಷ್ಟಿದೆ? ಇದರಿಂದ ಜನರು ಮತ್ತು ಸರ್ಕಾರಕ್ಕೆ ಆಗುತ್ತಿರುವ ಪ್ರಯೋಜನಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಜಿಟಲ್ ವೇಗಕ್ಕೆ ನೋಟು ನಿಷೇಧ ಸಹಕಾರಿ!!

ಡಿಜಿಟಲ್ ವೇಗಕ್ಕೆ ನೋಟು ನಿಷೇಧ ಸಹಕಾರಿ!!

ನವೆಂಬರ್‌ 8ರಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನೋಟು ನಿಷೇಧ ಪ್ರಕಟಿಸಿದ ನಂತರ ಡಿಜಿಟಲ್ ಪಾವತಿ ವೇಗಕ್ಕೆ ಸಹಕಾರಿಯಾಗಿದೆ. ಪೇಟಿಎಂ, ಯುಪಿಐ, ಭೀಮ್, ಮತ್ತು ಇತರ ಮೊಬೈಲ್‌ ವ್ಯಾಲೆಟ್‌ಗಳಿಂದ ನಡೆಯುತ್ತಿರುವ ವಹಿವಾಟಿನ ಪ್ರಮಾಣ ಏರುಗತಿಯಲ್ಲಿದೆ ಎಂದು ಸಂಸತ್ತಿನ ಹಣಕಾಸು ಸ್ಥಾಯೀ ಸಮಿತಿ ವರದಿ ತಿಳಿಸಿದೆ.

ನೀಲೇಕಣಿ ಹೇಳಿಕೆ ಬೆಂಬಲಿಸಿದ ಸರ್ಕಾರ!!

ನೀಲೇಕಣಿ ಹೇಳಿಕೆ ಬೆಂಬಲಿಸಿದ ಸರ್ಕಾರ!!

ದೇಶದಲ್ಲಿ ತೆರಿಗೆಯೇತರ ಕಂದಾಯ ಆನ್‌ಲೈನ್ ವ್ಯವಸ್ಥೆಯಲ್ಲಿ 2016ರ ನವೆಂಬರ್‌ ನಂತರ ಡಿಜಿಟಲ್‌ ವಹಿವಾಟು ಶೇ 221ರಷ್ಟು ಹೆಚ್ಚಾಗಿದೆ ಮತ್ತು ಆಧಾರ್ ಆಧರಿತ ಹಣ ವರ್ಗಾವಣೆಯಿಂದ ಸರಕಾರದ ಬೊಕ್ಕಸಕ್ಕೆ ವಾರ್ಷಿಕ 900 ಕೋಟಿ ಡಾಲರ್‌ ಉಳಿತಾಯವಾಗಿದೆ ಎಂಬ ಆಧಾರ್ ರೂವಾರಿ ನಂದನ್ ನೀಲೇಕಣಿ ಅವರ ಹೇಳಿಕೆಯನ್ನು ಸರ್ಕಾರ ಬೆಂಬಲಿಸಿದೆ.!!

ಜಿಎಸ್‌ಟಿ ಆನ್‌ಲೈನ್‌ ವಿವರ!!

ಜಿಎಸ್‌ಟಿ ಆನ್‌ಲೈನ್‌ ವಿವರ!!

ಭಾರತದಲ್ಲಿ ಜಾರಿಗೆ ಬಂದ ನೂತನ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯಲ್ಲಿ ನೋಂದಾಯಿತ 72 ಲಕ್ಷ ಘಟಕಗಳ ಆನ್‌ಲೈನ್‌ ವಿವರ ಸಲ್ಲಿಕೆ ಶೇ 100ರಷ್ಟು ಪ್ರಗತಿ ದಾಖಲಿಸಿದೆ. ಕಳೆದೆರಡು ವರ್ಷಕ್ಕೆ ಹೋಲಿಸಿದೆರೆ ಆದಾಯ ತೆರಿಗೆಗೆ ಇ-ಫೈಲಿಂಗ್ ಸಲ್ಲಿಕೆ ಪ್ರಮಾಣ ಕೂಡ ಶೇ 23ರಷ್ಟು ವೃದ್ಧಿಸಿದೆ ಎಂದು ವರದಿಗಳಲ್ಲಿ ಹೇಳಲಾಗಿದೆ.!!

ಭೀಮ್ ವಹಿವಾಟಿಗೆ ತಬ್ಬಿಬ್ಬು!!

ಭೀಮ್ ವಹಿವಾಟಿಗೆ ತಬ್ಬಿಬ್ಬು!!

ಡಿಜಿಟಲ್ ಪಾವತಿಗಾಗಿ ಸರ್ಕಾರವೇ ರೂಪಿಸಿದ್ದ ಭೀಮ್-ಯುಪಿಐ ವಹಿವಾಟಿನ ಪ್ರಮಾಣದಲ್ಲಿಯೂ ಭಾರಿ ಹೆಚ್ಚಳವಾಗಿದೆ. 2017ರ ಅಕ್ಟೋಬರ್‌ ಅಂತ್ಯಕ್ಕೆ ಭೀಮ್‌-ಯುಪಿಐ ವಹಿವಾಟು 7,057 ಕೋಟಿ ರೂ.ಗಳಿಗೇರಿದೆ ಎಂದು ಅಂಕಿ ಅಂಶಗಳಿಂದ ಸ್ಪಷ್ಟಪಡಿಸಿವೆ.! ಇದೀಗ ಪ್ರತಿ ತಿಂಗಳ ಸರಾಸರಿ ಡಿಜಿಟಲ್‌ ವಹಿವಾಟಿನ ಪ್ರಮಾಣ 136-138 ಕೋಟಿಗೆ ತಲುಪಿರುವುದು ಭಾರತೀಯ ಹಣಕಾಸು ವ್ಯವಸ್ಥೆಯಲ್ಲಿ ಹೊಸ ವಹಿವಾಟಿನ ಪದ್ಧತಿ ಭದ್ರವಾಗಿ ನೆಲೆಗೊಂಡಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Demonetisation to power 80% rise in digital payments, may hit Rs 1,800 crore in 2017-18 . to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot