Home
ಸುದ್ದಿಜಾಲ

ಜುಲೈನಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ ಜಬರ್ದಸ್ತ್ ಫೋನ್‌ಗಳು! ಇಲ್ಲಿದೆ ಪಟ್ಟಿ

ಸ್ಮಾರ್ಟ್‌ಫೋನ್‌ (SmartPhones) ಕಂಪನಿಗಳು ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಒಂದೊಂದು ಹೊಸ ಹೊಸ ಮೊಬೈಲ್‌ಗಳನ್ನು ಪರಿಚಯಿಸುವ ಮೂಲಕ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಪೈಪೋಟಿ ನಡೆಸಿವೆ. ಪ್ರತೀ ತಿಂಗಳು ಹೊಸ ಹೊಸ ತಂತ್ರಜ್ಞಾನವನ್ನು ಪರಿಚಯಿಸುತ್ತಿವೆ. ಅದೇ ಸಾಲಿನಲ್ಲಿ ಜುಲೈ ತಿಂಗಳಿನಲ್ಲೂ ಅನೇಕ ದೊಡ್ಡ ದೊಡ್ಡ ಕಂಪನಿಗಳು ಮಾರುಕಟ್ಟೆಯಲ್ಲಿ ತಮ್ಮ ಮೊಬೈಲ್‌ಗಳನ್ನು ಪರಿಚಯಿಸಲು ಸಿದ್ದತೆ ಮಾಡಿಕೊಂಡಿವೆ. ಹೆಚ್ಚಿನ ಸಂಖ್ಯೆಯ ಸ್ಮಾರ್ಟ್‌ಫೋನ್‌ಗಳು ಜುಲೈ 2024 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಹ್ಯಾಂಡ್‌ಸೆಟ್‌ಗಳಲ್ಲಿ ಹೆಚ್ಚಿನವು ಮಿಡ್ ರೇಂಜರ್ ಆಗಿರುತ್ತವೆ ಮತ್ತು ಕೆಲವು ಮೊಬೈಲ್‌ಗಳು ಚೀನಾದಲ್ಲಿ ತಮ್ಮ ಮೊದಲ ಪ್ರವೇಶ ಮಾಡಲು ಸಿದ್ದವಾಗಿವೆ.

ಇದೀಗ ಬಿಡುಗಡೆಯಾಲು ಸಿದ್ದವಾಗಿರುವ ಮೊಬೈಲ್‌ಗಳಲ್ಲಿ ಕೆಲವು ಕೆಲವು ಫೋಲ್ಡಬಲ್‌ ಫೋನ್‌ಗಳು ಸಹ ಇರುವುದನ್ನು ಗಮನಿಸಬಹದುದಾಗಿದೆ. Samsung Galaxy Z Fold ಮತ್ತು Galaxy Z flip ಜೊತೆಗೆ Xiaomi ತನ್ನ ನಾಲ್ಕನೇ ಜನ್ ಫೋಲ್ಡ್ ಜೊತೆಗೆ ಅದರ ಮೊದಲ ಕ್ಲಾಮ್‌ಶೆಲ್ ಫೋಲ್ಡಬಲ್ ಅನ್ನು ಪ್ರಾರಂಭಿಸುವ ನಿರೀಕ್ಷೆ ಇದೆ. ಇದರ ಜೊತೆಗೆ ನಥಿಂಗ್‌ನ ಉಪ ಬ್ರಾಂಡ್ CMF ತನ್ನ ಮೊದಲ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ದೃಢಪಡಿಸಿದೆ.

ಜುಲೈನಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ ಜಬರ್ದಸ್ತ್ ಫೋನ್‌ಗಳು!

ಜುಲೈ 2024 ರಲ್ಲಿ ಬರಲಿರುವ ಸ್ಮಾರ್ಟ್‌ಫೋನ್‌ಗಳು (SmartPhones):

1-Red Magic 9S Pro ಸರಣಿ:
ಈ ಸರಣಿಯ ಮೊಬೈಲ್‌ಗಳನ್ನು ಚೀನಾದಲ್ಲಿ ಜುಲೈ 3 ರಂದು ಬಿಡುಗಡೆ ಮಾಡಲು ನಿರ್ಧರಿಸಿವೆ. Red Magic 9S Pro ಸರಣಿಯ ಮಿಡ್ ಜನ್ ರಿಫ್ರೆಶ್ ಆಗಿರಲಿವೆ. Red Magic 9S Pro ಮತ್ತು Red Magic 9S Pro+ ಎಂಬ ಎರಡು ಸಾಧನಗಳನ್ನು ಬಿಡುಗಡೆ ಮಾಡಲಿದ್ದು, ಇವುಗಳ ಬ್ಯಾಟರಿ ಸಾಮರ್ಥ್ಯ ಮತ್ತು ಚಾರ್ಜಿಂಗ್ ವೇಗದಲ್ಲಿ ಭಿನ್ನವಾಗಿರುವುದನ್ನು ಗಮನಿಸಬಹುದಾಗಿದೆ.
ಅವು Qualcomm Snapdragon 8 Gen 3 ಲೀಡಿಂಗ್ ಆವೃತ್ತಿಯಿಂದ ಚಾಲಿತವಾಗುತ್ತವೆ. ಈ ಚಿಪ್‌ಸೆಟ್ Galaxy S24 ಸರಣಿಯೊಳಗೆ Galaxy ಗಾಗಿ Sanapdragon 8 Gen 3 ನಂತೆ ಕಂಡುಬರುವ ಓವರ್‌ಲಾಕ್ ಮಾಡಿದ ಆವೃತ್ತಿ (3.4Ghz)ಯಾಗಿದೆ.

2-CMF Phone 1:
ನಥಿಂಗ್‌ ನ ಉಪ ಬ್ರಾಂಡ್‌ ಅಡಿಯಲ್ಲಿ ಈ ಸ್ಮಾರ್ಟ್‌ಫೋನ್‌ ಜುಲೈ 8 ರಂದು ಬಿಡುಗಡೆಯಾಗಲಿದೆ. ಈ ಸಾಧನವು MediaTek ಡೈಮೆನ್ಸಿಟಿ 7300 SoC ನಿಂದ ರನ್ ಆಗಲಿದ್ದು ಈ ರೀತಿಯ ಚಿಪ್‌ಸೆಟ್ ಒಳಗೊಂಡಿರುವ ಭಾರತದ ಮೊದಲ ಹ್ಯಾಂಡ್‌ಸೆಟ್ ಆಗಲಿದೆ. ಸೋರಿಕೆಯ ಮಾಹಿತಿ ಪ್ರಕಾರ ಇದು 6.7 ಇಂಚಿನ ಫುಲ್ HD+ 120Hz OLED ಡಿಸ್‌ಪ್ಲೇ, 50MP ಬ್ಯಾಕ್ ಕ್ಯಾಮೆರಾ, 16MP ಸೆಲ್ಫಿ ಕ್ಯಾಮೆರಾ, 5,000mAh ಬ್ಯಾಟರಿ ಮತ್ತು 33W ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದೆ.

3-Galaxy Z Fold 6 ಮತ್ತು Galaxy Z Flip 6:
ಸ್ಯಾಮ್‌ಸಂಗ್ ತನ್ನ ಬಹು ನಿರೀಕ್ಷಿತ ಫೋಲ್ಡಬಲ್ ಸಾಧನಗಳನ್ನು ಜುಲೈ 10 ರಂದು ನಡೆಯಲಿರುವ ಗ್ಯಾಲಕ್ಸಿ ಅನ್‌ಪ್ಯಾಕ್‌ ಈವೆಂಟ್‌ನಲ್ಲಿ ಬಿಡುಗಡೆ ಮಾಡಲಿದೆ. ಸಂಸ್ಥೆಯ ಮುಂಬರು ಈ ಫೋಲ್ಡಬಲ್‌ಗಳು ಅವುಗಳ ಪೂರ್ವವರ್ತಿಗಳಿಗಿಂತ ಚಿಕ್ಕದಾಗಿರುತ್ತವೆ. ಈ ಎರಡೂ ಕೂಡ Snapdragon 8 Gen 3 ಮೊಬೈಲ್ ಪ್ಲಾಟ್‌ಫಾರ್ಮ್‌ನಿಂದ ರನ್ ಆಗಲಿವೆ. ಫ್ಲಿಪ್ 6 ನೂತನ 50MP ಪ್ರಾಥಮಿಕ ಕ್ಯಾಮೆರಾ ಮತ್ತು 4,000mAh ಬ್ಯಾಟರಿಯನ್ನು ಹೊಂದಿರಲಿದೆ.

4-OPPO Reno 12 ಸರಣಿ:
OPPO Reno 12 ಸರಣಿಯು ಜುಲೈ ತಿಂಗಳಿನಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದ್ದು, ಈ ಕುರಿತು ನಿಖರವಾದ ದಿನಾಂಕ ತಿಳಿದು ಬಂದಿಲ್ಲ. ಈ ಸರಣಿಯಲ್ಲಿ ಪ್ರಮುಖವಾಗಿ Reno 12 ಮತ್ತು Reno 12 Pro ಈ ಉತ್ಪನ್ನಗಳು ತಮ್ಮ ಚೈನೀಸ್ ಮಾದರಿಗಿಂತ ಭಿನ್ನವಾಗಿರಲಿವೆ ಮತ್ತು ಹಲವಾರು AI ವೈಶಿಷ್ಟ್ಯಗಳೊಂದಿಗೆ ಬರಲಿವೆ.

ಈ ಮೊಬೈಲ್‌ಗಳು MediaTek ಡೈಮೆನ್ಸಿಟಿ 7300 ಚಿಪ್‌ಸೆಟ್‌ನಿಂದ ರನ್ ಆಗಲಿವೆ ಮತ್ತು 6.7 ಇಂಚಿನ ಫುಲ್ HD+ 120Hz OLED ಡಿಸ್‌ಪ್ಲೇಯನ್ನು ಹೊಂದಿರಲಿವೆ. ಅವುಗಳು 50MP ಮುಖ್ಯ ಕ್ಯಾಮೆರಾ ಮತ್ತು 8MP ಅಲ್ಟ್ರಾವೈಡ್ ಘಟಕವನ್ನು ಹೊಂದಿವೆ. ಆದಾಗ್ಯೂ, ಪ್ರೊ ಆವೃತ್ತಿಯು 50MP 2x ಟೆಲಿಫೋಟೋ ಸ್ನ್ಯಾಪರ್ ಮತ್ತು 50MP ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿದೆ.

5- iQOO Neo 9S Pro+:
ಈ ಮೊಬೈಲ್‌ ಅನ್ನು ಜುಲೈನಲ್ಲಿ ಚೀನಾದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು, ಸಂಸ್ಥೆಯು ನಿಖರವಾದ ಬಿಡುಗಡೆಯ ದಿನಾಂಕವನ್ನು ತಿಳಿಸಿಲ್ಲ. ಹೆಸರೇ ಸೂಚಿಸುವಂತೆ ಫೋನ್ iQOO Neo 9 Pro ನ ನವೀಕರಿಸಿದ ಆವೃತ್ತಿಯಾಗಿರಲಿದೆ. ಸೋರಿಕೆಯ ಪ್ರಕಾರ, ಇದು ವೇಗವಾಗಿ ಮಾತ್ರವಲ್ಲದೆ ಕೆಲವು ಉಪಯುಕ್ತ ವೈಶಿಷ್ಟ್ಯಗಳೊಂದಿಗೆ ಆಗಮಿಸಲಿದೆ. ಇದು Qualcomm Snapdragon 8 Gen 3 SoC, 6.78 ಇಂಚಿನ 1.5K ಫ್ಲಾಟ್ OLED ಡಿಸ್‌ಪ್ಲೇ, 50MP + 50MP ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್, 16MP ಸೆಲ್ಫಿ ಕ್ಯಾಮೆರಾ, ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು 5,500mAh ಬ್ಯಾಟರಿಯನ್ನು ಹೊಂದಿರಲಿದೆ.

6- ಹಾನರ್ 200 ಸರಣಿ:
ಈ ಸರಣಿಯ ಮೊಬೈಲ್‌ಗಳು ಕೂಡ ಜುಲೈನಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, Honor 200 ಮತ್ತು Honor 200 Pro ಎರಡನ್ನೂ ಬಿಡುಗಡೆ ಮಾಡಲಿದೆ ಎಂದು ಹೇಳಲಾಗಿದೆ. ಈ ಹ್ಯಾಂಡ್‌ಸೆಟ್‌ಗಳು 6.7 ಇಂಚಿನ 1.5K ಬಾಗಿದ OLED ಡಿಸ್‌ಪ್ಲೇ, 50MP (ವಿಡ್ತ್) +50MP (2.5x ಟೆಲಿಫೋಟೋ) + 12MP (ಅಲ್ಟ್ರಾವೈಡ್) ಟ್ರಿಪಲ್ ಕ್ಯಾಮೆರಾ ಸಿಸ್ಟಮ್ ಮತ್ತು 5,200mAh ಬ್ಯಾಟರಿಯನ್ನು ಹೊಂದಿರಲಿವೆ.

Best Mobiles in India

English summary
Along with the Samsung Galaxy Z Fold and Galaxy Z flip, Xiaomi is expected to launch its fourth-gen Fold and its first clamshell foldable. In addition, Nothing's sub-brand CMF has confirmed to launch its first smartphone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+