Home
ಸುದ್ದಿಜಾಲ

ಡಿಟೆಲ್ ನಿಂದ ವಯಾರ್‌ಲೆಸ್‌ ಸ್ಪೀಕರ್‌ ಬಿಡುಗಡೆ!.ಬೆಲೆ 2,399 ರೂ!

ಇತ್ತೀಚಿನ ದಿನಗಳಲ್ಲಿ ಬ್ಲೂಟೂತ್‌ ಸ್ಪೀಕರ್‌ಗಳ ಟ್ರೆಂಡ್‌ ಜಾಸ್ತಿಯಾಗ್ತಿದೆ. ಯಾವುದೇ ಸಮಾರಂಭವಿರಲಿ, ಸಂಗೀತ ಕಾರ್ಯಕ್ರಮವಿರಲಿ ಬ್ಲೂಟೂತ್‌ ಸ್ಪೀಕರ್‌ಗಳ ಬಳಕೆ ಆಗ್ತಾನೆ ಇದೆ. ಸದ್ಯ ಈಗಾಗ್ಲೆ ಹಲವಾರು ಕಂಪೆನಿಗಳ ಬ್ಲೂಟೂತ್‌ ಸ್ಪೀಕರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದಾಗ್ಯೂ ಡಿಟೆಲ್‌ ಕಂಪೆನಿ ತನ್ನ ಹೊಸ ಮಾದರಿಯ ವಯಾರ್‌ಲೆಸ್‌ ಬ್ಲೂಟೂತ್‌ ಸ್ಪೀಕರ್‌ ಅನ್ನ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್‌ ಮಾಡಿದೆ.

ಹೌದು

ಹೌದು, ಡಿಟೆಲ್‌ ಕಂಪೆನಿಯು ಅಮೇಜ್‌ ಹೆಸರಿನ ವಯಾರ್‌ ಲೆಸ್‌ ಬ್ಲೂಟೂತ್‌ ಸ್ಪೀಕರ್‌ ಬಿಡುಗಡೆ ಮಾಡಿದೆ. ಇದು ಆಕರ್ಷಕ ವಿನ್ಯಾಸದ ಹೊಸ ಮಾದರಿಯ ಫೀಚರ್ಸ್‌ಗಳನ್ನ ಹೊಂದಿದ್ದು, 10W ಸ್ಪೀಕರ್‌ಗಳನ್ನ ಹೊಂದಿದ್ದು, ಉತ್ತಮ ಆಡಿಯೊ ಔಟ್‌ಪುಟ್ ಜೊತೆಗೆ 60-18KHz ಆವರ್ತನ ಪ್ರತಿಕ್ರಿಯೆಯನ್ನ ಹೊಂದಿರಲಿದೆ, ಅಲ್ಲದೆ ಒಂದೇ ಸಮಯದಲ್ಲಿ ಎರಡು ಸ್ಪೀಕರ್‌ಗಳನ್ನು ಸಂಪರ್ಕಿಸಬಹುದಾದ ಅವಕಾಶವನ್ನ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

ಡಿಟೆಲ್‌

ಡಿಟೆಲ್‌ ಕಂಪೆನಿಯ ಅಮೇಜ್ ವಯಾರ್‌ಲೆಸ್ ಬ್ಲೂಟೂತ್ ಸ್ಪೀಕರ್‌ ಉತ್ತಮ ಗುಣಮಟ್ಟದ ಹೈ-ಫೈ ಧ್ವನಿ ಗುಣಮಟ್ಟವನ್ನು ಹೊಂದಿದ್ದು, ಟಿಡಬ್ಲ್ಯೂಎಸ್ ಫೀಚರ್ಸ್‌ ಅನ್ನ ಹೊಂದಿದೆ.
ಅಲ್ಲದೆ ಈ ಸ್ಪೀಕರ್ ಬ್ಲೂಟೂತ್ 5.0 ಕನೆಕ್ಟಿವಿಟಿ ಆಯ್ಕೆಯನ್ನ ಹೊಂದಿದ್ದು, ಇದು ಆಕ್ಸ್, ಯುಎಸ್‌ಬಿ, ಬಿಟಿ ಮತ್ತು ಮೆಮೊರಿ ಕಾರ್ಡ್ ಅನ್ನು ಸಹ ಬೆಂಬಲಿಸಲಿದೆ. ಇನ್ನು ಈ ಸ್ಪೀಕರ್ ಅಂಡಾಕಾರದ ಆಕಾರವನ್ನು ಹೊಂದಿದೆ, ಮುಂಭಾಗದಲ್ಲಿ ಸ್ಪೀಕರ್ ಡ್ರೈವರ್‌ಗಳು ಮತ್ತು ಮೇಲ್ಭಾಗದಲ್ಲಿಕಂಟ್ರೋಲ್‌ ಕೀ ಸಿಸ್ಟಮ್‌ ನೀಡಲಾಗಿದೆ.

 ವಯಾರ್ ಲೆಸ್

ಇನ್ನು ಈ ವಯಾರ್ ಲೆಸ್ ಬ್ಲೂಟೂತ್ ಸ್ಪೀಕರ್ ಬಳಕೆದಾರರಿಗೆ ನಿಜವಾದ ಸಂಗೀತದ ಅನುಭವ ನೀಡಲಿದೆ. ಅಲ್ಲದೆ ಸಾಕಷ್ಟು ವರ್ಷಗಳ ಸಂಗೀತದ ಅವಶ್ಯಕತೆಯನ್ನ ಗಮನದಲ್ಲಿಟ್ಟುಕೊಂಡು ಈ ಸ್ಪೀಕರ್‌ ಅನ್ನ ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ, ಅನ್ನೊ ಮಾತನ್ನ ಡಿಟೆಲ್‌ಕಂಪೆನಿಯ ಸಿಇಒ ಯೋಗೇಶ್ ಭಾಟಿಯಾ ಹೇಳಿದ್ದಾರೆ. ಅಮೆಜ್‌ ವೈಯಾರ್‌ಲೆಸ್‌ ಬ್ಲೂಟೂತ್‌ ಸ್ಪೀಕರ್‌ನಲ್ಲಿ ಉತ್ತಮ ಸೌಂಡ್‌ ಸಿಸ್ಟಮ್‌ಗೆ ಆದ್ಯತೆ ನೀಡಲಾಗಿದ್ದು, ಈ ಸ್ಪೀಕರ್‌ ಅನ್ನ ಪಾರ್ಟಿ, ಮನೆ, ಇತರೆ ಸಮಾರಂಭಗಳಲ್ಲಿ ಆರಾಮಾಗಿ ಬಳಸಬಹುದಾಗಿದೆ.

ಅಲ್ಲದೆ

ಅಲ್ಲದೆ ಈ ಸ್ಪೀಕರ್‌ ಮೈಕ್ರೊಫೋನ್‌ ಹೊಂದಿದ್ದು, ಬಳಕೆದಾರರ ಮೈಕ್ರೋಫೋನ್‌ ಮೂಲಕವೂ ಸ್ಪೀಕರ್‌ ಅನ್ನ ನಿಯಂತ್ರಿಸಬಹುದಾಗಿದೆ. ಅಲ್ಲದೆ ಇದು ವಯಾರ್‌ಲೆಸ್ ಎಫ್‌ಎಂ ರೇಡಿಯೊವನ್ನ ಸಹ ಹೊಂದಿದ್ದು, ಎಫ್‌ಎಂ ಪ್ರಿಯರು ಎಫ್‌ಎಂ ಅನ್ನು ಸಹ ಕೇಳಬಹುದಾಗಿದೆ. ಅಷ್ಟೇ ಅಲ್ಲ ಸಂಗೀತಕ್ಕೆ ತಕ್ಕಂತೆ ಧ್ವನಿ ಮಾಧುರ್ಯವನ್ನ ಬದಲಾಯಿಸುವ ಅವಕಾಶವನ್ನು ಸಹ ಇದರಲ್ಲಿ ನೀಡಲಾಗಿದೆ.

ಸ್ಪೀಕರ್‌

ಇನ್ನು ಈ ಬ್ಲೂಟೂತ್‌ ಸ್ಪೀಕರ್‌ 60 ರಿಂದ 18KHz ಆವರ್ತನ ಪ್ರತಿಕ್ರಿಯೆಯನ್ನ ಹೊಂದಿದ್ದು, 2 ಡ್ರೈವ್ ಯೂನಿಟ್‌ ಬೆಂಬಲವನ್ನ ಹೊಂದಿದೆ. ಜೊತೆಗೆ 2400 mAh 3.7V ಯ ಲಿಥಿಯಂ ಬ್ಯಾಟರಿಯನ್ನ ಹೊಂದಿದ್ದು, ಇದು 8 ಗಂಟೆಗಳ ಪ್ಲೇಬ್ಯಾಕ್ ಸಮಯ ಮತ್ತು ಸೂಪರ್ ಲಾಂಗ್ ಸ್ಟ್ಯಾಂಡ್‌ಬೈ ಅನ್ನು ಬೆಂಬಲಿಸುತ್ತದೆ. ಸದ್ಯ ಈ ಸ್ಪೀಕರ್‌ ಕಪ್ಪು ಮತ್ತು ಕೆಂಪು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದ್ದು, 2,399 ರೂ. ಬೆಲೆಯನ್ನ ಹೊಂದಿದೆ. ಫ್ಲಿಪ್‌ಕಾರ್ಟ್, ಪೇಟಿಎಂ ಮಾಲ್ ಮತ್ತು ಡೆಟೆಲ್‌ನ ವೆಬ್‌ಸೈಟ್‌ ನಲ್ಲಿ ಖರೀದಿಸಲು ಲಭ್ಯವಿದೆ.

Best Mobiles in India

English summary
It also claimed that the Bluetooth speaker will feature Hi-Fi sound quality for improved audio reproduction. In addition, the Bluetooth speaker also comes with a TWS feature that allows users to connect two speakers at the same time.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+