ದೇಶದ ವಿಮಾನಗಳಲ್ಲಿ 15 ಇಂಚಿನ 'ಮ್ಯಾಕ್‌ಬುಕ್ ಪ್ರೊ' ನಿಷೇಧ!..ಏಕೆ ಗೊತ್ತಾ?

|

ಸಿಂಗಾಪುರ್ ಏರ್‌ಲೈನ್ಸ್ ಮತ್ತು ಥಾಯ್ ಏರ್‌ವೇಸ್‌ನಂತಹ ಕೆಲವು ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನಗಳಲ್ಲಿ 'ಮ್ಯಾಕ್‌ಬುಕ್ ಪ್ರೊ' ಮಾದರಿಗಳನ್ನು ಪ್ರತ್ಯೇಕವಾಗಿ ನಿಷೇಧಿಸಿದ ನಂತರ ಇದೀಗ ಭಾರತದಲ್ಲೂ ಸಹ 'ಮ್ಯಾಕ್‌ಬುಕ್ ಪ್ರೊ' ಹಾರಾಟ ನಿಷೇಧವಾಗಿದೆ.! ದೇಶದಲ್ಲಿ ಯಾವ ವಿಮಾನ ಪ್ರಯಾಣಿಕರು ಕೂಡ ತಮ್ಮೊಂದಿಗೆ ಮ್ಯಾಕ್‌ಬುಕ್ ಪ್ರೊ ಸಾಧನವನ್ನು ಒಯ್ಯಬಾರದು ಎಂದು ವಿಮಾನ ನಿಯಂತ್ರಕ ಸಂಸ್ಥೆ ಡಿಜಿಸಿಎ ಸೋಮವಾರ ಮನವಿ ಮಾಡಿದೆ.

ದೇಶದ ವಿಮಾನಗಳಲ್ಲಿ 15 ಇಂಚಿನ 'ಮ್ಯಾಕ್‌ಬುಕ್ ಪ್ರೊ' ನಿಷೇಧ!..ಏಕೆ ಗೊತ್ತಾ?

ಹೌದು, ಆಪಲ್‌ ಕಂಪನಿಯ 15 ಇಂಚಿನ ಮ್ಯಾಕ್‌ಬುಕ್ ಪ್ರೊ ಲ್ಯಾಪ್‌ಟಾಪ್‌ಗಳ ಬ್ಯಾಟರಿಯಲ್ಲಿ ದೋಷ ಕಾಣಿಸಿಕೊಂಡಿರುವುದರಿಂದ ಹಲವು ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನಗಳಲ್ಲಿ 'ಮ್ಯಾಕ್‌ಬುಕ್ ಪ್ರೊ' ಕೊಂಡೊಯ್ಯಲು ನಿಷೇಧಿಸಿದ್ದವು. ಇದೀಗ ದೇಶದಲ್ಲೂ ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನಗಳಲ್ಲಿ 'ಮ್ಯಾಕ್‌ಬುಕ್ ಪ್ರೊ' ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಆಪಲ್ ಕಂಪನಿ, ಬ್ಯಾಟರಿ ಸುರಕ್ಷಿತವಾಗಿದೆ ಎಂದು ಖಾತ್ರಿ ನೀಡುವವರೆಗೆ ಈ ಲ್ಯಾಪ್‌ಟಾಪ್‌ಗಳನ್ನು ಕೊಂಡೊಯ್ಯುವಂತಿಲ್ಲ' ಎಂದು ಡಿಜಿಸಿಎ ಹೇಳಿದೆ.

ಆಪಲ್ ಹಳೆಯ ತಲೆಮಾರಿನ 15 ಇಂಚಿನ ಮ್ಯಾಕ್‌ಬುಕ್ ಪ್ರೊ ಲ್ಯಾಪ್‌ಟಾಪ್‌ಗಳ ಬ್ಯಾಟರಿಗಳು ಬಿಸಿಯಾಗಬಹುದು ಮತ್ತು ಸುರಕ್ಷತೆಯ ಅಪಾಯವನ್ನುಂಟುಮಾಡಬಹುದು ಎಂಬ ಆತಂಕದಿಂದಾಗಿ, ಡಿಜಿಸಿಎ ವಿನಂತಿಸುತ್ತದೆ. ಎಲ್ಲಾ ಪ್ರಯಾಣಿಕರು ಬ್ಯಾಟರಿಯನ್ನು ಸುರಕ್ಷಿತ ಎಂದು ಪ್ರಮಾಣೀಕರಿಸುವವರೆಗೆ ಅಥವಾ ಉತ್ಪಾದಕರಿಂದ ದೋಷಪೂರಿತ ಮಾದರಿ ಬದಲಾಯಿಸುವವರೆಗೆ ಸಾಮಾನು ಸರಂಜಾಮುಗಳಲ್ಲಿ ಮ್ಯಾಕ್‌ಬುಕ್ಗಳನಗನು ಪರಿಶೀಲಿಸಬಾರದು ಎಂದು ಡಿಜಿಸಿಎ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ.

ದೇಶದ ವಿಮಾನಗಳಲ್ಲಿ 15 ಇಂಚಿನ 'ಮ್ಯಾಕ್‌ಬುಕ್ ಪ್ರೊ' ನಿಷೇಧ!..ಏಕೆ ಗೊತ್ತಾ?

ಇನ್ನು 'ದೋಷ ಪತ್ತೆಯಾಗಿರುವ ಲ್ಯಾಪ್‌ಟಾಪ್‌ಗಳು 2015 ಸೆಪ್ಟೆಂಬರ್‌ನಿಂದ 2017ರ ಫೆಬ್ರುವರಿ ಅವಧಿಯಲ್ಲಿ ಮಾರಾಟವಾಗಿವೆ ಎಂದು ಆಪಲ್ ತಿಳಿಸಿದೆ' ಎಂದು ಭಾರತದ ನಾಗರಿಕ ವಿಮಾನಯಾನ ನಿಯಂತ್ರಕ ಪ್ರಾಧಿಕಾರದ ಸಿವಿಲ್ ಏವಿಯೇಷನ್‌ನ ಮಹಾನಿರ್ದೇಶಕ ಅರುಣ್ ಕುಮಾರ್ ಅವರು ಟ್ವೀಟ್ ಮಾಡಿದ್ದಾರೆ. ಹಾಗಾಗಿ, 15 ಇಂಚಿನ ಆಪಲ್ ಮ್ಯಾಕ್‌ಬುಕ್ ಪ್ರೊ ಲ್ಯಾಪ್‌ಟಾಪ್‌ಗಳ ಆಯ್ದ ಘಟಕಗಳನ್ನು ಸಾಗಿಸುವುದನ್ನು ನಿಲ್ಲಿಸುವಂತೆ ದೇಶದ ವಾಯು ಪ್ರಯಾಣಿಕರನ್ನು ಕೋರಿದ್ದಾರೆ.

ನೋಕಿಯಾ 6.1 ಪ್ಲಸ್ ಮೇಲೆ 5,000 ರೂ.ವರೆಗೆ ಬೆಲೆ ಇಳಿಕೆ!ನೋಕಿಯಾ 6.1 ಪ್ಲಸ್ ಮೇಲೆ 5,000 ರೂ.ವರೆಗೆ ಬೆಲೆ ಇಳಿಕೆ!

ಈ ವರ್ಷದ ಜೂನ್‌ನಲ್ಲಿ, ಸುರಕ್ಷತೆಯ ಅಪಾಯದ ಮೇಲೆ ಸೆಪ್ಟೆಂಬರ್ 2015 ಮತ್ತು ಫೆಬ್ರವರಿ 2017 ರ ನಡುವೆ ಮಾರಾಟವಾದ ಸೀಮಿತ ಸಂಖ್ಯೆಯ ಮ್ಯಾಕ್‌ಬುಕ್ ಪ್ರೊ ಲ್ಯಾಪ್‌ಟಾಪ್‌ಗಳನ್ನು ಸ್ವಯಂಪ್ರೇರಿತವಾಗಿ ಮರುಪಡೆಯಲು ಆಪಲ್ ಘೋಷಿಸಿತ್ತು. ಕ್ಯಾಲಿಫೋರ್ನಿಯಾ ಮೂಲದ ಕ್ಯುಪರ್ಟಿನೋ ಕಂಪನಿಯು ಗ್ರಾಹಕರಿಗೆ ತಮ್ಮ ಮ್ಯಾಕ್‌ಬುಕ್ ಪ್ರೊ ಘಟಕದ ಮೇಲೆ ಪರಿಣಾಮ ಬೀರುತ್ತದೆಯೆ ಎಂದು ಪರಿಶೀಲಿಸಲು ವೆಬ್‌ಸೈಟ್ ಅನ್ನು ಸ್ಥಾಪಿಸಿದೆ. ಈ ಲ್ಯಾಪ್‌ಟಾಪ್‌ಗಳು ದೋಷಪೂರಿತ ಬ್ಯಾಟರಿಯನ್ನು ಹೊಂದಿದ್ದು, ಅದು ಬಿಸಿಯಾಗಬಹುದು ಎಂದು ಆಪಲ್ ಹೇಳಿದೆ.

Best Mobiles in India

English summary
In June this year, Apple had announced a voluntary recall of a limited number of MacBook Pro laptops that were sold between September 2015 and February 2017 over safety risk. to. know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X