ಪೇಟಿಎಂ ಬಳಕೆದಾರರಿಗೆ ಬಿಗ್ ಶಾಕ್..ಬಳಕೆದಾರರಿಗೆ ನಂಬಿಕೆ ದ್ರೋಹ?!
ಭಾರತದ ಪ್ರಖ್ಯಾತ ಆನ್‌ಲೈನ್ ಪೇಮೆಂಟ್ ಆಪ್ ಸಂಸ್ಥೆ ಪೇಟಿಎಂ ತನ್ನ ಬಳಕೆದಾರರಿಗೆ ಶಾಕ್ ನೀಡಿದೆ. ಪ್ರಧಾನಿ ಕಚೇರಿಯಿಂದ ಕರೆ ಬಂದ ನಂತರ ಬಳಕೆದಾರರ ಮಾಹಿತಿಯನ್ನು ನಾವು ಒದಗಿಸಿದ್ದೇವೆ ಎಂದು ಪೇಟಿಎಂ ಉಪಾಧ್ಯಕ್ಷ ಅಜಯ್ ಶೇಖರ್ ಕುಟುಕು ಕಾರ್ಯಾಚರಣೆಯಲ್ಲಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿರುವುದು ಸಂಚಲನ ಸೃಷ್ಟಿಸಿದೆ.
ಕುಟುಕು ಕಾರ್ಯಾಚರಣೆಯಲ್ಲಿ ಮುನ್ನಲೆಯಲ್ಲಿರುವ ಕೋಬ್ರಾ ಪೋಸ್ಟ್'ನ ಕುಟುಕು ಕಾರ್ಯಾಚರಣೆಯಲ್ಲಿ ಪೇಟಿಎಂನ ಹಿರಿಯ ಸದಸ್ಯರಾದ ಸುಧಾಂಶು ಗುಪ್ತಾ ಹಾಗು ಹಿರಿಯ ಉಪಾಧ್ಯಕ್ಷ ಅಜಯ್ ಶೇಖರ್ ಶರ್ಮಾ ಮಾತನಾಡಿರುವುದು ಸೆರೆಯಾಗಿದೆ ಎನ್ನಲಾಗಿದೆ. ಬಳಕೆದಾರರ ಮಾಹಿತಿ ನೀಡಿರುವುದಾಗಿ 'ಕೋಬ್ರಾ ಪೋಸ್ಟ್'ಗೆ ಇವರೀರ್ವರು ಮಾಹಿತಿ ಬಿಟ್ಟುಕೊಟ್ಟಿದ್ದಾರೆ.

ನಮಗೆ ಪ್ರಧಾನಿ ಕಚೇರಿಯಿಂದ ನನಗೇ ಕರೆ ಬಂದಿತ್ತು, ಕೆಲ ಕಲ್ಲುತೂರಾಟಗಾರರು ಪೇಟಿಎಂ ಬಳಕೆದಾರರು ಆಗಿರಬಹುದು ಎಂದು ಹೇಳಿ ಡಾಟಾ ನೀಡುವಂತೆ ನನ್ನಲ್ಲಿ ಹೇಳಲಾಯಿತು ಎಂದು ಪೇಟಿಎಂ ಉಪಾಧ್ಯಕ್ಷ ಅಜಯ್ ಶೇಖರ್ ಕುಟುಕು ಕಾರ್ಯಾಚರಣೆಯಲ್ಲಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿರುವ ಸುದ್ದಿ ಈಗ ದೇಶದಾಧ್ಯಂತ ವೈರಲ್ ಆಗಿದೆ.
"ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವಾಗ ಕಲ್ಲುತೂರಾಟ ನಿಂತಿತ್ತೋ, ಆ ಸಂದರ್ಭ ನನಗೆ ಪ್ರಧಾನಿ ಕಚೇರಿಯಿಂದ ಕರೆ ಬಂದಿತ್ತು. ಕೆಲ ಕಲ್ಲು ತೂರಾಟಗಾರರು ಪೇಟಿಎಂ ಬಳಕೆದಾರರು ಆಗಿರಬಹುದು ಎಂದು ನನಗೆ ಕರೆಯಲ್ಲಿ ತಿಳಿಸಲಾಗಿತ್ತು. ನಿಮಗೆ ಅರ್ಥವಾಯಿತೇ?" ಎಂದು ಹೇಳಿರುವುದು 'ಕೋಬ್ರಾ ಪೋಸ್ಟ್' ಕುಟುಕು ಕಾರ್ಯಾಚರಣೆಯಲ್ಲಿ ಸೆರೆಯಾಗಿದೆ.

ಈ ವರೆಗೂ ಹಣದ ಆಸೆಗೆ ಬಳಕೆದಾರರ ಮಾಹಿತಿಯನ್ನು ಮಾರಿಕೊಳ್ಳುತ್ತಿದ್ದ ಆನ್‌ಲೈನ್ ಕಂಪೆನಿಗಳು ಈಗ ಇತರೆ ಉದ್ದೇಶಗಳಿಗಾಗಿ ಬಳಕೆದಾರರ ಮಾಹಿತಿಯನ್ನು ಮಾರಿಕೊಳ್ಳುತ್ತಿರುವ ಅನುಮಾನ ಈಗ ಶುರುವಾಗಿದೆ. ಏನೇ ಆದರೂ ಪೇಟಿಎಂ ಪೇಟಿಎಂ ಉಪಾಧ್ಯಕ್ಷ ಅಜಯ್ ಶೇಖರ್ ಅವರ ಮಾತು ನಿಜವಾಗಿದ್ದರೆ, ಖಾಸಾಗಿತನ ಎಂಬುದನ್ನು ಎಲ್ಲರೂ ಮರೆಯಬೇಕಾಗುತ್ತದೆ


Click it and Unblock the Notifications








