ವಾಟ್ಸಾಪ್‌ನಲ್ಲಿ ಫೇಕ್‌ ಲೈವ್‌ ಲೊಕೇಶನ್‌ ಶೇರ್‌ ಮಾಡುವುದು ಹೇಗೆ?

|

ವಾಟ್ಸಾಪ್‌ ವಿಶ್ವದಲ್ಲಿಯೇ ಅತಿ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ವಾಟ್ಸಾಪ್‌ ಒಳಗೊಂಡಿರುವ ಹಲವು ಅನುಕೂಲಕರ ಫೀಚರ್ಸ್‌ಗಳ ಬಳಕೆದಾರರ ಗಮನ ಸೆಳೆದಿದೆ. ಅನುಕೂಲಕರ ಫೀಚರ್ಸ್‌ಗಳನ್ನು ಹೊಂದಿರುವುದರಿಂದಲೇ ವಾಟ್ಸಾಪ್‌ ತನ್ನ ಪ್ರಖ್ಯಾತಿಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಇದೇ ಕಾರಣಕ್ಕೆ ವಾಟ್ಸಾಪ್‌ ನಮ್ಮ ಜೀವನದಲ್ಲಿ ಒಂದು ಅವಿಭಾಜ್ಯ ಅಂಗ ಎನಿಸಿಬಿಟ್ಟಿದೆ. ಇನ್ನು ವಾಟ್ಸಾಪ್‌ನಲ್ಲಿರುವ ಕೆಲವು ಫೀಚರ್ಸ್‌ಗಳನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ಬಳಸುವುದಕ್ಕೂ ಕೂಡ ಅವಕಾಶವಿದೆ.

ಲೊಕೇಶನ್

ಹೌದು, ವಾಟ್ಸಾಪ್‌ನಲ್ಲಿರುವ ಅನೇಕ ಫೀಚರ್ಸ್‌ಗಳು ಸಾಕಷ್ಟು ಅನುಕೂಲಕರವಾಗಿದೆ. ಈ ಪೈಕಿ ಲೊಕೇಶನ್ ಶೇರ್‌ ಫೀಚರ್ಸ್‌ ಕೂಡ ಸೇರಿದೆ. ಅಗತ್ಯ ಸಂದರ್ಭಗಳಲ್ಲಿ ನಿಮ್ಮ ಸ್ನೇಹಿತರಿಗೆ ಅಥವಾ ನಿಮ್ಮ ಕುಟುಂಬಸ್ಥರ ಜೊತೆ ನೀವಿರುವ ಸ್ಥಳದ ಲೈವ್‌ ಲೊಕೇಶನ್‌ ಶೇರ್‌ ಮಾಡಬಹುದು. ಇದರಿಂದ ನೀವು ಎಲ್ಲಿದ್ದೀರಾ ಅನ್ನೊದು ತಿಳಿಯಲಿದೆ. ಆದರೆ ಕೆಲವು ಸಂದರ್ಭಗಳಲ್ಲಿ ನಿಮ್ಮ ಸ್ನೇಹಿತರನ್ನು ಯಾಮಾರಿಸಲು ನಕಲಿ ಲೈವ್‌ ಲೊಕೇಶನ್‌ ಅನ್ನು ಕೂಡ ಶೇರ್‌ ಮಾಡಬಹುದು. ಹಾಗಾದ್ರೆ ವಾಟ್ಸಾಪ್‌ನಲ್ಲಿ ನಕಲಿ ಲೈವ್‌ ಲೊಕೇಶನ್‌ ಶೇರ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಅನ್ನು ಹೆಚ್ಚಿನ ಜನರು ಸಂದೇಶ ವಿನಿಮಯ, ವಾಯ್ಸ್‌ ಹಾಗೂ ವಿಡಿಯೋ ಕಾಲ್‌ ಮಾಡುವುದಕ್ಕಾಗಿ ಬಳಸುತ್ತಾರೆ. ಅಗತ್ಯ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿ ವಾಟ್ಸಾಪ್‌ ಗುರುತಿಸಿಕೊಂಡಿದೆ. ಆದರಿಂದ ಎಲ್ಲಿಯಾದರೂ ಹೋಗುವಾಗ ವಾಟ್ಸಾಪ್‌ ಲೈವ್‌ ಲೊಕೇಶನ್‌ ಶೇರ್‌ ಮಾಡುವುದಕ್ಕೆ ಸ್ನೇಹಿತರು ಹೇಳುತ್ತಾರೆ. ಸ್ನೇಹಿತರ ನಡುವೆ ಮಾತ್ರವಲ್ಲ ಕುಟುಂಬಸ್ಥರ ನಡುವೆ ಕೂಡ ಆಗಾಗ ಲೈವ್‌ ಲೊಕೇಶನ್‌ ಶೇರ್‌ ಆಗೋದು ಉಂಟೂ. ಇದರಿಂದ ನೀವಿರುವ ಸ್ಥಳದ ಮಾಹಿತಿ ಸುಲಭವಾಗಿ ತಿಳಿಯಲಿದೆ. ಹಾಗೆಯೇ ಕೆಲವು ಸಂದರ್ಭದಲ್ಲಿ ನಕಲಿ ಲೊಕೇಶನ್‌ ಕಳುಹಿಸುವುದಕ್ಕೂ ಕೂಡ ದಾರಿಯಿದೆ.

ವಾಟ್ಸಾಪ್‌

ವಾಟ್ಸಾಪ್‌ನಲ್ಲಿ ನಿಮ್ಮ ಸ್ನೇಹಿತರಿಗೆ ನಕಲಿ ಲೈವ್‌ ಲೊಕೇಶನ್‌ ಕಳುಹಿಸುವುದಕ್ಕೆ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ ಅಗತ್ಯವಿದೆ. ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ mock location app ಅನ್ನು ಬಳಸಬಹುದಾಗಿದೆ. ಇವುಗಳನ್ನು ಆಕ್ಟಿವ್ ಮಾಡಿದ ನಂತರ ನಿಮ್ಮ ವಾಟ್ಸಾಪ್‌ನಲ್ಲಿ ನಕಲಿ ಲೈವ್‌ ಲೊಕೇಶನ್‌ ಶೇರ್‌ ಮಾಡುವುದು ಸಾದ್ಯವಾಗಲಿದೆ. ಜೊತೆಗೆ ವಾಟ್ಸಾಪ್‌ನಲ್ಲಿ ನಿಮಗೆ ಬೇಕಾದ ಸ್ಥಳದ ಹೆಸರನ್ನು ಟೈಪ್‌ ಮಾಡಿ ಫೇಕ್‌ ಲೊಕೇಶನ್‌ ಸೆಂಡ್‌ ಮಾಡಬಹುದು. ವಾಟ್ಸಾಪ್‌ನಲ್ಲಿ ನಕಲಿ ಲೊಕೇಶನ್‌ ಕಳುಹಿಸುವುದಕ್ಕೆ ಕೆಳಗಿನ ಹಂತಗಳನ್ನು ಅನುಸರಿಸಿ.

ವಾಟ್ಸಾಪ್‌ನಲ್ಲಿ ಫೇಕ್‌ ಲೈವ್‌ ಲೊಕೇಶನ್‌ ಶೇರ್‌ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ಫೇಕ್‌ ಲೈವ್‌ ಲೊಕೇಶನ್‌ ಶೇರ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ಗೂಗಲ್‌ ಪ್ಲೇ ಸ್ಟೋರ್‌ನಿಂದ GPS ಎಮ್ಯುಲೇಟರ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ
ಹಂತ:2 ನಂತರ ನಿಮ್ಮ ಫೋನ್‌ನಲ್ಲಿ ಡೆವಲಪರ್ ಆಯ್ಕೆಯನ್ನು ಆಕ್ಟಿವ್‌ ಮಾಡಿರಿ.
ಹಂತ:3 ಇದೀಗ ಸೆಟ್ಟಿಂಗ್ಸ್‌ಗೆ ಹೋಗಿ
ಹಂತ:4 ಇದಾದ ನಂತರ ಡೆವಲಪರ್ ಆಯ್ಕೆಗಳ ಮೇಲೆ ಟ್ಯಾಪ್ ಮಾಡಿ ಮತ್ತು "mock location app'' ಆಯ್ಕೆಮಾಡಿ
ಹಂತ:5 ಇದೀಗ ಅಪ್ಲಿಕೇಶನ್ ತೆರೆಯಿರಿ, ಸರ್ಚ್‌ ಬಾರ್‌ನಲ್ಲಿ ನಿಮ್ಮ ಫೇಕ್‌ ಲೊಕೇಶನ್‌ ಹೆಸರನ್ನು ಟೈಪ್ ಮಾಡಿ
ಹಂತ:6 ನಂತರ ಕೆಳಭಾಗದಲ್ಲಿರುವ ಹಸಿರು ಬಟನ್ ಮೇಲೆ ಟ್ಯಾಪ್ ಮಾಡುವ ಮೂಲಕ GPS ಎಮ್ಯುಲೇಟರ್ ಅನ್ನು ಆನ್ ಮಾಡಿ.
ಹಂತ:7 ಇದಾದ ನಂತರ ವಾಟ್ಸಾಪ್‌ನಲ್ಲಿ ಚಾಟ್ ತೆರೆಯಿರಿ
ಹಂತ:8 ವಾಟ್ಸಾಪ್‌ ಚಾಟ್‌ನಲ್ಲಿ ಲೊಕೇಶನ್‌ ಮೇಲೆ ಟ್ಯಾಪ್ ಮಾಡಿ
ಹಂತ:9 ಲೈವ್ ಲೊಕೇಶನ್‌ ಅನ್ನು ಶೇರ್‌ ಮಾಡಿ.
ಹಂತ:10 ಈಗಾಗಲೇ mock location appನಲ್ಲಿ ಫೇಕ್‌ ಲೊಕೇಶನ್‌ ಹೆಸರು ಟೈಪ್‌ ಮಾಡಿರೊದ್ರಿಂದ ನಿಮ್ಮ ಸ್ನೇಹಿತರಿಗೆ ಇಲ್ಲಿ ನಕಲಿ ಲೊಕೇಶನ್‌ ಆಗಲಿದೆ.

ಹೀಗೆ ಮಾಡುವ ಮೂಲಕ ನಿಮ್ಮ ಸ್ನೇಹಿತರಿಗೆ ನಕಲಿ ಲೈವ್‌ ಲೊಕೇಶನ್‌ ಅನ್ನು ಶೇರ್‌ ಮಾಡಬಹುದಾಗಿದೆ. ಇನ್ನು ಎಲ್ಲರಂತೆ ಸಾಮಾನ್ಯವಾಗಿ ನಿಜವಾದ ಲೈವ್‌ ಲೊಕೇಶನ್‌ ಶೇರ್‌ ಮಾಡುವುದು ಹೇಗೆ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ವಾಟ್ಸಾಪ್‌ನಲ್ಲಿ ಸರಿಯಾದ ಲೈವ್ ಲೊಕೇಶನ್‌ ಶೇರ್‌ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ಸರಿಯಾದ ಲೈವ್ ಲೊಕೇಶನ್‌ ಶೇರ್‌ ಮಾಡುವುದು ಹೇಗೆ?

ಹಂತ:1 ನಿಮ್ಮ ಫೋನ್‌ನ ಸೆಟ್ಟಿಂಗ್‌ಗಳಲ್ಲಿ ವಾಟ್ಸಾಪ್‌ಗಾಗಿ ಲೊಕೇಶನ್‌ ಅನುಮತಿಗಳನ್ನು ಸಕ್ರಿಯಗೊಳಿಸಿ
ಹಂತ:2 ಇದಕ್ಕಾಗಿ ಅಪ್ಲಿಕೇಶನ್‌ಗಳು ಮತ್ತು ಅಧಿಸೂಚನೆಗಳಿಗೆ ಹೋಗಿ
ಹಂತ:3 ಇದರಲ್ಲಿ ಅಡ್ವಾನ್ಸ್ಡ್‌ ಮೇಲೆ ಟ್ಯಾಪ್ ಮಾಡಿ
ಹಂತ:4 ನಂತರ ಅಪ್ಲಿಕೇಶನ್ ಅನುಮತಿಗಳನ್ನು ಟ್ಯಾಪ್ ಮಾಡಿ
ಹಂತ:5 ಲೊಕೇಶನ್‌ ಕ್ಲಿಕ್ ಮಾಡಿ
ಹಂತ:6 ವಾಟ್ಸಾಪ್‌ ಅನ್ನು ಆನ್ ಮಾಡಿ
ಹಂತ:7 ಇದೀಗ ನೀವು ಯಾರಿಗೆ ಲೊಕೇಶನ್‌ ಶೇರ್‌ ಮಾಡಬೇಕೋ ಆ ಚಾಟ್‌ ತೆರಯಿರಿ.
ಹಂತ:8 ಲೊಕೇಶನ್‌ ಚಿಹ್ನೆ ಮೇಲೆ ಟ್ಯಾಪ್‌ ಮಾಡಿ
ಹಂತ:9 ಇದೀಗ ನೀವು ನಿಮ್ಮ ಲೈವ್ ಲೊಕೇಶನ್‌ ಶೇರ್‌ ಮಾಡಲು ಬಯಸುವ ಸಮಯವನ್ನು ಆಯ್ಕೆಮಾಡಿ.
ಹಂತ:10 ನಂತರ ಸೆಂಡ್‌ ಟ್ಯಾಪ್‌ ಮಾಡಿ.

ಲೊಕೇಶನ್‌

ಇನ್ನು ವಾಟ್ಸಾಪ್‌ನಲ್ಲಿ ಲೊಕೇಶನ್‌ ಶೇರ್‌ ಮಾಡುವ ಫೀಚರ್ಸ್‌ ಸಾಕಷ್ಟು ಉಪಯುಕ್ತವಾಗಿದೆ. ಅತಿ ಅಗತ್ಯ ಎನಿಸಿದರೆ ಮಾತ್ರ ನಕಲಿ ಲೊಕೇಶನ್‌ ಶೇರ್‌ ಮಾಡೊದು ಒಳಿತು. ಇನ್ನುಳಿದಂತೆ ವಾಟ್ಸಾಪ್‌ಗಾಗಿ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳನ್ನು ಬಳಸುವಾಗ ಎಚ್ಚರಿಕೆ ವಹಿಸುವುದು ಅಗತ್ಯ. ಏಕೆಂದರೆ ವಾಟ್ಸಾಪ್‌ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಶನ್‌ ಅನ್ನು ಹೊಂದಿದೆ. ಆದರೆ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳನ್ನು ಬಳಸಿದರೆ ನಿಮ್ಮ ಡೇಟಾ ಮಾಹಿತಿ ಕದಿಯುವ ಸಾದ್ಯತೆ ಇರುತ್ತದೆ.

ವಾಟ್ಸಾಪ್‌ನಲ್ಲಿ ನಿಮ್ಮ ಕರೆಂಟ್‌ ಲೊಕೇಶನ್‌ ಅನ್ನು ಶೇರ್‌ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ನಿಮ್ಮ ಕರೆಂಟ್‌ ಲೊಕೇಶನ್‌ ಅನ್ನು ಶೇರ್‌ ಮಾಡುವುದು ಹೇಗೆ?

ಇದಲ್ಲದೆ ವಾಟ್ಸಾಪ್‌ನಲ್ಲಿ ಕರೆಂಟ್‌ ಲೊಕೇಶನ್‌ ಅನ್ನು ಕೂಡ ಶೇರ್‌ ಮಾಡಬಹುದಾಗಿದೆ. ಇದಕ್ಕಾಗಿ ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ:1 ನಿಮ್ಮ ವಾಟ್ಸಾಪ್ ಅಪ್ಲಿಕೇಶನ್ ತೆರೆಯಿರಿ.
ಹಂತ:2 ನೀವು ಸ್ಥಳವನ್ನು ಕಳುಹಿಸಲು ಬಯಸುವ ನಿರ್ದಿಷ್ಟ ವ್ಯಕ್ತಿಯ ಚಾಟ್‌ ತೆರೆಯಿರಿ.
ಹಂತ:3 ನೀವು ಟೈಪ್ ಮಾಡುವ ಪೆಟ್ಟಿಗೆಯಲ್ಲಿ, ಪೇಪರ್‌ಕ್ಲಿಪ್ ಚಿತ್ರದ ಮೇಲೆ ಕ್ಲಿಕ್ ಮಾಡಿ(ಕ್ಯಾಮೆರಾದ ಚಿತ್ರದ ಪಕ್ಕದಲ್ಲಿ).
ಹಂತ:4 ನಂತರ ಲೊಕೇಶನ್‌ ಆಯ್ಕೆಯನ್ನು ಟ್ಯಾಪ್ ಮಾಡಿ. ಪಾಪ್ಅಪ್ ನಂತರ ನಿಮ್ಮ ಕರೆಂಟ್‌ ಲೊಕೇಶನ್‌ ಹಂಚಿಕೊಳ್ಳಲು ನಿಮ್ಮನ್ನು ಕೇಳುತ್ತದೆ.
ಹಂತ:5 ಈಗ, ನಿಮ್ಮ ಕರೆಂಟ್‌ ಲೊಕೇಶನ್‌ ಸೆಂಡ್‌ ಆಯ್ಕೆಯನ್ನು ಟ್ಯಾಪ್ ಮಾಡಿ.

Best Mobiles in India

English summary
Did you know your contacts can share fake live location on WhatsApp?.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X