ಯೂಟ್ಯೂಬ್ ಚಾನಲ್‌ಗಳಿಂದ 2020ರಲ್ಲಿ ಭಾರತಕ್ಕೆ ಬಂದ ಆದಾಯ ಎಷ್ಟು ಗೊತ್ತಾ?
ಗೂಗಲ್‌ನ ಜನಪ್ರಿಯ ಸೇವೆಗಳಲ್ಲಿ ಯೂಟ್ಯೂಬ್ ಕೂಡ ಒಂದಾಗಿದೆ. ಯೂಟ್ಯೂಬ್ ಜನಪ್ರಿಯ ವೀಡಿಯೋ ಪ್ಲಾಟ್‌ಫಾರ್ಮ್ ಆಗಿದ್ದು, ಬಳಕೆದಾರರು ತಮ್ಮದೇ ಆದ ಯೂಟ್ಯೂಬ್ ಚಾನಲ್ ಕ್ರಿಯೆಟ್ ಮಾಡುವ ಮೂಲಕ ಹಣಗಳಿಸುವುದಕ್ಕೂ ಅವಕಾಶವಿದೆ. ಇದೇ ಕಾರಣಕ್ಕೆ ಪ್ರಸ್ತುತ ದಿನಗಳಲ್ಲಿ ಯೂಟ್ಯೂಬ್ ಚಾನಲ್‌ಗಳನ್ನು ನಡೆಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಆಕ್ಸ್‌ಫರ್ಡ್ ಎಕನಾಮಿಕ್ಸ್ ಬಿಡುಗಡೆ ಮಾಡಿರುವ ವರದಿ ಪ್ರಕಾರ ಯೂಟ್ಯೂಬ್‌ನ ಕ್ರಿಯೆಟರ್ ಎಕೋ ಸಿಸ್ಟಂ 2020ರಲ್ಲಿ ಭಾರತೀಯ ಜಿಡಿಪಿಗೆ ರೂ 6,800 ಕೋಟಿ ಕೊಡುಗೆ ನೀಡಿದೆ ಎಂದು ಹೇಳಿದೆ.

ಹೌದು, ಯೂಟ್ಯೂಬ್ ಚಾನಲ್ ಎಂದು ಮೂಗು ಮುರಿಯುವವರು ಈ ಸ್ಟೋರಿಯನ್ನು ಓದಲೇಬೇಕು. ಯೂಟ್ಯೂಬ್ ಚಾನಲ್ ನಡೆಸುತ್ತಿರುವವರು ಕೂಡ ಈ ಸುದ್ದಿಯನ್ನು ಓದಲೇಬೇಕು. ಏಕೆಂದರೆ 2020ರಲ್ಲಿ ಭಾರತೀಯ ಜಿಡಿಪಿಗೆ ರೂ 6,800 ಕೋಟಿ ಕೊಡುಗೆ ಯೂಟ್ಯೂಬ್ ಕ್ರಿಯೆಟರ್ ಎಕೋ ಸಿಸ್ಟಂ ಕಡೆಯಿಂದ ಬಂದಿದೆ ಎನ್ನಲಾಗಿದೆ. ಅಲ್ಲದೆ 2020ರಲ್ಲಿ ಭಾರತದಲ್ಲಿ 6,83,900 ನಷ್ಟು ಫುಲ್ ಟೈಂ ಸಮಾನ ಉದ್ಯೋಗಗಳನ್ನು ಯೂಟ್ಯೂಬ್ ಬೆಂಬಲಿಸಲಿದೆ ಎಂದು ವರದಿಯಾಗಿದೆ. ಹಾಗಾದ್ರೆ ಯೂಟ್ಯೂಬ್‌ನಿಂದ ಈ ಪರಿಯ ಕೊಡುಗೆ ದೊರೆಯಲು ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಯೂಟ್ಯೂಬ್, ಸ್ವತಂತ್ರ ಸಲಹಾ ಸಂಸ್ಥೆಯಾದ ಆಕ್ಸ್‌ಫರ್ಡ್ ಎಕನಾಮಿಕ್ಸ್‌ನಿಂದ ಹೊಸ ವರದಿಯನ್ನು ಅನಾವರಣಗೊಳಿಸಿದೆ. ಈ ವರದಿಯಲ್ಲಿ 2020ರಲ್ಲಿ ಭಾರತೀಯ ಜಿಡಿಪಿಗೆ ರೂ 6,800 ಕೋಟಿ ಕೊಡುಗೆ ಯೂಟ್ಯೂಬ್ ಚಾನಲ್‌ಗಳಿಂದ ಬಂದಿದೆ ಎಂದು ಹೇಳಲಾಗಿದೆ. ಅಲ್ಲದೆ ಭಾರತದಲ್ಲಿ 1,00,000 ಚಂದಾದಾರರನ್ನು ಹೊಂದಿರುವ ಚಾನಲ್‌ಗಳ ಸಂಖ್ಯೆಯು ಈಗ 40,000 ರಷ್ಟಿದೆ ಎಂದು ವರದಿಯಾಗಿದೆ. ಇವುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ 45% ಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ಸಾಧಿಸಿದೆ ಎಂದು ವರದಿಯಾಗಿದೆ. ಅದರಲ್ಲೂ ಹೆಚ್ಚಿನ ಭಾರತೀಯ YouTube ರಚನೆಕಾರರು ವೇದಿಕೆಯಲ್ಲಿ ಅವಕಾಶಗಳನ್ನು ಮತ್ತು ಪ್ರೇಕ್ಷಕರನ್ನು ಹುಡುಕುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇನ್ನು ದೇಶದಲ್ಲಿ ಯೂಟ್ಯೂಬ್ ಕ್ರಿಯೆಟರ್ ಎಕೋ ಸಿಸ್ಟಂ ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಸಾಂಸ್ಕೃತಿಕ ಪ್ರಭಾವದ ಮೇಲೆ ಪ್ರಭಾವ ಬೀರುವ ಮೃದು-ಶಕ್ತಿಯಾಗಿ ಹೊರಹೊಮ್ಮುವ ಸಾಮರ್ಥ್ಯವನ್ನು ಹೊಂದಿದೆ. ನಮ್ಮ ರಚನೆಕಾರರು ಮತ್ತು ಕಲಾವಿದರು ಜಾಗತಿಕ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸುವ ಮುಂದಿನ ಪೀಳಿಗೆಯ ಮಾಧ್ಯಮವನ್ನು ನಿರ್ಮಿಸುವುದರಿಂದ ಆರ್ಥಿಕತೆಯ ಒಟ್ಟಾರೆ ಯಶಸ್ಸಿನ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ ಎಂದು APAC, YouTube ಪಾಲುದಾರಿಕೆಗಳ ಪ್ರಾದೇಶಿಕ ನಿರ್ದೇಶಕ ಅಜಯ್ ವಿದ್ಯಾಸಾಗರ್ ಹೇಳಿದ್ದಾರೆ. ಅಲ್ಲದೆ ಈ ವರದಿಯು ಭಾರತದಲ್ಲಿ ಯೂಟ್ಯೂಬ್ ಎಕೋ ಸಿಸ್ಟಂಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಣಾಮಗಳನ್ನು ಅನ್ಪ್ಯಾಕ್ ಮಾಡಲು ಇದು ಮೊದಲನೆಯದು ಎಂದು ಹೇಳಲಾಗಿದೆ.

ಇದಲ್ಲದೆ ಭಾರತದಲ್ಲಿ, 80% ಕ್ಕಿಂತ ಹೆಚ್ಚು ಸೃಜನಶೀಲ ಉದ್ಯಮಿಗಳು ವೇದಿಕೆಯು ತಮ್ಮ ವೃತ್ತಿಪರ ಗುರಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ. ಇನ್ನು ಯೂಟ್ಯೂಬ್‌ನಲ್ಲಿ ಚಾನಲ್ ಕ್ರಿಯೆಟರ್ಸ್‌ಗಳು ತಮ್ಮ ವಿಷಯದ ಮೂಲಕ ಹಣಗಳಿಸಲು ಯೂಟ್ಯೂಬ್ ಎಂಟು ವಿಭಿನ್ನ ಮಾರ್ಗಗಳನ್ನು ನೀಡುತ್ತಿದೆ. ಇದರಲ್ಲಿ ಆರು ಅಂಕಿ ಅಥವಾ ಅದಕ್ಕಿಂತ ಹೆಚ್ಚಿನ ಆದಾಯವನ್ನು ಗಳಿಸುವ ಯೂಟ್ಯೂಬ್ ಚಾನಲ್‌ಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ 60% ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿವೆ ಎಂದು ವರದಿಯಾಗಿದೆ.

ಸದ್ಯ ಯೂಟ್ಯೂಬ್ ಪ್ಲಾಟ್‌ಫಾರ್ಮ್ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳಿಗೆ ಪ್ರಮುಖವಾಗಿದೆ. ಯೂಟ್ಯೂಬ್‌ನಲ್ಲಿ ತಮ್ಮದೇ ಆದ ಚಾನಲ್ ಮೂಲಕ, ಉದ್ದೇಶಿತ ಜಾಹೀರಾತುಗಳು ಅಥವಾ ಯೂಟ್ಯೂಬ್ ವಿಷಯವನ್ನು ವೀಕ್ಷಿಸುವುದರಿಂದ, ವ್ಯಾಪಾರಗಳು ಯಶಸ್ವಿಯಾಗಿ ಮಾರಾಟವನ್ನು ಹೆಚ್ಚಿಸಿವೆ ಮತ್ತು ಗ್ರಾಹಕರೊಂದಿಗೆ ಹೆಚ್ಚಿನ ಸಂಪರ್ಕ ಹೊಂದುವುದಕ್ಕೆ ಕಾರಣವಾಗಿದೆ. ಇದರಿಂದ ಯೂಟ್ಯೂಬ್ ಚಾನಲ್‌ಗಳ ಮೂಲಕ ತಮ್ಮ ಪ್ರಾಡಕ್ಟ್‌ಗಳ ಬಗ್ಗೆ ಹೆಚ್ಚಿನ ಜನರು ಮಾಹಿತಿ ನೀಡುವುದರಿಂದ 92% ಸಣ್ಣ ಮತ್ತು ಮಧ್ಯಮ ವ್ಯವಹಾರಗಳು ಹೊಸ ಪ್ರೇಕ್ಷಕರನ್ನು ತಲುಪಲು ಯೂಟ್ಯೂಬ್ ಚಾನಲ್ ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.


Click it and Unblock the Notifications








