Home
ಸುದ್ದಿಜಾಲ

ನೀವು ಬಳಸುವ ಯುಎಸ್‌ಬಿ ಮತ್ತು ಕೇಬಲ್​ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ಇಂದು ತಂತ್ರಜ್ಞಾನದ ಬಳಕೆ ಹೆಚ್ಚಾಗಿದೆ. ನಾವು ಸಾಮಾನ್ಯವಾಗಿ ಯುಎಸ್‌ಬಿ (USB) ಹಾಗೂ ಕೇಬಲ್‌ಗಳನ್ನು (Cables) ಬಳಸುತ್ತೇವೆ. ಎಲ್ಲಾ ಯುಎಸ್‌ಬಿ ಕೇಬಲ್‌ಗಳು (USB Cables) ಒಂದೇ ಆಗಿವೆ ಅಂದುಕೊಂಡಿರುತ್ತೇವೆ. ಉತ್ಪಾದಕರು ಬೆಲೆಯನ್ನು ಹೆಚ್ಚಿಸುವ ಉದ್ದೇಶದಿಂದ ಇದೇ ಉತ್ತಮ ಕೇಬಲ್‌ ಎನ್ನುತ್ತಾರೆ. ನಾವು ಬಳಸುವ ಯುಎಸ್‌ಬಿ ಟೈಪ್‌ ಎ ಮತ್ತು ಸಿ ಮಧ್ಯೆ ವ್ಯತ್ಯಾಸವೇನು? ಎಷ್ಟು ವಿವಿಧ ಯುಎಸ್‌ಬಿ ಮತ್ತು ಕೇಬಲ್‌ ಇವೆ ಅಂತ ನಿಮಗೆ ಗೊತ್ತೇ? ಹಾಗಿದ್ರೆ ಈ ಸುದ್ದಿ ಓದಿ.

ಹೌದು, ತಂತ್ರಜ್ಞಾನ (Technology) ಕ್ಷೇತ್ರದಲ್ಲಿ ಸಂಶೋಧನೆ ನಡೆದಂತೆ ವಿವಿಧ ರೀತಿಯ ಮಲ್ಟಿಮೀಡಿಯಾ ಉತ್ಪನ್ನಗಳು ಹೆಚ್ಚುತ್ತಿವೆ. ಜೊತೆಗೆ, ಬಗೆಬಗೆಯ ವಿಡಿಯೋ ಮತ್ತು ಆಡಿಯೋ ಅವತರಣಿಕೆಗಳು ಸೃಷ್ಟಿಯಾಗುತ್ತಿರುತ್ತವೆ. ನಾನಾ ರೀತಿಯ ವೈಯರ್​ಗಳು, ಕನೆಕ್ಟರ್​ಗಳನ್ನು ನಾವು ನೋಡಬಹುದು. ಎಲೆಕ್ಟ್ರಾನಿಕ್ ಗ್ಯಾಜೆಟ್​ಗಳಲ್ಲಿ (Electronic Gadgets) ಬಳಸಲಾಗುವ ವೈಯರ್​ಗಳನ್ನು ಯುಎಸ್​ಬಿ ಮತ್ತು ಕೇಬಲ್​ಗಳು ಎಂದು ವರ್ಗೀಕರಿಸಬಹುದು.

ನೀವು ಬಳಸುವ ಯುಎಸ್‌ಬಿ ಮತ್ತು ಕೇಬಲ್​ ಬಗ್ಗೆ ನಿಮಗೆಷ್ಟು ಗೊತ್ತು?

ಇನ್ನೂ, ಮಾರುಕಟ್ಟೆಯಲ್ಲಿ ನಾನಾ ರೀತಿಯ ಯುಎಸ್​ಬಿ ಮತ್ತು ಕೇಬಲ್​ಗಳು ಲಭ್ಯ ಇವೆ. ನಾವು ಕೂಡ ಇವುಗಳನ್ನು ಬಳಕೆ ಮಾಡುತ್ತಿದ್ದೇವೆ. ಹಾಗಿದ್ರೆ, ಯುಎಸ್​ಬಿ ಎಂದರೆ ಏನು ಗೊತ್ತಾ? ಕಂಪ್ಯೂಟರ್ ಹಾಗೂ ಅವುಗಳಿಗೆ ಜೋಡಿತವಾದ ಬಾಹ್ಯ ಸಾಧನಗಳನ್ನು ಸಂಪರ್ಕಿಸಲು ಇರುವ ಕೇಬಲ್ ರೀತಿಯ ಒಂದು ಸಾಧನ. ಟಿಎಸ್ ಕೇಬಲ್ ಇತ್ಯಾದಿಗಳು ಆಡಿಯೋ ಕೇಬಲ್​ಗಳಾಗಿರುತ್ತವೆ. ಈ ಯುಎಸ್​ಬಿ ಮತ್ತು ಕೇಬಲ್​ಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ.

ಯುಎಸ್​ಬಿಯಲ್ಲಿ ಎಷ್ಟು ವಿಧ ಕಾಣಬಹುದು?

ಯುಎಸ್​ಬಿ ಎಂದರೆ ಯೂನಿವರ್ಸಲ್ ಸೀರಿಯಲ್ ಬಸ್. ಇದು ಕಂಪ್ಯೂಟರ್ ಹಾಗೂ ಅದರ ಬಾಹ್ಯ ಬಿಡಿಭಾಗಗಳ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುತ್ತದೆ. ಉದಾಹರಣೆಗೆ ಕೀಬೋರ್ಡ್, ಮೌಸ್ ಇತ್ಯಾದಿ. ಕನೆಕ್ಟರ್​ನ ತುದಿಯ ಆಕಾರದ ಮೇಲೆ ನಾವು ಸುಲಭವಾಗಿ ಯುಎಸ್​ಬಿ ಯಾವ ವಿಧ ಎಂದು ವರ್ಗೀಕರಿಸಬಹುದು. ಯುಎಸ್‌ಬಿಗಳಲ್ಲಿ ಯುಎಸ್‌ಬಿ ಟೈಪ್ ಎ, ಟೈಪ್‌ ಬಿ, ಟೈಪ್‌ ಸಿ, ಯುಎಸ್‌ಬಿ 3.0, ಯುಎಸ್‌ಬಿ ಮೈಕ್ರೋ ಬಿ ಇತ್ಯಾದಿ ನಾನಾ ಪ್ರಕಾರ ಕಾಣಬಹುದು. ಯುಎಸ್​ಬಿ ಟೈಪ್ ಎ ಅತಿ ಹೆಚ್ಚು ಬಳಕೆಯಲ್ಲಿದೆ. ಯುಎಸ್​ಬಿ ಟೈಪ್ ಸಿ ಇತ್ತೀಚೆಗೆ ತುಂಬಾನೇ ಬಳಕೆಗೆ ಬರುತ್ತಿದೆ.

ಕೇಬಲ್​ಗಳ ವಿಧಗಳು ಯಾವುವು?

ನಾವು ಕೇಬಲ್​ಗಳನ್ನು ಆಡಿಯೋ ಕನೆಕ್ಟರ್ ಆಗಿ ಬಳಕೆ ಮಾಡುತ್ತೇವೆ. ಮೊಬೈಲ್ ಇಯರ್ ಫೋನ್, ಲ್ಯಾಪ್​ಟಾಪ್ ಇಯರ್ ಫೋನ್, ಸ್ಪೀಕರ್, ಡಿವಿಡಿ ಪ್ಲೇಯರ್ ಇತ್ಯಾದಿಗಳಿಗೆ ಪ್ರತ್ಯೇಕವಾಗಿ ಕೇಬಲ್​ಗಳಿರುತ್ತವೆ. ಇವುಗಳ ಆಕಾರದಲ್ಲೂ ವ್ಯತ್ಯಾಸ ಇರುತ್ತದೆ. ಮೊಬೈಲ್ ಇಯರ್​ ಫೋನ್​ಗಳು ಟಿಎಸ್ ಕೇಬಲ್​ಗಳಾಗಿರುತ್ತವೆ. ಎಕ್ಸ್​ಎಲ್​ಆರ್, ಆರ್​ಸಿಎ, ಮಿಡಿ ಇತ್ಯಾದಿ ರೀತಿಯ ಕೇಬಲ್​ಗಳಿವೆ.

Cat6 ಮತ್ತು Cat6A ಕೇಬಲ್‌ಗಳ ನಡುವಿನ ವ್ಯತ್ಯಾಸವೇನು?

Cat6A ಈಥರ್ನೆಟ್ ಕೇಬಲ್‌ಗಳ ಹೊಸ ಪ್ರಕಾರವಾಗಿದೆ. ನಾವು ಇದನ್ನು Cat6 ಕೇಬಲ್‌ಗಳ ಸುಧಾರಿತ ಆವೃತ್ತಿ ಎಂದು ಹೇಳಬಹುದು. ಅವುಗಳ ನಡುವಿನ ವ್ಯತ್ಯಾಸಗಳು ಹೀಗಿವೆ. Cat6A ಅನ್ನು 10Gbs ವರೆಗೆ ರೇಟ್ ಮಾಡಲಾಗಿದೆ. ಆದರೆ, Cat6 ಅನ್ನು 1Gbs ವರೆಗೆ ರೇಟ್ ಮಾಡಲಾಗಿದೆ. Cat6ಗೆ ಹೋಲಿಸಿದರೆ Alien crosstalk ಅನ್ನು ಪ್ರತಿರೋಧಿಸುವಲ್ಲಿ Cat6A ಉತ್ತಮವಾಗಿದೆ. Cat6A ಕೇಬಲ್‌ಗಳ ಬ್ಯಾಂಡ್‌ವಿಡ್ತ್ Cat6 ಕೇಬಲ್‌ಗಳ ಎರಡು ಪಟ್ಟು(Cat6A: 500MHz, Cat6: 250MHz).

ಇವುಗಳಲ್ಲದೆ Cat6A ಕೇಬಲ್‌ಗಳು Cat6 ಕೇಬಲ್‌ಗಳಿಗಿಂತ ದಪ್ಪವಾಗಿರುತ್ತದೆ ಮತ್ತು ಹೆಚ್ಚು ವೆಚ್ಚದಾಯಕವಾಗಿದೆ. ನೋಡಿ, ನಾವು ನಿತ್ಯ ಬಳಸುವ ಮಲ್ಟಿಮೀಡಿಯಾ ಉತ್ಪನ್ನಗಳ ಬಗ್ಗೆ ತುಂಬಾ ಜನರಿಗೆ ಗೊತ್ತೇ ಇರುವುದಿಲ್ಲ. ತಂತ್ರಜ್ಞಾನದ ಬಳಕೆ ಹೆಚ್ಚಾದಂತೆ, ನಮ್ಮ ಜ್ಞಾನವನ್ನು ಸಹ ವೃದ್ಧಿಸಿಕೊಳ್ಳಬೇಕಿದೆ. ಇಲ್ಲವಾದಲ್ಲಿ, ಸ್ಪರ್ಧಾತ್ಮಕ ಯುಗದಲ್ಲಿ ನಾವು ಬೇರೆಯವರೊಂದಿಗೆ ಪೈಪೋಟಿ ನಡೆಸುಬುದು ಕಷ್ಟಕರವಾಗಲಿದೆ.

Best Mobiles in India

English summary
Different types of USBs and Cables: Different types of USBs and cables are available. USB is a cable type device used to connect computers and external devices connected to them. TS cable etc are audio cables. Here is the brief information about these USB and cables.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+