ಭಾರತದಲ್ಲಿ ಗೂಗಲ್‌ ಡ್ರೈವ್‌ಗೆ ಸೆಡ್ಡು ಹೊಡೆಯುವ ಡಿಜಿಬಾಕ್ಸ್ ಆಪ್‌ ಬಿಡುಗಡೆ!

|

ಗೂಗಲ್‌ ಡ್ರೈವ್‌ಗೆ ಪರ್ಯಾಯ ಎನಿಸುವ ಸ್ವದೇಶಿ ನಿರ್ಮಿತ ಕ್ಲೌಡ್‌ ಸ್ಟೋರೇಜ್‌ ಅಪ್ಲಿಕೇಶನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಗೂಗಲ್‌ ಡ್ರೈವ್‌ಗೆ ಸೆಡ್ಡು ಹೊಡೆಯಬಲ್ಲ ಅಪ್ಲಿಕೇಶನ್‌ ಆಗಿದ್ದು, ಡಿಜಿಬಾಕ್ಸ್ ಎಂದು ಹೆಸರಿಸಲಾಗಿದೆ. ಇದು ಸಾಮಾನ್ಯ ಬಳಕೆದಾರರು ಮತ್ತು ವ್ಯವಹಾರಗಳಿಗೆ ಕೈಗೆಟುಕುವ ಡೇಟಾ ಸಂಗ್ರಹಣೆ ಯೋಜನೆಗಳನ್ನು ಒದಗಿಸುವ ದೇಶಿ ಗೂಗಲ್ ಡ್ರೈವ್ ಎಂದು ಹೇಳಲಾಗ್ತಿದೆ.

ಹೌದು, ನೀತಿ ಆಯೋಗ ಭಾರತದಲ್ಲಿ ಲೋಕಲ್‌ ಕ್ಲೌಡ್ ಸ್ಟೋರೇಜ್‌ ಡಿಜಿಬಾಕ್ಸ್‌ ಅನ್ನು ಪರಿಚಯಿಸಿದೆ. ಇದು ಭಾರತದ ಗೂಗಲ್‌ ಡ್ರೈವ್‌ ಅಂತಾನೇ ಹೆಸರುವಾಸಿಯಾಗಿದ್ದು, ಇದರಲ್ಲಿ ಸೇವಾ ಪೂರೈಕೆದಾರರು ಡೇಟಾವನ್ನು ಎನ್‌ಕ್ರಿಪ್ಟ್ ಮಾಡಿದ್ದಾರೆ ಮತ್ತು ಭಾರತದಲ್ಲಿನ ಸರ್ವರ್‌ಗಳಲ್ಲಿ ಸ್ಟೋರೇಜ್‌ ಮಾಡಿದ್ದಾರೆ. ಇನ್ನು ಈ ಕ್ಲೌಡ್‌ ಸ್ಟೋರೇಜ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

 ಕ್ಲೌಡ್‌ ಸ್ಟೋರೇಜ್‌

ಸದ್ಯ ಭಾರತದಲ್ಲಿಯೇ ತಯಾರಾಗಿರುವ ಸ್ವದೇಶಿ ಕ್ಲೌಡ್‌ ಸ್ಟೋರೇಜ್‌ ಡಿಜಿಬಾಕ್ಸ್ ಆಂಡ್ರಾಯ್ಡ್ ಮತ್ತು ಐಒಎಸ್‌ ಎರಡರಲ್ಲಿಯೂ ಲಭ್ಯವಿದೆ. ನೀವು ಈ ಕ್ಲೌಡ್‌ ಸ್ಟೋರೇಜ್‌ ಅನ್ನು ವೆಬ್ ಮೂಲಕ ಪಿಸಿಗಳಲ್ಲಿ ಸಹ ಪ್ರವೇಶಿಸಬಹುದು. ಡಿಜಿಬಾಕ್ಸ್‌ನ ಒಂದು ಕುತೂಹಲಕಾರಿ ವೈಶಿಷ್ಟ್ಯವೆಂದರೆ ಡಿಜಿಬಾಕ್ಸ್ ಖಾತೆಯನ್ನು ರಚಿಸುವ ಅಗತ್ಯವಿಲ್ಲ. ಅಕೌಂಟ್‌ ಕ್ರಿಯೆಟ್‌ ಮಾಡದೇ ಫೈಲ್‌ಗಳನ್ನು ಶೇರ್‌ ಮಾಡಲು ಈ ಸೇವೆಯನ್ನು ಬಳಸಬಹುದು. ಈ ಫೀಚರ್ಸ್‌ ಅನ್ನು InstaShare ಎಂದು ಕರೆಯಲಾಗುತ್ತದೆ.

ಡಿಜಿಬಾಕ್ಸ್‌

ಇನ್ನು ಈ ಡಿಜಿಬಾಕ್ಸ್‌ ನಲ್ಲಿ ನೀವು ಇಮೇಲ್-ID ಅಥವಾ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು 2GB ವರೆಗಿನ ವಿಷಯವನ್ನು ಉಚಿತವಾಗಿ ಹಂಚಿಕೊಳ್ಳಬಹುದು. ಅಲ್ಲದೆ ಲಿಂಕ್ ಅನ್ನು ಕ್ರಿಯೆಟ್‌ ಮಾಡುವು ಮೂಲಕ, ಅದನ್ನು ಸ್ವೀಕರಿಸುವವರು ಶೇರ್‌ ಮಾಡಿದ ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು ಬಳಸಬಹುದು. ನಂತರ ಲಿಂಕ್‌ಗಳು ಅಮಾನ್ಯವಾಗುತ್ತವೆ ಮತ್ತು ಡೇಟಾವನ್ನು ಅಳಿಸಲಾಗುತ್ತದೆ ಎಂದು 45 ದಿನಗಳ ಪೋಸ್ಟ್‌ವರೆಗೆ ಫೈಲ್‌ಗಳನ್ನು ಸಂಗ್ರಹಿಸುತ್ತದೆ ಎಂದು ಕಂಪನಿ ಹೇಳಿದೆ.

ಡಿಜಿಬಾಕ್ಸ್

ಇದಲ್ಲದೆ ಟ್ಯಾಗ್‌ಗಳನ್ನು ಬಳಸಿಕೊಂಡು ಫೈಲ್‌ಗಳನ್ನು ಹುಡುಕಲು ಡಿಜಿಬಾಕ್ಸ್ ಬಳಕೆದಾರರಿಗೆ ಅವಕಾಶ ನೀಡುತ್ತದೆ. ಅಲ್ಲದೆ ಬಳಕೆದಾರರು ವಿಷಯವನ್ನು ರಿಯಲ್‌ ಟೈಂನಲ್ಲಿ ಎಡಿಟ್‌ ಮಾಡಬಹುದು. ಇದು ಜನಪ್ರಿಯ ಫೈಲ್ ಫಾರ್ಮ್ಯಾಟ್‌ಗಳನ್ನು ಬೆಂಬಲಿಸುತ್ತದೆ ಎಂದು ಹೇಳಲಾಗಿದೆ. ಜೊತೆಗೆ ನಿಮ್ಮ ವೈಯಕ್ತಿಕ ಫೈಲ್‌ಗಳನ್ನು ಉತ್ತಮವಾಗಿ ಸಂಘಟಿಸಲು ಹಲವಾರು ಫಿಲ್ಟರ್ ಆಯ್ಕೆಗಳನ್ನು ಒದಗಿಸುತ್ತದೆ.

ಡಿಜಿಬಾಕ್ಸ್ ಪ್ಲ್ಯಾನ್‌ಗಳು‌

ಡಿಜಿಬಾಕ್ಸ್ ಪ್ಲ್ಯಾನ್‌ಗಳು‌

ಇನ್ನು ವೆಚ್ಚಕ್ಕೆ ಸಂಬಂಧಿಸಿದಂತೆ, ವ್ಯಕ್ತಿಗಳು ಉಚಿತ ಡಿಜಿಬಾಕ್ಸ್ ಖಾತೆಯನ್ನು ರಚಿಸುವ ಮೂಲಕ ಪ್ರಾರಂಭಿಸಬಹುದು ಮತ್ತು 20GB ಉಚಿತ ಸಂಗ್ರಹಣೆಯನ್ನು ಪಡೆಯಬಹುದು. ಆದಾಗ್ಯೂ ಪ್ರತ್ಯೇಕ ಫೈಲ್‌ಗಳ ಗರಿಷ್ಠ ಗಾತ್ರದ ಮಿತಿ 2GB ಆಗಿದೆ. ಬಳಕೆದಾರರು ತಿಂಗಳಿಗೆ 30 ರೂ. ಯೋಜನೆಗಳನ್ನು ಆರಿಸಿಕೊಳ್ಳಬಹುದು ಮತ್ತು ವೈಯಕ್ತಿಕ ಫೈಲ್‌ಗಳಿಗೆ 10GB ಗಾತ್ರದ ಮಿತಿಯೊಂದಿಗೆ 5 TB ಸಂಗ್ರಹವನ್ನು ಪಡೆಯಬಹುದು. ವ್ಯವಹಾರಗಳಿಗಾಗಿ, ಕಂಪನಿಯು 500 ಬಳಕೆದಾರರಿಗೆ 999 ರೂ.ಗೆ 50TB ಸ್ಟೋರೇಜ್‌ ಅನ್ನು ನೀಡುತ್ತಿದೆ. ಇದರಲ್ಲಿ ಫರ್ಸನಲ್‌ ಫೈಲ್ ಗಾತ್ರವು 10GB ಅಡಿಯಲ್ಲಿರಬೇಕು. ಇದು Gmail ಏಕೀಕರಣವನ್ನು ಸಹ ನೀಡುತ್ತದೆ.

Best Mobiles in India

Read more about:
English summary
A new made-in-India cloud storage platform is now available in the country.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X