ಮಹಿಳಾ ಸಬಲೀಕರಣಕ್ಕೆ ‘ನಾರಿ’ ಪೋರ್ಟಲ್ ಲಾಂಚ್ ಮಾಡಿದ ಸರಕಾರ

Written By: Lekhaka

ಭಾರತ ಸರ್ಕಾರವು ಮಹಿಳೆಯರ ಸುರಕ್ಷತೆಗೆ ಹಲವಾರು ಕಾರ್ಯಕ್ರಮಗಳನ್ನು ಘೋಷಣೆ ಮಾಡುತ್ತಿದೆ. ಸಮಾನತೆಯನ್ನು ಪಡೆಯಲು, ಅರ್ಥಿಕವಾಗಿ ಸಬಲರಾಗಲು ಬೇಕಾದ ಎಲ್ಲಾ ಕಾರ್ಯಗಳನ್ನು ಮಾಡುತ್ತಿದೆ. ಇದೇ ಮಾದರಿಯಲ್ಲಿ ಮಹಿಳೆಯರ ಸಬಲೀಕರಣಕ್ಕೆ ನಾರಿ ಪೋರ್ಟಲ್ ಅನ್ನು ಲಾಂಚ್ ಮಾಡಿದ್ದು, ಈ ಮೂಲಕ ಮಹಿಳೆಯರಿಗೆ ದೊರೆಯುತ್ತಿರುವ ಸೇವೆಗಳ ಕುರಿತು ಮಾಹಿತಿಯನ್ನು ತಿಳಿಸುವ ಪ್ರಯತ್ನವನ್ನು ಮಾಡುತ್ತಿದೆ.

ಮಹಿಳಾ ಸಬಲೀಕರಣಕ್ಕೆ ‘ನಾರಿ’ ಪೋರ್ಟಲ್ ಲಾಂಚ್ ಮಾಡಿದ ಸರಕಾರ

ಸರಕಾರವೂ ಮಹಿಳೆಯರಿಗೆ ನೀಡುತ್ತಿರುವ ಸೇವೆ-ಸೌಲಭ್ಯಗಳ ಸಂಫೂರ್ಣ ಮಾಹಿತಿಯನ್ನು ಸುಲಭವಾಗಿ ಪಡೆದುಕೊಳ್ಳಲು ನಾರಿ ವೆಬ್ ಪೋರ್ಟಲ್ ಸಹಾಯಕಾರಿಯಾಗಲಿದೆ ಎನ್ನಲಾಗಿದೆ. ಸರಕಾರವ ವಿವಿಧ ಇಲಾಖೆಗಳು, ಸಚಿವಾಲಯಗಳು ಸೇರಿದ ಎಲ್ಲಾ ಮಾಹಿತಿಯನ್ನು ಒಂದೇ ಜಾಗದಲ್ಲಿ ದೊರೆಯುವಂತೆ ಮಾಡಲಿದೆ.

www.nari.nic.in ಗೆ ಭೇಟಿ ನೀಡುವ ಮೂಲಕ ಮಹಿಳೆಯರು ವಿವಿಧ ಸರಕಾರಿ ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ. ಸುಮಾರು 350 ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಮಾಹಿತಿಯನ್ನು ಪಡೆಯಬಹುದಾಗಿದೆ.

Aadhaar Number ವೆರಿಫಿಕೇಷನ್ ಮಾಡುವುದು ಹೇಗೆ..?
ಶಿಕ್ಷಣ, ಆರೋಗ್ಯ, ಉದ್ಯೋಗ, ವಸತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿಯನ್ನು ಇಲ್ಲಿ ಪಡೆಯಬಹುದಾಗಿದೆ. ಇದರ ಮೂಲಕ ಮಹಿಯರು ತಮಗೆ ದೊರೆಯುತ್ತಿರುವ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಇನ್ನು ಭೂಮಿ ಮೇಲೆ ಪ್ರತಿ ಮನುಷ್ಯನು ಸುಂದರನಾಗಿ, ಬುದ್ದಿವಂತನಾಗಿ, ರೋಗವಿಲ್ಲದೆ ಹುಟ್ಟಬಹುದು!!

ಈ ಫೋರ್ಟಲ್ ಮಹಿಳೆಯರಿಗೆ ತಮ್ಮ ಹಕ್ಕುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ. ತಮಗೆ ದೊರೆಯುವ ಸೇವೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ. ಈ ಮೂಲಕ ತಮ್ಮ ಸಬಲೀಕರಣವನ್ನು ಸಾಧಿಸಬಹುದಾಗಿದೆ.

Read more about:
English summary
To provide women citizens with easy access to information on government schemes and initiatives for women, Union Minister for women and child development Maneka Gandhi has now announced the launch of a new web portal for women.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot