ಡಿಜಿಟಲ್‌ ಪಾವತಿ ತೊಂದರೆ ಪರಿಹಾರಕ್ಕೆ ಉಚಿತ ಸಹಾಯವಾಣಿ!.ಬೇಕಾಗುತ್ತೆ!!

Written By:

ಮೊಬೈಲ್‌ ವಾಲೆಟ್, ಯುಪಿಐ ಮತ್ತು ಭೀಮ್ ಸೇರಿದಂತೆ ಎಲ್ಲಾ ಡಿಜಿಟಲ್‌ ಪಾವತಿಗೆ ಸಂಬಂಧಿಸಿದಂತೆ ಗ್ರಾಹಕರ ದೂರುಗಳನ್ನು ಇತ್ಯರ್ಥಪಡಿಸಲು, ಕೇಂದ್ರ ಸರ್ಕಾರದ ಉಚಿತ ಸಹಾಯವಾಣಿ ಸೇವೆಯು ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಿದೆ.!!

ಎಲ್ಲಾ ಡಿಜಿಟಲ್‌ ಪಾವತಿಗೆ ಸಂಬಂಧಿಸಿದಂತೆ ದೂರು ಇತ್ಯರ್ಥಪಡಿಸಲು ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸಿದ್ಧಪಡಿಸಿರುವ ಕರಡು ನಿಯಮಗಳ ಬಗ್ಗೆ ಗ್ರಾಹಕರ ಅಭಿಪ್ರಾಯ ಸಂಗ್ರಹಿಸಿ ಮಾರ್ಗಸೂಚಿ ಸಿದ್ಧಪಡಿಸಲಾಗುವುದು ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.!!

ಡಿಜಿಟಲ್‌ ಪಾವತಿ ತೊಂದರೆ ಪರಿಹಾರಕ್ಕೆ ಉಚಿತ ಸಹಾಯವಾಣಿ!.ಬೇಕಾಗುತ್ತೆ!!

ರಾಷ್ಟ್ರೀಯ ಪಾವತಿ ನಿಗಮದ ಜತೆಗೂ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಉಚಿತ ಸಹಾಯವಾಣಿ ತೆರೆಯುತ್ತಿದ್ದು, 14442 ಸಂಖ್ಯೆಗೆ ಕರೆ ಮಾಡುವ ಮೂಲಕ ಗ್ರಾಹಕರು ಡಿಜಿಟಲ್‌ ಪಾವತಿಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಬಹುದಾಗಿದೆ.!!

ಡಿಜಿಟಲ್‌ ಪಾವತಿ ತೊಂದರೆ ಪರಿಹಾರಕ್ಕೆ ಉಚಿತ ಸಹಾಯವಾಣಿ!.ಬೇಕಾಗುತ್ತೆ!!

ಸರ್ಕಾರದ ಅಧೀನದ ಭೀಮ್ ಆಪ್‌ ಮೂಲಕವೇ ವಹಿವಾಟು ನಡೆಸುವಾಗ ಯಾವುದೇ ರೀತಿಯ ಸಮಸ್ಯೆ ಎದುರಾದರೆ ಅದನ್ನು ಪರಿಹರಿಸಲು ಯಾವುದೇ ವ್ಯವಸ್ಥೆ ಇಲ್ಲ. ಹಾಗಾಗಿ ಇಂತಹ ಸಹಾಯವಾಣಿ ಬಳಕೆಗೆ ಬರುತ್ತದೆ. ಸದ್ಯ, ಕೆಲವು ವಾಲೆಟ್ ಕಂಪೆನಿಗಳು ಸಹಾಯವಾಣಿ ಒದಗಿಸಿದರೂ ಈ ಬಗ್ಗೆ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.!!

English summary
Government will set-up a toll free helpline phone number 14442. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot