ಕೇಬಲ್‌ ಟಿವಿ ವೀಕ್ಷಕರೇ ಡಿಜಿಟಲ್‌ ತಂತ್ರಜ್ಞಾನಕ್ಕೆ ಬದಲಾಗಿ

By Ashwath
|

ಡಿಜಿಟಲ್‌ ಟಿವಿ - ಸದ್ಯ ರಾಜ್ಯದ ಮಹಾನಗರಗಳ ಜನತೆಯ ಬಾಯಿಯಲ್ಲಿ ಚರ್ಚೆಯಾಗುತ್ತಿರುವ ದೊಡ್ಡ ವಿಷಯ. ಕೇಂದ್ರ ಸರ್ಕಾರ ಈಗಾಗ್ಲೇ ಸಂಸತ್ತಿನಲ್ಲಿ ಡಿಜಿಟಲ್‌ ಟಿವಿ ಮಸೂದೆಯನ್ನು ಮಂಡಿಸಿದ್ದು ಇನ್ನು ಮುಂದೆ ರಾಜ್ಯದ ಮಹಾನಗರಗಳ ಜನತೆ ಉತ್ತಮ ಗುಣ ಮಟ್ಟದ ಟಿವಿಯನ್ನು ವೀಕ್ಷಣೆ ಮಾಡಲಿದ್ದಾರೆ. ಆದರೆ ಬಹಳಷ್ಟು ಜನತೆಗೆ ಈ ಡಿಜಿಟಲ್‌ ಟಿವಿಯ ಬಗ್ಗೆ ಅನೇಕ ಗೊಂದಲಗಳಿವೆ. ಈ ಗೊಂದಲಗಳನ್ನು ನಿವಾರಿಸುವ ದೃಷ್ಟಿಯಿಂದ ಗಿಜ್ಬಾಟ್‌ ನಿಮ್ಮಲ್ಲಿ ಮೂಡಬಹದಾದ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ.

ಡಿಜಿಟಲ್‌ ಟಿವಿ ಎಂದರೇನು?

ಡಿಜಿಟಲ್‌ ಟಿವಿ ಎಂದರೇನು?

ಡಿಜಿಟಲ್‌ ಟಿವಿ ಎಂದರೇನು?

ಟಿವಿ ಪ್ರಸಾರದಲ್ಲಿ ಅನಲಾಗ್ ಕೇಬಲ್ ಸೇವೆ, ಡಿಜಿಟಲ್ ಕೇಬಲ್ ಸೇವೆ ಹಾಗೂ ಡಿಟಿಎಚ್ ಸೇವೆಗಳೆಂಬ ಮೂರು ಪ್ರಮುಖ ವಿಧಾನಗಳು. ಕಳೆದ ಎರಡು-ಮೂರು ದಶಕಗಳಿಂದ ಕೇಬಲ್‌ಗಳಲ್ಲಿ ಅನಲಾಗ್ ವಿಧಾನದಲ್ಲಿ ಟಿವಿ ಪ್ರಸಾರವಾಗುತ್ತಿದೆ.ಆದ್ರೆ ಈ ಟಿಜಿಟಲ್‌ ಟಿವಿ ಆಡಿಯೋ ಮತ್ತು ವೀಡಿಯೋಗಳನ್ನು ಡಿಜಿಟಲ್‌ ಸಂಕೇತಗಳನ್ನಾಗಿ ಕಳುಹಿಸುತ್ತದೆ. ಹಾಗಾಗಿ ಗ್ರಾಹಕರು ಉತ್ತಮ ಗುಣಮಟ್ಟದ ವೀಕ್ಷಣಾ ಅನುಭವವನ್ನು ಪಡೆಯಬಹುದು.

ಡಿಜಿಟಲ್‌ ಟಿವಿ ಗ್ರಾಹಕರಿಗೆ ಒಳ್ಳೇಯದೇ ?

ಡಿಜಿಟಲ್‌ ಟಿವಿ ಗ್ರಾಹಕರಿಗೆ ಒಳ್ಳೇಯದೇ ?

ಈಗ ಮನೆಗಳಿಗೆ ಬರುತ್ತಿರುವ ಅನಲಾಗ್‌ ತಂತ್ರಜ್ಞಾನದಲ್ಲಿ ಕೆಲವು ನಿಗದಿತ ಸಂಖ್ಯೆಯ ವಾಹಿನಿಗಳನ್ನು ಮಾತ್ರ ನೋಡಬಹುದು.ಅಷ್ಟೇ ಅಲ್ಲದೇ ಆ ಚಾನೆಗಳು ಸ್ಪಷ್ಟತೆಯಿಂದ ಕಾಣಿಸಿಕೊಳ್ಳಲಾರವು.ಮೊದಲು ಬರುವಂತಹ ಚಾನೆಲ್‌ಗಳು ಚೆನ್ನಾಗಿ ಕಾಣಿಸುತ್ತಿದ್ದರೆ ನಂತರ ಬರುವಂತಹ ಚಾನೆಲ್‌ಗಳು ಸ್ಪಷ್ಟತೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಗ್ರಾಹಕರು ಗುಣಮಟ್ಟದ ಚಿತ್ರ ವೀಕ್ಷಣೆಗೆ ದುಬಾರಿಯ ಬೆಲೆಯ ಟಿವಿ ಸೆಟ್‌ ತಂದರೂ ಪ್ರಯೋಜನವೇನು ಇಲ್ಲ.ಆದರೆ ಡಿಜಿಟಲ್‌ ಟಿವಿ ಸೇವೆ ಉತ್ತಮ ವೀಕ್ಷಣಾ ಅನುಭವವನ್ನು ನೀಡುತ್ತವೆ. ಆಡಿಯೋ ಮತ್ತು ವೀಡಿಯೋ ಉತ್ತಮ ಗುಣಮಟ್ಟದಲ್ಲಿರುತ್ತದೆ ಮತ್ತು ನೂರಾರು ಚಾನೆಲ್‌ಗಳನ್ನು ನೋಡಬಹುದು

ಡಿಜಿಟಲ್‌ ಸೆಟ್‌ ಟಾಪ್‌ ಬಾಕ್ಸ್‌ನ್ನು ಯಾವ ಪ್ರದೇಶದವರು ಹಾಕುವುದು ಕಡ್ಡಾಯ ?

ಡಿಜಿಟಲ್‌ ಸೆಟ್‌ ಟಾಪ್‌ ಬಾಕ್ಸ್‌ನ್ನು ಯಾವ ಪ್ರದೇಶದವರು ಹಾಕುವುದು ಕಡ್ಡಾಯ ?

ಒಂದು ಮಿಲಿಯನ್‌(10 ಲಕ್ಷ) ಗಿಂತ ಹೆಚ್ಚಿನ ಜನಸಂಖ್ಯೆಯಿರುವ ಮಹಾನಗರಗಳಲ್ಲಿ ಡಿಜಿಟಲ್‌ ಕೇಬಲ್‌ ಸೆಟ್‌ ಟಾಪ್‌ ಬಾಕ್ಸ್‌ ಹಾಕುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಕೇಂದ್ರ ಸರ್ಕಾರ ಪ್ರಕಟಿಸಿರುವ ದಿನಾಂಕ ಅಂದರೆ 01.04 .2013ರೊಳಗೆ ಟಿವಿ ಸೆಟ್ ಗಳಿಗೆ ಸೆಟ್ ಟಾಪ್ ಬಾಕ್ಸ್ ಅಳವಡಿಸಲೇ ಬೇಕಿದೆ.

ಕರ್ನಾಟಕದಲ್ಲಿ ಯಾವ ಪ್ರದೇಶದ ಜನತೆಗೆ  ಈ ನಿಯಮ ಅನ್ವಯವಾಗುತ್ತದೆ ?

ಕರ್ನಾಟಕದಲ್ಲಿ ಯಾವ ಪ್ರದೇಶದ ಜನತೆಗೆ ಈ ನಿಯಮ ಅನ್ವಯವಾಗುತ್ತದೆ ?

ಏಪ್ರಿಲ್ 1, 2013 ರೊಳಗೆ ರಾಜ್ಯದ ಮೂರು ಮಹಾನಗರಪಾಲಿಕೆ ಮತ್ತು ಅದರ ಆಸುಪಾಸಿನ ವ್ಯಾಪ್ತಿಯಲ್ಲಿ ಬರುವ ಕೇಬಲ್ ಟಿವಿ ವೀಕ್ಷಕರು ಸೆಟ್ ಟಾಪ್ ಬಾಕ್ಸ್ ಹಾಕುವುದನ್ನು ಕೇಂದ್ರ ಸರಕಾರ ಕಡ್ಡಾಯಗೊಳಿಸಿದೆ. ಹಾಗಾಗಿ ರಾಜ್ಯದ ಬೆಂಗಳೂರು,ಮೈಸೂರು ಮತ್ತು ಹುಬ್ಬಳ್ಳಿ, ಧಾರವಾಡ ಅವಳಿ ನಗರದ ಜನತೆಗೆ ಈ ನಿಯಮ ಅನ್ವಯವಾಗುತ್ತದೆ.

ಡಿಜಿಟಲ್‌ ಟಿವಿ ಸೆಟ್‌ ಟಾಪ್‌ ಬಾಕ್ಸ್‌ ಅಳವಡಿಸಿದ್ದರೇ ಏನಾಗುತ್ತದೆ?

ಡಿಜಿಟಲ್‌ ಟಿವಿ ಸೆಟ್‌ ಟಾಪ್‌ ಬಾಕ್ಸ್‌ ಅಳವಡಿಸಿದ್ದರೇ ಏನಾಗುತ್ತದೆ?

ಕೇಂದ್ರ ಸರ್ಕಾರ ಈಗಾಗ್ಲೇ ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದು, ಇದೇ ವರ್ಷದ ಏಪ್ರಿಲ್‌ 1ರ ಒಳಗಾಗಿ ಮಹಾನಗರಗಳಲ್ಲಿ ಸೆಟ್‌ಟಾಪ್‌ ಬಾಕ್ಸ್‌ನ್ನು ಕಡ್ಡಾಯಗೊಳಿಸಿದೆ. ಹೀಗಾಗಿ ಒಂದು ವೇಳೆ ಗ್ರಾಹಕರು ಡಿಜಿಟಲ್‌ ಸೆಟ್‌ಟಾಪ್‌ ಬಾಕ್ಸ್‌ ಅಳವಡಿಸಿದಿದ್ದರೇ ಅವರ ಮನೆಯ ಟಿವಿ ಕೇಬಲ್‌ ಸಂಪರ್ಕ ಕಡಿತಗೊಳ್ಳಲಿದೆ.

ಡಿಜಿಟಲ್‌ ಟಿವಿ ಸೆಟ್‌ ಟಾಪ್‌ ಬಾಕ್ಸ್‌ಗೆ ಖರ್ಚು ಎಷ್ಟಾಗುತ್ತದೆ ?

ಡಿಜಿಟಲ್‌ ಟಿವಿ ಸೆಟ್‌ ಟಾಪ್‌ ಬಾಕ್ಸ್‌ಗೆ ಖರ್ಚು ಎಷ್ಟಾಗುತ್ತದೆ ?

ಒಂದೇ ಭಾರಿ ಸಂಪೂರ್ಣ ವ್ಯವಸ್ಥೆಯೆ ಬದಲಾಗುವುದರಿಂದ ಹೆಚ್ಚು ಹಣ ಬೇಕಾಗುತ್ತದೆ. ಹಾಗಾಗಿ ಕೇಬಲ್‌ ಆಪರೇಟರ್‌ಗಳು ಹಾಗೂ ಗ್ರಾಹಕರ ಕಡೆಯಿಂದ ಸಮಾನ ಸಹಕಾರ ಬೇಕಾಗುತ್ತದೆ. ಇಂದು ದೇಶದಲ್ಲಿ ಒಟ್ಟು 6,000 ಮಲ್ಟಿ-ಸಿಸ್ಟಮ್ ಆಪರೇಟರ್ (ಎಂಎಸ್‌ಒ)ಗಳೂ 60,000 ಸ್ಥಳೀಯ ಕೇಬಲ್ ಆಪರೇಟರ್‌ಗಳೂ ಇದ್ದು, ಇವರು ಏನಿಲ್ಲವೆಂದರೂ ರೂ. 10,000 ಕೋಟಿ ರೂ ಖರ್ಚು ಮಾಡಬೇಕಾಗುತ್ತದೆ. ಇಷ್ಟೇ ಅಲ್ಲದೇ ಡಿಜಿಟಲ್ ಪ್ರಸಾರಕ್ಕಾಗಿ ಪ್ರತ್ಯೇಕ ಟ್ರಾನ್ಸ್‌ಮಿಟರ್, ಎನ್‌ಕೋಡರ್. ಡಿಕೋಡರ್, ಮಾಡ್ಯುಲೇಟರ್, ಸರ್ವರ್ ಹಾಗೂ ಸ್ಟೋರೇಜ್‌ಗಳನ್ನು ಅವರು ಸ್ಥಾಪಿಸಿಕೊಳ್ಳಬೇಕಾಗುತ್ತದೆ. ಗ್ರಾಹಕರು ಕನಿಷ್ಟ ರೂ.1000 ರೂ.2,000 ರೂ ಖರ್ಚು ಮಾಡಿ ಸೆಟ್‌ಟಾಪ್‌ ಬಾಕ್ಸ್‌ ಅಳವಡಿಸಬೇಕಾಗುತ್ತದೆ.

ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಟಿವಿ ಕನೆಕ್ಷನ್‌ಗಳಿದ್ದರೆ ಏನು ಮಾಡಬೇಕು ?

ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಟಿವಿ ಕನೆಕ್ಷನ್‌ಗಳಿದ್ದರೆ ಏನು ಮಾಡಬೇಕು ?

ಅನಲಾಗ್‌ ಕೇಬಲ್‌ ವ್ಯವಸ್ಥೆಯಲ್ಲಿದ್ದಾಗ ಕೆಲ ಗ್ರಾಹಕರು ತಮ್ಮ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಟಿವಿಗಳಿಗೆ ಒಂದೇ ಕೇಬಲ್‌ ಸಂಪರ್ಕದಡಿ ಟಿವಿ ವೀಕ್ಷಣೆ ಮಾಡುತ್ತಿದ್ದರು. ಆದರೆ ಈ ಡಿಜಿಟಲ್‌ ಟಿವಿ ಸೆಟ್‌ಟಾಪ್‌ ಬಾಕ್ಸ್‌ನಲ್ಲಿ ಯಲ್ಲಿ ಹಾಗೇ ಆಗುವುದಿಲ್ಲ. ಮನೆಯಲ್ಲಿ ಎರಡು ಟಿವಿ ಉಪಯೋಗಿಸುತ್ತಿದ್ದರೆ ಗ್ರಾಹಕ ಎರಡು ಪ್ರತ್ಯೇಕ ಸೆಟ್‌ ಟಾಪ್‌ ಬಾಕ್ಸ್‌ನ್ನು ಅಳವಡಿಸಿ ಟಿವಿ ವೀಕ್ಷಣೆ ಮಾಡಬೇಕಾಗುತ್ತದೆ.

ಬೇರೆ ಯಾವ ದೇಶಗಳಲ್ಲಿ ಈ ತಂತ್ರಜ್ಞಾನ ಅಳವಡಿಕೆಯಾಗಿದೆ?

ಬೇರೆ ಯಾವ ದೇಶಗಳಲ್ಲಿ ಈ ತಂತ್ರಜ್ಞಾನ ಅಳವಡಿಕೆಯಾಗಿದೆ?

ಭಾರತದಲ್ಲಿ ನಿಧನವಾಗಿ ಈ ಪದ್ದತಿ ಅಳವಡಿಕೆಯಾಗುತ್ತಿದ್ದರೂ ವಿದೇಶ ಅನೇಕ ದೇಶಗಳು ಈಗಾಗ್ಲೇ ಅನಲಾಗ್‌ ವ್ಯವಸ್ಥೆಯಿಂದ ಡಿಜಿಟಲ್‌ ವ್ಯವಸ್ಥೆಗೆ ಬದಲಾಗಿದ್ದಾರೆ. ಯುರೋಪಿನ್ ಬಹುತೇಕ ರಾಷ್ಟ್ರಗಳು 2006 ಮತ್ತು 2011ರ ನಡುವೆ ಈ ವ್ಯವಸ್ಥೆಯನ್ನು ಅಳವಡಿಸಿದ್ದಾರೆ.

ಭಾರತದಲ್ಲಿ ಎಲ್ಲೆಲ್ಲಿ ಡಿಜಿಟಲ್ ಸೆಟ್‌ಟಾಪ್‌ ಬಾಕ್ಸ್‌ ಅಳವಡಿಕೆಯಾಗಿದೆ?

ಭಾರತದಲ್ಲಿ ಎಲ್ಲೆಲ್ಲಿ ಡಿಜಿಟಲ್ ಸೆಟ್‌ಟಾಪ್‌ ಬಾಕ್ಸ್‌ ಅಳವಡಿಕೆಯಾಗಿದೆ?

ಮುಂಬೈಯಲ್ಲಿ ಸಂಪೂರ್ಣವಾಗಿ ಡಿಜಿಟಲ್‌ ಸೆಟ್‌ಟಾಪ್‌ ಬಾಕ್ಸ್‌ ಅಳವಡಿಕೆಯಾಗಿದೆ. ದೆಹಲಿಯಲ್ಲಿ ಬಹುತೇಕ ಕೆಲಸ ಪೂರ್ಣಗೊಂಡಿದ್ದು ಕೋಲ್ಕತ್ತಾದಲ್ಲಿ ಈ ಬದಲಾವಣೆ ವ್ಯವಸ್ಥೆ ಅಂತಿಮ ಹಂತದಲ್ಲಿದೆ.

Most Read Articles
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more