ಜಿಯೋ ಎಫೆಕ್ಟ್...BSNL ಖಾಸಾಗೀಕರಣಗೊಳಿಸಲು ಸರ್ಕಾರದ ಚಿಂತನೆ!

|

ಟೆಲಿಕಾಂ ಉದ್ಯಮದ ಪೈಪೋಟಿಯಲ್ಲಿ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಬಿಎಸ್​ಎನ್​ಎಲ್​ ಮತ್ತು ಎಂಟಿಎನ್​ಎಲ್​ ಟೆಲಿಕಾಂ ಕಂಪನಿಗಳನ್ನು ಸ್ಥಗಿತಗೊಳಿಸಲು ಕೇಂದ್ರ ಹಣಕಾಸು ಸಚಿವಾಲಯವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವುದಾಗಿ ಕಳೆದ ಬುಧವಾರವಷ್ಟೇ ವರದಿಯಾಗಿತ್ತು. ಆದರೆ, ಇದೀಗ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಚರ್ಚೆ ಪ್ರಗತಿಯಲ್ಲಿದೆ. ಆದರೆ, ಇದುವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ದೂರಸಂಪರ್ಕ

ಎರಡು ದಶಕಗಳಿಂದ ದೇಶದ ದೂರಸಂಪರ್ಕದ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್​ಎನ್​ಎಲ್)​ ಮತ್ತು ಮಹಾನಗರ್ ಟೆಲಿಫೋನ್ ನಿಗಮ್ ಲಿಮಿಟೆಡ್ (ಎಂಟಿಎನ್​ಎಲ್) ಸಂಸ್ಥೆಗಳು ಕಳೆದ ಕೆಲ ವರ್ಷಗಳಿಂದ ನಷ್ಟದಲ್ಲೇ ದೂಡುತ್ತಿವೆ. ಬಿಎಸ್​ಎನ್​ಎಲ್​ ಮತ್ತು ಎಂಟಿಎನ್​ಎಲ್ ಸಂಸ್ಥೆಗಳು ನಿರ್ವಹಿಸಲು ಸಮರ್ಥನೀಯವಲ್ಲದ ಮಟ್ಟಿಗೆ ಹಣದ ಅಭಾವ ಎದುರಿಸುತ್ತಿವೆ. ಹಾಗಾಗಿ, ಈ ಎರಡೂ ಸರ್ಕಾರಿ ಕಂಪನಿಗಳನ್ನು ಮುಚ್ಚಬೇಕು ಎಂದು ಹಣಕಾಸು ಸಚಿವಾಲಯ ಕಳೆದ ವಾರವಷ್ಟೇ ನಿರ್ದೇಶನವನ್ನು ನೀಡಿತ್ತು.

74,000 ಕೋಟಿ

ವರದಿಯ ಪ್ರಕಾರ, ಬಿಎಸ್​ಎನ್​ಎಲ್​ ಮತ್ತು ಎಂಟಿಎನ್​ಎಲ್ ಕಂಪೆನಿಗಳನ್ನು ಪುನರುಜ್ಜೀವನಗೊಳಿಸಲು 74,000 ಕೋಟಿ ರೂ.ಗಳ ಬೃಹತ್ ಮೊತ್ತವನ್ನು ಒದಗಿಸುವ ದೂರಸಂಪರ್ಕ ಇಲಾಖೆಯ (ಡಿಒಟಿ) ಪ್ರಸ್ತಾವನೆಯನ್ನು ಸಚಿವಾಲಯ ತಿರಸ್ಕರಿಸಿದೆ. ಇದರ ಜೊತೆಗೆ ಈ ಎರಡು ಸರ್ಕಾರಿ ಕಂಪನಿಗಳನ್ನು ಮುಚ್ಚುವ ವೆಚ್ಚವು 95,000 ಕೋಟಿ ರೂಪಾಯಿಗಿಂತ ಹೆಚ್ಚು ತಗಲುವುದಿಲ್ಲ ಎಂದು ದೂರಸಂಪರ್ಕ ಇಲಾಖೆ (ಡಿಒಟಿ)ಯ ವರದಿ ಹೇಳುತ್ತಿದೆ. ಹಾಗಾಗಿ, ಎರಡೂ ಕಂಪನಿಗಳನ್ನು ಮುಚ್ಚಲು ಯೋಜಿಸಲಾಗಿದೆ ಎಂದು ಹೇಳಲಾಗಿತ್ತು.

ಸರ್ಕಾರಿ ಕಂಪನಿ

ದೂರಸಂಪರ್ಕ ಇಲಾಖೆ (ಡಿಒಟಿ)ಯ ವರದಿಯೊಂದರ ಪ್ರಕಾರ, ಬಿಎಸ್​ಎನ್​ಎಲ್​ ಮತ್ತು ಎಂಟಿಎನ್​ಎಲ್ ಎರಡು ಸರ್ಕಾರಿ ಕಂಪನಿಗಳನ್ನು ಮುಚ್ಚುವ ವೆಚ್ಚವು 95,000 ಕೋಟಿ ರೂಪಾಯಿಗಿಂತ ಹೆಚ್ಚು ತಗಲುವುದಿಲ್ಲ. ಹಾಗಯೇ, ಸ್ವಯಂ ನಿವೃತ್ತಿ ಯೋಜನೆ(ವಿಆರ್​​ಎಸ್​)ಯಡಿಯಲ್ಲಿ ಬಿಎಸ್​ಎನ್​ಎಲ್​ನ 1.65 ಲಕ್ಷ ಉದ್ಯೋಗಿಗಳು ಹಾಗೂ ಕಂಪನಿಯ ಸಾಲ ಮರುಪಾವತಿಗೆ 95,000 ಕೋಟಿ ರೂ. ತಗಲುತ್ತದೆ ಎಂದು ವರದಿಯಲ್ಲಿ ತಿಳಿಸಿದೆ. ಇದರಿಂದಲೂ ಸರ್ಕಾರಿ ಟೆಲಿಕಾಂ ಸಂಸ್ಥೆಗಳ ಭವಿಷ್ಯದ ಮೇಲೆ ಕರಿನೆರಳು ಆವರಿಸಿದೆ.

ಮೂರು ಸಿಬ್ಬಂದಿ ವರ್ಗಗಳಿವೆ

ಈ ಎರಡು ಸರ್ಕಾರಿ ಕಂಪನಿಯಲ್ಲಿ ನೇರವಾಗಿ ನೇಮಕವಾದವರು, ಇತರೆ ಸರ್ಕಾರಿ ಇಲಾಖೆಗಳಿಂದ ವರ್ಗಾವಣೆ ಆದವರು ಹಾಗೂ ಭಾರತೀಯ ಟೆಲಿಕಮ್ಯೂನಿಕೇಷನ್ಸ್​ ಸರ್ವೀಸ್​ ಅಧಿಕಾರಿಗಳು ಎಂಬ ಮೂರು ಸಿಬ್ಬಂದಿ ವರ್ಗಗಳಿವೆ. ಇದೇ ಸಾಲಿನಲ್ಲಿ ವಿಂಗಡನೆ ಮಾಡಿದರೆ, ಕಂಪನಿಯ ವೆಚ್ಚ 95,000 ಕೋಟಿ ರೂಪಾಯಿಗಿಂತ ಕಡಿಮೆ ಆಗಲಿದೆ ಎಂದು ವರದಿಯಲ್ಲಿದೆ. ಟೆಲಿಕಮ್ಯೂನಿಕೇಷನ್ಸ್​ ಸರ್ವೀಸ್​ ಅಧಿಕಾರಿಗಳನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡಲು ಸಾಧ್ಯವಿದೆ. ಇದರೊಂದಿಗೆ ನೇರವಾಗಿ ನೇಮಕಗೊಂಡವರ ಸಂಬಳ ಹೆಚ್ಚು ಇರುವುದಿಲ್ಲ. ಹೀಗಾಗಿ ಹೆಚ್ಚು ವೆಚ್ಚವಾಗುವುದಿಲ್ಲ ಎಂದು ವರದಿ ಹೇಳಿದೆ.

Best Mobiles in India

English summary
Discussion on Privatisation of BSNL and MTNL going onbut no decision has been taken: FM Nirmala Sitharaman. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X