10 ತಿಂಗಳ ಚಂದಾದಾರಿಕೆಗೆ ಎರಡು ತಿಂಗಳು ಉಚಿತ- ಟಿವಿ ನೋಡುವವರಿಗೆ ಬಂಪರ್ ಆಫರ್
ಡಿಟಿಹೆಚ್ ಪ್ರೊವೈಡರ್ ವೀಡಿಯೋ ಕಾನ್ ಡಿ2ಹೆಚ್ ಮತ್ತು ಡಿಶ್ ಟಿವಿಗಳು ಹೆಚ್ಚುವರಿ ಲಾಭವನ್ನು ತಮ್ಮ ದೀರ್ಘಾವಧಿ ಪ್ಲಾನ್ ಗಳಿಗೆ ಆಫರ್ ಮಾಡುತ್ತಿವೆ. 10 ತಿಂಗಳ ಸುದೀರ್ಘ ರೀಚಾರ್ಜ್ ಮಾಡಿಸಿಕೊಂಡರೆ ಎರಡೂ ಸೇವಾ ಪ್ರೊವೈಡರ್ ಗಲು ನಿಮಗೆ ಎರಡು ತಿಂಗಳ ಸೇವೆಯನ್ನು ಉಚಿತವಾಗಿ ನೀಡುತ್ತಾರೆ. ಇತ್ತೀಚೆಗೆ ಬಿಡುಗಡೆಗೊಂಡಿರುವ ಹೊಸ ತಾರಿಫ್ ಗಳ ಅನ್ವಯವೇ ಈ ಪ್ಲಾನ್ ಗಳು ಕೂಡ ನಿಮಗೆ ಲಭ್ಯವಾಗುತ್ತದೆ ಮತ್ತು 6 ತಿಂಗಳ ಚಂದಾದಾರಿಕೆ ಮಾಡಿಕೊಂಡವರಿಗೂ ಕೂಡ ಹೆಚ್ಚುವರಿ ಲಾಭಗಳು ಸಿಗುತ್ತವೆ.

ವೀಡಿಯೋ ಕಾನ್ ಡಿ2ಹೆಚ್ ಮತ್ತು ಡಿಶ್ ಟಿವಿಗಳು ಕಳೆದ ವರ್ಷ ತಮ್ಮ ವಿಲೀನ ಪ್ರಕ್ರಿಯೆಯ ಬಗ್ಗೆ ಘೋಷಿಸಿದ್ದವು. ಡಿ2ಹೆಚ್ ಇತ್ತೀಚೆಗೆ ತನ್ನ ಮ್ಯಾಜಿಕ್ ಸ್ಟಿಕ್ ಮೀಡಿಯಾ ಸ್ಟ್ರೀಮಿಂಗ್ ಸ್ಟಿಕ್ ನ್ನು ತನ್ನ ಚಂದಾದಾರರಿಗೆ ಪ್ರಕಟಿಸಿತ್ತು. ಇದು ಆನ್ ಲೈನ್ ಮನರಂಜನೆಯ ಜೊತೆಗೆ ಲೈವ್ ಟಿವಿಯನ್ನು ಆಫರ್ ಮಾಡುತ್ತದೆ.

ವೀಡಿಯೋ ಕಾನ್ ಡಿ2ಹೆಚ್, ಡಿಶ್ ಟಿಯ 2 ತಿಂಗಳ ಉಚಿತ ಆಫರ್
10 ತಿಂಗಳ ಕನೆಕ್ಷನ್ ನ್ನು ಪಡೆದವರಿಗೆ ಡಿಶ್ ಟಿವಿ 2 ತಿಂಗಳ ಉಚಿತ ಸೇವೆಯನ್ನು ನೀಡುತ್ತದೆ. ಅಂದರೆ ಬಳಕೆದಾರರು 12 ತಿಂಗಳ ಸೇವೆಯನ್ನು ಕೇವಲ 10 ತಿಂಗಳ ರೀಚಾರ್ಜ್ ಮಾಡುವ ಮೂಲಕ ಪಡೆದುಕೊಳ್ಳಬಹುದು. ಅದೇ ರೀತಿ 6 ತಿಂಗಳ ಚಂದಾದಾರಿಕೆಯನ್ನು ಪಡೆದವರು ಒಂದು ತಿಂಗಳ ಹೆಚ್ಚುವರಿ ಸೇವೆಯನ್ನು ಪಡೆದುಕೊಳ್ಳಬಹುದು. ಅಂದರೆ 7 ತಿಂಗಳ ಚಂದಾದಾರಿಕೆಯನ್ನು ಕೇವಲ 6 ತಿಂಗಳಿಗೆ ರೀಚಾರ್ಜ್ ಮಾಡುವ ಮೂಲಕ ಪಡೆದುಕೊಳ್ಳುವುದಕ್ಕೆ ಬಳಕೆದಾರರಿಗೆ ಅವಕಾಶವಿರುತ್ತದೆ.

ವೀಡಿಯೋಕಾನ್ ಆಫರ್ ಗಳು:
ವೀಡಿಯೋಕಾನ್ ಡಿ2ಹೆಚ್ ಹೆಚ್ಚುವರಿ ಸೇವೆಯ ಆಫರ್ ನ್ನು ಬೇರೆಬೇರೆ ಚಂದಾದಾರಿಕೆಯ ಪ್ಲಾನ್ ಗೆ ಬೇರೆಬೇರೆ ರೀತಿಯಾಗಿ ನೀಡುತ್ತದೆ. ವೀಡಿಯೋಕಾನ್ ಡಿ2ಹೆಚ್ ಕೂಡ ಡಿಶ್ ಟಿವಿ ರೀತಿಯ ಬೆನಿಫಿಟ್ ನ್ನು ನೀಡುತ್ತದೆ. 10 ತಿಂಗಳ ದೀರ್ಘಾವಧಿ ಚಂದಾದಾರಿಕೆಗೆ 60 ದಿನಗಳ ಉಚಿತ ಸೇವೆಯ ಬೆನಿಫಿಟ್ ನೀಡುತ್ತದೆ. ಅದೇ ರೀತಿ ವೀಡಿಯೋಕಾನ್ ಡಿ2ಹೆಚ್ ಮತ್ತು ಡಿಶ್ ಟಿವಿಗಳು 30 ದಿನಗಳ ಹೆಚ್ಚುವರಿ ಸೇವೆಯನ್ನು 6 ತಿಂಗಳ ಚಂದಾದಾರಿಕೆಗೆ ನೀಡುತ್ತವೆ ಮತ್ತು ಮೂರು ತಿಂಗಳ ಚಂದಾದಾರಿಕೆಗೆ 14 ದಿನಗಳ ಹೆಚ್ಚುವರಿ ಸೇವೆ ಉಚಿತವಾಗಿರುತ್ತದೆ.

ಸೆಟ್ ಅಪ್ ಬಾಕ್ಸ್ ಸ್ವ್ಯಾಪ್:
ಡಿ2ಹೆಚ್ ಉಚಿತ ಸೆಟ್ ಅಪ್ ಬಾಕ್ಸ್ ಸ್ವ್ಯಾಪ್ ನ್ನು ಕೂಡ ಈ ಬೆನಿಫಿಟ್ ನ ಭಾಗವಾಗಿ ನೀಡುತ್ತದೆ. ಈ ಬೆನಿಫಿಟ್ ಗಳು ಮೊದಲು ಟೆಲಿಕಾಂ ಟಾಕ್ ನಲ್ಲಿ ಕಾಣಿಸಿತ್ತು. ಇದೀಗ ಡಿ2ಹೆಚ್ ಮತ್ತು ಡಿಶ್ ಟಿವಿಗಳು ಕೂಡ ಇದೇ ರೀತಿಯ ಬೆನಿಫಿಟ್ ನ್ನು ಕೆಲವು ದಿನಗಳಿಂದ ನೀಡಲು ಪ್ರಾರಂಭಿಸಿದೆ. ಆದರೆ ಪ್ಲಾನ್ ಆಫರ್ ನಲ್ಲಿ ಸ್ವಲ್ಪ ಬದಲಾವಣೆಗಳಿವೆ.

ಕಂಪೆನಿ ವೆಬ್ ಸೈಟ್ ಗೆ ಲಾಗಿನ್ ಆಗಿ:
ವೀಡಿಯೋಕಾನ್ ಡಿ2ಹೆಚ್ ಮತ್ತು ಡಿಶ್ ಟಿವಿಯ ಬೆನಿಫಿಟ್ ಗಳ ಬಗ್ಗೆ ಸಂಪೂರ್ಣ ಮಾಹಿತಿ ಬೇಕಿದ್ದಲ್ಲಿ ಅವರ ಕಂಪೆನಿ ವೆಬ್ ಸೈಟ್ ಗೆ ಲಾಗಿನ್ ಆಗಬಹುದು ಮತ್ತು ಸಂಪೂರ್ಣ ವಿವರವನ್ನು ಪಡೆಯುವುದಕ್ಕೆ ಅಲ್ಲಿ ನಿಮಗೆ ಅವಕಾಶವಿರುತ್ತದೆ.


Click it and Unblock the Notifications








