ಡಿಸ್ನಿ ಸಂಸ್ಥೆಯಿಂದ ಆನ್‌ಲೈನ್‌ ಸ್ಟೋರ್‌ ಪ್ರಾರಂಭ!

|

ಜನಪ್ರಿಯ ಡಿಸ್ನಿ ಸಂಸ್ಥೆ ನಿರೀಕ್ಷೆಯಂತೆ, ಭಾರತದಲ್ಲಿ ಆನ್‌ಲೈನ್ ಸ್ಟೋರ್‌ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಇನ್ನು ಆರಂಭದಲ್ಲಿ ಇದು 500 ನಗರಗಳಲ್ಲಿ ತನ್ನ ಸೌಲಭ್ಯಗಳನ್ನು ಒದಗಿಸಲು ಸಿದ್ದತೆ ನಡೆಸಿದೆ. ಸದ್ಯ ಈ ಹೊಸ ಸ್ಟೋರ್‌ ಅನ್ನು ಶಾಪ್‌ಡಿಸ್ನಿ.ಇನ್ ಎಂದು ಹೆಸರಿಸಲಾಗಿದೆ. ಇದಲ್ಲದೆ ಈ ಆನ್‌ಲೈನ್‌ ಸ್ಟೋರ್‌ನಲ್ಲಿ ಸ್ಟಾರ್ ವಾರ್ಸ್, ಮಾರ್ವೆಲ್, ಪಿಕ್ಸರ್ ಮತ್ತು ಡಿಸ್ನಿಯಂತಹ ಬ್ರಾಂಡ್‌ಗಳನ್ನು ಹೊಂದಿರುತ್ತದೆ. ಜೊತೆಗೆ ಈ ಸ್ಟೋರ್‌ನಲ್ಲಿ ಬಿಡಿಭಾಗಗಳು, ಬಟ್ಟೆ, ಆಟಿಕೆಗಳು ಮತ್ತು ಶಾಲೆಯ ಅಗತ್ಯ ವಸ್ತುಗಳು ಲಭ್ಯವಾಗಲಿವೆ.

‌ ಶಾಪ್‌ ಡಿಸ್ನಿ.ಇನ್

ಹೌದು, ಡಿಸ್ನಿ ಕಂಪೆನಿ ತನ್ನ ಆನ್‌ಲೈನ್‌ ಸ್ಟೋರ್‌ ಶಾಪ್‌ ಡಿಸ್ನಿ.ಇನ್‌ ಅನ್ನು ಭಾರತದಲ್ಲಿ ಪ್ರಾರಂಭಿಸುವುದಾಗಿ ಹೇಳಿದೆ. ಈ ಸ್ಟೋರ್‌ನಲ್ಲಿ ಅಗತ್ಯ ವಸ್ತುಗಳನ್ನ ಖರೀದಿಸಬಹುದಾಗಿದ್ದು, ದೇಶದ ಪ್ರಮುಖ ನಗರಗಳಲ್ಲಿ ಇದರ ಸೇವೆ ಲಭ್ಯವಾಗಲಿದೆ. ಇನ್ನು ಈ ಸ್ಟೋರ್‌ನಲ್ಲಿ ನೀವು ಖರೀದಿಸಿದರೆ ಫ್ರೀ ಶಿಪ್ಪಿಂಗ್‌, ಗಿಪ್ಟ್‌ ರ್ಯಾಪರ್‌, ಶಿಪ್ಪಿಂಗ್‌ ಬಾಕ್ಸ್‌, ಅನ್ನು ಪಡೆಯಬಹುದಾಗಿದೆ. ಇನ್ನುಳಿದಂತೆ ಡಿಸ್ನಿ ಆನ್‌ಲೈನ್‌ ಸ್ಟೋರ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆನ್‌ಲೈನ್‌ ಸ್ಟೋರ್‌ ಶಾಪ್‌

ಡಿಸ್ನಿ ತನ್ನ ಆನ್‌ಲೈನ್‌ ಸ್ಟೋರ್‌ ಶಾಪ್‌ ಡಿಸ್ನಿ.ಇನ್ ಅನ್ನು ಪ್ರಾರಂಭಿಸುವುದರ ಬಗ್ಗೆ ಅಧಿಕೃತವಾಗಿ ಘೋಷಿಸಿದೆ. ಇನ್ನು ಈ ಸ್ಟೋರ್‌ ಮೂಲಕ ಸಾಕಷ್ಟು ಹೊಸ ಮಾದರಿಯ ಸೇವೆಗಳನ್ನ ನೀಡುವ ಸೂಚನೆಯನ್ನ ಡಿಸ್ನಿ ನೀಡಿದೆ. ಅಲ್ಲದೆ ಈ ಸ್ಟೋರ್‌ನಿಂದ ಯಾವುದೇ ಪ್ರಾಡಕ್ಟ್‌ಗಳನ್ನ ಖರೀದಿಸುವಾಗ, ನೀವು ಡಿಸ್ನಿ ವಿನ್ಯಾಸಗೊಳಿಸಿದ ಶಿಪ್ಪಿಂಗ್ ಬಾಕ್ಸ್‌ಗಳು, ಉಡುಗೊರೆ ಹೊದಿಕೆ ಮತ್ತು ಉಚಿತ ಸಾಗಾಟವನ್ನು ಪಡೆಯಬಹುದಾಗಿದೆ ಆದರೂ ಈ ಸ್ಟೋರ್‌ನಿಂದ ನೀವು ಖರೀದಿಸಲು, ಮೊದಲಿಗೆ ಡಿಸ್ನಿ ಸ್ಟೋರ್‌ನಲ್ಲಿ ಅಕೌಂಟ್‌ ತೆರೆಯಬೇಕಾಗಿದೆ. ಡಿಸ್ನಿ ಸ್ಟೋರ್‌ನಲಿ ಈ ಹಂತಗಳನ್ನು ಅನುಸರಿಸಿ ಖಾತೆಯನ್ನು ರಚಿಸಬೇಕಾಗಿದೆ.

ಡಿಸ್ನಿ ಸ್ಟೋರ್‌ನಲ್ಲಿ ಅಕೌಂಟ್‌ ಕ್ರಿಯೆಟ್‌ ಮಾಡುವುದು ಹೇಗೆ?

ಡಿಸ್ನಿ ಸ್ಟೋರ್‌ನಲ್ಲಿ ಅಕೌಂಟ್‌ ಕ್ರಿಯೆಟ್‌ ಮಾಡುವುದು ಹೇಗೆ?

ಹಂತ 1: ಮೊದಲು, ನೀವು https://shopdisney.in/ ಗೆ ಭೇಟಿ ನೀಡಬೇಕು. ನಂತರ, ನೀವು ಸೈನ್ ಇನ್ ಮತ್ತು ಸೈನ್ ಅಪ್ ಆಯ್ಕೆಯನ್ನು ಕಾಣುತ್ತೀರಿ. ವೆಬ್‌ಸೈಟ್‌ನ ಬಲಭಾಗದಲ್ಲಿ ನನ್ನ ವಿಶ್‌ಲಿಸ್ಟ್‌ ಮತ್ತು ನನ್ನ ಬ್ಯಾಗ್ ಆಯ್ಕೆಯನ್ನು ಸಹ ನೀವು ನೋಡುತ್ತೀರಿ.

ಹಂತ 2: ಅದರ ನಂತರ, ನೀವು ಮೊದಲ ಮತ್ತು ಕೊನೆಯ ಹೆಸರಿನಂತಹ ವಿವರಗಳನ್ನು ಭರ್ತಿ ಮಾಡುವ ಮೂಲಕ ಖಾತೆಯನ್ನು ರಚಿಸಬೇಕು. ಇದು ಇಮೇಲ್ ಐಡಿ, ಫೋನ್ ಸಂಖ್ಯೆ ಅನ್ನು ಸಹ ಒಳಗೊಂಡಿದೆ, ಮತ್ತು ನೀವು ಪಾಸ್‌ವರ್ಡ್ ಅನ್ನು ಸಹ ಕ್ರಿಯೆಟ್‌ ಮಾಡಬೇಕು. ನಂತರ, ನಿಮ್ಮ ಲಿಂಗ, ನಿಮ್ಮ ಜನ್ಮ ದಿನಾಂಕವನ್ನು ಬರೆಯಿರಿ ಮತ್ತು ಖಾತೆ ರಚಿಸಿ ಆಯ್ಕೆಯನ್ನು ಟ್ಯಾಪ್ ಮಾಡಿದರೆ ನಿಮ್ಮ ಖಾತೆ ಕ್ರಿಯೆಟ್‌ ಆಗಲಿದೆ.

ಫೀಚರ್ಸ್‌

ಇದಾದ ನಂತರ, ನಿಮ್ಮನ್ನು ಮುಂದಿನ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ, ಇದು ಅಕ್ಷರ ಆಯ್ಕೆ, ಫೀಚರ್ಸ್‌ ಬ್ರ್ಯಾಂಡ್‌ಗಳು, ಆಟಿಕೆಗಳು, ಶಾಲೆಗೆ ಹಿಂತಿರುಗಿ ಮತ್ತು ಫ್ಯಾಷನ್ ವಿಭಾಗದಂತಹ ಆಯ್ಕೆಗಳನ್ನು ಪ್ರವೇಶಿಸಲು ನಿಮಗೆ ಅನುಮತಿಸುತ್ತದೆ. ಗೆಸ್ಟ್‌ ಶಾಪಿಂಗ್ ಮಾಡಲು ಸಹ ಇದು ನಿಮ್ಮನ್ನು ಅನುಮತಿಸುತ್ತದೆ.

Best Mobiles in India

English summary
As expected, Disney has announced the launch of an online store in India and initially it will provide its facilities in 500 cities.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X