Home
ಸುದ್ದಿಜಾಲ

ಜಿಯೋಸಿನಿಮಾಗೆ ಟಕ್ಕರ್‌ ಕೊಟ್ಟ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌! ಉಚಿತ ಸ್ಟ್ರೀಮಿಂಗ್‌ ಘೋಷಣೆ!

ಕ್ರಿಕೆಟ್‌ ಪ್ರಿಯರಿಗೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಗುಡ್‌ನ್ಯೂಸ್‌ ನೀಡಿದೆ. ಐಪಿಎಲ್‌ ಸಮಯದಲ್ಲಿ ಜಿಯೋ ಸಿನಿಮಾ ನೀಡಿದ ಹೊಡೆತಕ್ಕೆ ಪ್ರತಿಯಾಗಿ ಸೆಡ್ಡು ಹೊಡೆಯಲು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಮುಂದಾಗಿದೆ. ಇದಕ್ಕಾಗಿ ಮುಂಬರುವ ಏಷ್ಯಾಕಪ್‌ ಮತ್ತು ಐಸಿಸಿ ಪುರುಷರ ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿಯನ್ನು ಉಚಿತವಾಗಿ ಸ್ಟ್ರೀಮ್‌ ಮಾಡುವುದಾಗಿ ಹೇಳಿದೆ.

ಹೌದು, ಜಿಯೋ ಸಿನಿಮಾಗೆ ಸೆಡ್ಡು ಹೊಡೆದು ಮತ್ತೊಮ್ಮೆ ಕ್ರಿಕೆಟ್‌ ಪ್ರಿಯರ ಹಾಟ್‌ ಫೇವರಿಟ್‌ ಆಗುವ ಪ್ರಯತ್ನಕ್ಕೆ ಮುಂದಾಗಿದೆ. ಐಪಿಎಲ್‌ ಕ್ರಿಕೆಟ್‌ ವೇಳೆ ಜಿಯೋ ಸಿನಿಮಾ ಉಚಿತವಾಗಿ ಸ್ಟ್ರೀಮಿಂಗ್‌ ಮಾಡಿದ ರೀತಿಯಲ್ಲಿಯೇ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಕೂಡ ಉಚಿತವಾಗಿ ಕ್ರಿಕೆಟ್‌ ಮ್ಯಾಚ್‌ ಸ್ಟ್ರೀಮಿಂಗ್‌ ಮಾಡಲು ಮುಂದಾಗಿದೆ. ಹಾಗಾದ್ರೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಕ್ರಿಕೆಟ್‌ ಮ್ಯಾಚ್‌ ಅನ್ನು ಯಾವುದರಲ್ಲಿ ಉಚಿತವಾಗಿ ನೋಡಲು ಅವಕಾಶ ನೀಡಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋಸಿನಿಮಾಗೆ ಟಕ್ಕರ್‌ ಕೊಟ್ಟ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌!ಉಚಿತ ಸ್ಟ್ರೀಮಿಂಗ್

ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಮುಂಬರುವ ಏಷ್ಯಾ ಕಪ್ ಮತ್ತು ICC ಪುರುಷರ ವಿಶ್ವಕಪ್ ಅನ್ನು ಉಚಿತವಾಗಿ ಸ್ಟ್ರೀಮಿಂಗ್‌ ಮಾಡುವುದಾಗಿದೆ ಹೇಳಿದೆ. ಅದರಲ್ಲೂ ಭಾರತದಲ್ಲಿ ತನ್ನ ಮೊಬೈಲ್ ಬಳಕೆದಾರರಿಗೆ ಉಚಿತವಾಗಿ ಸ್ಟ್ರೀಮ್ ಮಾಡಲಿದೆ ಎಂದು ವರದಿಯಾಗಿದೆ. ಇದಕ್ಕೆ ಮುಖ್ಯ ಕಾರಣ ಐಪಿಎಲ್‌ 2023ರಲ್ಲಿ ಜಿಯೋ ಸಿನಿಮಾ ತೆಗೆದುಕೊಂಡಿದ್ದ ನಿರ್ಧಾರ. ಜಿಯೋ ಸಿನಿಮಾ ಪೂರ್ತಿ ಐಪಿಎಲ್‌ 2023 ಪಂದ್ಯಾವಳಿಯನ್ನು ಉಚಿತವಾಗಿ ಸ್ಟ್ರೀಮಿಂಗ್‌ ಮಾಡುವ ಮೂಲಕ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ಗೆ ಬಿಗ್‌ ಶಾಕ್‌ ನೀಡಿತ್ತು.

ಜಿಯೋಸಿನಿಮಾದ ಈ ನಿರ್ಧಾರದಿಂದ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ತನ್ನ ಚಂದಾದಾರರ ಸಂಖ್ಯೆಯಲ್ಲಿ ಕುಸಿತ ಅನುಭವಿಸಿತ್ತು. ಆದರೆ ಜಿಯೋಸಿನಿಮಾ ಇದೇ ಸಮಯದಲ್ಲಿ 44.9 ಕೋಟಿ ವೀಕ್ಷಣೆಯನ್ನು ಪಡೆದು ದಾಖಲೆ ಮಾಡಿದೆ. ಇದನ್ನು ಗಮನಿಸಿರುವ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಏಷ್ಯಾಕಪ್‌ ಹಾಗೂ ICC ವಿಶ್ವಕಪ್ 2023 ಅನ್ನು ಉಚಿತವಾಗಿ ಸ್ಟ್ರೀಮಿಂಗ್‌ ಮಾಡುವುದಾಗಿ ಘೋಷಣೆ ಮಾಡಿದೆ. ಈ ಮೂಲಕ ಜಿಯೋಸಿನಿಮಾದ ಹಾದಿಯಲ್ಲಿಯೇ ಜಿಯೋಗೆ ಟಕ್ಕರ್‌ ನೀಡಲು ಮುಂದಾಗಿದೆ.

ಪ್ರಸ್ತುತ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಕ್ರಿಕೆಟ್ ಪಂದ್ಯಾವಳಿಗಳು ಮತ್ತು ಇತರ ಕ್ರೀಡೆಗಳನ್ನು ವೀಕ್ಷಿಸಲು, ತಿಂಗಳಿಗೆ 299ರೂ ಗಳಿಂದ ಪ್ರಾರಂಭವಾಗುವ ಪ್ರೀಮಿಯಂ ಯೋಜನೆ ಹೊಂದಿರಬೇಕಾಗುತ್ತದೆ. ಇದಲ್ಲದೆ ಇದಕ್ಕಿಂತ ಹೆಚ್ಚಿನ ಬೆಲೆಯ ಚಂದಾದಾರಿಕೆಯನ್ನು ಸಹ ಖರೀದಿಸಬಹುದಾಗಿದೆ. ಸದ್ಯ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ತೆಗೆದುಕೊಂಡಿರುವ ನಿರ್ಧಾರ ಜಿಯೋಸಿನಿಮಾಗೆ ಹೇಗೆ ಹೊಡೆತ ನೀಡಲಿದೆ ಅನ್ನೊದನ್ನ ಕಾದು ನೋಡಬೇಕಿದೆ.

ಜಿಯೋಸಿನಿಮಾಗೆ ಟಕ್ಕರ್‌ ಕೊಟ್ಟ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌!ಉಚಿತ ಸ್ಟ್ರೀಮಿಂಗ್

ಇದಲ್ಲದೆ ಏರ್‌ಟೆಲ್ ಟೆಲಿಕಾಂ ತನ್ನ ಇತ್ತೀಚಿನ ಟಾರಿಫ್‌ ಅಪ್ಡೇಟ್‌ ಸಮಯದಲ್ಲಿ ಕೆಲವು ಪ್ರಿಪೇಯ್ಡ್ ಪ್ಲಾನ್‌ಗಳಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶ ನೀಡುವ ಅವಕಾಶವನ್ನು ನೀಡಿದೆ. ಅದರಂತೆ ಏರ್‌ಟೆಲ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತಿದೆ. ಹೊಸದಾಗಿ ಈ ಪ್ರಯೋಜನಗಳನ್ನು ಏರ್‌ಟೆಲ್‌ನ 719ರೂ, 779ರೂ. ಮತ್ತು 999ರೂ.ಬೆಲೆಯ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪಡೆದುಕೊಳ್ಳಬಹುದು.

ಏರ್‌ಟೆಲ್‌ 399ರೂ. ಪ್ರಿಪೇಯ್ಡ್‌ ಪ್ಲಾನ್‌: ಏರ್‌ಟೆಲ್‌ ಟೆಲಿಕಾಂನ ಈ ಪ್ರಿಪೇಯ್ಡ್‌ ಪ್ಲಾನ್‌ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದರಲ್ಲಿ ಅನಿಯಮಿತ ಕರೆಪ್ರಯೋಜನಗಳ ಜೊತೆಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಮೊಬೈಲ್‌ ಪ್ಲಾನ್‌ಗೆ 3 ತಿಂಗಳ ಉಚಿತ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದಾಗಿದೆ.

ಏರ್‌ಟೆಲ್‌ 499ರೂ. ಪ್ರಿಪೇಯ್ಡ್‌ ಪ್ಲಾನ್‌: ಈ ಪ್ಲಾನ್‌ನಲ್ಲಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಮೊಬೈಲ್‌ಗೆ 3 ತಿಂಗಳ ಉಚಿತ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಪ್ಲಾನ್‌ ಕೂಡ 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ದೈನಂದಿನ 3GB ಡೇಟಾ ಹಾಗೂ ಅನಿಯಮಿತ ಕರೆ ಸೌಲಭ್ಯ ಲಭ್ಯವಾಗಲಿದೆ.

Best Mobiles in India

English summary
Disney+ Hotstar has announced that the upcoming ICC World Cup 2023 will be available for free live streaming
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+