Home
ಸುದ್ದಿಜಾಲ

ಡಿಸ್ನಿ+ ಹಾಟ್‌ಸ್ಟಾರ್‌ನ ಹೊಸ ಪ್ಲ್ಯಾನ್‌ಗಳು ಸೆಪ್ಟೆಂಬರ್ 1 ರಿಂದ ಪ್ರಾರಂಭ!

ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಕೂಡ ಒಂದಾಗಿದೆ. ಡಿಸ್ನಿ+ ಹಾಟ್‌ಸ್ಟಾರ್‌ ಭಾರತದಲ್ಲಿ ಮೂರು ರೀತಿಯ ಚಂದದಾರಿಕೆ ಯೋಜನೆಗಳನ್ನು ನೀಡುತ್ತದೆ. ಇದೀಗ ತನ್ನ ಚಂದಾದಾರಿಕೆ ಯೋಜನೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದು, ಡಿಸ್ನಿ+ ಹಾಟ್‌ಸ್ಟಾರ್ ತನ್ನ ಮುಂಬರುವ ಯೋಜನೆಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿದೆ. ಸೆಪ್ಟೆಂಬರ್ 1 ರಿಂದ ಈ ಹೊಸ ಯೋಜನೆಗಳು ಲಭ್ಯವಾಗಲಿದೆ.

ಡಿಸ್ನಿ + ಹಾಟ್‌ಸ್ಟಾರ್‌

ಹೌದು, ಡಿಸ್ನಿ + ಹಾಟ್‌ಸ್ಟಾರ್‌ ತನ್ನ ಮೂರು ಹೊಸ ಚಂದಾದಾರಿಕೆ ಯೋಜನೆಗಳನ್ನು ಇದೇ ಸೆಪ್ಟೆಂಬರ್‌ 1 ರಿಂದ ಪರಿಚಯಿಸಲಿದೆ. ಇನ್ನು ಬಳಕೆದಾರರು ಮೊಬೈಲ್ ಅಪ್ಲಿಕೇಶನ್ ಅಥವಾ ವೆಬ್ ಆವೃತ್ತಿಯಲ್ಲಿ ಮೂರು ಹೊಸ ಯೋಜನೆಗಳನ್ನು ನೋಡುತ್ತಾರೆ. ಇವುಗಳು 499ರೂ ಮೊಬೈಲ್ ಪ್ಲಾನ್, 899ರೂ ಸೂಪರ್ ಪ್ಲಾನ್ ಮತ್ತು 1,499ರೂ, ಪ್ರೀಮಿಯಂ ಪ್ಲ್ಯಾನ್‌ ಅನ್ನು ಹೊಂದಿದೆ. ಹಾಗಾದ್ರೆ ಈ ಮೂರು ಹೊಸ ಪ್ಲ್ಯಾನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್ನಿ+ಹಾಟ್‌ಸ್ಟಾರ್ ಮೊಬೈಲ್ ಪ್ಲಾನ್

ಡಿಸ್ನಿ+ಹಾಟ್‌ಸ್ಟಾರ್ ಮೊಬೈಲ್ ಪ್ಲಾನ್

ಡಿಸ್ನಿ +ಹಾಟ್‌ಸ್ಟಾರ್‌ ನ ಹೊಸ ಮೂಲಭೂತ "ಮೊಬೈಲ್" ಪ್ಲಾನ್ ಇದೀಗ ವರ್ಷಕ್ಕೆ 499ರೂ, ನಿಂದ ಆರಂಭವಾಗಲಿದೆ. ಈ ಯೋಜನೆಯು ಒಂದು ಸಮಯದಲ್ಲಿ ಒಂದು ಡಿವೈಸ್‌ ಅನ್ನು ಮಾತ್ರ ಬೆಂಬಲಿಸುತ್ತದೆ. ಸ್ಟಿರಿಯೊ ಆಡಿಯೋ ಗುಣಮಟ್ಟ ಮತ್ತು 720ಪಿ ವಿಡಿಯೋ ಗುಣಮಟ್ಟವನ್ನು ಬೆಂಬಲಿಸಲಿದೆ. ಪ್ರಸ್ತುತ, ಮೂಲ ಡಿಸ್ನಿ+ ಹಾಟ್ ಸ್ಟಾರ್ ವಿಐಪಿ ಪ್ಲಾನ್ ಬೆಲೆ 399 ರೂ. ಅಗಿದೆ. ವೆಬ್ ಮತ್ತು ಲಿವಿಂಗ್ ರೂಮ್ ಸಾಧನಗಳು ಸೇರಿದಂತೆ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುವ ಉಚಿತ ವಿಷಯವನ್ನು ವೀಕ್ಷಿಸಲು ಅಪ್ಲಿಕೇಶನ್ ನಿಮಗೆ ಅನುಮತಿಸುತ್ತದೆ.

ಡಿಸ್ನಿ+ ಹಾಟ್‌ಸ್ಟಾರ್ ಸೂಪರ್ ಪ್ಲ್ಯಾನ್‌

ಡಿಸ್ನಿ+ ಹಾಟ್‌ಸ್ಟಾರ್ ಸೂಪರ್ ಪ್ಲ್ಯಾನ್‌

ಡಿಸ್ನಿ+ ಹಾಟ್‌ಸ್ಟಾರ್ ನೀಡುತ್ತಿರುವ ಎರಡನೇ ಯೋಜನೆ "ಸೂಪರ್" ಪ್ಲ್ಯಾನ್‌ ಆಗಿದೆ. ಇದರ ಬೆಲೆ ವರ್ಷಕ್ಕೆ 899 ರೂ.ಆಗಿದೆ. ಇನ್ನು ಈ ಪ್ಲ್ಯಾನ್‌ ಒಂದು ಸಮಯದಲ್ಲಿ ಎರಡು ಡಿವೈಸ್‌ಗಳನ್ನು ಮತ್ತು ಡಾಲ್ಬಿ 5.1 ಆಡಿಯೊ ಗುಣಮಟ್ಟವನ್ನು ಬೆಂಬಲಿಸುತ್ತದೆ. ಈ ಪ್ಲಾನ್ ನಲ್ಲಿ ಬಳಕೆದಾರರು 1080p ವಿಡಿಯೋ ಗುಣಮಟ್ಟವನ್ನು ಪಡೆಯುತ್ತಾರೆ.

ಡಿಸ್ನಿ+ಹಾಟ್‌ಸ್ಟಾರ್ ಪ್ರೀಮಿಯಂ ಪ್ಲ್ಯಾನ್‌

ಡಿಸ್ನಿ+ಹಾಟ್‌ಸ್ಟಾರ್ ಪ್ರೀಮಿಯಂ ಪ್ಲ್ಯಾನ್‌

ಸೆಪ್ಟೆಂಬರ್ 1 ರಿಂದ, ಪ್ರೀಮಿಯಂ ಪ್ಲಾನ್ ಇನ್ನೂ ವರ್ಷಕ್ಕೆ 1,499 ರೂ.ಆಗಲಿದೆ. ಈ ಪ್ಲ್ಯಾನ್‌ನಲ್ಲಿ ಒಂದು ಸಮಯದಲ್ಲಿ ಯಾವುದೇ ನಾಲ್ಕು ಸಾಧನಗಳಿಗೆ ಲಾಗ್ ಇನ್ ಮಾಡಲು ನಿಮ್ಮನ್ನು ಅನುಮತಿಸುತ್ತದೆ. ಈ ಯೋಜನೆಯು 4K ವಿಡಿಯೋ ಗುಣಮಟ್ಟ ಮತ್ತು ಡಾಲ್ಬಿ 5.1 ಆಡಿಯೋ ಗುಣಮಟ್ಟವನ್ನು ಸಹ ಬೆಂಬಲಿಸುತ್ತದೆ. ಅಪ್ಲಿಕೇಶನ್ ಯಾವುದೇ ಹೆಚ್ಚುವರಿ ಸಾಧನವನ್ನು ಪತ್ತೆಹಚ್ಚಿದರೆ, ಅದು ಈ ಹಿಂದೆ ಲಾಗ್ ಇನ್ ಮಾಡಿರುವ ಯಾವುದೇ ಸಾಧನವನ್ನು ತೆಗೆದುಹಾಕುತ್ತದೆ.

ಈ ಯೋಜನೆಯೊಂದಿಗೆ, ಬಳಕೆದಾರರು ಮೊಬೈಲ್, ವೆಬ್ ಮತ್ತು ಬೆಂಬಲಿತ ಲಿವಿಂಗ್ ರೂಮ್ ಸಾಧನಗಳಲ್ಲಿ ವಿಷಯವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಬಳಕೆದಾರರು ಜಾಹೀರಾತು ರಹಿತ ವಿಷಯವನ್ನು ಪರಿಶೀಲಿಸಲು ಸಹ ಸಾಧ್ಯವಾಗುತ್ತದೆ, ಆದರೆ ಕ್ರೀಡೆಗಳು ಮತ್ತು ಇತರ ಲೈವ್ ಶೋಗಳಂತಹ ಲೈವ್ ಕಂಟೆಂಟ್‌ನಲ್ಲಿ ನೀವು ಜಾಹೀರಾತುಗಳನ್ನು ನೋಡುತ್ತೀರಿ.

ಹಳೆಯ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಗೆ ಏನಾಗುತ್ತದೆ?

ಹಳೆಯ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಗೆ ಏನಾಗುತ್ತದೆ?

ಈಗಿರುವ ಎಲ್ಲ ಡಿಸ್ನಿ+ಹಾಟ್‌ಸ್ಟಾರ್ ವಿಐಪಿ ಬಳಕೆದಾರರು ತಮ್ಮ ಪ್ರಸ್ತುತ ಯೋಜನೆಯ ಲಾಭವನ್ನು ಸದಸ್ಯತ್ವ ಅವಧಿ ಮುಗಿಯುವವರೆಗೂ ಆನಂದಿಸುತ್ತಾರೆ ಎಂದು ಕಂಪನಿ ಹೇಳುತ್ತಿದೆ. ಬಳಕೆದಾರರು ಹಿಂದೆ ಬಳಸಿದಂತೆ ಟಿವಿ ಮತ್ತು ಇತರ ಬೆಂಬಲಿತ ಸಾಧನಗಳಿಗೆ ಲಾಗ್ ಇನ್ ಮಾಡಲು ಸಾಧ್ಯವಾಗುತ್ತದೆ. ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರು ಇನ್ನೂ ಎಲ್ಲಾ ಇಂಗ್ಲಿಷ್ ವಿಷಯವನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ನಿಮ್ಮ ಅಸ್ತಿತ್ವದಲ್ಲಿರುವ ಡಿಸ್ನಿ+ಹಾಟ್‌ಸ್ಟಾರ್ ವಿಐಪಿ ಯೋಜನೆ ಅವಧಿ ಮುಗಿದ ನಂತರ, ನೀವು ಹೊಸ ಮೊಬೈಲ್ ಯೋಜನೆಯನ್ನು ಖರೀದಿಸಬೇಕಾಗುತ್ತದೆ. ಪ್ರೀಮಿಯಂ ಸದಸ್ಯರಿಗೂ ಇದು ಅನ್ವಯಿಸುತ್ತದೆ.

ಏನು ನೆನಪಿನಲ್ಲಿಟ್ಟುಕೊಳ್ಳಬೇಕು?

ಏನು ನೆನಪಿನಲ್ಲಿಟ್ಟುಕೊಳ್ಳಬೇಕು?

ಡಿಸ್ನಿ+ಹಾಟ್‌ಸ್ಟಾರ್ ವಿಐಪಿ ಬಳಕೆದಾರರು ಸ್ಟಾರ್ ಸೀರಿಯಲ್‌ಗಳು, ಚಲನಚಿತ್ರಗಳು, ಲೈವ್ ಕ್ರೀಡೆಗಳು ಮತ್ತು ಇತರ ಲೈವ್ ಶೋಗಳಲ್ಲಿ ಜಾಹೀರಾತುಗಳನ್ನು ವೀಕ್ಷಿಸುತ್ತಾರೆ. ಆದರೆ, ಹಾಟ್‌ಸ್ಟಾರ್ ವಿಶೇಷಗಳು ಜಾಹೀರಾತು-ಮುಕ್ತವಾಗಿರುತ್ತವೆ. ಲೈವ್ ಪ್ರದರ್ಶನಗಳನ್ನು ಹೊರತುಪಡಿಸಿ ಡಿಸ್ನಿ+ ಹೋಸ್ಟ್‌ಸ್ಟಾರ್ ಪ್ರೀಮಿಯಂ ಬಳಕೆದಾರರು ಯಾವುದೇ ಜಾಹೀರಾತುಗಳನ್ನು ಪಡೆಯುವುದಿಲ್ಲ.

ಪ್ಲಾಟ್‌ಫಾರ್ಮ್‌

ಸೆಪ್ಟೆಂಬರ್ 1 ರಿಂದ, ಎಲ್ಲಾ ಹೊಸ ಚಂದಾದಾರರು ಮೂರು ಯೋಜನೆಗಳಲ್ಲಿ ಒಂದನ್ನು ಆರಿಸಿಕೊಳ್ಳಬಹುದು. ಎಲ್ಲಾ ಹೊಸ ಯೋಜನೆಗಳು ಪ್ಲಾಟ್‌ಫಾರ್ಮ್‌ನಲ್ಲಿರುವ ಎಲ್ಲಾ ವಿಷಯಗಳಿಗೆ ನಿಮಗೆ ಪ್ರವೇಶವನ್ನು ನೀಡುತ್ತದೆ. ಇದು ಅನಿಯಮಿತ ಲೈವ್ ಕ್ರೀಡೆಗಳು, ಇತ್ತೀಚಿನ ಭಾರತೀಯ ಚಲನಚಿತ್ರ ಡಿಜಿಟಲ್ ಪ್ರೀಮಿಯರ್‌ಗಳು, ಹಾಟ್‌ಸ್ಟಾರ್ ವಿಶೇಷತೆಗಳು, ಟಿವಿಗಿಂತ ಮುಂಚೆ ಸ್ಟಾರ್ ಸೀರಿಯಲ್‌ಗಳು ಮತ್ತು ಡಿಸ್ನಿ+ ಒರಿಜಿನಲ್ಸ್, ಜನಪ್ರಿಯ ಡಿಸ್ನಿ ಚಲನಚಿತ್ರಗಳು ಮತ್ತು ಮಕ್ಕಳ ಕಾರ್ಯಕ್ರಮಗಳು, ಲಭ್ಯವಾಗಲಿದೆ.

Best Mobiles in India

English summary
The new Disney+ Hotstar plans will be available starting September 1.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+