ಕ್ರಿಕೆಟ್‌ ಪ್ರೇಮಿಗಳಿಗಾಗಿ ಹೊಸ ಫೀಚರ್ಸ್‌ ಪರಿಚಯಿಸಿದ ಡಿಸ್ನಿ+ ಹಾಟ್‌ಸ್ಟಾರ್ !

|

ಜನಪ್ರಿಯ ಡಿಸ್ನಿ+ ಹಾಟ್‌ಸ್ಟಾರ್ ದೇಶದ ಅತ್ಯಂತ ಜನಪ್ರಿಯ ಸ್ಟ್ರೀಮಿಂಗ್ ಸೇವೆಯಾಗಿದೆ. ಇದು ಡ್ರೀಮ್ 11 ಐಪಿಎಲ್, ಫಾರ್ಮುಲಾ 1, ಸ್ಟಾರ್ ಟಿವಿ ಪ್ರದರ್ಶನಗಳು, ಡಿಸ್ನಿ+ ಪ್ರದರ್ಶನಗಳು ಮತ್ತು ಹೆಚ್ಚಿನದನ್ನು ಗ್ರಾಹಕರಿಗೆ ನೀಡುತ್ತದೆ. ಸದ್ಯ ಇದೀಗ ಕ್ರಿಕೆಟ್‌ ಪ್ರಿಯರಿಗಾಗಿ ಡಿಸ್ನಿ + ಹಾಟ್‌ಸ್ಟಾರ್ "ವಾಚ್ ವಿಥ್ ಯುವರ್ ಫ್ರೆಂಡ್ಸ್" ಫೀಚರ್ಸ್‌ಅನ್ನು ಹೊರತಂದಿದೆ. ಇದು ನೀವು ಕ್ರಿಕೆಟ್ ವೀಕ್ಷಿಸುವಾಗ ಸ್ನೇಹಿತರು ಮತ್ತು ಕುಟಂಬದ ಸದಸ್ಯರ ಜೊತೆಗೆ ವೀಡಿಯೊ ಕರೆ ಮಾಡುವುದಕ್ಕೆ ಅವಕಾಶವನ್ನು ನೀಡುತ್ತದೆ. ಇದು ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಮಾತ್ರ ಅನ್ವಯಿಸುತ್ತದೆ.

ಡಿಸ್ನಿ + ಹಾಟ್‌ಸ್ಟಾರ್

ಹೌದು, ಡಿಸ್ನಿ + ಹಾಟ್‌ಸ್ಟಾರ್ ತನ್ನ ಬಳಕೆದಾರರಿಗೆ ''ವಾಚ್ ವಿಥ್ ಯುವರ್ ಫ್ರೆಂಡ್ಸ್'' ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ಮೂಲಕ ಐಪಿಎಲ್‌ ಕ್ರಿಕೆಟ್‌ ಫೈನಲ್‌ ಮ್ಯಾಚ್‌ ಅನ್ನು ವೀಕ್ಷಿಸುವಾಗ ನಿಮ್ಮ ಸ್ನೇಹಿತರಿಗೆ ವಿಡಿಯೋ ಕರೆ ಮಾಡಬಹುದಾಗಿದೆ. ಅಲ್ಲದೆ ವಿಡಿಯೋ ಕರೆಯಲ್ಲಿ ನೀವು ಮತ್ತು ನಿಮ್ಮ ಸ್ನೇಹಿತರು ಐಪಿಎಲ್‌ ಪೈನಲ್‌ ಮ್ಯಾಚ್‌ ಅನ್ನು ಒಟ್ಟಿಗೆ ನೋಡಬಹುದಾಗಿದೆ. ಹಾಗಾದ್ರೆ ''ವಾಚ್ ವಿಥ್ ಯುವರ್ ಫ್ರೆಂಡ್ಸ್'' ಫೀಚರ್ಸ್‌ ಅನ್ನು ಡಿಸ್ನಿ + ಹಾಟ್‌ಸ್ಟಾರ್ ನಲ್ಲಿ ಸೆಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್ನಿ + ಹಾಟ್‌ಸ್ಟಾರ್

ಡಿಸ್ನಿ + ಹಾಟ್‌ಸ್ಟಾರ್ ಸ್ಟ್ರೀಮಿಂಗ್‌ ಸೇವೆಯಲ್ಲಿ ವಾಚ್ ವಿಥ್ ಯುವರ್ ಫ್ರೆಂಡ್ಸ್ ಅನ್ನು ಆಕ್ಟಿವ್‌ ಮಾಡುವುದು ತುಂಬಾ ಸುಲಭವಾಗಿದೆ. ಸದ್ಯ ಈ ಫೀಚರ್ಸ್‌ ಅನ್ನು ನೀವು ಲೈವ್ ಐಪಿಎಲ್ ಪಂದ್ಯದಲ್ಲಿ ಪ್ಲೇ ಮಾಡಬಹುದಾಗಿದೆ. ಸದ್ಯ 2020 ಐಪಿಎಲ್ ಫೈನಲ್ ಪಂದ್ಯವನ್ನು ಮಾತ್ರ ವಾಚ್ ವಿಥ್ ಯುವರ್ ಫ್ರೆಂಡ್ಸ್ ಫೀಚರ್ಸ್‌ನಲ್ಲಿ ವೀಕ್ಷಿಸಬಹುದಾಗಿದೆ. ಇದಕ್ಕಾಗಿ ನೀವು ಮೊದಲು ಲೈವ್‌ ಮ್ಯಾಚ್‌ ಅನ್ನು ಪ್ಲೇ ಮಾಡಿ - ತದನಂತರ "Start Video Call" ಕ್ಲಿಕ್ ಮಾಡಿ. ಈ ಆಯ್ಕೆಯು ನಿಮ್ಮ ಡಿವೈಸ್‌ನ ಜೊತೆ ಪೋರ್ಟ್ರೇಟ್ ಮೋಡ್‌ನಲ್ಲಿ ಮಾತ್ರ ಲಭ್ಯವಿದೆ. ಅಂದರೆ ನೀವು ಈ ಪಂದ್ಯವನ್ನು ಫುಲ್‌ ಸ್ಕ್ರೀನ್‌ ಅಲ್ಲಿ ವೀಕ್ಷಿಸಲಾಗುವುದಿಲ್ಲ.

ಡಿಸ್ನಿ + ಹಾಟ್‌ಸ್ಟಾರ್

ಇನ್ನು ಡಿಸ್ನಿ + ಹಾಟ್‌ಸ್ಟಾರ್‌ನ "ವಾಚ್ ವಿಥ್ ಯುವರ್ ಫ್ರೆಂಡ್ಸ್" ನೊಂದಿಗೆ ನೀವು ಐದು ಸ್ನೇಹಿತರನ್ನು ಮಾತ್ರ ಸೇರಿಸಬಹುದು. ನಿಮ್ಮ ಸ್ನೇಹಿತರು ಒಮ್ಮೆ ಬೋರ್ಡ್‌ನಲ್ಲಿದ್ದರೆ, ಪಂದ್ಯದ ವ್ಯಾಖ್ಯಾನ ಮತ್ತು ನಿಮ್ಮ ಸ್ನೇಹಿತರ ಸಂಭಾಷಣೆಗಾಗಿ ನೀವು ವಾಲ್ಯೂಮ್ ಗುಬ್ಬಿಗಳಿಗೆ ಪ್ರವೇಶವನ್ನು ಪಡೆಯುತ್ತೀರಿ. ನೀವು ಯಾವುದಕ್ಕೆ ಆದ್ಯತೆ ನೀಡಲು ಬಯಸುತ್ತೀರಿ ಎಂಬುದನ್ನು ನಿರ್ಧರಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ವೀಡಿಯೊ ಕರೆ ತುಂಬಾ ಬೇಡಿಕೆಯಿದ್ದರೆ, ನೀವು "ಆಡಿಯೊ ಮಾತ್ರ" ಆಯ್ಕೆಯನ್ನು ಸಹ ಆರಿಸಿಕೊಳ್ಳಬಹುದಾಗಿದೆ.

ಡಿಸ್ನಿ + ಹಾಟ್‌ಸ್ಟಾರ್

ಸದ್ಯ ಡಿಸ್ನಿ + ಹಾಟ್‌ಸ್ಟಾರ್‌ನ "ವಾಚ್ ವಿಥ್ ಯುವರ್ ಫ್ರೆಂಡ್ಸ್'' ಮೂಲಕ ನಿಮ್ಮ ಸ್ನೇಹಿತರೊಂದಿಗೆ ಲೈವ್‌ ಪಂದ್ಯವನ್ನು ವೀಕ್ಷಿಸಬಹುದು, ಪಂದ್ಯದ ಬಗ್ಗೆ ಪರಸ್ಪರ ಚರ್ಚೆ ನಡೆಸಬಹುದು. ಈ ಮೂಲಕ ಒಮದೇ ಕಡೆ ಕುಳಿತು ಪಂದ್ಯ ವೀಕ್ಷಿಸಿದ ಅನುಭವ ನಿಮಗೆ ದೊರೆಯಲಿದೆ. ಇನ್ನು ಲೈವ್-ಅಲ್ಲದ ಮ್ಯಾಚ್‌ಗಳನ್ನ ನೊಡಬಹುದಾ? ಎನ್ನುವ ವಿಚಾರದ ಬಗ್ಗೆ ಇನ್ನು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇನ್ನು ಡಿಸ್ನಿ + ಅಪ್ಲಿಕೇಶನ್ "ಗ್ರೂಪ್ ವಾಚ್" ಫೀಚರ್ಸ್‌ ಅನ್ನು ಸಹ ಹೊಂದಿದ್ದು ಅದು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸೇವೆಯಲ್ಲಿ ಯಾವುದೇ ಶೀರ್ಷಿಕೆಯನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ.

Most Read Articles
Best Mobiles in India

English summary
Disney+ Hotstar has rolled out a “Watch with your friends” feature that allows you to video call friends and family while you watch cricket.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X