Home
ಸುದ್ದಿಜಾಲ

ಇದೇ ಮಾರ್ಚ್‌ 29ರಂದು ಭಾರತದಲ್ಲಿ 'ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌' ಲಾಂಚ್‌!

ಇತ್ತೀಚಿನ ದಿನಗಳಲ್ಲಿ ವಿಡಿಯೋ ಆನ್‌ ಡಿಮ್ಯಾಂಡ್‌ ಸ್ಟ್ರೀಮಿಂಗ್‌ ಸೇವೆ ನೀಡುವ ಆಪ್ಲಿಕೇಶನ್‌ಗಳು ಬಾರಿ ಜನಪ್ರಿಯತೆಯನ್ನ ಗಳಿಸುತ್ತಿವೆ. ಈ ಆಪ್ಲಿಕೇಶನ್‌ಗಳ ಮೂಲಕ ನಿಮಗಿಷ್ಟವಾದ ಕಾರ್ಯಕ್ರಮವನ್ನ ನಿಮಗೆ ಬೇಕು ಎನಿಸಿದಾಗ ನೋಡುವ ಅವಕಾಶವನ್ನ ಕಲ್ಪಿಸಲಾಗಿದೆ. ಅದರಲ್ಲೂ ಹಿಂದಿನ ದಿನ ನಡೆದ ಕಾರ್ಯಕ್ರಮಗಳನ್ನ ಮತ್ತೆ ನೋಡುವ ಅವಕಾಶ ಇವುಗಳಲ್ಲಿ ಸಿಗುವುದರಿಂದ ಈ ಮಾದರಿಯ ಆಪ್ಲಿಕೇಶನ್‌ ಸೇವೆಗಳಿಗೆ ಭಾರಿ ಬೇಡಿಕೆ ಇದೆ.

ಹೌದು

ಹೌದು ವಿಡಿಯೋ ಆನ್‌ ಡಿಮಾಂಡ್‌ ಸ್ಟ್ರೀಮಿಂಗ್‌ ಸೇವೆ ನೀಡುವ ಆಪ್ಲಿಕೇಶನ್‌ಗಳಲ್ಲಿ ಡಿಸ್ನಿ + ಕೂಡ ಒಂದಾಗಿದ್ದು, ಇದು ಅಮೆರಿಕಾದ ಚಂದಾದಾರಿಕೆ ವಿಡಿಯೋ ಆನ್-ಡಿಮಾಂಡ್ ಸ್ಟ್ರೀಮಿಂಗ್ ಸೇವೆಯಾಗಿದ್ದು, ದಿ ವಾಲ್ಟ್ ಡಿಸ್ನಿ ಕಂಪನಿಯ ಡೈರೆಕ್ಟ್-ಟು-ಕನ್ಸ್ಯೂಮರ್ & ಇಂಟರ್ ನ್ಯಾಷನಲ್ ವಿಭಾಗದ ಒಡೆತನದಲ್ಲಿದೆ. ಇದೀಗ ಈ ಕಂಪೆನಿ ಇದೇ ಮಾರ್ಚ್‌ 29 ರಿಂದ ಭಾರತದಲ್ಲಿ ತನ್ನ ಸೇವೆಯನ್ನ ಪ್ರಾರಂಭಿಸಲಿದೆ ಎಂದು ಹೇಳಲಾಗ್ತಿದೆ.

ಸದ್ಯ

ಸದ್ಯ ದಿ ವಾಲ್ಟ್‌ ಕಂಪೆನಿಯ ಅಂಗಸಂಸ್ಥೆಯಾದ ಡೆಸ್ನಿ ಪ್ಲಸ್‌ ಮಾರ್ಚ್‌ 29 ರಿಂದ ಭಾರತದಲ್ಲಿ ತನ್ನ ಸೇವೆಯನ್ನ ಪ್ರಾರಂಭಿಸಲಿದೆ. ಸದ್ಯ ಈಗಾಗ್ಲೆ ದಿ ವಾಲ್ಟ್‌ನ ಅಂಗಸಂಸ್ಥೆಯಾದ ಹಾಟ್‌ಸ್ಟಾರ್‌ ಭಾರತದಲ್ಲಿ ಯಶಸ್ವಿಯಾಗಿದೆ. ಇದೀಗ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ಅನ್ನು ‘ಡಿಸ್ನಿ + ಹಾಟ್‌ಸ್ಟಾರ್' ಎಂದು ಹೆಸರನ್ನು ಬದಲಾಯಿಸಿಕೊಳ್ಳುವ ಮೂಲಕ ಹಾಟ್‌ಸ್ಟಾರ್‌ ಹಾಗೂ ಡಿಸ್ನಿ ಪ್ಲಸ್‌ ಒಂದೇ ವೇದಿಕೆಯಲ್ಲಿ ಕಾರ್ಯನಿರ್ವಹಿಲಿವೆ.

ವೀಡಿಯೊ

ಇನ್ನು ವೀಡಿಯೊ ಸ್ಟ್ರೀಮಿಂಗ್ ಸೇವೆಯಾದ ಡಿಸ್ನಿ ಪ್ಲಸ್‌ ಪ್ರಸ್ತುತ ಕೆನಡಾ, ಯುಎಸ್, ನೆದರ್ಲ್ಯಾಂಡ್ಸ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಂತಹ ದೇಶಗಳಲ್ಲಿ ಲಭ್ಯವಿದೆ. ಇದೀಗ ಭಾರತಕ್ಕೆ ಹಾಟ್‌ಸ್ಟಾರ್‌ ಹೆಸರನ್ನು ಮರು ನಾಮಕರಣ ಮಾಡುವ ಮೂಲಕ ಎಂಟ್ರಿ ಕೋಡೊಕೆ ಡಿಸ್ನಿ ಪ್ಲಸ್‌ ಸಿದ್ದವಾಗಿದ್ದು, ಕಂಪನಿಯ ಸಿಇಒ ಮತ್ತು ಅಧ್ಯಕ್ಷ ರಾಬರ್ಟ್ ಇಗರ್ ಪ್ರಕಾರ ಭಾರತೀಯ ಬಳಕೆದಾರರು ಡಿಸ್ನಿ ಪ್ಲಸ್‌ ಆಪ್ಲಿಕೇಶನ್‌ ಅನ್ನು ಪ್ರವೇಶಿಸಲು APKPure ಮತ್ತು VPN ಅಪ್ಲಿಕೇಶನ್ ಅನ್ನು ಬಳಸಬೇಕಾಗಿಲ್ಲ.

ಡಿಸ್ನಿ

ಇದಲ್ಲದೆ ಡಿಸ್ನಿ ಪ್ಲಸ್‌ ಕಂಪನಿಯು 2020ರ IPL ಕ್ರಿಕೆಟ್ ಋತು ಆರಂಭವಾಗುವ ವೇಳೆಗೆ ಹಾಟ್‌ಸ್ಟಾರ್‌ ಮೂಲಕ ಭಾರತದಲ್ಲಿ ಡಿಸ್ನಿ ಪ್ಲಸ್ ಅನ್ನು ಪ್ರಾರಂಭಿಸುತ್ತೇವೆ ಎಂದು ಡಿಸ್ನಿ ಪ್ಲಸ್‌ ಕಂಪನಿಯ ಸಿಇಒ ರಾಬರ್ಟ್ ಇಗರ್ ಹೇಳಿದ್ದಾರೆ. ಅಲ್ಲದೆ ಡಿಸ್ನಿ ಪ್ಲಸ್‌ ಭಾರತದಲ್ಲಿ ತಿಂಗಳಿಗೆ 590 ರೂ.ಗಳ ಆರಂಭಿಕ ಬೆಲೆಯೊಂದಿಗೆ ಲಭ್ಯವಿರುತ್ತದೆ. ವಾರ್ಷಿಕ ಆಧಾರದ ಮೇಲೆ, ಭಾರತದಲ್ಲಿ ಡಿಸ್ನಿ ಪ್ಲಸ್‌ ಅನ್ನು ಸಬ್‌ಸ್ಕ್ರೈಬ್‌ ಮಾಡಲು ನೀವು ವರ್ಷಕ್ಕೆ 5,900 ರೂ. ಪಾವತಿಸಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.

ಗ್ರಾಹಕರು

ಪ್ರಸ್ತುತ, ಹಾಟ್‌ಸ್ಟಾರ್ ಎರಡು ಚಂದಾದಾರಿಕೆ ಯೋಜನೆಗಳನ್ನು ನೀಡುತ್ತದೆ, ಇದರಲ್ಲಿ ಒಂದು ವರ್ಷಕ್ಕೆ 999 ರೂ. ಮತ್ತು ಒಂದು ತಿಂಗಳು 299 ರೂ. ಹಾಟ್‌ಸ್ಟಾರ್ ವಿಐಪಿ ಯೋಜನೆಯೂ ಇದೆ, ಇದನ್ನು ಗ್ರಾಹಕರು 365 ರೂ.ಗೆ ಖರೀದಿಸಬಹುದು, ಮತ್ತು ಈ ಬೆಲೆ ವಾರ್ಷಿಕ ಆಧಾರದಲ್ಲಿರುತ್ತದೆ. ಅಮೆಜಾನ್ ಪ್ರೈಮ್ ವಿಡಿಯೋದ ಬೆಲೆ ತಿಂಗಳಿಗೆ 129 ರೂ. ಅಥವಾ ವರ್ಷಕ್ಕೆ 999 ರೂ. ಆಗಿದೆ. ಇನ್ನು ನೆಟ್‌ಫ್ಲಿಕ್ಸ್‌ನಲ್ಲಿ ಬಳಕೆದಾರರು ತಿಂಗಳಿಗೆ 499 ರೂ. ಶುಲ್ಕ ನೀಡುತ್ತಾರೆ ಅಲ್ಲದೆ 649 ರೂ.ಗಳ ಸ್ಟ್ಯಾಂಡರ್ಡ್ ಯೋಜನೆ ಮತ್ತು ತಿಂಗಳಿಗೆ 799 ರೂ. ಪ್ರೀಮಿಯಂ ಯೋಜನೆಯನ್ನು ಸಹ ನೀಡಲಾಗಿದೆ.

ಗಮನಿಸಿರುವ

ಇದೇಲ್ಲವನ್ನ ಗಮನಿಸಿರುವ ಡಿಸ್ನಿ ಪ್ಲಸ್‌ ಕಂಪೆನಿ ಈಗಾಗ್ಲೆ ಅಸ್ತಿತ್ವದಲ್ಲಿರುವ ಹಾಟ್‌ಸ್ಟಾರ್ ವಿಐಪಿ ಮತ್ತು ಪ್ರೀಮಿಯಂ ಚಂದಾದಾರಿಕೆ ಶ್ರೇಣಿಗಳನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ಗೆ ಮರುಬ್ರಾಂಡ್ ಮಾಡುವ ಮೂಲಕ ಇತರೆ ವಿಡಿಯೋ ಸ್ಟ್ರೀಮಿಂಗ್‌ ಸೇವೆಗಳಿಗೆ ಸೆಡ್ಡು ಹೊಡೆಯಲು ಮುಂದಾಗಿದೆ. ಡಿಸ್ನಿ ಪ್ಲಸ್ ಸೇವೆಯನ್ನು ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಮತ್ತು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಭಾರತವು ಒಂದಾಗಿದ್ದು, ಇದು ಹಾಟ್‌ಸ್ಟಾರ್‌ ಮೂಲಕ ಅರಿವಾಗಿದೆ. ಈಗಾಗಿ ನಾವು ಡಿಸ್ನಿ ಪ್ಲಸ್‌ ಸೇವೆ ಪ್ರಾರಂಭಿಸುತ್ತೇವೆ ಅನ್ನೊ ಮಾತನ್ನ ಡಿಸ್ನಿ ಕಂಪೆನಿ ಹೇಳಿಕೊಂಡಿದೆ.

Best Mobiles in India

English summary
Disney+ will likely be available with a starting price of Rs 590 per month in India. The Disney+ India launch will take place on March 29.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+