ಇಂದಿನಿಂದ ಶಿಯೋಮಿ 'ದಿವಾಲಿ ವಿತ್ ಮಿ' ಮೆಗಾಸೇಲ್ ಆರಂಭ!

|

ಭಾರತದ ಮೊಬೈಲ್ ಮಾರುಕಟ್ಟೆ ದಿಗ್ಗಜಕ 'ಶಿಯೋಮಿ' ಕಂಪೆನಿ ದೀಪಾವಳಿ ಕೊಡುಗೆಯಾಗಿ ಮತ್ತೊಂದು ಆನ್‌ಲೈನ್ ಮೆಗಾಸೇಲ್ ಅನ್ನು ಹಮ್ಮಿಕೊಂಡಿದೆ. ಫ್ಲಿಪ್‌ಕಾರ್ಟ್, ಅಮೆಜಾನ್‌ ಸಂಸ್ಥೆಗಳ ಜೊತೆ 'ಮಿ ಸೂಪರ್ ಸೇಲ್' ಆಯೋಜಿಸಿದ್ದ ಶಿಯೋಮಿ, ಈಗ 'ದಿವಾಲಿ ವಿತ್ ಮಿ' ಎಂಬ ಹೆಸರಿನಲ್ಲಿ ಮತ್ತೆ ಮೂರು ದಿನಗಳ ಕಾಲ ಭರ್ಜರಿ ಆಫರ್‌ಗಳನ್ನು ಘೋಷಿಸಿದೆ.

ಈ ಬಾರಿಯೂ 'ರೆಡ್‌ ಮಿ ನೋಟ್ 5 ಪ್ರೊ' ಸ್ಮಾರ್ಟ್‌ಫೋನ್ ಬೆಲೆ 12,999 ರೂಪಾಯಿಗಳಿಗೆ ಇಳಿಕೆಯಾಗಿದ್ದರೆ, ಮಿ ಎಲ್‌ಇಡಿ ಟಿವಿ 4A ಬೆಲೆ 13,499 ರೂಪಾಯಿಗಳಿಗೆ ಇಳಿಕೆಯಾಗಿದೆ. ಇನ್ನು ಈ ದಿವಾಲಿ ವಿತ್ ಮಿ' ಸೇಲ್‌ನಲ್ಲಿ ತನ್ನ ಸ್ಮಾರ್ಟ್‌ಫೋನ್‌ಗಳು, ಟಿವಿಗಳು ಸೇರಿದಂತೆ, ಶಿಯೋಮಿಯ ಬಹುತೇಕ ತನ್ನೆಲ್ಲಾ ಉತ್ಪನ್ನಗಳ ಮೇಲೂ ಭರ್ಜರಿ ರಿಯಾಯಿರಿ ಘೋಷಣೆಯಾಗಿದೆ.

ಇಂದಿನಿಂದ ಶಿಯೋಮಿ 'ದಿವಾಲಿ ವಿತ್ ಮಿ' ಮೆಗಾಸೇಲ್ ಆರಂಭ!

'ಮಿ ಸೂಪರ್ ಸೇಲ್'ಗಿಂತಲೂ ಹೆಚ್ಚು ಲಾಭದಾಯಕವಾಗುವಂತಹ ಸೇಲ್ ಇದಾಗಿದ್ದು, ಇಂದಿನಿಂದ ಈ ಸೇಲ್ ಆರಂಭವಾಗಲಿದೆ. ಹಾಗಾದರೆ, 'ದಿವಾಲಿ ವಿತ್ ಮಿ' ಸೇಲ್‌ನಲ್ಲಿ ಶಿಯೋಮಿ ಕಂಪೆನಿ ರಿಯಾಯಿತಿ ನೀಡಿರುವ ಎಲ್ಲಾ ಉತ್ಪನ್ನಗಳು ಯಾವುವು? ಹಬ್ಬದ ವಿಶೇಷವಾಗಿ ಸೇಲ್‌ನಲ್ಲಿ ಏನೆಲ್ಲಾ ಆಫರ್ ನೀಡಿದೆ ಎಂಬ ಲೀಸ್ಟ್ ಅನ್ನು ಮುಂದಿನ ಸ್ಲೈಡರ್‌ಗಳಲ್ಲಿ ನೋಡಿ.

'ದಿವಾಲಿ ವಿತ್ ಮಿ' ಪರಿಚಯ!

'ದಿವಾಲಿ ವಿತ್ ಮಿ' ಪರಿಚಯ!

ಭಾರತದೆಲ್ಲೆಡೆ ಸಂಭ್ರಮಿಸುವ ದೀಪಾವಳಿ ಹಬ್ಬಕ್ಕೆ ಕೊಡುಗೆ ನೀಡಿ ಲಾಭ ಮಾಡಿಕೊಳ್ಳಲು ಶಿಯೋಮಿ ಕಂಪೆನಿ ಮುಂದಾಗಿದೆ. ಹಾಗಾಗಿ ಇದೇ 23ನೇ ಅಕ್ಟೋಬರ್‌ನಿಂದ 25ನೇ ಅಕ್ಟೋಬರ್ ವರೆಗೂ, ಅಂದರೆ ನಾಳೆಯಿಂದ ಮೂರು ದಿನಗಳ ಕಾಲ 'ದಿವಾಲಿ ವಿತ್ ಮಿ' ಸೇಲ್ ಆರಂಭವಾಗಲಿದೆ. ಈ ಸೇಲ್‌ನಲ್ಲಿ ಭರ್ಜರಿ ಕ್ಯಾಶ್‌ಬ್ಯಾಕ್ ಮತ್ತು ಡಿಸ್ಕೌಂಟ್ಸ್ ಲಭ್ಯವಿದೆ.

ಭಾರೀ ಡಿಸ್ಕೌಂಟ್ಸ್!

ಭಾರೀ ಡಿಸ್ಕೌಂಟ್ಸ್!

ಮೂರು ದಿನಗಳ 'ದಿವಾಲಿ ವಿತ್ ಮಿ' ಸೇಲ್‌ನಲ್ಲಿ, ಪೇಟಿಎಂ ಬಳಕೆದಾರರು ರೆಡ್‌ಮಿ ನೋಟ್ 5 ಪ್ರೋ ಮೇಲೆ 500 ರೂ.ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ. 7,500ಕ್ಕಿಂತ ಹೆಚ್ಚು ಖರೀದಿ ಮಾಡುವ ಎಸ್‌ಬಿಐ ಕಾರ್ಡ್ ಬಳಕೆದಾರರು 750 ರೂ. ಇನ್‌ಸ್ಟಂಟ್ ಡಿಸ್ಕೌಂಟ್ ಪಡೆಯಲಿದ್ದಾರೆ. ಮೊಬಿಕ್ವಿಕ್ ಮೇಲೆ 2000 ರೂ,ವರೆಗೂ ಸೂಪರ್ ಕ್ಯಾಶ್‌ಬ್ಯಾಕ್ ಲಭ್ಯವಿದೆ.

ನೋಟ್ 5 ಪ್ರೋ ಬೆಲೆ 2000 ಇಳಿಕೆ!

ನೋಟ್ 5 ಪ್ರೋ ಬೆಲೆ 2000 ಇಳಿಕೆ!

ಭಾರತೀಯ ಸ್ಮಾರ್ಟ್‌ಫೋನ್‌ನ ಮಧ್ಯಮ ಶ್ರೇಣಿಯ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದ್ದ ರೆಡ್‌ಮಿ ನೋಟ್ 5 ಪ್ರೋ ಈಗ ಮತ್ತಷ್ಟು ಕೈಗೆಟಕುವ ದರದಲ್ಲಿ ಸಿಗಲಿದೆ. 4GB64 ವೆರಿಯಂಟ್ ನೋಟ್ 5 ಪ್ರೋ ಫೋನ್ ಬೆಲೆ 14,999 ರೂ.ಗಳಿಂದ 12,999 ರೂ.ಗಳಿಗೆ ಇಳಿಕೆಯಾಗಿದ್ದರೆ, 4GB64 ವೆರಿಯಂಟ್ ಫೋನ್ ಬೆಲೆ ಕೇವಲ 14,999 ರೂ.ಗಳಾಗಿವೆ.

ಮಿ ಮಿಕ್ಸ್ ಬೆಲೆ 7000 ಇಳಿಕೆ!

ಮಿ ಮಿಕ್ಸ್ ಬೆಲೆ 7000 ಇಳಿಕೆ!

ಶಿಯೋಮಿ ಕಂಪೆನಿಯ ಹೈ ಎಂಡ್ ಸ್ಮಾರ್ಟ್‌ಫೋನ್ ಶಿಯೋಮಿ ಮಿ ಮಿಕ್ಸ್ ಬೆಲೆ ಊಹಿಸಲಾಗದಷ್ಟು ಇಳಿಕೆಯಾಗಿದೆ. 29,999 ರೂಪಾಯಿಗಳ ಮೂಲ ಬೆಲೆಯನ್ನು ಹೊಂದಿದ್ದ ಶಿಯೋಮಿ ಮಿ ಮಿಕ್ಸ್ ಸ್ಮಾರ್ಟ್‌ಪೋನ್ ಮೇಲೆ 7000 ರೂ. ಡಿಸ್ಕೌಂಟ್ಸ್ ನೀಡಲಾಗಿದ್ದು, ಈಗ ಕೇವಲ 22,999 ರೂಪಾಯಿಗಳಿಗೆ ಈ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದಾಗಿದೆ.

ಮಿ ಎ2 ಈಗ 14,999 ರೂ.!

ಮಿ ಎ2 ಈಗ 14,999 ರೂ.!

ಮೊಬೈಲ್ ಮಾರುಕಟ್ಟೆಯಲ್ಲಿ ಬಿಸಿತುಪ್ಪದಂತೆ ಖರ್ಚಾಗುತ್ತಿದ್ದ ಶಿಯೋಮಿ ಮಿ ಎ2 ಸ್ಮಾರ್ಟ್‌ಪೋನ್ ಅನ್ನು ಈಗ ಕೇವಲ 14,999 ರೂ.ಗಳಿಗೆ ಖರಿದಿಸಬಹುದಾಗಿದೆ. 16,999 ರೂಯಪಾಯಿಗಳ ಮೂಲ ಬೆಲೆಯನನ್ನು ಹೊಂದಿದ್ದ ಮಿ ಎ2 ಸ್ಮಾರ್ಟ್‌ಪೋನ್ ಮೇಲೆ 2000 ರೂ. ಬೆಲೆ ಇಳಿಕೆಯಾಗಿದ್ದು, ಈ ಬಾರಿಯ ಮಿ ಸೇಲ್‌ನ ಬೆಸ್ಟ್ ಡೀಲ್‌ಗಳಲ್ಲಿ ಇದು ಕೂಡ ಒಂದಾಗಿದೆ.

ಮಿ ಎಲ್‌ಇಡಿ ಟಿವಿ 4A

ಮಿ ಎಲ್‌ಇಡಿ ಟಿವಿ 4A

ಬಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಶಿಯೋಮಿ ಕಂಪೆನಿ ಬಜೆಟ್ ಟಿವಿ 'ಮಿ ಎಲ್‌ಇಡಿ ಟಿವಿ 4A' ಬೆಲೆ ಕೂಡ ಇಳಿಕೆಯಾಗಿದೆ. 13,999 ರೂಪಾಯಿಗಳ ಮೂಲ ಬೆಲೆಯನ್ನು ಹೊಂದಿದ್ದ 'ಮಿ ಎಲ್‌ಇಡಿ ಟಿವಿ 4A' ಸ್ಮಾರ್ಟ್‌ಟಿವಿಯನ್ನು ಈಗ 13,499 ರೂಪಾಯಿಗಳಿಗೆ ಖರೀದಿಸಬಹುದಾಗಿದೆ. ಇದರ ಮೇಲೆ 500 ರೂ. ಬೆಲೆ ಕಡಿತವಾಗಿದೆ.

10000mAh ಮಿ ಪವರ್ ಬ್ಯಾಂಕ್ 2i!

10000mAh ಮಿ ಪವರ್ ಬ್ಯಾಂಕ್ 2i!

10000mAh ಬ್ಯಾಟಿ ಶಕ್ತ ಸಾಮರ್ಥ್ಯದ ಮಿ ಪವರ್ ಬ್ಯಾಂಕ್ 2i ಪವರ್‌ಬ್ಯಾಂಕ್ ಅನ್ನು ಈಗ ಕೇವಲ 699 ರೂಪಾಯಿಗಳಿಗೆ ಖರೀದಿಸಬಹುದಾಗಿದೆ. ಈ ಮೊದಲು 700 ರೂಪಾಯಿಗಳ ಮೂಲಬೆಲೆ ಹೊಂದಿದ್ದ ಈ ಪವರ್‌ಬ್ಯಾಂಕ್ ಮೇಲೆ 100 ರೂ. ಬೆಲೆ ಕಡಿತವಾಗಿದೆ. ಇದನ್ನು ಮಾರುಕಟ್ಟೆಯಲ್ಲೇ ಅತ್ಯಂತ ಕಡಿಮೆ ಬೆಲೆಯ ಗುಣಮಟ್ಟದ ಪವರ್ ಬ್ಯಾಂಕ್ ಎನ್ನಬಹುದು.

ಮಿ ಬೇಸಿಕ್ ಹೆಡ್‌ಫೋನ್

ಮಿ ಬೇಸಿಕ್ ಹೆಡ್‌ಫೋನ್

ಅಂತರ್ನಿರ್ಮಿತ ಮೈಕ್ ಜೊತೆ ಕೆಂಪು ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿರುವ ಮಿ ಬೇಸಿಕ್ ಹೆಡ್‌ಫೋನ್ ಬೆಲೆ ಈಗ ಕೇವಲ 49 ರೂಪಾಯಿಗಳಾಗಿವೆ. ಈ ಮೊದಲು 399 ರೂಪಾಯಿಗಳ ಬೆಲೆ ಹೊಂದಿದ್ದ ಮಿ ಬೇಸಿಕ್ ಹೆಡ್‌ಫೋನ್ ಅನ್ನು ಖರೀದಿಸಲು ಇದು ಶಿಯೋಮಿ ಸ್ಮಾರ್ಟ್‌ಫೋನ್ ಉಪಯೋಗಿಸುತ್ತಿರುವವರಿಗೆ ಇದು ಬೆಸ್ಟ್ ಟೈಮ್ ಎನ್ನಬಹುದು.

Most Read Articles
Best Mobiles in India

English summary
This is definitely the best time of the year. It’s not just the yummy food, and pretty lights, but the glitter of new things, and the hefty discounts, that makes these few months so festive and fun. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more