DIZO Watch D2 : ಡಿಜೋ ಸಂಸ್ಥೆಯಿಂದ ಮತ್ತೊಂದು ಆಕರ್ಷಕ ಸ್ಮಾರ್ಟ್‌ವಾಚ್‌ ಬಿಡುಗಡೆ! ವಿಶೇಷತೆ ಏನು?

|

ಇತ್ತೀಚಿನ ದಿನಗಳಲ್ಲಿ ಡಿಜೋ ಕಂಪೆನಿಯ ಸ್ಮಾರ್ಟ್‌ವಾಚ್‌ಗಳು ಭಾರಿ ಸದ್ದು ಮಾಡುತ್ತಿವೆ. ರಿಯಲ್‌ಮಿ ಕಂಪೆನಿ ಸಬ್‌ಬ್ರ್ಯಾಂಡ್‌ ಆಗಿರುವ ಡಿಜೋ ತನ್ನ ಸ್ಟೈಲಿಶ್‌ ಲುಕ್‌ ಹಾಗೂ ಆಕರ್ಷಕ ಡಿವೈಸ್‌ಗಳ ಮೂಲಕ ಸಂಚಲನ ಮೂಡಿಸಿದೆ. ಅದರ ಮುಂದುವರೆದ ಭಾಗವಾಗಿ ಇದೀಗ ಡಿಜೋ ಹೊಸ ಡಿಜೋ ವಾಚ್‌ D2 ಅನ್ನು ಬಿಡುಗಡೆ ಮಾಡಿದೆ. ಇದು 7 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ನೀಡಲಿದೆ ಅನ್ನೊದು ವಿಶೇಷವಾಗಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ ಫೋನ್‌ ಕರೆಗಳಿಗೆ ನಾಯ್ಸ್‌ ಕ್ಯಾನ್ಸಲೇಶ್‌ ಅನ್ನು ನೀಡಲಿದೆ.

ಡಿಜೋ ಸಂಸ್ಥೆಯಿಂದ ಮತ್ತೊಂದು ಆಕರ್ಷಕ ಸ್ಮಾರ್ಟ್‌ವಾಚ್‌ ಬಿಡುಗಡೆ! ವಿಶೇಷತೆ ಏನು?

ಹೌದು, ಡಿಜೋ ಕಂಪೆನಿ ಹೊಸದಾಗಿ ಡಿಜೋ ವಾಚ್‌ D2 ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ವಾಚ್‌ ಫ್ಲಿಪ್‌ಕಾರ್ಟ್‌ ಮೂಲಕ ಇದೇ ಫೆಬ್ರವರಿ 10 ರಿಂದ ಮಾರಾಟವಾಗಲಿದ್ದು, ಲಾಂಚ್‌ ಆಫರ್‌ನಲ್ಲಿ ಇದನ್ನು 1,799ರೂ. ಬೆಲೆಗೆ ಖರೀದಿಸಬಹುದಾಗಿದೆ. ಇನ್ನು ಸ್ಮಾರ್ಟ್‌ವಾಚ್‌ ತನ್ನ ಅತ್ಯಾಕರ್ಷಕ ಫೀಚರ್ಸ್‌ಗಳಿಂದ ಗಮನಸೆಳೆದಿದ್ದು, ಇದು ಕೇವಲ 42 ಗ್ರಾಂ ತೂಕವನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ 50 +ಕ್ಕೂ ಹೆಚ್ಚು ವಾಚ್‌ಫೇಸ್‌ಗಳನ್ನು ನೀಡಲಿದೆ. ಹಾಗಾದ್ರೆ ಈ ಸ್ಮಾರ್ಟ್‌ವಾಚ್‌ ಏನೆಲ್ಲಾ ವಿಶೇಷತೆ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಜೋ ವಾಚ್ D2 ವಿಶೇಷತೆ ಹೇಗಿದೆ?

ಡಿಜೋ ವಾಚ್ D2 ಸ್ಮಾರ್ಟ್‌ವಾಚ್‌ 1.91 ಇಂಚಿನ ಬಿಗ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 500 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಅಲ್ಯೂಮಿನಿಯಂ ಮತ್ತು ಪಾಲಿಕಾರ್ಬೊನೇಟ್ ಚೌಕಟ್ಟು ಅನ್ನು ಒಳಗೊಂಡಿದೆ. ಇದು 150 +ಕ್ಕೂ ಹೆಚ್ಚಿನ ವಾಚ್ ಫೇಸ್‌ಗಳನ್ನು ಹೊಂದಿದ್ದು, ನಿಮಗೆ ಸೂಕ್ತವಾದ ವಾಚ್‌ಫೇಸ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದಲ್ಲದೆ ವಾಚ್ ಫೇಸ್‌ಗಳಲ್ಲಿ ನಿಮ್ಮ ನೆಚ್ಚಿನ ವಾಲ್‌ಪೇಪರ್‌ ಅನ್ನು ಕಸ್ಟಮ್‌ ಆಗಿ ಸೇರಿಸಬಹುದಾಗಿದೆ.

ಡಿಜೋ ಸಂಸ್ಥೆಯಿಂದ ಮತ್ತೊಂದು ಆಕರ್ಷಕ ಸ್ಮಾರ್ಟ್‌ವಾಚ್‌ ಬಿಡುಗಡೆ! ವಿಶೇಷತೆ ಏನು?

ಡಿಜೋ ವಾಚ್‌ D2 ನಲ್ಲಿದೆ ಕಾಲಿಂಗ್‌ ಫೀಚರ್ಸ್‌

ಡಿಜೋ ವಾಚ್‌ D2 ಬ್ಲೂಟೂತ್‌ ಕಾಲಿಂಗ್‌ ಫೀಚರ್ಸ್‌ ಅನ್ನು ಪಡೆದುಕೊಂಡಿದೆ. ಇದರಿಂದ ನಿಮ್ಮ ಫೋನ್‌ಗೆ ಬರುವ ಕರೆಗಳನ್ನು ಸ್ವೀಕರಿಸುವ ಮತ್ತು ಕಡಿತಗೊಳಿಸುವ ಆಯ್ಕೆಯನ್ನು ನೀಡಲಿದೆ. ಸ್ಮಾರ್ಟ್‌ವಾಚ್‌ ಮೂಲಕವೇ ನಿಮ್ಮ ಕರೆಗಳನ್ನು ಸ್ವಿಕರಿಸಿ ಮಾತನಾಡಬಹುದಾಗಿದೆ. ಇದಕ್ಕಾಗಿ ಮೈಕ್ರೋಫೋನ್‌ ಅನ್ನು ಕೂಡ ಅಳವಡಿಸಲಾಗಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ನಲ್ಲಿ ಕಾಲಿಂಗ್‌ ಆಲರ್ಟ್‌ಗಾಗಿ ಸೌಂಡ್‌ ಅಥವಾ ಮ್ಯೂಟ್‌ ಮೋಡ್ ಅನ್ನು ಸೆಟ್‌ ಮಾಡುವುದಕ್ಕೆ ಇದರಲ್ಲಿ ಅವಕಾಶ ನೀಡಲಾಗಿದೆ. ಇದಲ್ಲದೆ ಜನಸಂದಣಿಯಲ್ಲಿ ಕರೆ ಬಂದಾಗ ಯಾವುದೇ ಸದ್ದುಗದ್ದಲವಿಲ್ಲದೆ ಮಾತನಾಡಲು ಇದರಲ್ಲಿ ನಾಯ್ಸ್‌ ಕ್ಯಾನ್ಸಲೇಶನ್‌ ಫೀಚರ್ಸ್‌ ಅನ್ನು ಸಹ ಆಕ್ಟಿವ್‌ ಮಾಡಬಹುದಾಗಿದೆ.

ಡಿಜೋ ವಾಚ್‌ D2 ಏನೆಲ್ಲಾ ಹೆಲ್ತ್‌ ಫೀಚರ್ಸ್‌ ಒಳಗೊಂಡಿದೆ!

ಡಿಜೋ ವಾಚ್‌ D2 ಸ್ಮಾರ್ಟ್ ವಾಚ್ ಬ್ಲಡ್‌ ಆಕ್ಸಿಜನ್‌ (SpO2) ಮಾನಿಟರಿಂಗ್, ಸ್ಲಿಪ್‌ ಮಾನಿಟರಿಂಗ್‌ ಮತ್ತು ಕುಡಿಯುವ ನೀರಿನ ರಿಮೈಂಡರ್‌ ಅನ್ನು ನೀಡಲಿದೆ. ಜೊತೆಗೆ 24×7 ರಿಯಲ್‌ ಟೈಂ ಹಾರ್ಟ್‌ಬೀಟ್‌ ಮೇಲ್ವಿಚಾರಣೆ ಮಾಡುವ ಸಾಮರ್ಥ್ಯವನ್ನು ಸಹ ನೀಡಲಾಗಿದೆ. ಇನ್ನು ಈ ಸ್ಮಾರ್ಟ್‌ವಾಚ್‌ನಲ್ಲಿ ಹೆಚ್ಚುವರಿಯಾಗಿ ಜಿಮ್ನಾಸ್ಟಿಕ್ಸ್, ಡ್ಯಾನ್ಸ್‌, ಟೇಕ್ವಾಂಡೋ, ಕುದುರೆ ಸವಾರಿ, ಡಿಸ್ಕ್ ಗೇಮ್ಸ್‌, ಸ್ಕಿಪ್ಪಿಂಗ್ ಹಗ್ಗಗಳು, ಹೋವರ್‌ಬೋರ್ಡ್‌ಗಳು ಒಳಗೊಂಡಿರುವ ಫಿಟ್‌ನೆಸ್‌ ಆಕ್ಟಿವಿಟಿಗಳನ್ನು ಸಹ ನೀಡಲಿದೆ.

ಇನ್ನು ಡಿಜೋ ವಾಚ್‌ D2 ಸ್ಮಾರ್ಟ್‌ವಾಚ್‌ GPS ಅನ್ನು ಸಹ ಬೆಂಬಲಿಸಲಿದೆ. ಅಲ್ಲದೆ ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ಆಧಾರದ ಮೇಲೆ ವರದಿಗಳನ್ನು ನೀಡುವ ಡೇಟಾ ರೆಕಾರ್ಡಿಂಗ್‌ ಅನ್ನು ನೀಡಲಿದೆ. ಇದರೊಂದಿಗೆ ಇನ್‌ಬಿಲ್ಟ್‌ ಮಿನಿ-ಗೇಮ್‌ಗಳು, ಕ್ಯಾಮೆರಾ ಮತ್ತು ಫೋನ್‌ ಮ್ಯೂಸಿಕ್‌ ಕಂಟ್ರೋಲ್‌, ಅಲಾರಂ ಸೆಟ್‌ ಮಾಡುವ, ಹಾಗೂ ಫೈಂಡ್‌ ಮೈ ಫೋನ್‌ ನಂತಹ ಆಯ್ಕೆಗಳನ್ನು ಸಹ ಒಳಗೊಂಡಿದೆ.

ಡಿಜೋ ಸಂಸ್ಥೆಯಿಂದ ಮತ್ತೊಂದು ಆಕರ್ಷಕ ಸ್ಮಾರ್ಟ್‌ವಾಚ್‌ ಬಿಡುಗಡೆ! ವಿಶೇಷತೆ ಏನು?

ಡಿಜೋ ವಾಚ್‌ D2 ಸ್ಮಾರ್ಟ್‌ವಾಚ್‌ ಬ್ಯಾಟರಿ ಹೇಗಿದೆ?

ಡಿಜೋ ವಾಚ್‌ D2 ಸ್ಮಾರ್ಟ್‌ವಾಚ್‌ 260mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್‌ ಕರೆ ಮಾಡದೇ ಇದ್ದರೆ 7 ದಿನಗಳ ಬ್ಯಾಟರಿ ಬ್ಯಾಕ್‌ ಅಪ್‌ ನೀಡಲಿದೆ. ಕರೆ ಮಾಡಿದರೆ 3 ದಿನಗಳ ಬ್ಯಾಕ್‌ಅಪ್‌ ಅನ್ನು ನೀಡಲಿದೆ ಎಂದು ಡಿಜೋ ಕಂಪೆನಿ ಹೇಳಿಕೊಂಡಿದೆ.

ಡಿಜೋ ವಾಚ್‌ D2 ಸ್ಮಾರ್ಟ್‌ವಾಚ್‌ ಬೆಲೆ ಮತ್ತು ಲಭ್ಯತೆ

ಡಿಜೋ ವಾಚ್‌ D2 ಸ್ಮಾರ್ಟ್‌ವಾಚ್‌ ಭಾರತದಲ್ಲಿ 1,999 ರೂ. ಬೆಲೆಯಲ್ಲಿ ಬಿಡುಗಡೆಯಾಗಿದೆ. ಆದರೆ ಈ ಸ್ಮಾರ್ಟ್‌ವಾಚ್‌ ಲಾಂಚ್‌ ಆಫರ್‌ನಲ್ಲಿ ಕೇವಲ 1,799ರೂ.ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಸ್ಮಾರ್ಟ್‌ವಾಚ್‌ ಫ್ಲಿಪ್‌ಕಾರ್ಟ್‌ ಮೂಲಕ ಫೆಬ್ರವರಿ 10 ರಂದು ಮಾರಾಟವಾಗಲಿದೆ.

Best Mobiles in India

English summary
smartwatch is capable of 24×7 real-time heart rate monitoring along with blood oxygen (SpO2) monitoring.know more details in kannada

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X