ಡ್ರೋನ್ ಮಾರುಕಟ್ಟೆಗೆ ಹೊಸ ಡಿವೈಸ್ ಎಂಟ್ರಿ! ಇದರ ಲುಕ್‌ಗೆ ನೀವು ವಾವ್ಹ್ ಅಂತೀರಾ!
ಡ್ರೋನ್ ಕ್ಯಾಮೆರಾಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಇದಕ್ಕೆ ತಕ್ಕಂತೆ ಹಲವು ಜನಪ್ರಿಯ ಬ್ರ್ಯಾಂಡ್‌ಗಳು ವಿವಿಧ ಮಾದರಿಯ ಡ್ರೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿವೆ. ಇದೀಗ DJI ಕಂಪೆನಿ ತನ್ನ ಹೊಸ ಡ್ರೋನ್ DJI Inspire 3 ಅನ್ನು ಬಿಡುಗಡೆ ಮಾಡಿದೆ. ಇದು ಫುಲ್ ಫ್ರೇಮ್ 8K ಸೆನ್ಸಾರ್ ಅನ್ನು ಒಳಗೊಂಡಿದ್ದು, ಎಲ್ಲರ ಗಮನಸೆಳೆದಿದೆ.
ಹೌದು, DJI ಇನ್‌ಸ್ಪೈರ್ 3 ಡ್ರೋನ್ ಅನಾವರಣಗೊಂಡಿದೆ. ಇದು ProRes RAW ಬೆಂಬಲವನ್ನು ಹೊಂದಿದ್ದು, ಇನ್‌ಸ್ಪೈರ್ 2 ಗಿಂತ ಅತ್ಯಾಕರ್ಷಕವಾಗಿದೆ. ಇನ್ನು ಈ ಡ್ರೋನ್ ಕ್ಯಾಮೆರಾ 8K ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸಲಿದೆ. ಹಾಗಾದ್ರೆ DJI Inspire 3 ಫೀಚರ್ಸ್ ಹೇಗಿದೆ? ಇದರ ವಿನ್ಯಾಸ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

DJI ಇನ್‌ಸ್ಪೈರ್ 3 ಡ್ರೋನ್ ಫೀಚರ್ಸ್ ಹೇಗಿದೆ?
DJI ಇನ್‌ಸ್ಪೈರ್ 3 ಡ್ರೋನ್ ಹೊಸ ಮಾದರಿಯ ವಿನ್ಯಾಸವನ್ನು ಹೊಂದಿದೆ. ಈ ಡ್ರೋನ್ ಕ್ಯಾಮೆರಾ 8K ವೀಡಿಯೊ ರೆಕಾರ್ಡಿಂಗ್ ಬೆಂಬಲಿಸಲಿದೆ. ಇನ್ನು ಡ್ರೋನ್ ಮೇಲ್ಭಾಗದಲ್ಲಿ ನಾಲ್ಕು ಫ್ಯಾನ್‌ಗಳನ್ನು ಹೊಂದಿರುವ ವಿಮಾನ ಮಾದರಿಯ ವಿನ್ಯಾಸವನ್ನು ಪಡೆದಿದೆ. ಇದಲ್ಲದೆ ಈ ಡ್ರೋನ್ Zenmuse X9-8K ಏರ್ ಗಿಂಬಲ್ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಅತ್ಯಂತ ಹಗುರವಾದದ್ದು ಎಂದು ವರದಿಯಾಗಿದೆ. ಇನ್ನು ಡ್ರೋನ್ ಸಾಗಿಸುವ ಆರ್‌ಸಿ ಪ್ಲಸ್ ಕಂಟ್ರೋಲರ್ 7 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 1200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿದೆ.
DJI ಇನ್‌ಸ್ಪೈರ್ 3 ಡ್ರೋನ್ CineCore 3.0 ಇಮೇಜ್ ಪ್ರೊಸೆಸಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಕ್ರಾಪ್ ಮಾಡದೆಯೇ 4K 120fps ProRes RAW ಬೆಂಬಲವನ್ನು ಹೊಂದಿದೆ. ಜೊತೆಗೆ ProRes RAW ನಲ್ಲಿ 8K 75fps ಮತ್ತು ಸಿನಿಮಾDNG ನಲ್ಲಿ 8K 25fps ನಲ್ಲಿ ಶೂಟ್ ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದರೊಂದಿಗೆ ಈ ಡ್ರೋನ್ ಕ್ಯಾಮೆರಾಗಳೊಂದಿಗೆ ಬಣ್ಣಗಳನ್ನು ಸ್ಥಿರವಾಗಿರಿಸುತ್ತದೆ.

ಇನ್ನು ಡ್ರೋನ್ 18mm F2.8 ಫುಲ್-ಫ್ರೇಮ್ ಲೆನ್ಸ್ ಮತ್ತು 8K ಶೂಟ್ ಮಾಡುವ ಸಾಮರ್ಥ್ಯದ ಟೆಲಿಫೋಟೋ ಲೆನ್ಸ್‌ನೊಂದಿಗೆ ಹೊಂದಿಕೊಳ್ಳುತ್ತದೆ. ಇದರೊಂದಿಗೆ ಈ ಡ್ರೋನ್ FPV ಕ್ಯಾಮೆರಾ, ವಿಶ್ಯುಯಲ್ ಸೆನ್ಸಾರ್ ಮತ್ತು ಸ್ಥಾನಿಕ ಆಂಟೆನಾಗಳನ್ನು ಹೊಂದಿದೆ. ಇದರಲ್ಲಿ FPV ಕ್ಯಾಮೆರಾ 161-ಡಿಗ್ರಿ FOC ಹೊಂದಿದ್ದು, ನೈಟ್ ವಿಶ್ಯುಯಲ್ ಅನ್ನು ಬೆಂಬಲಿಸಲಿದೆ. ಅಲ್ಲದೆ ಇದರಲ್ಲಿ GPS, ಗೆಲಿಲಿಯೋ ಮತ್ತು BeiDou ಸೆನ್ಸಾರ್‌ಗಳನ್ನು ಕೂಡ ನೀಡಲಾಗಿದೆ. ಈ ಡ್ರೋನ್ 3.3 ಗಂಟೆಗಳ ಕಾರ್ಯಾಚರಣೆಯನ್ನು ನೀಡಬಲ್ಲ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದೆ.

DJI Inspire 3 ಬೆಲೆ ಮತ್ತು ಲಭ್ಯತೆ
DJI ಇನ್‌ಸ್ಪೈರ್ 3 ಮಾರುಕಟ್ಟೆಯಲ್ಲಿ $16,499 (ಅಂದಾಜು 13.5 ಲಕ್ಷ ರೂ.)ಬೆಲೆ ಹೊಂದಿದೆ. ಇನ್ನು ಈ ಡ್ರೋನ್ ಖರೀದಿಸುವವರಿಗೆ ಬಾಕ್ಸ್‌ನಲ್ಲಿ Inspire 3 Aircraft, Zenmuse X9-8K Air Gimbal ಕ್ಯಾಮರಾ, RC ಪ್ಲಸ್ ರಿಮೋಟ್ ಕಂಟ್ರೋಲರ್, 6x TB51 ಇಂಟೆಲಿಜೆಂಟ್ ಬ್ಯಾಟರಿ, ಚಾರ್ಜಿಂಗ್ ಹಬ್, 1TB PROSSD, ಟ್ರಾಲಿ ಕೇಸ್, 3x ಫೋಲ್ಡಬಲ್ ಕ್ವಿಕ್-ರಿಲೀಸ್ ಪ್ರೊಪೆಲ್ಲರ್‌ಗಳು, ಲೆನ್ಸ್ ಕ್ಯಾರಿಯಿಂಗ್ ಸ್ಟ್ರಪ್‌ಗಳನ್ನು ನೀಡಲಾಗುತ್ತದೆ ಎಂದು ಹೇಳಲಾಗಿದೆ. ಇದು ಪ್ರಸ್ತುತ ಯುಎಸ್ ಸೇರಿದಂತೆ ಗ್ಲೋಬಲ್ ಮಾರುಕಟ್ಟೆಯಲ್ಲಿ ಕೆಲವು ಆಯ್ದ ದೇಶಗಳಲ್ಲಿ ಮಾತ್ರ ಬಿಡುಗಡೆಯಾಗಿದೆ. ಭಾರತಕ್ಕೆ ಎಂಟ್ರಿ ನೀಡುವ ಬಗ್ಗೆ ಯಾವುದೇ ಮಾಹಿತಿ ಇನ್ನು ಲಭ್ಯವಾಗಿಲ್ಲ.


Click it and Unblock the Notifications








