DJI ಯಿಂದ ಎಂಟ್ರಿ ಲೆವೆಲ್‌ನಲ್ಲಿ ಅಚ್ಚರಿಯ ಡ್ರೋನ್ ಅನಾವರಣ! ಅಬ್ಬಬ್ಬಾ ಏನಿದರ ವಿಶೇಷ!
ಹೇಳಿಕೇಳಿ ಇದು ಡ್ರೋನ್ ಜಮಾನ, ಇಂದಿನ ದಿನಗಳಲ್ಲಿ ಡ್ರೋನ್ ಟೆಕ್ನಾಲಜಿ ಸಾಕಷ್ಟು ವಿಕಸನಗೊಂಡಿದೆ. ಇದರ ಪರಿಣಾಮ ಹಲವು ಕ್ಷೇತ್ರಗಳಲ್ಲಿ ಡ್ರೋನ್ ಬಳಸುವ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ತಕ್ಕಂತೆ ಜನಪ್ರಿಯ ಬ್ರ್ಯಾಂಡ್ ಕಂಪೆನಿಗಳು ಕೂಡ ವಿಭಿನ್ನ ಹಾಗೂ ವಿಶಿಷ್ಟ ಶೈಲಿಯ ಡ್ರೋನ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಸದ್ಯ ಇದೀಗ ಜನಪ್ರಿಯ ಡ್ರೋನ್ ತಯಾರಕ ಕಂಪೆನಿ DJI ಹೊಸ ಎಂಟ್ರಿ ಲೆವೆಲ್ ಡ್ರೋನ್ ಅನ್ನು ಬಿಡುಗಡೆ ಮಾಡಿದೆ. ಇದರ ಡಿಸೈನ್ ಹಾಗೂ ಗಾತ್ರ ಎಲ್ಲರ ಗಮನಸೆಳೆಯುವಂತಿದೆ.

ಹೌದು, DJI ಕಂಪೆನಿ ಹೊಸ ಎಂಟ್ರಿ ಲೆವೆಲ್ ಡ್ರೋನ್ DJI Mini 2 SE ಅನ್ನು ಬಿಡುಗಡೆ ಮಾಡಿದೆ. ಈ ಡ್ರೋನ್ ಆಧುನಿಕ ಶೈಲಿಯ ಟೆಕ್ನಾಲಜಿಯನ್ನು ಹೊಂದಿದ್ದು, OcuSync 2.0 ಪ್ರಸರಣ ವ್ಯವಸ್ಥೆಯನ್ನು ಹೊಂದಿದೆ. ಈ ಡ್ರೋನ್ ಈ ಹಿಂದಿನ ಆವೃತ್ತಿ DJI Mini SE ಗಿಂತ ಎರಡು ಪಟ್ಟು ಹೆಚ್ಚು ದೂರದಲ್ಲಿ ಹಾರುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ ಇದರ ಸಿಸ್ಟಂ ಹೆಚ್ಚುನ ದೂರದಲ್ಲಿ ಹೆಚ್ಚು ಸ್ಥಿರವಾದ ವೀಡಿಯೋ ಫೀಡ್ ನೀಡುವ ಸಾಮರ್ಥ್ಯ ಹೊಂದಿದೆ. ಹಾಗಾದ್ರೆ ಈ ಡ್ರೋನ್ ಕಾರ್ಯವೈಖರಿ ಹೇಗಿದೆ? ಇದರ ಬೆಲೆ ಎಷ್ಟು ಇದೆಲ್ಲದರ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.
DJI Mini 2 SE ಡ್ರೋನ್ ಎಂಟ್ರಿಲೆವೆಲ್ ಡ್ರೋನ್ ಆಗಿದೆ. OcuSync 2.0 ಪ್ರಸರಣ ವ್ಯವಸ್ಥೆಯನ್ನು ಹೊಂದಿದ್ದು, ವರ್ಧಿತ WiFi ವ್ಯವಸ್ಥೆ, ಹಾರುವ ವ್ಯಾಪ್ತಿಯನ್ನು 4km ವರೆಗೆ ಸೀಮಿತಗೊಳಿಸಿದೆ. ಜೊತೆಗೆ ಈ ಸಿಸ್ಟಮ್ ಹೆಚ್ಚಿನ ದೂರದಲ್ಲಿ ಹೆಚ್ಚು ಸ್ಥಿರವಾದ ವೀಡಿಯೊ ಫೀಡ್ ಅನ್ನು ನಿರ್ವಹಿಸಲಿದೆ ಎಂದು ಡಿಜಿ ಕಂಪೆನಿ ಹೇಳಿಕೊಂಡಿದೆ. ಇನ್ನು ಈ ಡ್ರೋನ್‌ನಲ್ಲಿ ಯೋಗ್ಯವಾದ ಕ್ಯಾಮೆರಾ ವ್ಯವಸ್ಥೆಯನ್ನು ನೀಡಲಾಗಿದ್ದು, ಇದು ಮೂರು-ಆಕ್ಸಿಸ್ ಗಿಂಬಲ್ ಮತ್ತು 1/2.3-ಇಂಚಿನ CMOS ಸೆನ್ಸಾರ್‌ನೊಂದಿಗೆ ಬರಲಿದೆ.

ಇನ್ನು ಈ ಡ್ರೋನ್‌ನಲ್ಲಿರುವ ಕ್ಯಾಮೆರಾ 2.7K ವೀಡಿಯೊ ಮತ್ತು 12 ಮೆಗಾಪಿಕ್ಸೆಲ್ ಸ್ಟಿಲ್ ಚಿತ್ರಗಳನ್ನು ಕ್ಯಾಪ್ಚರ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದು 10km (6.2 mi) ವರೆಗೆ HD ವೀಡಿಯೋ ಪ್ರಸರಣವನ್ನು ಬೆಂಬಲಿಸಲಿದ್ದು, 5 ಸ್ಟೆಪ್ಸ್ ಗಾಳಿಯ ಪ್ರತಿರೋಧವನ್ನು ಹೊಂದಿದೆ. ಇದರಿಂದ ಡ್ರೋನ್ ಅನ್ನು 10.7 m/s (24mph) ಗಾಳಿಯಲ್ಲಿ ಸ್ಥಿರವಾಗಿ ಸುಳಿದಾಡಲು ಅನುಮತಿಸಲಿದೆ. ಹಾಗಾಗಿ ಎತ್ತರದ ಪ್ರದೇಶದಲ್ಲಿಯೂ ಸುಲಭವಾಗಿ ನೀವು ಡ್ರೋನ್ ಮೂಲಕ ವೀಡಿಯೋ ರೆಕಾರ್ಡ್ ಮಾಡಬಹುದು.
DJI Mini 2 SE ಡ್ರೋನ್ ಉತ್ತಮವಾದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ. ಇದು ಸಿಂಗಲ್ ಚಾರ್ಜ್‌ನಲ್ಲಿ ಅಂದಾಜು 31 ನಿಮಿಷಗಳವರೆಗೆ ಹಾರಾಟ ನಡೆಸಬಲ್ಲದು ಎನ್ನಲಾಗಿದೆ. ಈ ಹಿಂದಿನ ಆವೃತ್ತಿಯ ಡ್ರೋನ್‌ಗಿಂತ ಒಂದು ನಿಮಿಷ ಹೆಚ್ಚಿನ ಹಾರಾಟ ನಡೆಸಲಿದೆ. ಜೊತೆಗೆ ಈ ಡ್ರೋನ್ ಕೇವಲ 249 ಗ್ರಾಂ ತೂಕವನ್ನು ಹೊಂದಿದ್ದು, ಸುಲಭವಾಗಿ ಕ್ಯಾರಿ ಮಾಡಬಹುದಾಗಿದೆ. ಇನ್ನು ಈ ಡ್ರೋನ್ ಅನ್ನು ನೀವು ಯಾವುದೇ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್‌ನಲ್ಲಿ ರಿಜಿಸ್ಟರ್ ಮಾಡಿಸದೆ ಬಳಸಬಹುದಾಗಿದೆ.

ಪ್ರಸ್ತುತ DJI Mini 2 SE ಡ್ರೋನ್ ಜಾಗತಿಕ ಮಾರುಕಟ್ಟೆಯಲ್ಲಿ ಅನಾವರಣಗೊಂಡಿದೆ. ಆದರಿಂದ DJI Mini 2 SE ಡ್ರೋನ್ ಬೆಲೆ $369 (ಅಂದಾಜು 30,469ರೂ.)ಆಗಿದೆ. ಇದು ಮುಂದಿನ ತಿಂಗಳಿನಿಂದ ಮಾರಾಟಕ್ಕೆ ಬರಲಿದೆ. ಇನ್ನು ಈ ಡ್ರೋನ್ ಭಾರತದಲ್ಲಿ ಯಾವಾಗ ಲಭ್ಯವಾಗಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇನ್ನು ಈ ಡ್ರೋನ್ ಲಭ್ಯವಾಗುವ ಕಲರ್ ಆಯ್ಕೆಗಳ ವಿವರ ಮುಂದಿನ ದಿನಗಳಲ್ಲಿ ತಿಳಿದುಬರಲಿದೆ.


Click it and Unblock the Notifications








