ಡಿಜಿಲಾಕರ್‌ನಲ್ಲಿ ಡಿಎಲ್‌, ಆರ್‌ಸಿ ಇದ್ದರೆ ಅವೇ ಮೂಲ ದಾಖಲೆಗಳು..!

By Gizbot Bureau
|

ಸೆಪ್ಟೆಂಬರ್‌ನಿಂದ ದೇಶದಲ್ಲಿ ಜಾರಿಯಾಗಿರುವ ಹೊಸ ಸಂಚಾರ ನಿಯಮಗಳ ಬಗ್ಗೆ ಭಾರತದಲ್ಲಿ ಸದ್ಯ ಭಾರೀ ಚರ್ಚೆ ನಡೆಯುತ್ತಿದೆ. ಜನ ವಾಹನಗಳಲ್ಲಿ ಸಂಚರಿಸಲು ಹಿಂದೆ ಮುಂದೆ ನೋಡುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಅದಕ್ಕಂತಾನೇ ಸರ್ಕಾರವು ಸಹ ಜನರಿಗೆ ಉಪಯುಕ್ತವಾಗಲಿ ಎಂದು ಡಿಜಿಲಾಕರ್‌ ಮತ್ತು ಎಂಪರಿವಾಹನ್‌ ಆಪ್‌ಗಳನ್ನು ಜಾರಿಗೆ ತಂದು, ಅವುಗಳಲ್ಲಿ ಡ್ರೈವಿಂಗ್‌ಲೈಸೆನ್ಸ್‌ ಮತ್ತು ನೊಂದಣಿ ಪ್ರಮಾಣ ಪತ್ರಗಳನ್ನು ಎಲೆಕ್ಟ್ರಾನಿಕ್‌ ಆವೃತ್ತಿಗಳಲ್ಲಿಡಲು ಅನುವು ಮಾಡಿಕೊಟ್ಟಿದೆ.

ಡಿಜಿಲಾಕರ್‌

ಈ ಕುರಿತಂತೆ ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ ಎಲೆಕ್ಟ್ರಾನಿಕ್ ಆವೃತ್ತಿಯಲ್ಲಿನ ದಾಖಲೆಗಳನ್ನು ಮೂಲ ದಾಖಲೆಗಳಿಗೆ ಸಮ ಎಂದು ಪರಿಗಣಿಸಲಾಗುತ್ತದೆ ಎಂದು ತಿಳಿಸಿದೆ. ಆದರೆ, ಎಂಪರಿವಾಹನ್ ಅಥವಾ ಡಿಜಿಲಾಕರ್‌ನಲ್ಲಿ ದಾಖಲೆಗಳು ಲಭ್ಯವಿಲ್ಲದಿದ್ದರೆ, ಅವುಗಳನ್ನು ಮೂಲ ದಾಖಲೆಗಳಿಗೆ ಸಮ ಎಂದು ಕಾನೂನುಬದ್ಧವಾಗಿ ಗುರುತಿಸಲು ಆಗಲ್ಲ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಸಂದರ್ಭದಲ್ಲಿ ಹೇಳಿದೆ.

ಸ್ಟ್ಯಾಂಡರ್ಡ್‌ ಆಪರೇಟಿಂಗ್‌ ಪ್ರೊಸಿಜರ್‌

ಸ್ಟ್ಯಾಂಡರ್ಡ್‌ ಆಪರೇಟಿಂಗ್‌ ಪ್ರೊಸಿಜರ್‌

ಎಲೆಕ್ಟ್ರಾನಿಕ್ ರೂಪದಲ್ಲಿ ಪ್ರಸ್ತುತಪಡಿಸಿದ ಸಾರಿಗೆ ಸಂಬಂಧಿತ ದಾಖಲೆಗಳನ್ನು ಸ್ವೀಕರಿಸಲು ಸಚಿವಾಲಯ ವಿವರವಾದ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (ಎಸ್‌ಒಪಿ) ಹೊರಡಿಸಿದೆ. ನೋಂದಣಿ ಪ್ರಮಾಣಪತ್ರ (ಆರ್‌ಸಿ), ವಿಮೆ, ಫಿಟ್‌ನೆಸ್ ಮತ್ತು ಪರವಾನಗಿ, ಚಾಲನಾ ಪರವಾನಗಿ (ಡಿಎಲ್), ಮಾಲಿನ್ಯ-ನಿಯಂತ್ರಣ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಮತ್ತು ಇನ್ನಾವುದೇ ದಾಖಲೆಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಸ್ವೀಕರಿಸಬಹುದು ಎಂದು ಹೇಳಿದೆ.

ಜನರಿಗೆ ತಪ್ಪಿದ ಹೊರೆ

ಜನರಿಗೆ ತಪ್ಪಿದ ಹೊರೆ

ನಿಯಮಗಳ ಪರಿಷ್ಕರಣೆಯೊಂದಿಗೆ, ಜನರು ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗುವ ಹೊರೆಯಿಂದ ತಪ್ಪಿಸಿಕೊಂಡಿದ್ದಾರೆ. ಆದರೂ, ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ನಿಬಂಧನೆಗಳ ಪ್ರಕಾರ ಎಲೆಕ್ಟ್ರಾನಿಕ್ ದಾಖಲೆಗಳನ್ನು ಮೂಲ ದಾಖಲೆಗಳಿಗೆ ಸಮನಾಗಿ ಪರಿಗಣಿಸಲು, ಅವು ಬಳಕೆದಾರರ ಹತ್ತಿರವಿರುವ ಡಿಜಿಲಾಕರ್ ಅಥವಾ ಎಂಪರಿವಾಹನ್ ಅಪ್ಲಿಕೇಶನ್‌ನಲ್ಲಿ ಲಭ್ಯವಿರುವುದು ಅವಶ್ಯಕ ಎಂದು ಹೇಳಲಾಗಿದೆ. ಎಂಪರಿವಾಹನ್ ಮೊಬೈಲ್ ಆಪ್‌ನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಎನ್ಐಸಿ ಮೂಲಕ ಅನುಷ್ಠಾನಗೊಳಿಸಿದೆ.

ವಾಹನ್‌ನಿಂದ ಡಿಜಿಲಾಕರ್‌

ವಾಹನ್‌ನಿಂದ ಡಿಜಿಲಾಕರ್‌

ಆರ್‌ಸಿ, ಡಿಎಲ್, ಫಿಟ್‌ನೆಸ್ ಸಿಂಧುತ್ವ, ವಿಮಾ ಸಿಂಧುತ್ವ ಮತ್ತು ಪರವಾನಗಿ ಸಿಂಧುತ್ವದ ವಿವರಗಳು ಡಿಎಲ್ ಅಥವಾ ವಾಹನಗಳಿಗೆ ಸಂಬಂಧಿಸಿದ ವಾಹನದ ನೋಂದಣಿ ಸಂಖ್ಯೆಯನ್ನು ನಮೂದಿಸುವ ಮೂಲಕ ಈ ಮೊಬೈಲ್ ಆಪ್‌ನಲ್ಲಿ ನೈಜ ಸಮಯದ ದಾಖಲೆಗಳನ್ನು ವೀಕ್ಷಿಸಬಹುದು. ನಾಗರಿಕರ ಚಾಲನಾ ಪರವಾನಗಿ ಅಥವಾ ನೋಂದಣಿ ವಿವರಗಳ ಪ್ರಮಾಣಪತ್ರವನ್ನು ವಾಹನ್‌ ವೇದಿಕೆಯಿಂದ ಡಿಜಿಲಾಕರ್ ಆಪ್‌ನಲ್ಲಿ ಎಲೆಕ್ಟ್ರಾನಿಕ್ ರೂಪದಲ್ಲಿ ಲಭ್ಯವಾಗುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಡಿಜಿಲಾಕರ್ ಪ್ಲಾಟ್‌ಫಾರ್ಮ್ ಅವಕಾಶ ಮಾಡಿಕೊಟ್ಟಿದೆ.

ಇ-ಚಲನ್‌ ಆಪ್‌

ಇ-ಚಲನ್‌ ಆಪ್‌

ವಾಹನ ವಿಮೆ ಮತ್ತು ಅದರ ನವೀಕರಣಕ್ಕೆ ಸಂಬಂಧಿಸಿದ ಡೇಟಾವು ಟ್ರಾಫಿಕ್‌ ಪೊಲೀಸರಿಗೆ ಮಾತ್ರ ಲಭ್ಯವಿರುವ ಇ-ಚಲನ್ ಆಪ್‌ನಲ್ಲಿ ದೊರೆಯುತ್ತದೆ. ಸಚಿವಾಲಯದ ಹೇಳಿಕೆ ಪ್ರಕಾರ ಜನರು ಈ ಅಪ್ಲಿಕೇಶನ್‌ಗಳ ಮೂಲಕ ಡಿಎಲ್ ಅಥವಾ ಆರ್‌ಸಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಅವರ ಮೊಬೈಲ್ ಸಾಧನಗಳಲ್ಲಿ ಸಂಗ್ರಹಿಸಬಹುದು.

ಸುಲಭ ಅಕ್ಸೆಸ್‌

ಸುಲಭ ಅಕ್ಸೆಸ್‌

ಇಂಟರ್‌ನೆಟ್‌ ಸಂಪರ್ಕದ ಮೊಬೈಲ್‌ನಲ್ಲಿರುವ ಎಂಪರಿವಾಹನ್ ಆಪ್ ಮೂಲಕ ಡಿಎಲ್ ಅಥವಾ ಆರ್‌ಸಿಗೆ ಸಂಬಂಧಿಸಿದ ವಿವರಗಳನ್ನು ತೋರಿಸಬಹುದಾಗಿದೆ. ಇಚಲನ್‌ ಆಪ್‌ ಮೂಲಕ ಅಧಿಕಾರಿಗಳು ಏಕಕಾಲದಲ್ಲಿ ವಾಹನದ ಆನ್‌ಲೈನ್ ಪರಿಶೀಲನೆ ಮತ್ತು ಅದರ ಪರವಾನಗಿ ಸ್ಥಿತಿಯ ಡೇಟಾವನ್ನು ಪರಿಶೀಲಿಸಬಹುದು. ಎಂಪರಿವಾಹನ್ ಕ್ಯೂಆರ್ ಕೋಡ್‌ನ ಆಫ್‌ಲೈನ್ ಪರಿಶೀಲನೆಯ ಪ್ಲಾಟ್‌ಫಾರ್ಮ್‌ನಲ್ಲಿಯೂ ಕೂಡ ಲಭ್ಯವಿದೆ. ಸಾಮಾನ್ಯ ಆಂಡ್ರಾಯ್ಡ್ ಮೊಬೈಲ್ ಆಪ್‌ಗಳನ್ನು ಸಹ ಈ ಉದ್ದೇಶಕ್ಕಾಗಿ ಬಳಸಬಹುದು ಎಂದು ಸಚಿವಾಲಯ ಹೇಳಿದೆ.

ಕಾಗದ ರಹಿತ ಆಡಳಿತ

ಕಾಗದ ರಹಿತ ಆಡಳಿತ

ಈ ಪ್ರಕ್ರಿಯೆಯಿಂದ ಜನರಷ್ಟೇ ಅಧಿಕಾರಿಗಳಿಗೂ ಅನುಕೂಲವಾಗುತ್ತದೆ. ಯಾವುದೇ ದಾಖಲೆಯನ್ನು ಭೌತಿಕವಾಗಿ ನಿಭಾಯಿಸುವ ಅಗತ್ಯವಿರುವುದಿಲ್ಲ. ವೇಗದ, ಪಾರದರ್ಶಕ ಮತ್ತು ಜವಾಬ್ದಾರಿಯುತ ವ್ಯವಸ್ಥೆಯು ಸಾರಿಗೆ ಮತ್ತು ಸಂಚಾರ ಅಧಿಕಾರಿಗಳು ಮತ್ತು ನಾಗರಿಕರಿಗೆ ಅಪರಾಧದ ಸ್ಥಿತಿಯ ನೈಜ ಸಮಯದ ಲಭ್ಯತೆಯನ್ನು ಖಚಿತಪಡಿಸುತ್ತದೆ ಎಂದು ಸಚಿವಾಲಯ ಹೇಳಿದೆ.

Best Mobiles in India

Read more about:
English summary
DL And RC Stored In DigiLocker Can Be Considered As Original Documents: Road Transport Ministry

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X