ಮೊಬೈಲ್‌ನಲ್ಲಿ "ಹೆಲ್ತ್ ಆಪ್‌" ಬಳಸುತ್ತಿದ್ದೀರಾ? ಎಚ್ಚರ!!

By Suneel
|

ಈ ಸ್ಮಾರ್ಟ್‌ಫೋನ್‌ ಬಂದಮೇಲೆ ಮಾಹಿತಿಯನ್ನು ಮೆದುಳಿನಲ್ಲಿ ಸ್ಟೋರ್‌ ಮಾಡದೇ ಮೊಬೈಲ್‌ನಲ್ಲೇ ಹೆಚ್ಚು ಸ್ಟೋರ್‌ ಮಾಡೋದು ರೂಢಿ. ಯಾಕಂದ್ರೆ ಎಲ್ಲವನ್ನು ಮೊಬೈಲ್‌ನಲ್ಲೇ ಸ್ಟೋರ್‌ ಮಾಡೋಕೆ ಆತುರರಾಗಿರುತ್ತಾರೆ ಹೊರತು, ಸ್ವಲ್ಪಾನು ಮೆದುಳಿಗೆ ಕೆಲಸಾನೇ ಕೊಡಲ್ಲ ಅಂತಾರೆ. ಕೊಂಚ ಅಲೋಚನೆ ಮಾಡಿದ್ರೆ ಸ್ಮಾರ್ಟ್‌ಫೋನ್‌ ಬಳಸುವವರಿಗೆ ಇದು ಸರಿ ಅಂತಲೂ ಎನಿಸಬಹುದೆನೋ. ಇಂದು ದಿನನಿತ್ಯ ನ್ಯೂಸ್‌ಗಾಗಿ 'ನ್ಯೂಸ್‌ ಆಪ್', ಊಟ ತರಿಸಲು 'ಲಂಚ್‌ ಆಪ್', ಹಣ ಪಾವತಿ ಮಾಡಲು ನೆಟ್‌ ಬ್ಯಾಂಕಿಂಗ್‌ ಆಪ್‌ಗಳು, ಯೋಗ ಮಾಡಲು 'ಯೋಗ ಆಪ್‌' ಹೀಗೆ ಹೇಳ್ತಾ ಹೋದರೆ ಪ್ರತಿಯೊಂದಕ್ಕೂ ಮೊಬೈಲ್‌ ಆಪ್‌ಗಳು ಸಿಗುತ್ತವೆ.

ಅಂದಹಾಗೆ ಬೆಂಗಳೂರಿನಲ್ಲಿ ಇತ್ತೀಚೆಗೆ "ಬಿಬಿಎಂಪಿ ಇ-ಟಾಯ್ಲೆಟ್‌" ಅಂತಲೂ ಮೊಬೈಲ್‌ ಆಪ್‌ ಅನ್ನು ಲಾಂಚ್‌ ಮಾಡಲಾಗಿದೆ. ಇದನ್ನೆಲ್ಲಾ ಯಾಕೆ ಹೇಳ್ತಿದ್ದೀವಿ ಅಂದ್ರೆ ಆರೋಗ್ಯಕ್ಕೆ ಸಂಬಂಧ ಪಟ್ಟ ಮಾಹಿತಿ ನೀಡಲು 50,000 ಕ್ಕೂ ಹೆಚ್ಚು ಮೊಬೈಲ್‌ ಆಪ್‌ಗಳು ಇವೆಯಂತೆ. ಆದರೆ ಅವುಗಳನ್ನು ಬಳಸುವುದರಿಂದ ಆರೋಗ್ಯಕ್ಕೆ ಹೆಚ್ಚು ಸಮಸ್ಯೆಯೇ ಹೊರತು ಉಪಯೋಗವಿಲ್ಲಾ. ಕುರುಡಾಗಿ ಅವುಗಳನ್ನು ನಂಬದಿರಿ ಎಂದು ಭಾರತೀಯ ವೈದ್ಯರು ಹೇಳಿದ್ದಾರೆ. ಅಲ್ಲದೇ "ಹೆಲ್ತ್‌ ಆಪ್‌"ಗಳನ್ನು ಬಳಸುವುದರಿಂದ ಆಗುವ ಸಮಸ್ಯೆ ಕುರಿತು ಅಘಾತಕಾರಿ ಮಾಹಿತಿ ನೀಡಿದ್ದಾರೆ. ಆ ಮಾಹಿತಿಯನ್ನು ಎಲ್ಲರೂ ತಿಳಿಯಲೇ ಬೇಕಾಗಿದ್ದು, ಲೇಖನದ ಸ್ಲೈಡರ್‌ಗಳನ್ನು ಓದಿರಿ.

ಹೆಲ್ತ್‌ ಅಪ್ಲಿಕೇಶನ್‌

ಹೆಲ್ತ್‌ ಅಪ್ಲಿಕೇಶನ್‌

ಆರೋಗ್ಯಕ್ಕೆ ಸಂಬಂಧಿಸಿದ ಮೊಬೈಲ್‌ ಅಪ್ಲಿಕೇಶನ್‌ಗಳ ಬಳಕೆಯ ಏರಿಕೆಯನ್ನು ಗಮನಿಸಿದ ಭಾರತೀಯ ವೈದ್ಯರು " ಆರೋಗ್ಯ ಆಧಾರಿತ ಆಪ್‌ಗಳು ನಿಮಗೆ ತಪ್ಪು ಮಾಹಿತಿಗಳನ್ನು ನೀಡಬಹುದು, ಟೆಕ್ನಾಲಜಿ ಆಧಾರಿತ ಆಪ್‌ಗಳ ಮಾಹಿತಿ ಅಪ್‌ಡೇಟ್‌ ಮೇಲೆ ಕುರುಡಾಗಿ ಅವಲಂಬಿತರಾಗದಿರಿ" ಎಂದು ಜನತೆಗೆ ಹೇಳಿದ್ದಾರೆ.

ಹೆಲ್ತ್‌ ಅಪ್ಲಿಕೇಶನ್‌

ಹೆಲ್ತ್‌ ಅಪ್ಲಿಕೇಶನ್‌

ಹಲವು ವೇಳೆ ಆರೋಗ್ಯ ಅಪ್ಲಿಕೇಶನ್‌ಗಳು, ಆಪ್‌ ಬಳಕೆದಾರರ ದೇಹದ ಚಯಾಪಚಯ(metabolism) ತಿಳಿಯದೆ ತಪ್ಪು ಆಹಾರ ಕ್ರಮಗಳನ್ನು ನೀಡುತ್ತವೆ. ಇದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂದು ಹೇಳಿದ್ದಾರೆ.

ಹೆಲ್ತ್‌ ಅಪ್ಲಿಕೇಶನ್‌

ಹೆಲ್ತ್‌ ಅಪ್ಲಿಕೇಶನ್‌

"ಆಪ್‌ಗಳನ್ನು ಮಾರುಕಟ್ಟೆಯಿಂದ ಲಾಭಗಳಿಸಲು ಅಭಿವೃದ್ದಿಪಡಿಸಲಾಗುತ್ತದೆ. ಆದರೆ ಅವುಗಳನ್ನು ಹೆಚ್ಚು ನೋಡುತ್ತಾಹೋದಂತೆ ರಕ್ತದ ಒತ್ತಡ ಹೆಚ್ಚುತ್ತದೆ. ಅಲ್ಲದೇ ತಪ್ಪು ಹೇಳಿಕೆಗಳನ್ನು ನೀಡುತ್ತದೆ" ಎಂದು ಪ್ರಮುಖ ಡಯಬಿಟೋಲಾಜಿಸ್ಟ್‌ ಪ್ರದೀಪ್‌ ಗೇಜ್‌ ಹೇಳಿದ್ದಾರೆ.

ಹೆಲ್ತ್‌ ಅಪ್ಲಿಕೇಶನ್‌

ಹೆಲ್ತ್‌ ಅಪ್ಲಿಕೇಶನ್‌

ಉದಾಹರಣೆಗೆ ಸಾಮಾನ್ಯ ವೇಳೆಗೂ ಹಾಗೂ ಅಪ್ಲಿಕೇಶನ್‌ ಬಳಸುವ ಮೂಲಕವು ಪರೀಕ್ಷೆ ನಡೆಸಿದಾಗ ರಕ್ತದ ಒತ್ತಡ ವ್ಯತ್ಯಾಸ ಕಂಡುಬರುತ್ತದೆ ಎಂದು ಹೇಳಿದ್ದಾರೆ.

ಹೆಲ್ತ್‌ ಅಪ್ಲಿಕೇಶನ್‌

ಹೆಲ್ತ್‌ ಅಪ್ಲಿಕೇಶನ್‌

ಹಲವರು ತೂಕ ಕಳೆದುಕೊಳ್ಳುವುದು ಹೇಗೆ ಎಂದು ತಿಳಿಯಲು ಯಾವಾಗಲು ಅಪ್ಲಿಕೇಶನ್‌ ಅನ್ನೇ ಆಧಾರವಾಗಿಟ್ಟುಕೊಂಡು ಅದನ್ನೇ ನೋಡುತ್ತಾ ಕುಳಿತರೆ ಯಾವುದೇ ಉಪಯೋಗವಾಗುವುದಿಲ್ಲ ಎಂದು ಪ್ರದೀಪ್‌ ಗೇಜ್‌ ಹೇಳಿದ್ದಾರೆ.

ಹೆಲ್ತ್‌ ಅಪ್ಲಿಕೇಶನ್‌

ಹೆಲ್ತ್‌ ಅಪ್ಲಿಕೇಶನ್‌

ವೈದ್ಯರ ಪ್ರಕಾರ ಆಪ್‌ ಮಾರುಕಟ್ಟೆಯಲ್ಲಿ ಸುಮಾರು 50,000 ಮೆಡಿಕಲ್‌ ಸಂಬಂಧಿಸಿದ ಅಪ್ಲಿಕೇಶನ್‌ಗಳು ಇದ್ದು, 500 ದಶಲಕ್ಷ ಜನರು ಆರೋಗ್ಯ ಕುರಿತ ಮಾಹಿತಿಗಾಗಿ ಆಪ್‌ಗಳನ್ನು ಪ್ರಪಂಚದಾದ್ಯಂತ ಬಳಕೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಹೆಲ್ತ್‌ ಅಪ್ಲಿಕೇಶನ್‌

ಹೆಲ್ತ್‌ ಅಪ್ಲಿಕೇಶನ್‌

ಹಲವು ಜನರು ಸ್ವಾಭಾವಿಕ ಚಟುವಟಿಕೆಗಿಂತ ಆಪ್‌ ಸಲಹೆಗಳನ್ನು ತೂಕ ಕಡಿಮೆ ಮಾಡಲು ಅನುಸರಿಸುತ್ತಾರೆ ಎಂದು ದೆಹಲಿ ಮೂಲದ ವೈದ್ಯರಾದ ಸುಧೀರ್‌ ಕುಮಾರ್‌'ರವರು ಹೇಳಿದ್ದಾರೆ.

 ಗಿಜ್‌ಬಾಟ್‌

ಗಿಜ್‌ಬಾಟ್‌

ಕಂಪ್ಯೂಟರ್‌ನಲ್ಲಿ ಆಗದ, ಮೊಬೈಲ್‌ನಲ್ಲೇ ಮಾಡಬಹುದಾದ 10 ಚಟುವಟಿಕೆಗಳುಕಂಪ್ಯೂಟರ್‌ನಲ್ಲಿ ಆಗದ, ಮೊಬೈಲ್‌ನಲ್ಲೇ ಮಾಡಬಹುದಾದ 10 ಚಟುವಟಿಕೆಗಳು

ವಾಟ್ಸಾಪ್‌ನಲ್ಲಿ ಮೆಸೇಜ್‌ ಶೆಡ್ಯೂಲ್‌ ಮಾಡುವುದು ಹೇಗೆ?ವಾಟ್ಸಾಪ್‌ನಲ್ಲಿ ಮೆಸೇಜ್‌ ಶೆಡ್ಯೂಲ್‌ ಮಾಡುವುದು ಹೇಗೆ?

Most Read Articles
Best Mobiles in India

English summary
Do not blindly follow mobile health applications, warn doctors. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X