ದೀಪಾವಳಿ ಆಫರ್‌ಗಾಗಿ ಆನ್‌ಲೈನ್‌ ಶಾಪಿಂಗ್‌ ಮಾಡುವ ಮುನ್ನ ಎಚ್ಚರ, ಎಚ್ಚರ!

|

ಹಬ್ಬದ ಸಂಭ್ರಮದಲ್ಲಿ ಮನೆಗೆ ಹೊಸ ವಸ್ತುಗಳ ಖರೀದಿಸುವುದು ಸರ್ವೆ ಸಾಮಾನ್ಯ. ಇದಕ್ಕ್ಆಗಿಯೇ ಇ-ಕಾಮರ್ಸ್‌ ಸೈಟ್‌ಗಳು ಕೂಡ ಹಬ್ಬದ ಸಮಯದಲ್ಲಿ ವಿಶೇಷ ಸೇಲ್‌ಗಳನ್ನು ಆಯೋಜಿಸುವ ಮೂಲಕ ಗ್ರಾಹಕರಿಗೆ ಬಿಗ್‌ ಡಿಸ್ಕೌಂಟ್‌ ಮೇಳಗಳನ್ನು ನಡೆಸುತ್ತಿವೆ. ಇ-ಕಾಮರ್ಸ್‌ ಸೈಟ್‌ಗಳ ವಿಶೇಷ ಸೇಲ್‌ಗಳಲ್ಲಿ ಹೆಚ್ಚಿನ ಡಿಸ್ಕೌಂಟ್‌ ದೊರೆಯುವುದರಿಂದ ಗ್ರಾಹಕರು ಕೂಡ ಆನ್‌ಲೈನ್‌ ಶಾಪಿಂಗ್‌ ಕಡೆಗೆ ಆಸಕ್ತಿ ವಹಿಸುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಖದೀಮರು ನಕಲಿ ಲಿಂಕ್‌ಗಳ ಮೂಲಕ ನಿಮ್ಮ ಖಾತೆಗಳಿಗೆ ಕನ್ನಹಾಕುವ ಸಾದ್ಯತೆ ಕೂಡ ಇದೆ.

ಆನ್‌ಲೈನ್‌

ಹೌದು, ದೀಪಾವಳಿ ಹಬ್ಬದ ಪ್ರಯುಕ್ತ ಆನ್‌ಲೈನ್‌ ಶಾಪಿಂಗ್‌ ಸೈಟ್‌ಗಳಲ್ಲಿ ವಿಶೇಷ ಸೇಲ್‌ಗಳ ಅಬ್ಬರ ಜೋರಾಗಿದೆ. ಇ-ಕಾಮರ್ಸ್‌ ದೈತ್ಯ ಎನಿಸಿಕೊಂಡಿರುವ ಅಮೆಜಾನ್‌, ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಗ್ರಾಹಕರಿಗೆ ಬಿಗ್‌ ಆಫರ್‌ ನೀಡಲಾಗ್ತಿದೆ. ಇದೇ ಸಂದರ್ಭದಲ್ಲಿ ಹಬ್ಬದ ವಿಶೇಷ ಕೊಡುಗೆ ಎಂಬ ನಕಲಿ ಸಂದೇಶಗಳ ಮೂಲಕ ಗ್ರಾಹಕರನ್ನು ಯಾಮಾರಿಸುತ್ತಿದ್ದಾರೆ. ನಕಲಿ ಲಿಂಕ್‌ಗಳ ಮೂಲಕ ಬಿಗ್‌ ಆಫರ್‌ ಆಸೆ ತೋರಿಸಿ ಗ್ರಾಹಕರಿಗೆ ಮೋಸ ಮಾಡುತ್ತಿದ್ದಾರೆ. ಹಾಗಾದ್ರೆ ಆನ್‌ಲೈನ್‌ ಶಾಪಿಂಗ್‌ ಮಾಡುವ ಮುನ್ನ ಗ್ರಾಹಕರು ವಹಿಸಬೇಕಾದ ಎಚ್ಚರಿಕೆ ಕ್ರಮಗಳು ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವೆಬ್‌ಸೈಟ್‌ಗಳು

ದೀಪಾವಳಿ ಸೇಲ್‌ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ಗಳು ಗ್ರಾಹಕರಿಗೆ ಮೋಸ ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಭಾರಿ ಡಿಸ್ಕೌಂಟ್‌ನಲ್ಲಿ ಜನಪ್ರಿಯ ಮೊಬೈಲ್‌ಗಳು, ಟಿವಿಗಳು, ಲ್ಯಾಪ್‌ಟಾಪ್‌ಗಳು, ಪೀಠೋಪಕರಣಗಳು, ಗೃಹೋಪಯೋಗಿ ವಸ್ತುಗಳು, ಬಟ್ಟೆಗಳು, ದೊರೆಯುತ್ತಿವೆ ಎಂಬ ನಕಲಿ ಲಿಂಕ್‌ಗಳು ಗ್ರಾಹಕರನ್ನು ಸುಲಭವಾಗಿ ಯಾಮಾರಿಸಿಬಿಡುತ್ತವೆ. ಅಷ್ಟೇ ಅಲ್ಲ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಆನ್‌ಲೈನ್ ಶಾಪಿಂಗ್ ಮಾಡುವ ಬ್ಯಾಂಕ್ ಖಾತೆದಾರರು ಅವರು ಎಲ್ಲಿ ಲಾಗ್ ಇನ್ ಮಾಡುತ್ತಾರೆ ಮತ್ತು ಹೇಗೆ ಪಾವತಿ ಮಾಡುತ್ತಾರೆ ಎಂಬುದರ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ಸೈಬರ್ ಹ್ಯಾಕರ್‌ಗಳು ನಿಮ್ಮ ಹಣದೋಚುವ ಸಾದ್ಯತೆ ಇರುತ್ತದೆ.

ಆನ್‌ಲೈನ್‌

ಇದಲ್ಲದೆ ಆನ್‌ಲೈನ್‌ ಶಾಪಿಂಗ್‌ ಪ್ರಿಯರು ಸಿಕ್ಕಸಿಕ್ಕ ವೆಬ್‌ಸೈಟ್‌ ಲಿಂಕ್‌ಗಳನ್ನು ಟ್ಯಾಪ್‌ ಮಾಡುವ ಗೋಜಿಗೆ ಹೋಗಬಾರದು. ವಾಟ್ಸಾಪ್‌ನಲ್ಲಿ ಹರಿದು ಬರುವ ಪಾರ್ವರ್ಡ್‌ ಮೆಸೇಜ್‌ಗಳ ಸತ್ಯಾಸತ್ಯತೆ ತಿಳಿದ ನಂತರ ಆನ್‌ಲೈನ್‌ ಶಾಪಿಂಗ್‌ ಮಾಡೊದು ಒಳಿತು. ಇಲ್ಲದೆ ಹೋದರೆ ನಕಲಿ ವೆಬ್‌ಸೈಟ್‌ಗಳ ಬಲೆಗೆ ನೀವು ಬಿಳಬೇಕಾಗುತ್ತದೆ. ಆನ್‌ಲೈನ್‌ನಲ್ಲಿ ನೀವು ಸರ್ಚ್‌ ಮಾಡುವಾಗ ಜಾಗೂರಕತೆ ವಹಿಸುದು ಉತ್ತಮ. ಇನ್ನು ದೀಪಾವಳಿ ಸಮಯದಲ್ಲಿ ಆನ್‌ಲೈನ್ ಶಾಪಿಂಗ್ ಮಾಡುವಾಗ ನಡೆಯುವ ನಕಲಿ ವೆಬ್‌ಸೈಟ್‌ಗಳ ಹಗರಣಗಳ ಬಗ್ಗೆ ಎಚ್ಚರಿಕೆಯಿಂದ ಇರಲು ಈ ಕೆಳಗಿನ ಅಂಶಗಳನ್ನು ಅನುಸರಿಸಿದರೆ ಉತ್ತಮ.

ಆನ್‌ಲೈನ್ ಶಾಪಿಂಗ್ ಮಾಡುವಾಗ ಎಚ್ಚರಿಕೆ ವಹಿಸೋದು ಹೇಗೆ?

ಆನ್‌ಲೈನ್ ಶಾಪಿಂಗ್ ಮಾಡುವಾಗ ಎಚ್ಚರಿಕೆ ವಹಿಸೋದು ಹೇಗೆ?

* ಆನ್‌ಲೈನ್‌ ಶಾಪಿಂಗ್‌ ಮಾಡುವ ಮುನ್ನ ವೆಬ್‌ಸೈಟ್‌ ಲಿಂಕ್‌ URL https://ನಿಂದ ಶುರುವಾಗಲಿದೆ. ಇದರಲ್ಲಿ 's' ಇದ್ದರೆ ಸುರಕ್ಷಿತ ವೆಬ್‌ಸೈಟ್‌ ಎಂದು ಭಾವಿಸಬಹುದು.
* URL ನಲ್ಲಿ ಕಾಣುವ ಲಾಕ್ ಐಕಾನ್ ಮೇಲೆ ಮೌಸ್ ಬ್ರೌಸ್‌ ಮಾಡಿ ಅದರಲ್ಲಿ ಸೆಕ್ಯುರಿಟಿ ಫೀಚರ್ಸ್‌ ಬಗ್ಗೆ ತಿಳಿಯಬಹುದು.
* ಅಮೆಜಾನ್, ಫ್ಲಿಪ್‌ಕಾರ್ಟ್, ಶಾಪ್‌ಕ್ಲೂಸ್, ಪೆಪ್ಪರ್‌ಫ್ರೈ ನಂತಹ ಜನಪ್ರಿಯ ವೆಬ್‌ಸೈಟ್‌ಗಳಲ್ಲಿ ಆನ್‌ಲೈನ್‌ ಶಾಪಿಂಗ್‌ ಮಾಡುವುದು ಬೆಸ್ಟ್‌.
* ನೀವು ಬಳಸುವ ಡಿವೈಸ್‌ನಲ್ಲಿ ಆಂಟಿ ವೈರಸ್ ಮತ್ತು ಫೈರ್‌ವಾಲ್ ಅಪ್ಡೇಟ್‌ ಆಗಿರುವಂತೆ ನೋಡಿಕೊಳ್ಳಬೇಕು.

ವೆಬ್‌ಸೈಟ್‌

* ನಿಮ್ಮ ಸಿಕ್ರೆಟ್‌ ಡೇಟಾ ಬಯಸುವ ಯಾವುದೇ ವೆಬ್‌ಸೈಟ್‌ ಆಗಿದ್ದರೂ ಅದನ್ನು ತೆರೆಯಲು ಹೋಗಬಾರದು.
* ಬೇರೆಯವರು ಹೇಳಿದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್‌ ಮಾಡುವ ಬದಲು ಸತ್ಯಾಸತ್ಯತೆ ಪರಿಶೀಲಿಸಿ.
* ನಿಮಗೆ ಪರಿಚಯವಿಲ್ಲದವರು ಕಳುಹಿಸಿದ ಲಿಂಕ್‌ಗಳನ್ನು ಎಂದಿಗೂ ಕ್ಲಿಕ್ ಮಾಡಬೇಡಿ.
* ನಿಮ್ಮ ಖಾತೆಯ ಪಾಸ್‌ವರ್ಡ್ ಅನ್ನು ಆಗಾಗ ಬದಲಾಯಿಸುತ್ತಿರಬೇಕು.
* ನಿಮ್ಮ ಬ್ಯಾಂಕ್ ಖಾತೆಯ ವಿವರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಬಾರದು.

ಆಫರ್‌

ಇದಿಷ್ಟೇ ಅಲ್ಲ ಹೆಚ್ಚಿನ ಆಫರ್‌ ಆಸೆಗಾಗಿ ದುಡುಕುವುದಕ್ಕೆ ಹೋಗಬಾರದು. ಮೊದಲಿಗೆ ನಿಮಗೆ ಬಮದಿರುವ ಸಂದೆಶಗಳ ಸತ್ಯಾಸತ್ಯತೆ ಅರಿಯು ಪ್ರಯತ್ನ ಮಾಡಿ. ಜನಪ್ರಿಯ ವೆಬ್‌ಸೈಟ್‌ಗಳಲ್ಲಿ ನಿಜವಾಗಿಯೂ ಡಿಸ್ಕೌಂಟ್‌ ನೀಡಲಾಗ್ತಿದೆಯಾ ಅನ್ನೊದನ್ನ ಪರಿಶೀಲಿಸಿದ ನಂತರ ನಿಮ್ಮ ಮುಂದಿನ ಕಾರ್ಯನಿರ್ವಹಿಸಿ. ಹೀಗೆ ಎಚ್ಚರಿಕೆಯ ಕ್ರಮಗಳನ್ನು ಅನುಸರಿಸಿದರೆ ಮಾತ್ರ ನಿಮ್ಮ ಆನ್‌ಲೈನ್‌ ಶಾಪಿಂಗ್‌ ಉತ್ತಮ ಅನುಭವ ನೀಡಲಿದೆ. ಇಲ್ಲದೆ ಹೋದರೆ ಸೈಬರ್‌ ಹ್ಯಾಕರ್‌ಗಳ ದಾಳಿಗೆ ಬಲಿಯಾಗುವ ಸಾದ್ಯತೆ ಇರುತ್ತದೆ.

Best Mobiles in India

English summary
Online shopping season really takes off after Diwali sales are rolled out.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X