ಎಚ್ಚರ..! ಎಚ್ಚರ..! ನಿಮ್ಮ ಹಣ ಕದಿಯಲು ಹ್ಯಾಕರ್‌ಗಳ ಹೊಸ ಮಾರ್ಗ..!

By Gizbot Bureau
|

ತಂತ್ರಜ್ಞಾನಗಳು ಬೆಳೆದಂತೆಲ್ಲಾ ಸೈಬರ್‌ ಕ್ರೈಂಗಳ ವಿಧಾನವು ಬದಲಾಗ್ತಿದೆ. ಹೌದು, ನಿಮ್ಮ ಬ್ಯಾಂಕಿಂಗ್‌ ಮಾಹಿತಿ ಕದಿಯಲು ಸ್ಕ್ಯಾಮರ್‌ಗಳು ಹೊಸ ವಿಧಾನ ಕಂಡುಕೊಂಡಿದ್ದಾರೆ. ಫೆಡ್ಎಕ್ಸ್ ಮತ್ತು ಇತರ ಕಂಪನಿಗಳಿಂದ ಕೊರಿಯರ್ ವಿತರಣಾ ಟ್ರ್ಯಾಕಿಂಗ್ ವಿನಂತಿಯಂತೆ ಕಂಡುಬರುವ ನಕಲಿ ಎಸ್‌ಎಂಎಸ್ ಮತ್ತು ಇಮೇಲ್‌ಗಳು ಈ ವಂಚನೆಯ ಭಾಗವಾಗಿರುತ್ತವೆ. ನಕಲಿ SMS ಅಥವಾ ಇಮೇಲ್‌ನ್ನು ಹೆಚ್ಚು ನಂಬಿಕಾರ್ಹ ಮಾಡಲು ವಂಚಕರು ಸಂತ್ರಸ್ತರ ನಿಜವಾದ ಹೆಸರುಗಳನ್ನು ಇಮೇಲ್‌ಗಳಲ್ಲಿ ಬಳಸುತ್ತಾರೆ.

ನಕಲಿ ಸಂದೇಶ ಹೀಗಿರುತ್ತೆ..!

ನಕಲಿ ಸಂದೇಶ ಹೀಗಿರುತ್ತೆ..!

ಉದಾಹರಣೆಗೆ, ನಕಲಿ ಸಂದೇಶ ಹೀಗಿರಬಹುದು: "ಹಾಯ್, ಅಜಯ್, ಟ್ರ್ಯಾಕಿಂಗ್ ಕೋಡ್ IC-2972-6791-MN89 ಆಗಿರುವ ನಿಮ್ಮ ಫೆಡೆಕ್ಸ್ ಪ್ಯಾಕೇಜ್ ವಿತರಣಾ ಆದ್ಯತೆಗಳನ್ನು ಹೊಂದಿಸಲು ಕಾಯುತ್ತಿದೆ" ಎಂಬ ಕ್ಲಿಕ್‌ ಮಾಡಬಹುದಾದ ಯುಆರ್‌ಎಲ್‌ ಇರುತ್ತದೆ. ಆ URL ಕ್ಲಿಕ್ ಮಾಡಿದಾಗ, ಅದು ನಿಮ್ಮ ವೈಯಕ್ತಿಕ ಮತ್ತು ಬ್ಯಾಂಕಿಂಗ್ ವಿವರಗಳನ್ನು ಕೇಳುವ ದುರುದ್ದೇಶಪೂರಿತ ವೆಬ್‌ಸೈಟ್‌ಗೆ ನಿಮ್ಮನ್ನು ನಿರ್ದೇಶಿಸುತ್ತದೆ. ಇಲ್ಲಿಂದ ನಿಮ್ಮ ವೈಯಕ್ತಿಕ ಮಾಹಿತಿಯು ಹ್ಯಾಕರ್‌ಗಳ ಪಾಲಾಗುತ್ತದೆ. ಸಾಮಾನ್ಯ ಫಿಶಿಂಗ್‌ನಂತೆ ಹ್ಯಾಕರ್‌ಗಳು ನೀವು ಹಂಚಿಕೊಂಡ ವಿವರಗಳನ್ನು ಬಳಸಿಕೊಂಡು ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಕದಿಯಲು ಪ್ರಯತ್ನಿಸುತ್ತಾರೆ.

ಫೆಡ್‌ಎಕ್ಸ್‌ನಿಂದ ಎಚ್ಚರಿಕೆ

ಫೆಡ್‌ಎಕ್ಸ್‌ನಿಂದ ಎಚ್ಚರಿಕೆ

ಈ ಬಗ್ಗೆ ಫೆಡ್ಎಕ್ಸ್ ಕಂಪನಿ ಜನರಿಗೆ ಎಚ್ಚರಿಕೆ ನೀಡಿದೆ. "ಫೆಡ್ಎಕ್ಸ್ ಯಾವುದೇ ಮೇಲ್ ಅಥವಾ ಇಮೇಲ್, ಪಾವತಿ ಅಥವಾ ವೈಯಕ್ತಿಕ ಮಾಹಿತಿಯ ಮೂಲಕ ಸಾಗಣೆಗೆ ಅಥವಾ ಫೆಡ್ಎಕ್ಸ್ ಕಸ್ಟಡಿಯಲ್ಲಿರುವ ಸರಕುಗಳಿಗಾಗಿ ವಿನಂತಿಸುವುದಿಲ್ಲ. ಅನುಮಾನಾಸ್ಪದ ಸಂದೇಶಗಳನ್ನು ತೆರೆಯದೆ ಅಳಿಸಿ ಮತ್ತು abuse@fedex,comಗೆ ವರದಿ ಮಾಡಿ" ಎಂದು ಕಂಪನಿ ಹೇಳಿದೆ.

ವಂಚನೆಗೆ ಬ್ರಾಂಡ್‌ ಬಳಕೆ

ವಂಚನೆಗೆ ಬ್ರಾಂಡ್‌ ಬಳಕೆ

ಸ್ಕ್ಯಾಮರ್‌ಗಳು ತಮ್ಮ ಕಿಡಿಗೇಡಿತನವನ್ನು ನಿರ್ವಹಿಸಲು ಫೆಡ್ಎಕ್ಸ್ ಬ್ರಾಂಡ್‌ ಬಳಸುತ್ತಿದ್ದಾರೆ. ಆದರೆ, ಯಾವುದೇ ಕೊರಿಯರ್ ಕಂಪನಿಯು ಕೇವಲ ಎಸ್‌ಎಂಎಸ್ ಕಳುಹಿಸುವ ಮೂಲಕ ಪಾವತಿ ಅಥವಾ ಇತರ ಯಾವುದೇ ಸೇವೆಗಳನ್ನು ಕೋರುವುದಿಲ್ಲ ಎಂದು ಓದುಗರು ತಿಳಿದಿರಬೇಕು. ಸಂದೇಹವಿದ್ದಲ್ಲಿ, ನೀವು ನೋಂದಾಯಿತ ಗ್ರಾಹಕ ಸೇವಾ ಸಂಖ್ಯೆಯೊಂದಿಗೆ ಸಂಪರ್ಕದಲ್ಲಿರಬೇಕು ಅಥವಾ ಈ ವಿಷಯ ಪರಿಶೀಲಿಸಲು ಅಧಿಕೃತ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಬೇಕು.

ಆನ್‌ಲೈನ್‌ ಸ್ಕ್ಯಾಮ್‌

ಆನ್‌ಲೈನ್‌ ಸ್ಕ್ಯಾಮ್‌

"ವಂಚಕ ಇಮೇಲ್‌ಗಳು ಆನ್‌ಲೈನ್ ಹಗರಣಗಳ ಸಾಮಾನ್ಯ ಮಾರ್ಗವಾಗಿದೆ. ಅಂತಹ ಇಮೇಲ್‌ಗಳು ಪ್ರತಿಷ್ಠಿತ ಕಂಪನಿಗಳಿಂದ ಬಂದಿವೆ ಎಂಬಂತೆ ನಿಮ್ಮನ್ನು ಮೋಸಗೊಳಿಸಲು ಪ್ರಯತ್ನಿಸುತ್ತವೆ. ಸೂಕ್ಷ್ಮವಾದ ವೈಯಕ್ತಿಕ ಖಾತೆ ಮಾಹಿತಿ ಹಂಚಿಕೊಳ್ಳುವಂತೆ ಅಥವಾ ಹಣ ಪಾವತಿಸುವಂತೆ ನಿಮ್ಮನ್ನು ಪ್ರೇರೆಪಿಸುತ್ತಾರೆ" ಎಂದು ಫೆಡ್ಎಕ್ಸ್ ಎಚ್ಚರಿಸಿದೆ.

ಕರೆಯಲ್ಲೂ ಆಗುತ್ತೆ ಕ್ರೈಂ

ಕರೆಯಲ್ಲೂ ಆಗುತ್ತೆ ಕ್ರೈಂ

ಒಂದೊಂದು ಬಾರಿ ನಿಮ್ಮ ವಿಳಾಸಕ್ಕೆ ಪ್ಯಾಕೇಜ್ ಕಾಯುತ್ತಿದೆ ಎಂದು ಹೇಳುವ ಗ್ರಾಹಕ ಸೇವಾ ಸಂಖ್ಯೆಯಿಂದ ನೀವು ಕರೆಗಳನ್ನು ಪಡೆಯಬಹುದು. ಹಾಗೂ ವಿತರಣೆಯನ್ನು ಪ್ರಕ್ರಿಯೆಗೊಳಿಸಲು ನೀವು ಸಣ್ಣ ತೆರಿಗೆ ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳುತ್ತಾರೆ. ಈ ಮೊತ್ತ ಕಡಿಮೆ ಇದ್ದರೂ ಕೂಡ ನಿಮ್ಮ ಬ್ಯಾಂಕಿಂಗ್ ವಿವರಗಳನ್ನು ಕದಿಯಲು ನೆರವಾಗುತ್ತದೆ.

Best Mobiles in India

Read more about:
English summary
Do Not Open An Unknown Link From A Courier Delivery Message

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X