ವಂಚನೆಗೆ ದಾರಿಯಾಗುತ್ತಿದೆ ಗೂಗಲ್ ಹುಡುಕಾಟ..! ಗೂಗಲ್‌ನಲ್ಲಿ ಇವುಗಳನ್ನು ಸರ್ಚ್ ಮಾಡಲೇಬೇಡಿ..!
ಗೂಗಲ್ ಹುಡುಕಾಟದ ಮೂಲಕ ಎಲ್ಲಾ ಪ್ರಶ್ನೆಗಳಿಗೂ ಉತ್ತರಗಳನ್ನು ಕಂಡುಕೊಳ್ಳಬಹುದು. ಆದರೆ, ಎಲ್ಲದಕ್ಕೂ ಗೂಗಲ್ ಸರ್ಚಿಂಗ್‌ನ್ನು ಅವಲಂಭಿಸುವುದರಿಂದ ಕೆಲವೊಮ್ಮೆ ತೊಂದರೆಯಾಗಬಹುದು. ಏಕೆಂದರೆ, ಗೂಗಲ್ ತೋರಿಸುವ ಮಾಹಿತಿ ಗೂಗಲ್‌ನದ್ದಲ್ಲ ಮತ್ತು ಯಾವಾಗಲೂ ಪರಿಶೀಲಿಸಲ್ಪಟ್ಟಿರಲ್ಲ. ಮತ್ತು ಗೂಗಲ್‌ನಲ್ಲಿ ಕಂಡುಬರುವ ವಿಷಯದ ಸತ್ಯಾಸತ್ಯತೆಯನ್ನು ನಿರ್ಣಯಿಸುವುದು ಕೆಲವೊಮ್ಮೆ ಕಷ್ಟಕರವಾಗಿರುತ್ತದೆ. ಇಲ್ಲಿ ನಕಲಿ ವೆಬ್‌ಸೈಟ್‌ಗಳು, ಸಂಪರ್ಕ ವಿವರಗಳು ಮತ್ತು ವಿಳಾಸಗಳು ದೃಶ್ಯರೂಪವನ್ನು ಪಡೆಯೋದು ಇಲ್ಲಿಯೇ. ಅದಕ್ಕಾಗಿ ಗೂಗಲ್‌ನಲ್ಲಿ ಈ 10 ಹುಡುಕಾಟಗಳನ್ನು ಕಡಿಮೆ ಮಾಡಿ,

ಆನ್‌ಲೈನ್ ಬ್ಯಾಂಕಿಂಗ್ ವೆಬ್‌ಸೈಟ್ ಹುಡುಕುವುದನ್ನು ತಪ್ಪಿಸಿ
ಫಿಶಿಂಗ್ ಮತ್ತು ಹ್ಯಾಕಿಂಗ್ ಅಪಾಯಗಳನ್ನು ತಪ್ಪಿಸಲು, ಆನ್‌ಲೈನ್ ಬ್ಯಾಂಕಿಂಗ್‌ನ ನಿಖರವಾದ ಅಧಿಕೃತ URL ನಿಮಗೆ ತಿಳಿದಿಲ್ಲದಿದ್ದರೆ ಗೂಗಲ್‌ನಲ್ಲಿ ಆನ್‌ಲೈನ್ ಬ್ಯಾಂಕಿಂಗ್ ವೆಬ್‌ಸೈಟ್ ಹುಡುಕದಿರುವುದು ಹೆಚ್ಚು ಸೂಕ್ತ. ಸುರಕ್ಷಿತವಾಗಿರಲು ಹಾಗೂ ಬ್ಯಾಂಕಿಂಗ್ ವೆಬ್‌ಸೈಟ್‌ಗೆ ಪ್ರವೇಶಿಸಲು ನಿಮ್ಮ ಬ್ಯಾಂಕಿನ ಆನ್‌ಲೈನ್ ಬ್ಯಾಂಕಿಂಗ್ ಪೋರ್ಟಲ್‌ನ ಅಧಿಕೃತ URL ಅನ್ನು ಯಾವಾಗಲೂ ನಮೂದಿಸಿ.

ಗ್ರಾಹಕ ಸೇವಾ ಸಂಖ್ಯೆ ಹುಡುಕಬೇಡಿ
ಇದು ಸಾಮಾನ್ಯ ಆನ್‌ಲೈನ್ ಹಗರಣಗಳಲ್ಲಿ ಒಂದಾಗಿದೆ. ವಂಚಕರು ಆಗಾಗ ನಕಲಿ ವ್ಯವಹಾರ ಪಟ್ಟಿಗಳನ್ನು ಮತ್ತು ಗ್ರಾಹಕರ ಸೇವಾ ಸಂಖ್ಯೆಗಳನ್ನು ವೆಬ್‌ಸೈಟ್‌ಗಳಲ್ಲಿ ಪೋಸ್ಟ್ ಮಾಡುತ್ತಾರೆ, ಇದರಿಂದ ಗ್ರಾಹಕರು ಮೂಲ ಗ್ರಾಹಕ ಸೇವಾ ಸಂಖ್ಯೆ ಎಂದು ನಂಬಿ ಮೋಸ ಹೋಗೋ ಸಾಧ್ಯತೆ ಹೆಚ್ಚು.

ಆಪ್‌ಗಳನ್ನು ಹುಡುಕಬೇಡಿ
ಆಂಡ್ರಾಯ್ಡ್‌ನಲ್ಲಿ ಗೂಗಲ್ ಪ್ಲೇಸ್ಟೋರ್ ಮತ್ತು ಐಫೋನ್‌ಗಳಿಗಾಗಿ ಆಪ್ ಸ್ಟೋರ್‌ನಂತಹ ಅಧಿಕೃತ ಅಪ್ಲಿಕೇಶನ್ ಸ್ಟೋರ್‌ಗಳಲ್ಲಿಯೇ ಅಪ್ಲಿಕೇಷನ್‌ಗಳಿಗಾಗಿ ಹುಡುಕಿ. ಗೂಗಲ್‌ನಲ್ಲಿ ಹುಡುಕೋದ್ರಿಂದ ದುರುದ್ದೇಶಪೂರಿತ ಸಾಫ್ಟ್‌ವೇರ್ ಮತ್ತು ಅಪ್ಲಿಕೇಶನ್ ಲಿಂಕ್‌ಗಳು ನಿಮಗೆ ಸಿಗೋ ಸಾಧ್ಯತೆ ಹೆಚ್ಚು. ಇದರಿಂದ ನಿಮ್ಮ ಗೌಪ್ಯತೆಗೆ ಧಕ್ಕೆ ಬರಬಹುದು.

ಔಷಧಿಗಳನ್ನು, ಆರೋಗ್ಯದ ಲಕ್ಷಣಗಳ ಸರ್ಚಿಂಗ್ ಬೇಡ
ಗೂಗಲ್‌ನಲ್ಲಿ ಔಷಧಿಗಳು, ವೈದ್ಯಕೀಯ ಲಕ್ಷಣಗಳನ್ನು ಹುಡುಕುವುದು ಬೇಡ. ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ವೈದ್ಯರ ಬಳಿಗೆ ಹೋಗುವುದು ಉತ್ತಮ. ಗೂಗಲ್ ನಿಜವಾಗಿಯೂ ಔಷಧಿಗಳನ್ನು ಅಥವಾ ಆರೋಗ್ಯ ಸಲಹೆಗಳನ್ನು ಹುಡುಕುವ ಸ್ಥಳವಲ್ಲ. ಅಲ್ಲದೆ, ಗೂಗಲ್‌ನಲ್ಲಿ ನೀವು ಕಂಡುಕೊಂಡ ಮಾಹಿತಿ ಆಧಾರದ ಮೇಲೆ ಔಷಧಿಗಳನ್ನು ಖರೀದಿಸುವುದು ಅಪಾಯಕಾರಿ.

ದೇಹದ ಪೋಷಣೆಗೆ ವೈದ್ಯರನ್ನೇ ಸಂಪರ್ಕಿಸಿ
ಪ್ರತಿಯೊಂದು ಮಾನವ ದೇಹವು ವಿಶಿಷ್ಟವಾಗಿದೆ ಮತ್ತು ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ, ತೂಕ ನಷ್ಟ ಅಥವಾ ಇತರ ಪೌಷ್ಠಿಕಾಂಶದ ಸಲಹೆಗಳ ಬಗ್ಗೆ ಗೂಗಲ್‌ನಿಂದ ಸಲಹೆ ತೆಗೆದುಕೊಳ್ಳಬೇಡಿ. ನಿಮ್ಮ ಆಹಾರಕ್ರಮವನ್ನು ಬದಲಾಯಿಸಲು ನೀವು ಬಯಸಿದರೆ ಆಹಾರ ತಜ್ಞರನ್ನು ಭೇಟಿ ಮಾಡಿ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಮೊದಲು ವೈದ್ಯರಿಂದ ಸಲಹೆ ತೆಗೆದುಕೊಂಡು ನಂತರ ಮುಂದುವರಿಯಿರಿ.

ಹಣಕಾಸು ಸಲಹೆಗಳಿಗೆ ಅವಲಂಭನೆ ಬೇಡ
ಆರೋಗ್ಯದಂತೆ, ವೈಯಕ್ತಿಕ ಹಣಕಾಸು ಎಲ್ಲರಿಗೂ ವಿಶಿಷ್ಟವಾಗಿದ್ದು, ಎಲ್ಲರನ್ನೂ ಶ್ರೀಮಂತರನ್ನಾಗಿ ಮಾಡುವ ಹೂಡಿಕೆ ಯೋಜನೆ ಎಂದಿಗೂ ಇರಲಾರದು. ಆದ್ದರಿಂದ, ಹೂಡಿಕೆ ಮಾಡುವಾಗ ಗೂಗಲ್ ಸರ್ಚಿಂಗ್ ಫಲಿತಾಂಶಗಳಿಂದ ಸಲಹೆ ಪಡೆಯುವುದನ್ನು ಕಡಿಮೆ ಮಾಡೋದು ಒಳ್ಳೆದು.

ಸರ್ಕಾರಿ ವೆಬ್‌ಸೈಟ್ ಹುಡುಕಬೇಡಿ
ಬ್ಯಾಂಕಿಂಗ್ ವೆಬ್‌ಸೈಟ್‌ಗಳಂತೆ, ಸರ್ಕಾರಿ ವೆಬ್‌ಸೈಟ್‌ಗಳಾದ ಪುರಸಭೆ ತೆರಿಗೆ, ಆಸ್ಪತ್ರೆಗಳು ಇತ್ಯಾದಿಗಳು ವಂಚಕರ ಪ್ರಮುಖ ಗುರಿಗಳಾಗಿವೆ. ಯಾವ ವೆಬ್‌ಸೈಟ್ ನೈಜ ಎಂದು ಗುರುತಿಸೋದು ಕಷ್ಟವಾದ್ದರಿಂದ, ಯಾವುದೇ ನಿರ್ದಿಷ್ಟ ಸರ್ಕಾರಿ ವೆಬ್‌ಸೈಟ್‌ಗಳಿಗಾಗಿ ಗೂಗಲ್‌ನಲ್ಲಿ ಹುಡುಕುವ ಬದಲು ನೇರವಾಗಿ ಭೇಟಿ ಮಾಡುವುದು ಉತ್ತಮ.

ಸೋಷಿಯಲ್ ಮೀಡಿಯಾ ಲಾಗಿನ್‌ಗಾಗಿ ಸರ್ಚಿಂಗ್ ಬೇಡ
ನಿಮ್ಮ ಬ್ರೌಸರ್‌ನ ಅಡ್ರೆಸ್ ಬಾರ್‌ನಲ್ಲಿ URL ಅನ್ನು ನೇರವಾಗಿ ಟೈಪ್ ಮಾಡೋ ಮೂಲಕ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪ್ರವೇಶಿಸುವುದು ಉತ್ತಮ. ಗೂಗಲ್‌ನಲ್ಲಿ ಲಾಗಿನ್ ಪುಟ ಹುಡುಕಿದರೆ ಫಿಶಿಂಗ್‌ಗೆ ಕಾರಣವಾಗೋ ಸಾಧ್ಯತೆ ಹೆಚ್ಚು.

ಇ-ಕಾಮರ್ಸ್ ಸೈಟ್ ಅಥವಾ ಆಫರ್ ಸರ್ಚಿಂಗ್ ಕಡಿಮೆ ಮಾಡಿ
ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿನ ಆಫರ್‌ಗಳೆಂದು ಕರೆಯಲ್ಪಡುವ ನಕಲಿ ವೆಬ್‌ಪೇಜ್‌ಗಳು ಗೂಗಲ್ ಸರ್ಚಿಂಗ್‌ನ್ನು ತುಂಬಿಸಿವೆ. ಇದು ಮತ್ತೊಂದು ಕ್ಲಾಸಿಕ್ ಹಗರಣವಾಗಿದ್ದು, ಜನರ ಆನ್‌ಲೈನ್ ಬ್ಯಾಂಕಿಂಗ್ ಲಾಗಿನ್ ವಿವರಗಳನ್ನು ಕದಿಯಲು ಇದು ವೇದಿಕೆಯಾಗಿದ್ದು, ದುರುದ್ದೇಶಪೂರಿತ ವೆಬ್‌ಸೈಟ್‌ಗಳನ್ನು ಕ್ಲಿಕ್ ಮಾಡಲು ಆಕರ್ಷಕ ಆಫರ್‌ಗಳು ಇಲ್ಲಿ ಕಾಣಸಿಗುತ್ತವೆ.

ಪೋರ್ನ್ ಹುಡುಕಲೇಬೇಡಿ
ಗೂಗಲ್ ಜಾಹೀರಾತುಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ. ನೀವು ಗೂಗಲ್‌ನಲ್ಲಿ ಏನೇ ಹುಡುಕುತ್ತಿರೋ ಅವು ನೀವು ಭೇಟಿ ನೀಡುವ ಇತರ ವೆಬ್‌ಸೈಟ್‌ಗಳಲ್ಲಿನ ಜಾಹೀರಾತುಗಳಾಗಿ ಕಾಣಿಸಿಕೊಳ್ಳುತ್ತದೆ. ನಿಮ್ಮ ಹುಡುಕಾಟ ಇತಿಹಾಸದ ಆಧಾರದ ಮೇಲೆ ಗೂಗಲ್ ಜಾಹೀರಾತುಗಳನ್ನು ಪ್ರದರ್ಶಿಸೋದ್ರಿಂದ ಅಶ್ಲೀಲ ಅಥವಾ ಪೋರ್ನ್ ವೆಬ್‌ಸೈಟ್ ಹುಡುಕಿ ಮುಜುಗರಕ್ಕೀಡಾಗಬೇಡಿ.


Click it and Unblock the Notifications








