Home
ಸುದ್ದಿಜಾಲ

ಈ ಶಾಕಿಂಗ್ ವಿಷಯ ಗೊತ್ತಾದ್ರೆ ಆನ್‌ಲೈನ್ ಶಾಪಿಂಗ್ ಮಾಡೋದನ್ನೇ ಬಿಡ್ತೀರಾ!!

ಆನ್‌ಲೈನ್ ಶಾಪಿಂಗ್ ಮಾಡುವುದು ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂಬ ಪ್ರಶ್ನೆಗೆ ಇಲ್ಲಿಯವರೆಗೂ ಸರಿಯಾದ ಉತ್ತರ ಸಿಕ್ಕಿಲ್ಲ. ಆದರೂ ಆನ್‌ಲೈನಿನಲ್ಲಿ ನಮಗೆ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಸಾಧ್ಯವಾಗಿರುವುದರಿಂದ ಎಲ್ಲರೂ ಆನ್‌ಲೈನ್ ಶಾಪಿಂಗ್‌ನತ್ತ ಮುಖಮಾಡಿದ್ದೇವೆ. ಇನ್ನು ಇತ್ತೀಚಿಗಂತೂ ಆನ್‌ಲೈನ್ ಮಾರುಕಟ್ಟೆಯಲ್ಲಿ ಎಲ್ಲವೂ ಕಡಿಮೆ ದರದಲ್ಲಿಯೇ ಸಿಗಲಿದೆ ಎಂಬ ಪೂರ್ವಗ್ರಹ ನಂಬಿಕೆಯೊಂದು ಡಿಜಿಟಲ್ ಯುಗದಲ್ಲಿ ಸೃಷ್ಟಿಯಾಗಿದೆ.

ಈಗಂತೂ ಕೆಲವು ಹೆಸರಾಂತ ಆನ್‌ಲೈನ್ ಶಾಪಿಂಗ್ ತಾಣಗಳನ್ನು ಎಲ್ಲರೂ ನಂಬುತ್ತಿದ್ದಾರೆ. ಆ ಜಾಲತಾಣಗಳಲ್ಲಿ ಸಿಗುವ ವಸ್ತುಗಳನ್ನು ವಾಸ್ತವ ಬೆಲೆಯನ್ನು ಬೇರೆಡೆ ಪರೀಕ್ಷಿಸದೇ ಖರೀದಿಸುತ್ತಿದ್ದಾರೆ. ಇದಕ್ಕಿಂತ ದೊಡ್ಡ ತೊಂದರೆ ಎಂದರೆ ಆ ಜಾಲತಾಣದಲ್ಲಿ ಸಿಗುವ ವಸ್ತು ಅಸಲಿ ಉತ್ಪನ್ನವೇ ಎಂಬುದನ್ನು ಸಹ ತಿಳಿಯದಷ್ಟು ಅವುಗಳನ್ನು ನಂಬಿಕೊಂಡಿದ್ದಾರೆ. ನಿಮಗೆ ಗೊತ್ತಾ? ಇದಕ್ಕಿಂತ ನಮ್ಮ ಮೂರ್ಖತನ ಮತ್ತೊಂದಿಲ್ಲ.

ಈ ಶಾಕಿಂಗ್ ವಿಷಯ ಗೊತ್ತಾದ್ರೆ ಆನ್‌ಲೈನ್ ಶಾಪಿಂಗ್ ಮಾಡೋದನ್ನೇ ಬಿಡ್ತೀರಾ!!

ಹೌದು, ಆನ್‌ಲೈನ್ ಶಾಪಿಂಗ್ ಎಂದಿಗೂ ಗ್ರಾಹಕರ ಪರವಲ್ಲ ಎಂಬುದನ್ನು ಪ್ರಖ್ಯಾತ ದಿಗ್ಗಜ ಆನ್‌ಲೈನ್ ಶಾಪಿಂಗ್ ಕಂಪೆನಿಗಳೇ ತೋರಿಸಿಕೊಟ್ಟಿವೆ. ಪ್ರಖ್ಯಾತ ಆನ್‌ಲೈನ್ ಶಾಪಿಂಗ್ ಜಾಲತಾಣಗಳು ಈಗಾಗಲೇ ಜನರಿಗೆ ಮೋಸ ಮಾಡಿರುವ ಘಟನೆಗಳು ಹಲವು ಜರುಗಿವೆ. ಇಂದು ಕೂಡ ಅಂತಹುದೇ ಒಂದು ಶಾಕಿಂಗ್ ಸುದ್ದಿ ಕೂಡ ಹೊರಬಿದ್ದಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ಆನ್‌ಲೈನ್ ಕಂಪೆನಿಗಳು ನಮಗೆ ಮಾಡುತ್ತಿರುವ ಮೋಸಗಳು ಯಾವುವು?, ಮತ್ತು ಆನ್‌ಲೈನಿನಲ್ಲಿ ಶಾಪಿಂಗ್ ಮಾಡುವ ಮುನ್ನ ತಿಳಿಯಲೇಬೇಕಾದ ವಿಷಯಗಳು ಯಾವುವು ಎಂಬುದನ್ನು ತಿಳಿಯೋಣ.

ಸ್ನಾಪ್‌ಡೀಲ್‌ ನಕಲಿ ಉತ್ಪನ್ನಗಳ ಆಗರ

ಸ್ನಾಪ್‌ಡೀಲ್‌ ನಕಲಿ ಉತ್ಪನ್ನಗಳ ಆಗರ

ಆನ್‌ಲೈನ್‌ನಲ್ಲಿ ಮಾರಾಟವಾಗುವ ಶೇ.20 ರಿಂದ ಶೇ.22ರಷ್ಟು ಉತ್ಪನ್ನಗಳು ನಕಲಿ ಎಂದು ಸಮೀಕ್ಷೆಯೊಂದು ಹೇಳಿದೆ. ಅಂದರೆ, ಪ್ರತಿ 5 ಉತ್ಪನ್ನಗಳಲ್ಲಿ ಒಂದು ಉತ್ಪನ್ನ ನಕಲಿ ಎಂಬುದನ್ನು ಜನ ಹೇಳಿದ್ದಾರೆ.ಸಮೀಕ್ಷೆಯಲ್ಲಿ ಸ್ನಾಪ್‌ಡೀಲ್‌ ನಕಲಿ ಉತ್ಪನ್ನಗಳ ಆಗರವಾಗಿ ಹೊರಹೊಮ್ಮಿದೆ. ಪ್ರತಿಕ್ರಿಯೆ ನೀಡಿದ ಜನರಲ್ಲಿ ಶೇ.37ರಷ್ಟು ಮಂದಿ ಸ್ನಾಪ್‌ಡೀಲ್‌ನಲ್ಲಿ ಹೆಚ್ಚು ಉತ್ಪನ್ನಗಳು ನಕಲಿ ಎಂದು ಹೇಳಿದ್ದಾರೆ. ಎರಡನೇ ಸ್ಥಾನಲದಲಿ ಫ್ಲಿಪ್‌ಕಾರ್ಟ್ ಇದೆ, ಅಂದರೆ ಶೇ.22ರಷ್ಟು ಜನ ಫ್ಲಿಪ್‌ಕಾರ್ಟ್‌ನಲ್ಲಿ ನಕಲಿ ಉತ್ಪನ್ನಗಳು ಮಾರಾಟವಾಗುತ್ತಿವೆ ಎಂದಿದ್ದಾರೆ.

ಸೌಂಧರ್ಯವರ್ಧಕಗಳಲ್ಲಿಯೇ ಜಾಸ್ತಿ ನಕಲಿ

ಸೌಂಧರ್ಯವರ್ಧಕಗಳಲ್ಲಿಯೇ ಜಾಸ್ತಿ ನಕಲಿ

ನಕಲಿ ಉತ್ಪನ್ನಗಳು ಯಾವುದರಲ್ಲಿ ಹೆಚ್ಚೆಂದರೆ ಸೌಂಧರ್ಯವರ್ಧಕ ಹಾಗೂ ಸುಗಂಧ ದ್ರವ್ಯಗಳಲ್ಲಿ ಹೆಚ್ಚೆಂದು ಸಮೀಕ್ಷೆ ಹೇಳಿದೆ. ಶೇ.35ರಷ್ಟು ಜನ ಸುಗಂಧ ದ್ರವ್ಯಗಳು ಮತ್ತು ಸೌಂಧರ್ಯವರ್ಧಕಗಳು ಹೆಚ್ಚು ನಕಲಿಯೆಂದು ಹೇಳಿದ್ದಾರೆ. ಆದ್ದರಿಂದ ಸೌಂಧರ್ಯವರ್ಧಕಗಳನ್ನು ಜಾಸ್ತಿ ಆನ್‌ಲೈನ್‌ನಲ್ಲಿ ಖರೀದಿಸುವವವರು ಎಚ್ಚರದಿಂದ ಇದ್ದರೆ ಉತ್ತಮ.ಶೇ.22ರಷ್ಟು ಜನ ಕ್ರೀಡಾ ಸಾಮಗ್ರಿಗಳು ನಕಲಿ ಎಂದು ಹೇಳಿದ್ದಾರೆ. ಇನ್ನು ಬ್ಯಾಗ್‌ಗಳು, ಲ್ಯಾಪ್‌ಟಾಪ್‌ ಬ್ಯಾಕ್‌ಪ್ಯಾಕ್‌ಗಳು ನಕಲಿಯೆಂದು ಶೇ.8ರಷ್ಟು ಜನ ಹೇಳಿದ್ದು, ಆನ್‌ಲೈನ್‌ ಗ್ರಾಹಕರಿಗೆ ಎಚ್ಚರಿಕೆಯಾಗಿದೆ.

ಅಸಲಿ ಉತ್ಪನ್ನ ಸಿಗುವುದೇ ಡೌಟು!

ಅಸಲಿ ಉತ್ಪನ್ನ ಸಿಗುವುದೇ ಡೌಟು!

ಸ್ಕೆಚರ್ಸ್ ಬ್ರ್ಯಾಂಡ್ ಹೆಸರನ್ನು ಬಳಸಿಕೊಂಡು ನಕಲಿ ಉತ್ಪನ್ನಗಳನ್ನು ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಫ್ಲಿಪ್‌ಕಾರ್ಟ್ ಸೇರಿ ರೀಟೇಲ್‌ ನೆಟ್‌, ಟೆಕ್‌ ಕನೆಕ್ಟ್‌ನಂತಹ ಜಾಲತಾಣಗಳ ವಿರುದ್ಧ ಅಮೆರಿಕ ಮೂಲದ ಸ್ಕೆಚರ್ಸ್ ಎಂಬ ಹೆಸರಾಂತ ಕಂಪೆನಿ ದೂರನ್ನು ದಾಖಲಿಸಿತ್ತು. ಇದು ಪ್ರಖ್ಯಾತ ಆನ್‌ಲೈನ್ ಇ ಕಾಮರ್ಸ್ ತಾಣಗಳಲ್ಲಿ ಸಿಗುವ ಉತ್ಪನ್ನಗಳ ಅಸಲಿತನವನ್ನು ಫ್ಲಿಪ್‌ಕಾರ್ಟ್ ನೀಡಿದ ಉತ್ತರ ಪ್ರಶ್ನಿಸಿತ್ತು.

ಅವು ಮಧ್ಯವರ್ತಿಗಳು ಮಾತ್ರ

ಅವು ಮಧ್ಯವರ್ತಿಗಳು ಮಾತ್ರ

ಸ್ಕೆಚರ್ಸ್ ಕಂಪೆನಿ ಮತ್ತು ಫ್ಲಿಪ್‌ಕಾರ್ಟ್ ಮಧ್ಯೆ ದೆಹಲಿ ಹೈಕೋರ್ಟ್‌ನಲ್ಲಿ ವಾಜ್ಯ ನಡೆಯುತ್ತಿದ್ದಾಗ, 'ನಮ್ಮದು ಆನ್‌ಲೈನ್‌ ಮಾರುಕಟ್ಟೆ ವ್ಯವಸ್ಥೆ. ದೇಶದಲ್ಲಿ ಮಾರಾಟಗಾರ ಮತ್ತು ಗ್ರಾಹಕರನ್ನು ಬೆಸೆಯಲು ನೆರವಾಗುತ್ತೇವೆ. ನಾವು ಕೇವಲ ಮಧ್ಯವರ್ತಿಯಾಗಿ ಮಾತ್ರ ಕಾರ್ಯನಿರ್ವಹಿಸುತ್ತೇವೆ'' ಎಂದು ಫ್ಲಿಪ್‌ಕಾರ್ಟ್ ವಕ್ತಾರರು ಹೇಳಿದ್ದರು. ಅಂದರೆ, ನಾವು ಖರೀದಿಸುವ ಉತ್ಪನ್ನದ ಮೇಲೆ ಫ್ಲಿಪ್‌ಕಾರ್ಟ್ ಗ್ಯಾರಂಟಿ ಇಟ್ಟುಕೊಳ್ಳುವಂತಿಲ್ಲ ಎಂಬ ಉತ್ತರ ಅದಾಗಿತ್ತು.

ಮಾರಾಟಗಾರರ ಮೇಲೆ ನಿಯಂತ್ರಣ ಇಲ್ಲವೆ?

ಮಾರಾಟಗಾರರ ಮೇಲೆ ನಿಯಂತ್ರಣ ಇಲ್ಲವೆ?

ನಾವು ಕೇವಲ ಮಧ್ಯವರ್ತಿಯಾಗಿ ಮಾತ್ರ ಕಾರ್ಯನಿರ್ವಹಿಸುತ್ತೇವೆ ಎಂದು ಹೇಳಿದ ಫ್ಲಿಪ್‌ಕಾರ್ಟ್ ಹೇಳಿತ್ತು. ಇದಾದ ನಂತರ ಬಹುತೇಕ ಎಲ್ಲಾ ಆನ್‌ಲೈನ್ ಕಂಪೆನಿಗಳು ಸಹ ಇದೇ ಕೆಲಸವನ್ನು ಮಾಡುತ್ತಿವೆ ಎಂದು ವರದಿಯೊಂದು ಹೊರಬಿತ್ತು. ಇದರಿಂದ ಮಾರಾಟಗಾರರ ಮೇಲೆ ಆನ್‌ಲೈನ್ ಶಾಪಿಂಗ್ ಕಂಪೆನಿಗಳ ನಿಯಂತ್ರಣ ಇಲ್ಲವೆ ಎಂಬ ಪ್ರಶ್ನೆ ಹುಟ್ಟಿತು. ದೊಡ್ಡ ಹಾಗೂ ನಂಬಿಕಸ್ಥ ಕಂಪೆನಿ ಎಂದು ಶಾಪಿಂಗ್ ಮಾಡಲು ಮುಂದಾಗಿದ್ದ ಗ್ರಾಹಕರಿಗೆ ಇದು ಆಘಾತವವನ್ನು ಉಂಟುಮಾಡಿತ್ತು.

ಕಮರ್ಷಿಯಲ್ ಜಾಹೀರಾತು!

ಕಮರ್ಷಿಯಲ್ ಜಾಹೀರಾತು!

ಫೇಸ್‌ಬುಕ್ ಬಳಕೆದಾರರಿಗೆ ಫೇಸ್‌ಬುಕ್ ಯಾವುದೋ ಆನ್‌ಲೈನ್‌ ಕಂಪನಿಯ ಕಮರ್ಷಿಯಲ್ ಜಾಹೀರಾತು ನೀಡುತ್ತದೆ. ಆ ಕಂಪೆನಿಯನ್ನು ನಿಮ್ಮ ಸ್ನೇಹಿತರು ಲೈಕ್ ಮಾಡಿರುವುದಾಗಿ ಪೋಸ್ಟ್‌ನಲ್ಲಿ ತೋರಿಸುತ್ತದೆ. ಸ್ನೇಹಿತರು ಲೈಕ್ ಮಾಡಿರುವ ಆ ಆನ್‌ಲೈನ್ ಕಂಪೆನಿಗಳು ಮೋಸ ಮಾಡುವ ಕಂಪೆನಿಗಳು ಆಗಿರಬಹುದು ಎಂದು ತಿಳಿಯುವುದಿಲ್ಲ. ಇದರಿಂದ ಏನೂ ತಿಳಿಯದವರೂ ಗುಂಡಿಗೆ ಬೀಳುತ್ತಾರೆ.

ಬೆಲೆ ಕಮ್ಮಿ ಇದ್ದರೂ ಖರೀದಿ ಕಷ್ಟ!

ಬೆಲೆ ಕಮ್ಮಿ ಇದ್ದರೂ ಖರೀದಿ ಕಷ್ಟ!

ಫ್ಲಿಪ್‌ಕಾರ್ಟ್, ಅಮೆಜಾನ್‌ಗಳು "ರಿಫ‌ರ್ಬಶಿಂಗ್‌ ಐಟಂ'ಗಳನ್ನು ಮಾರಲಾರಂಭಿಸಿವೆ. ರಿಫ‌ರ್ಬಶಿಂಗ್‌ ಐಟಂಗಳ ಖರೀದಿ ದರದಲ್ಲಿ ಸದರಿ ಐಟಂನ ಬೆಲೆ ಇವತ್ತಿನ ಎಂಆರ್‌ಪಿಗಿಂತ ಬೆಲೆ ತೀರಾ ಕಡಿಮೆ ಇರುತ್ತದೆ. ಇದಕ್ಕೆ ಕೇವಲ ಮಾರಾಟಗಾರರ ಗ್ಯಾರಂಟಿ ಮಾತ್ರ ಲಭ್ಯವಾಗುತ್ತದೆ. ಹಾಗಾಗಿ, ಬೆಲೆ ಕಮ್ಮಿ ಇದ್ದರೆ ಎಚ್ಚರ ವಹಿಸುವುದು ಉತ್ತಮ. ಇಲ್ಲದಿದ್ದರೆ , ಗ್ಯಾರಂಟಿ ಅವಧಿಯಲ್ಲಿ ದೋಷಪೂರಿತವಾದ ತಯಾರಿಕೆಯನ್ನು ಅಧಿಕೃತ ರಿಪೇರಿಗಾರರಿಂದ ಸರಿಪಡಿಸಿ ಮಾರಾಟಗಾರ ಮತ್ತೆ ವ್ಯಾಪಾರಕ್ಕೆ ಬಿಟ್ಟಿರುವ ವಸ್ತು ನಿಮ್ಮದಾಗುತ್ತದೆ.

ಆನ್‌ಲೈನ್‌ನಲ್ಲೂ ನಯವಂಚನೆ!

ಆನ್‌ಲೈನ್‌ನಲ್ಲೂ ನಯವಂಚನೆ!

ಆನ್‌ಲೈನ್‌ ದೈತ್ಯ ಅಮೆಜಾನ್‌ ತನ್ನ ಅಮೆಜಾನ್‌ ಪೇ ಗ್ರಾಹಕರಿಗೆ ಅಕೌಂಟ್‌ಗೆ 500 ರೂ. ತುಂಬಿದರೆ ನಿಮಗೆ ಅದಕ್ಕೆ 100 ರೂ. ಕ್ಯಾಷ್‌ಬ್ಯಾಕ್‌ ನೀಡುವುದಾಗಿ ಹೇಳಿಕೊಂಡಿತು. ಆದರೆ, . 500 ರೂ. ಭರ್ತಿ ಮಾಡಿದವರಿಗೆ ಹೆಚ್ಚುವರಿ 100 ರೂ. ಸಿಗಲಿಲ್ಲ. ಅಲ್ಲಿಟ್ಟ ಹಣಕ್ಕೆ ಏನಾದರೊಂದು ಖರೀದಿ ಮಾಡಲೇಬೇಕು ಎಂಬ ಷರತ್ತನ್ನು ಕಣ್ಣಿಗೆ ಕಾಣದಂತೆ ಅಮೆಜಾನ್ ಹೇಳಿತ್ತು. ಇದು ವ್ಯಾಪಾರ ಹೆಚ್ಚಿಸಲು ಇರುವ ಕಳ್ಳಮಾರ್ಗ.

up to ಸೂಪರ್‌ ಕ್ಯಾಷ್!

up to ಸೂಪರ್‌ ಕ್ಯಾಷ್!

ಆನ್‌ಲೈನ್ ಶಾಪಿಂಗ್ ಗ್ರಾಹಕರು ಯಾವ ಅನುಮಾನವಿಲ್ಲದೇ ಈ up to ಕ್ಯಾಷ್ ಬ್ಯಾಕ್ ಆಫರ್ ಅನ್ನು ನಂಬದೇ ಇದ್ದರೆ ಒಳಿತು. ಇರುವ ಹತ್ತು ವಸ್ತುಗಳಲ್ಲಿ ಡಮ್ಮಿಯಂತಹ ಒಂದು ವಸ್ತುವಿಗೆ ಹೆಚ್ಚು ಕ್ಯಾಶ್‌ಬ್ಯಾಕ್ ನೀಡಿ ಮಾರಾಟ ಮಾಡುವ ತಂತ್ರ ಇದು. ಇತ್ತೀಚೆಗೆ ಕ್ಯಾಶ್‌ಬ್ಯಾಕ್‌ ಎಂಬ ವಾಲೆಟ್‌ಗಳ ಆಕರ್ಷಕ ಸ್ಲೋಗನ್‌ನ ಕೊನೆಯಲ್ಲಿ ಅದನ್ನು ಸೂಪರ್‌ ಕ್ಯಾಷ್ ಸೂತ್ರ ಜಾರಿಗೆ ಬಂದಿದೆ. ಇದು ಜನರನ್ನು ಮೂರ್ಖರೆಂದೇ ತಿಳಿದಿದೆ.

ಮೊಬಿಕ್ವಿಕ್ ಸೂಪರ್‌ ಕ್ಯಾಶ್‌?

ಮೊಬಿಕ್ವಿಕ್ ಸೂಪರ್‌ ಕ್ಯಾಶ್‌?

ಮೊಬಿಕ್ವಿಕ್ ಪಾವತಿ ನಿಮಗೆ ಗೊತ್ತಿರಬಹುದು. ಈ ಪಾವತಿ ಆಪ್ 100 ರೂ. ಸೂಪರ್‌ ಕ್ಯಾಶ್‌ ಎಂಬ ಆಫರ್ ಅನ್ನು ನೀಡಿದೆ. 100 ರೂಪಾಯಿಗಳ ಸೂಪರ್‌ ಕ್ಯಾಶ್‌ಬ್ಯಾಕ್ ನಲ್ಲಿ ಗ್ರಾಹಕ ತನ್ನ ಪ್ರತಿ ಖರೀದಿಯ ಶೇ. 10ರಷ್ಟನ್ನು ಮಾತ್ರ ಬಳಸಿಕೊಳ್ಳಬಹುದು. ಹಾಗಾಗಿ, 100 ರೂ. ಸೂಪರ್‌ ಕ್ಯಾಶ್‌ ಬಳಸಿಕೊಳ್ಳಲು ಸಾವಿರ ರೂ. ವ್ಯಾಪಾರ ಮಾಡಬೇಕು. ಅಂದರೆ, ನಿಮ್ಮ ದುಡ್ಡನ್ನು ನೀವು ನೀರಿನಂತೆ ಪೋಲು ಮಾಡಬೇಕು.

Best Mobiles in India

English summary
So what I learnt from shopping online is that even if it is cheaper than actual buying ... Here is the rating of the websites which sell most sub-standard fake. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+