Home
ಸುದ್ದಿಜಾಲ

ಪೇಟಿಎಂ ಮಾಡಿ BMTC ಬಸ್‌ ಟಿಕೆಟ್ ಪಡೆಯಿರಿ!!

By Bhaskar N J

ನಮ್ಮ ಬೆಂಗಳೂರಿನಲ್ಲಿ ಬಸ್ ನಲ್ಲಿ ನೀವು ಪ್ರಯಾಣಿಸುವಾಗ ನಿಮ್ಮ ಬಳಿ ಹಣವಿಲ್ಲ ಅಂದ್ರೆ ಚಿಂತಿಸಬೇಡಿ. ಏಕೆಂದರೆ, ನೀವು ಪೇಟಿಎಂ ಮೂಲಕವೂ ಸಹ ನೀವು ಹಣವನ್ನು ಪಾವತಿ ಮಾಡಿ ನೀವು ಪ್ರಯಾಣ ಮಾಡಬಹುದು . ಹೌದು, ಇಂದತದೊಂದು ಸಾಧ್ಯತೆ ಮತ್ತು ಹೊಸ ಚಿಂತನೆಯು BMTC ಮತ್ತು ಪೇಟಿಎಂ ಕಂಪೆನಿಗಳಿಂದ ಮೂಡಿಬಂದಿದೆ.

ಡಿಜಿಟಲ್ ಪಾವತಿಯಲ್ಲಿ ಉತ್ತುಂಗಕ್ಕೇರಿರುವ ಪೇಟಿಎಂ ಕಂಪೆನಿ ತನ್ನ ಗ್ರಾಹಕರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಂತೆ ಎಟಿಎಂ ಕಾರ್ಡ್‌ಗಳನ್ನು ನೀಡಿದಾಗಲೇ ಆಶ್ಚರ್ಯಪಟ್ಟ ಜನರು ಇದೀಗ ಮತ್ತೆ ಶಾಕ್ ಆಗಲಿದ್ದಾರೆ. ಹಲವು ಪಾವತಿ ಕ್ಷೇತ್ರದಲ್ಲಿ ಈಗಾಗಲೇ ಯಶಸ್ವಿಯಾಗಿರುವ ಪೇಟಿಎಂ ಇದೀಗ ಸರ್ಕಾರೀ ಕ್ಷೇತ್ರದಲ್ಲಿಯೂ ತನ್ನ ಛಾಪನ್ನು ಮೂಡಿಸಲು ಮುಂದಾಗಿದೆ.

ಪೇಟಿಎಂ ಮಾಡಿ BMTC ಬಸ್‌ ಟಿಕೆಟ್ ಪಡೆಯಿರಿ!!

ಶೀಘ್ರದಲ್ಲೇ ಈ ವಿನೂತನ ವ್ಯವಸ್ಥೆ ಜಾರಿಗೆ ಬರಲಿದೆ ಎನ್ನಲಾಗಿದ್ದು, ಪ್ರಾಯೋಗಿಕವಾಗಿ ವೋಲ್ವೊ ಬಸ್‌ಗಳಲ್ಲಿ ಅದರಲ್ಲೂ ಹೆಚ್ಚು ಐಟಿ-ಬಿಟಿ ಉದ್ಯೋಗಿಗಳು ಓಡಾಡುವ ಮಾರ್ಗಗಳಲ್ಲಿ ಈ ಸೇವೆ ಪರಿಚಯಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಚಿಂತನೆ ನಡೆಸಿದೆ. ಹಾಗಾದರೆ, ಈ ಯೋಜನೆಯ ಕಾರ್ಯ ನಿರ್ವಹಣೆ ಹೇಗೆ ಎಂಬುದನ್ನು ಮುಂದೆ ತಿಳಿಯಿರಿ.

ಪೇಟಿಎಂ ಪಾವತಿ ಉದ್ದೇಶ ಏನು?

ಪೇಟಿಎಂ ಪಾವತಿ ಉದ್ದೇಶ ಏನು?

ಎಲ್ಲವೂ ಡಿಜಿಟಲ್‌ ಪಾವತಿ ಆಗುವುದರಿಂದ ಹಣದ ನಿರ್ವಹಣೆ ಸುಲಭ ಮತ್ತು ಪಾರದರ್ಶಕವಾಗಲಿದೆ. ಜತೆಗೆ ಈ ಹಣ ನಿರ್ವಹಣೆಯ ಸಮಯ ಅರ್ಧಕ್ಕರ್ಧ ಉಳಿತಾಯ ಆಗಲಿದೆ ಎಂದು ಬಿಎಂಟಿಸಿ ಈ ಯೋಜನೆಯನ್ನು ತರಲು ಮುಂದಾಗಿದೆ. ಇದರ ಮುಖ್ಯ ಉದ್ದೇಶಗಳ್ಲಲ್ಲಿ ಚಿಲ್ಲರೆ ಸಮಸ್ಯೆ ಕೂಡ ಒಂದು ಎಂದು ತಿಳಿದುಬಂದಿದೆ.

ಬಸ್ ಟಿಕೆಟ್ ಪಡೆಯುವುದು ಹೇಗೆ?

ಬಸ್ ಟಿಕೆಟ್ ಪಡೆಯುವುದು ಹೇಗೆ?

ಪ್ರಯಾಣಿಕರು ಬಸ್‌ ಏರಿದ ತಕ್ಷಣ ತಮ್ಮಲ್ಲಿರುವ ಪೇಟಿಎಂ ಓಪನ್‌ ಮಾಡುತ್ತಾರೆ. ಅದರಲ್ಲಿ ಬಿಲ್ಲಿಂಗ್ ಪಟ್ಟಿ ಬರುತ್ತದೆ. ಅದರಲ್ಲಿ ಬಿಎಂಟಿಸಿ ಕೂಡ ಇರಲಿದೆ. ಅದನ್ನು ಕ್ಲಿಕ್‌ ಮಾಡಿ, ಪ್ರಯಾಣದ ಮಾರ್ಗ (ಎಲ್ಲಿಂದ-ಎಲ್ಲಿಗೆ) ಸೂಚಿಸಿದರೆ ಸಾಕು, ಅಟೋಮೆಟಿಕ್ ಆಗಿ ಹಣ ಕಡಿತಗೊಂಡು ಇ-ಟಿಕೆಟ್ ಸೃಷ್ಟಿಯಾಗುತ್ತದೆ.

ಟಿಕೆಟ್ ಪಡೆದಿರುವುದಕ್ಕೆ ಖಾತ್ರಿ!

ಟಿಕೆಟ್ ಪಡೆದಿರುವುದಕ್ಕೆ ಖಾತ್ರಿ!

ಪ್ರಯಾಣಿಕರು ಟಿಕೆಟ್ ಪಡೆದಿರುವುದನ್ನು ಖಾತ್ರಿಪಡಿಸಿಕೊಳ್ಳಲು ಓಲಾ-ಉಬರ್ ಚಾಲಕರಿಗೆ ನೀಡಿರುವಂತೆ ನಿರ್ವಾಹಕರಿಗೂ ಮೊಬೈಲ್‌ ಡಿವೈಸ್‌ಗಳನ್ನು ನೀಡಲಾಗಿರುತ್ತದೆ. ಅದನ್ನು ಪ್ರಯಾಣಿಕರ ಮೊಬೈಲ್‌ ಹತ್ತಿರ ತೆಗೆದುಕೊಂಡು ಹೋಗುತ್ತಿದ್ದಂತೆಯೇ ಕ್ಯುಆರ್‌ ಕೋಡ್‌ ಮೂಲಕ ಸ್ಕ್ಯಾನ್‌ ಆಗಿ ತಕ್ಷಣ ಟಿಕೆಟ್ ಬಣ್ಣ ಬದಲಾಗುತ್ತದೆ.

ಸಾಫ್ಟ್ವೇರ್ ಕಣ್ಗಾವಲು ಸಹ ಇರುತ್ತದೆ!

ಸಾಫ್ಟ್ವೇರ್ ಕಣ್ಗಾವಲು ಸಹ ಇರುತ್ತದೆ!

ಯಾವುದೇ ವ್ಯಕ್ತಿ ಬಸ್‌ ಏರುತ್ತಿದ್ದಂತೆ "ಬೀ-ಕಾನ್‌' ಎಂಬ ಸಾಫ್ಟ್ವೇರ್ ಅವರ ಮೇಲೆ ಕಣ್ಗಾವಲು ಇಡಲಿದೆ ಸುಮಾರು 30 ಅಡಿ ದೂರದವರೆಗೂ ಟ್ರ್ಯಾಕ್‌ ಮಾಡುವ ಸಾಮರ್ಥ್ಯವನ್ನು ಇದು ಹೊಂದಿರುತ್ತದೆ ಎನ್ನಲಾಗಿದೆ. ಇದರಿಂದ ಸ್ಮಾರ್ಟ್‌ಫೋನ್ ಮೂಲಕ ಪಾವತಿ ಮಾಡಿರುವುದರ ಬಗ್ಗೆ ಸ್ಪಷ್ಟವಾಗಿ ತಿಳಿಯುತ್ತದೆ.

How to read deleted WhatsApp messages - GIZBOT KANNADA
ಇಟಿಎಂ ಉದಾಹರಣೆ!!

ಇಟಿಎಂ ಉದಾಹರಣೆ!!

ನಿತ್ಯ 50 ಲಕ್ಷಕ್ಕೂ ಹೆಚ್ಚು ಜನ ಸಂಚರಿಸುವ ಬಿಎಂಟಿಸಿಯಲ್ಲಿ ಪೇಟಿಎಂ ಬಳಕೆ ಬಗ್ಗೆ ಅಪಸ್ವರ ಮೂಡಿಬಂದಿದೆ. ಆದರೆ, ಇಟಿಎಂ (ಎಲೆಕ್ಟ್ರಾನಿಕ್‌ ಟಿಕೆಟ್ ಮಷಿನ್‌) ಬಂದಾಗಲೂ ಈ ರೀತಿಯ ಅಪಸ್ವರ ಕೇಳಿಬಂದಿತ್ತು. ಅಷ್ಟಕ್ಕೂ ಭವಿಷ್ಯದಲ್ಲಿ ನಿರ್ವಾಹಕರ ಅವಶ್ಯಕತೆ ಇರುವುದಿಲ್ಲ ಎಂದು ಬಿಎಂಟಿಸಿ ಅಧಿಕಾಯೋರ್ವರು ತಿಳಿಸಿದ್ದಾರೆ.

More from GizBot

Best Mobiles in India

English summary
do Paytm for BMTC tickets. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+