Home
ಸುದ್ದಿಜಾಲ

ನೀವು SBI ಬ್ಯಾಂಕ್‌ ಅಕೌಂಟ್‌ ಹೊಂದಿದ್ದೀರಾ? ಈ ವಿಚಾರವನ್ನು ಕೂಡಲೇ ಚೆಕ್‌ ಮಾಡಿ!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಹಲವು ಸೇವೆಗಳನ್ನು ಬೆರಳತುದಿಯಲ್ಲಿಯೇ ದೊರೆಯುವಂತೆ ಮಾಡಿದೆ. ಇದಕ್ಕಾಗಿ ವಾಟ್ಸಾಪ್‌ನಲ್ಲಿಯೇ ಅನೇಕ ಸೇವೆಗಳನ್ನು ಮನೆಯ ಬಾಗಿಲಿನಲ್ಲಿಯೇ ಸಿಗುವಂತೆ ಅವಕಾಶ ಕಲ್ಪಿಸಿದೆ. ಇದರಲ್ಲಿ ಹಲವು ಸೇವೆಗಳ ಬಗ್ಗೆ ಗ್ರಾಹಕರಿಗೆ ತಿಳಿದೇ ಇಲ್ಲ.

ಹೌದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಾಟ್ಸಾಪ್‌ನಲ್ಲಿ ಹಲವಾರು ಬ್ಯಾಂಕಿಂಗ್‌ ಸೇವೆಗಳನ್ನು ನೀಡುತ್ತಿದೆ. ಇದರಲ್ಲಿ ನಿಮ್ಮ ಅಕೌಂಟ್‌ ಬ್ಯಾಲೆನ್ಸ್‌, ಮಿನಿ ಸ್ಟೇಟ್‌ಮೆಂಟ್‌, ಪೆನ್ಶನ್‌ ಸ್ಲಿಪ್‌, ಲೋನ್‌ ಡಿಟೇಲ್ಸ್‌ ಅನ್ನು ತಿಳಿದುಕೊಳ್ಳಬಹುದಾಗಿದೆ. ಹಾಗಾದ್ರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಾಟ್ಸಾಪ್‌ ಸೇವೆಗಳನ್ನು ಪಡೆದುಕೊಳ್ಳುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನೀವು SBI ಬ್ಯಾಂಕ್‌ ಅಕೌಂಟ್‌ ಹೊಂದಿದ್ದೀರಾ? ಈ ವಿಚಾರವನ್ನು ಕೂಡಲೇ ಚೆಕ್‌ ಮಾಡಿ!

ಅಕೌಂಟ್‌ ಬ್ಯಾಲೆನ್ಸ್‌ ಚೆಕ್‌ ಮಾಡುವುದು ಹೇಗೆ?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರು ತಮ್ಮ ಅಕೌಂಟ್‌ ಬ್ಯಾಲೆನ್ಸ್‌ ಅನ್ನು ವಾಟ್ಸಾಪ್‌ ಮೂಲಕವೇ ಪರಿಶೀಲಿಸಬಹುದು. ಈ ಸೇವೆಯು ಸೇವಿಂಗ್ಸ್‌ ಆಂಡ್‌ ಕರೆಂಟ್‌ ಅಕೌಂಟ್‌ ಬಳಕೆದಾರರಿಗೆ ಲಬ್ಯವಾಗಲಿದೆ. ಅದರಂತೆ ನೀವು ವಾಟ್ಸಾಪ್‌ ಮೂಲಕ ನಿಮ್ಮ ಪಾಸ್‌ಬುಕ್‌ ಮಾಹಿತಿ, ಅಕೌಂಟ್‌ ಅಪ್ಡೇಟ್‌ ಮತ್ತು ಸ್ಟಾಕ್‌ ಸ್ಟೇಟ್‌ಮೆಂಟ್‌ ಎಂಡ್‌ ಡೇಟ್‌ ಅನ್ನು ಕೂಡ ತಿಳಿದುಕೊಳ್ಳಬಹುದಾಗಿದೆ.

ಮಿನಿ ಸ್ಟೇಟ್‌ಮೆಂಟ್‌
SBI ಬ್ಯಾಂಕ್‌ ಗ್ರಾಹಕರು ವಾಟ್ಸಾಪ್‌ ಮೂಲಕ ತಮ್ಮ ಅಕೌಂಟ್‌ನ ಮಿನಿ ಸ್ಟೇಟ್‌ಮೆಂಟ್‌ ತೆಗೆಯುವುದಕ್ಕೆ ಕೂಡ ಅವಕಾಶವಿದೆ. ಅದರಂತೆ ತಮ್ಮ ಖಾತೆಯಿಂದ ಕೊನೆಯ ಎರಡು ವಹಿವಾಟು ವಿವರಗಳನ್ನು ಒಳಗೊಂಡಿರುವ ಮಿನಿ ಸ್ಟೇಟ್‌ಮೆಂಟ್‌ ಪರಿಶೀಲಿಸಬಹುದಾಗಿದೆ.

ಪೆನ್ಶನ್‌ ಸ್ಲಿಪ್‌ ಸರ್ವಿಸ್‌
ಇದಲ್ಲದೆ ನಿವೃತ್ತ ಉದ್ಯೋಗಿಗಳು ತಮ್ಮ ಪೆನ್ಶನ್‌ ಸ್ಲಿಪ್‌ಗಳನ್ನು ಕ್ರಿಯೆಟ್‌ ಮಾಡಲು ಎಸ್‌ಬಿಐ ವಾಟ್ಸಾಪ್ ಬ್ಯಾಂಕಿಂಗ್ ಸೇವೆಯನ್ನು ಬಳಸುವುದಕ್ಕೆ ಅವಕಾಶ ನೀಡಿದೆ.

ಬ್ಯಾಂಕಿಂಗ್ ಫಾರ್ಮ್‌ಗಳನ್ನು ಪಡೆಯಿರಿ
ಇನ್ನು ನೀವು ಎಸ್‌ಬಿಐ ವಾಟ್ಸಾಪ್ ಬ್ಯಾಂಕಿಂಗ್ ಸೇವೆಯನ್ನು ಬಳಸಿಕೊಂಡು ಬ್ಯಾಂಕಿಂಗ್ ಫಾರ್ಮ್‌ಗಳನ್ನು ಡೌನ್‌ಲೋಡ್ ಮಾಡುವುದಕ್ಕೆ ಸಾದ್ಯವಾಗಲಿದೆ.

ಡೆಪಾಸಿಟ್ ಡಿಟೇಲ್ಸ್‌
SBI ವಾಟ್ಸಾಪ್‌ ಬ್ಯಾಂಕಿಂಗ್‌ ಸೇವೆಯ ಮೂಲಕ ಬಳಕೆದಾರರಿಗೆ ಸೇವಿಂಗ್ಸ್‌ ಅಕೌಂಟ್‌, Recurring Deposit (RD), Fixed Deposit (FD), Term Deposit ಮತ್ತು ಎಲ್ಲಾ ರೀತಿಯ ಡೆಪಾಸಿಟ್‌ ಡಿಟೇಲ್ಸ್‌ ಪರಿಶೀಲಿಸುವುದಕ್ಕೆ ಅನುಮತಿಸಲಿದೆ.

ಲೋನ್‌ ಡಿಟೇಲ್ಸ್‌ ತಿಳಿಯಲು ಸುಲಭ ಅವಕಾಶ
ಇನ್ನು ಎಸ್‌ಬಿಐ ವಾಟ್ಸಾಪ್ ಬ್ಯಾಂಕಿಂಗ್ ಮೂಲಕ ನೀವು ಸಾಲದ ವಿವರಗಳನ್ನು ಕೂಡ ತಿಳಿದುಕೊಳ್ಳುವುದಕ್ಕೆ ಅವಕಾಶವಿದೆ. ಇದರಲ್ಲಿ ನೀವು ಮನೆ ಸಾಲ, ಕಾರು ಸಾಲ, ಚಿನ್ನದ ಸಾಲ, ವೈಯಕ್ತಿಕ ಸಾಲ, ಶಿಕ್ಷಣ ಸಾಲ ಇತ್ಯಾದಿಗಳಿಗೆ ಸಾಲದ ಆಯ್ಕೆಗಳನ್ನು ಪರಿಶೀಲಿಸಲು ಸಾಧ್ಯವಾಗಲಿದೆ. ಇದಲ್ಲದೆ ಸಾಲಕ್ಕೆ ಸಂಬಂಧಿಸಿದ ಬಡ್ಡಿದರಗಳ ಮಾಹಿತಿಯನ್ನು ಸಹ ಪಡೆದಯಲು ಸಾಧ್ಯವಿದೆ.

ನೀವು SBI ಬ್ಯಾಂಕ್‌ ಅಕೌಂಟ್‌ ಹೊಂದಿದ್ದೀರಾ? ಈ ವಿಚಾರವನ್ನು ಕೂಡಲೇ ಚೆಕ್‌ ಮಾಡಿ!

ಹೊಸ SBI Insta ಅಕೌಂಟ್‌ ಒಪನ್‌ ಮಾಡಿರಿ
ಇದಲ್ಲದೆ ಎಸ್‌ಬಿಐ ವಾಟ್ಸಾಪ್‌ ಬ್ಯಾಂಕಿಂಗ್‌ ಸೇವೆಯನ್ನು ಬಳಸಿಕೊಂಡು ನೀವು SBI Insta ಅಕೌಂಟ್‌ ಅನ್ನು ತೆರೆಯಬಹುದಾಗಿದೆ. ಇದರಲ್ಲಿ 18 ವರ್ಷ ಮೇಲ್ಪಟ್ಟ ಬಳಕೆದಾರರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ಇನ್ನು ಈ ಸೇವೆಯಲ್ಲಿ ನಿಮಗೆ ಹೊಸ ಖಾತೆಯನ್ನು ತೆರೆಯಲು ಸಂಬಂಧಿಸಿದ ಫೀಚರ್ಸ್‌ಗಳು, ಅರ್ಹತೆ ಮತ್ತು ಅಗತ್ಯ ವಿವರಗಳನ್ನು ಒದಗಿಸುತ್ತದೆ.

ಡೆಬಿಟ್ ಕಾರ್ಡ್ ಬಳಕೆಯ ಮಾಹಿತಿ
SBI ವಾಟ್ಸಾಪ್‌ ಬ್ಯಾಂಕಿಂಗ್‌ ಸೇವೆಯಲ್ಲಿ ನೀವು ನಿಮ್ಮ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಬಳಕೆಯ ಬಗ್ಗೆ ಕೂಡ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ನಿಮ್ಮ ವಹಿವಾಟು ಹಿಸ್ಟರಿ ಮತ್ತು ಹೆಚ್ಚಿನ ಡೆಬಿಟ್ ಕಾರ್ಡ್ ವಿವರಗಳನ್ನು ಪರಿಶೀಲಿಸಬಹುದಾಗಿದೆ. ಅಲ್ಲದೆ ನಿಮ್ಮ ಕಳೆದು ಹೋದ ಕಾರ್ಡ್‌ಗಳ ಬಗ್ಗೆ ಕೂಡ ಮಾಹಿತಿ ನೀಡಬಹುದಾಗಿದೆ.

Best Mobiles in India

English summary
Do you have an SBI bank account? use these services!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+