Subscribe to Gizbot

'ಕೀ ಲಾಗರ್' ಕಂಪ್ಯೂಟರ್ ವೈರಸ್ ಬಗ್ಗೆ ನೀವು ತಿಳಿಯಲೇಬೇಕು!! ಏಕೆ?

Written By:

ಕಂಪ್ಯೂಟರ್ ಜಗತ್ತಿನ ತಂತ್ರಜ್ಞಾನ ಬೆಳದಂತೆಲ್ಲಾ ಹ್ಯಾಕರ್‌ಗಳ ಸಂಖ್ಯೆ ಬೆಳೆಯುತ್ತಿದೆ. ಹೌದು, ಇಡೀ ವಿಶ್ವನ್ನೆ ಬೆಚ್ಚಿ ಬೀಳಿಸಿದ ವನ್ನಾಕ್ರೈ ಅಟ್ಯಾಕ್ ಆದ ನಂತರ ಹಲವು ಸೈಬರ್ ಅಟ್ಯಾಕ್‌ಗಳು ಕಂಪ್ಯೂಟರ್‌ಗಳ ಮೇಲಾಗುತ್ತಿದ್ದು, ಇದೊಂದು ಪ್ರಪಂಚದ ಕಂಪ್ಯೂಟರ್ ಪಿಡುಗಾಗಿದೆ.!!

ಕಂಪ್ಯೂಟರ್ ಬಳಕೆದಾರರನ್ನು ಹ್ಯಾಕರ್‌ಗಳು ಅಭಿವೃದ್ದಿಪಡಿಸಿರುವ ಕುತಂತ್ರಾಂಶಗಳು (ವೈರಸ್‌) ಹಲವಿದ್ದು, ಅವುಗಳಲ್ಲಿ ಕೀ ಲಾಗರ್ ಎನ್ನುವ ಕುತಂತ್ರಾಂಶ ಭಯಾನಕವಾದುದ್ದುದ್ದು.!! ಹೌದು, ಕೀ ಲಾಗರ್ ಪದವನ್ನು ನೀವು ಈ ಮೊದಲು ಕೇಳಿದ್ದರೆ ಒಳಿತು. ಇಲ್ಲದಿದ್ದರೆ ಈಗಲೇ ಕೀ ಲಾಗರ್ ಬಗ್ಗೆ ತಿಳಿದುಕೊಳ್ಳಿ.! ತಿಳಿಯಲು ಕೆಳಗಿನ ಸ್ಲೈಡರ್‌ಗಳನ್ನು ನೋಡಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏನಿದು ಕೀ ಲಾಗರ್?

ಏನಿದು ಕೀ ಲಾಗರ್?

ಅಪರಿಚಿತ ತಾಣಗಳಿಂದ, ಕೆಲವು ಅಟ್ಯಾಚ್​ವೆುಂಟ್ ತೆರೆಯುವುದರಿಂದ ಕಂಪ್ಯೂಟರ್ ಒಳನುಸುಳುವ ಒಂದು ವೈರಸ್ ಈ ಕೀ ಲಾಗರ್. ಕಂಪ್ಯೂಟರ್ ಬಳಕೆದಾರರು ಟೈಪ್ ಮಾಡಿದ್ದನ್ನೆಲ್ಲ ಒಂದೆಡೆ ಉಳಿಸಿಟ್ಟುಕೊಂಡು ಅದರಲ್ಲಿರನ ಖಾಸಗಿ ಮಾಹಿತಿಯನ್ನು (ಉದಾ: ಬ್ಯಾಂಕ್ ಖಾತೆ ವಿವರ) ಪಡೆದು ಕುತಂತ್ರಾಂಶ ಅಭಿವೃದ್ದಿಮಾಡಿದವರಿಗೆ ಕಳುಹಿಸುವುದು ಇದರ ಕಾರ್ಯವಿಧಾನ.!!

ಹೆಸರಿನಲ್ಲಿಯೇ ಇದೆ!!

ಹೆಸರಿನಲ್ಲಿಯೇ ಇದೆ!!

ಈ ವೈರಸ್ ಯಾವ ಕಂಪ್ಯೂಟರ್ ಅಥವಾ ಸ್ಮಾರ್ಟ್​ಫೋನ್ ಸೇರಿರುತ್ತದೆಯೋ ಅಲ್ಲಿ ಟೈಪಿಸಲಾದ ಪ್ರತಿ ಅಕ್ಷರವನ್ನೂ ಈ ಕುತಂತ್ರಾಂಶ ದಾಖಲಿಸಿಕೊಳ್ಳುತ್ತದೆ. ಹೀಗೆ ಪ್ರತಿಬಾರಿ ಕೀಲಿ (ಕೀ) ಒತ್ತಿದ್ದನ್ನೂ ದಾಖಲಿಸಿಕೊಳ್ಳುವುದರಿಂದಲೇ (ಲಾಗ್ = ದಾಖಲಿಸು) ಇದಕ್ಕೆ ಕೀ ಲಾಗರ್ ಎಂದು ಹೆಸರು.!!

ಈ ಕುತಂತ್ರಾಂಶ ಭಯಾನಕ

ಈ ಕುತಂತ್ರಾಂಶ ಭಯಾನಕ

ಖಾಸಗಿ ಮಾಹಿತಿಯನ್ನು ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೊನ್ ಬಳಕೆದಾರರ ಅರಿವಿಗೆ ಬಾರದಂತೆ ಕದ್ದು, ಸಂಗ್ರಹಿಸಿದ ಮಾಹಿತಿಯನ್ನೆಲ್ಲ ತನ್ನ ಸೃಷ್ಟಿಕರ್ತನಿಗೆ ಗೌಪ್ಯವಾಗಿಯೇ ಕಳುಹಿಸಿಬಿಡುತ್ತದೆ ಈ ಕೀ ಲಾಗರ್ ಕುತಂತ್ರಾಂಶ.!!

ಆಂಟಿವೈರಸ್ ಅನಿವಾರ್ಯ!!

ಆಂಟಿವೈರಸ್ ಅನಿವಾರ್ಯ!!

ನಿಮ್ಮ ಕಂಪ್ಯೂಟರ್‌ನಲ್ಲಿ ಇಂತದೊಂದು ವೈರಸ್ ಇದೇ ಎನ್ನುವ ಮೊದಲೇ ಕೀ ಲಾಗರ್ ತನ್ನ ಕೆಲಸವನ್ನು ಮುಗಿಸಿಬಿಡುತ್ತದೆ. ಹಾಗಾಗಿ, ಇದರಿಂದ ಪಾರಾಗಲೂ ಆಂಟಿವೈರಸ್ ತಂತ್ರಾಂಶಗಳ ಮೊರೆಹೋಗುವುದು ಅನಿವಾರ್ಯ.!!

ಓದಿರಿ:ಆಧಾರ್, ಪಾನ್‌ಕಾರ್ಡ್ ಲಿಂಕ್ ಮಾಡಲು ಒಂದು ಮೆಸೇಜ್ ಸಾಕು..!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
key lagar is a danger virus. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot